ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭರದಿಂದ ಸಾಗಿರುವ ಕೋವಿಡ್-19 ಬೃಹತ್ ಲಸಿಕೆ ಅಭಿಯಾನ; 48.93 ಕೋಟಿ ಡೋಸ್ ಗಿಂತ ಹೆಚ್ಚಿನ ಲಸಿಕೆ ನೀಡಿಕೆ


ಚೇತರಿಕೆ ದರ ಪ್ರಸ್ತುತ 97.37%ಗೆ ಸುಧಾರಣೆ

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 42,982 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಭಾರತದ ಸಕ್ರಿಯ ಪ್ರಕರಣಗಳ ಪ್ರಮಾಣ 4,11,076ಕ್ಕೆ ಇಳಿಕೆ; ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.29%

ದೈನಂದಿನ ಪಾಸಿಟಿವಿಟಿ ದರ 2.58%ಗೆ ಇಳಿಕೆ; ಕಳೆದ 10 ದಿನಗಳಿಂದ 3% ಮಟ್ಟದಿಂದ ಕೆಳಗೆ

Posted On: 05 AUG 2021 10:19AM by PIB Bengaluru

ಭಾರತದಲ್ಲಿ ಭರದಿಂದ ಸಾಗಿರುವ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಇದುವರೆಗೆ 48.93 ಕೋಟಿಗಿಂತ ಹೆಚ್ಚಿನ ಅಂದರೆ 48,93,42,295 ಡೋಸ್ ಲಸಿಕೆ ನೀಡಲಾಗಿದೆ. ಇಂದು ಬೆಳಗ್ಗೆ 7 ಗಂಟೆಗೆ ಬಿಡುಗಡೆ ಆಗಿರುವ ತಾತ್ಕಾಲಿಕ ವರದಿ ಪ್ರಕಾರ, ದೇಶಾದ್ಯಂತ 57,21,937 ಆಂದೋಲನಗಳಲ್ಲಿ ಈ ಸಾಧನೆ ಮಾಡಲಾಗಿದೆ. ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 37,55,115 ಲಸಿಕೆ ಡೋಸ್ ನೀಡಲಾಗಿದೆ.

ಈ ಕೆಳಗಿನ ಗುಂಪುಗಳು ಅವುಗಳಲ್ಲಿ ಸೇರಿವೆ:

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು

ಮೊದಲ ಡೋಸ್

1,03,21,218

2ನೇ ಡೋಸ್

79,16,997

ಮುಂಚೂಣಿ ಕಾರ್ಯಕರ್ತರು

ಮೊದಲ ಡೋಸ್

1,80,12,481

2ನೇ ಡೋಸ್

1,15,34,779

18-44 ವಯೋಮಾನದವರು

ಮೊದಲ ಡೋಸ್

16,64,37,738

2ನೇ ಡೋಸ್

1,02,76,584

45-59 ವಯೋಮಾನದವರು

ಮೊದಲ ಡೋಸ್

10,90,91,506

2ನೇ ಡೋಸ್

4,09,44,600

60 ವರ್ಷ ದಾಟಿದವರು

ಮೊದಲ ಡೋಸ್

7,72,63,332

2ನೇ ಡೋಸ್

3,75,43,060

ಒಟ್ಟು

48,93,42,295

ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ ದೇಶಾದ್ಯಂತ 2021 ಜೂನ್ 21ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಕೋವಿಡ್-19 ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಈ ಕಾರ್ಯಕ್ರಮದ ಗತಿಗೆ ವೇಗ ನೀಡಲು ಬದ್ಧವಾಗಿದೆ.

ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ 3,09,74,748 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 41,726 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಒಟ್ಟಾರೆ ಚೇತರಿಕೆ ದರ 97.37%ಗೆ ಸುಧಾರಣೆ ಕಂಡಿದೆ.

https://static.pib.gov.in/WriteReadData/userfiles/image/image001TCSK.jpg

ಕಳೆದ 24 ತಾಸುಗಳಲ್ಲಿ 42,982 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಸತತ 39 ದಿನಗಳಿಂದ ದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ 50,000 ಮಟ್ಟದಿಂದ ಕೆಳಗಿರುವುದು ಆಶಾದಾಯಕ ಬೆಳವಣಿಗೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಸುಸ್ಥಿರ ಮತ್ತು ಜಂಟಿ ಸಹಭಾಗಿತ್ವದ ಪ್ರಯತ್ನಗಳ ಫಲವಾಗಿ ಹೊಸ ಪ್ರಕರಣಗಳು ದಿನೇದಿನೆ ತಗ್ಗುತ್ತಿವೆ.

https://static.pib.gov.in/WriteReadData/userfiles/image/image002IQTY.jpg

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 4,11,076ಕ್ಕೆ ಇಳಿಕೆ ಕಂಡಿದ್ದು, ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.29% ಇದೆ.

https://static.pib.gov.in/WriteReadData/userfiles/image/image003AOBY.jpg

ದೇಶಾದ್ಯಂತ ಗಂಟಲು ಮತ್ತು ಮಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಕಳೆದ 24 ತಾಸುಗಳಲ್ಲೇ 16,64,030 ಪರೀಕ್ಷೆಗಳನ್ನು ನಡೆಸಲಾಗಿದೆ. ಇದರೊಂದಿಗೆ ಇಲ್ಲಿಯ ತನಕ ಒಟ್ಟು 47.48 ಕೋಟಿಗಿಂತ ಹೆಚ್ಚಿನ ಅಂದರೆ 47,48,93,363 ಪರೀಕ್ಷೆಗಳನ್ನು ನಡೆಸಲಾಗಿದೆ.

ಒಂದೆಡೆ, ದೇಶದೆಲ್ಲೆಡೆ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದ ಪರಿಣಾಮ, ವಾರದ ಪಾಸಿಟಿವಿಟಿ ದರ ಪ್ರಸ್ತುತ 2.37%ಗೆ ಮತ್ತು ದೈನಂದಿನ ಪಾಸಿಟಿವಿಟಿ ದರ ಇಂದು 2.58%ಗೆ ಇಳಿಕೆ ಕಂಡಿದೆ. ದೈನಂದಿನ ಪಾಸಿಟಿವಿಟಿ ದರ ಸತತ 59 ದಿನಗಳಿಂದ 5% ಮಟ್ಟದಿಂದ ಕೆಳಗಿದೆ.

https://static.pib.gov.in/WriteReadData/userfiles/image/image00419HI.jpg

***


(Release ID: 1742654) Visitor Counter : 291