ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಸಾವು: ಮಿಥ್ಯೆ ಮತ್ತು ವಾಸ್ತವ
ಎಲ್ಲ ರಾಜ್ಯಗಳು ಜಿಲ್ಲಾವಾರು ಪ್ರಕರಣಗಳು ಮತ್ತು ಸಾವುಗಳ ಮೇಲೆ ನಿಗಾ ಇಡುವ ಅಗತ್ಯವಿದೆಯೆಂದು ಕೇಂದ್ರ ಆರೋಗ್ಯ ಸಚಿವಾಲಯದಿಂದ ಪ್ರಮುಖವಾಗಿ ಪ್ರತಿಪಾದನೆ
ನಿಗದಿಪಡಿಸಿದ ನಿರ್ದಿಷ್ಠ ಮಾನದಂಡದ ಪ್ರಕಾರ ಸಾವುಗಳ ದಾಖಲಾತಿಗೆ ಕೇಂದ್ರದ ತಂಡಗಳನ್ನು ನಿಯೋಜಿಸುವ ಮೂಲಕ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕೃತ ಸಂವಹನ ನಡೆಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೂಚನೆ
ಶಾಸನ ಆಧಾರಿತ ನಾಗರಿಕ ನೋಂದಣಿ ವ್ಯವಸ್ಥೆ (ಸಿಆರ್ ಎಸ್ ) ಆಧರಿಸಿ ದೃಢೀಕರಿಸಲು ದೇಶದಲ್ಲಿ ಜನನ ಮತ್ತು ಮರಣದ ಸರಿಯಾದ ನೋಂದಣಿ ಖಾತರಿಪಡಿಸಬೇಕಿದೆ
Posted On:
04 AUG 2021 1:03PM by PIB Bengaluru
ಎಂಟು ರಾಜ್ಯಗಳಲ್ಲಿನ ಕೋವಿಡ್-19 ಸಾವುಗಳನ್ನು ಸರಿಯಾಗಿ ಲೆಕ್ಕ ಹಾಕುತ್ತಿಲ್ಲ ಎಂಬ ಬಗ್ಗೆ ಊಹೆಯಿಂದ ಕೂಡಿದ ಕೆಲವು ಮಾಧ್ಯಮ ವರದಿಗಳು ಬಂದಿವೆ, ಹಾಗೆಯೇ ಸಾವುಗಳನ್ನು ಅಂದಾಜು ಮಾಡಬಹುದು ಮತ್ತು ಆದರೆ ನಿಖರವಾದ ದತ್ತಾಂಶ ಎಂದಿಗೂ ತಿಳಿದಿರುವುದಿಲ್ಲ ಎಂದು ಹೇಳಲಾಗಿದೆ. ಆ ವರದಿಗಳಲ್ಲಿ ಎಲ್ಲ ಸಾವಿನ ಕಾರಣಗಳೂ ಸೇರಿ ನಾಗರಿಕ ನೋಂದಣಿ ವ್ಯವಸ್ಥೆ (ಸಿಆರ್ ಎಸ್) ಮತ್ತು ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಚ್ ಎಂಐಎಸ್) ದತ್ತಾಂಶವನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ, ಜೊತೆಗೆ ಅದರಲ್ಲಿ ಲೆಕ್ಕವಿಲ್ಲದ ಸಾವಿನ ಎಣಿಕೆ ಎಂಬ ತಪ್ಪಾದ ತೀರ್ಮಾನಕ್ಕೆ ಬರಲಾಗಿದೆ.
ಭಾರತದಲ್ಲಿ ದೃಢವಾದ ಮತ್ತು ಶಾಸನ ಆಧಾರಿತ ಸಾವಿನ ನೋಂದಣಿ ವ್ಯವಸ್ಥೆ ಇದ್ದು, ಕೆಲವು ಪ್ರಕರಣಗಳಲ್ಲಿ ಸಾಂಕ್ರಾಮಿಕ ರೋಗ ಮತ್ತು ಅದರ ನಿರ್ವಹಣೆಯ ತತ್ವಗಳ ಪ್ರಕಾರ ಪತ್ತೆಯಾಗದ ಇರಬಹುದು, ಆದರೆ ಸಾವುಗಳ ಲೆಕ್ಕ ತಪ್ಪಿ ಹೋಗುವುದು ಸಂಪೂರ್ಣ ಅಸಂಭವವಾಗಿದೆ ಎಂದು ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ. ಪ್ರಕರಣದ ಮರಣದ ಪ್ರಮಾಣದಲ್ಲೂ ನಾವು ಇದನ್ನು ನೋಡಬಹುದು, 2020ರ ಡಿಸೆಂಬರ್ ನಲ್ಲಿ ಶೇ.1.45ರಷ್ಟು ಇದ್ದ ಮರಣ ಪ್ರಮಾಣ, 2021ರ ಏಪ್ರಿಲ್-ಮೇ ತಿಂಗಳಲ್ಲಿ ಎರಡನೇ ಅಲೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಏರಿಕೆಯಾದರೂ ಸಹ, ಇಂದು ಮರಣ ಪ್ರಮಾಣ ಶೇ.1.34ರಷ್ಟಿದೆ.
ಅಲ್ಲದೆ, ಭಾರತದಲ್ಲಿ ದಿನನಿತ್ಯ ಹೊಸ ಪ್ರಕರಣ ಮತ್ತು ಮರಣ ಪ್ರಮಾಣದ ವರದಿ ತಳಮಟ್ಟದ ವಿಧಾನವನ್ನು ಅನುಸರಿಸಲಾಗುತ್ತಿದೆ, ಅಲ್ಲಿ ಜಿಲ್ಲೆಗಳು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸಚಿವಾಲಯಕ್ಕೆ ನಿರಂತರವಾಗಿ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯ ವಿವರಗಳನ್ನು ನೀಡುತ್ತವೆ. ಸಾವಿನ ಸಂಖ್ಯೆಯ ಗೊಂದಲ ಮತ್ತು ಅಸ್ಥಿರತೆಯನ್ನು ತಪ್ಪಿಸಲು 2020ರ ಮೇ ತಿಂಗಳಲ್ಲಿಯೇ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್ ), ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ ಮರಣದ ದಾಖಲೀಕರಣ ಸಂಹಿತೆಯ ಶಿಫಾರಸ್ಸಿನಂತೆ ಐಸಿಡಿ-10 ಸಂಹಿತೆಯ ಪ್ರಕಾರ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿಖರವಾಗಿ ಎಲ್ಲ ಸಾವುಗಳನ್ನು ದಾಖಲೀಕರಿಸಲು “ಭಾರತದಲ್ಲಿ ಕೋವಿಡ್-19 ಸಂಬಂಧಿತ ಸಾವುಗಳನ್ನು ಸೂಕ್ತವಾಗಿ ದಾಖಲಿಸಲು ಮಾರ್ಗದರ್ಶನ’ ನೀಡಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಪದೇ ಪದೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಔಪಚಾರಿಕ ಸಂವಹನ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಗೂ ಕೇಂದ್ರೀಯ ತಂಡಗಳನ್ನು ನಿಯೋಜನೆ ಮೂಲಕ ಮಾರ್ಗಸೂಚಿಗಳ ಅನ್ವಯವೇ ಸಾವುಗಳನ್ನು ದಾಖಲೀಕರಣ ಮಾಡುವಂತೆ ಸಲಹೆ ನೀಡುತ್ತಲೇ ಇದೆ. ರಾಜ್ಯಗಳು ತಮ್ಮ ಆಸ್ಪತ್ರೆಗಳಲ್ಲಿನ ಸಾವುಗಳ ಕುರಿತು ಆಡಿಟ್ ನಡೆಸಬೇಕು ಎಂದು ಸೂಚಿಸಲಾಗಿದೆ ಮತ್ತು ದತ್ತಾಂಶ ಆಧಾರಿತ ನಿರ್ಣಯ ಕೈಗೊಳ್ಳಲು ನೆರವಾಗುವಂತೆ ಯಾವುದೇ ಪ್ರಕರಣಗಳು ಅಥವಾ ಸಾವುಗಳು ಜಿಲ್ಲೆ ಮತ್ತು ದಿನಾಂಕವಾರು ವಿವರಗಳೊಂದಿಗೆ ತಪ್ಪಿಸಿಕೊಳ್ಳಬಹುದಾಗಿದ್ದು, ಅದಕ್ಕೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.
ಪ್ರತಿದಿನ ಜಿಲ್ಲಾವಾರು ಪ್ರಕರಣಗಳು ಮತ್ತು ಸಾವುಗಳನ್ನು ಮೇಲ್ವಿಚಾರಣೆ ಮಾಡಲು ಒಂದು ದೃಢವಾದ ವರದಿ ಮಾಡುವ ಕಾರ್ಯವಿಧಾನದ ಅಗತ್ಯವನ್ನು ಕೇಂದ್ರ ಆರೋಗ್ಯ ಸಚಿವಾಲಯ ಅಗಾಗ್ಗೆ ಒತ್ತಿ ಹೇಳುತ್ತಲೇ ಇದೆ. ಕಡಿಮೆ ಸಂಖ್ಯೆಯ ದೈನಂದಿನ ಸಾವುಗಳನ್ನು ವರದಿ ಮಾಡುತ್ತಿರುವ ರಾಜ್ಯಗಳು ತಮ್ಮ ದತ್ತಾಂಶವನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಅದಕ್ಕೆ ಒಂದು ನಿದರ್ಶನವೆಂದರೆ, ಕೇಂದ್ರ ಆರೋಗ್ಯ ಸಚಿವಾಲಯವು ಬಿಹಾರ ರಾಜ್ಯಕ್ಕೆ ಪತ್ರ ಬರೆದು ವಿವರವಾದ ದಿನಾಂಕ ಮತ್ತು ಜಿಲ್ಲಾವಾರು ಸಾವುಗಳ ಹೊಂದಾಣಿಕೆಯ ಸಂಖ್ಯೆಯ ವಿವರಗಳನ್ನು ಒದಗಿಸುವಂತೆ ಸೂಚನೆ ನೀಡಿತ್ತು.
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ವರದಿಗಳು ಅಲ್ಲದೆ, ಶಾಸನ ಆಧಾರಿತ ನೋಂದಣಿ ವ್ಯವಸ್ಥೆ(ಸಿಆರ್ ಎಸ್) ಯಂತಹ ಉತ್ಕೃಷ್ಟ ವಿಧಾನದ ಮೂಲಕ ದೇಶದ ಎಲ್ಲ ಜನನ ಮತ್ತು ಮರಣಗಳನ್ನು ದಾಖಲಿಸಲಾಗುತ್ತಿದೆ. ಸಿಆರ್ ಎಸ್ ದತ್ತಾಂಶ ಸಂಗ್ರಹಣೆ, ಸರಿಪಡಿಸುವುದು, ಕ್ರೂಡೀಕರಿಸುವುದು ಮತ್ತು ಅಂಕಿ ಸಂಖ್ಯೆಗಳನ್ನು ಪ್ರಕಟಿಸಿರುವ ಪ್ರಕ್ರಿಯೆ ಪಾಲಿಸಲಿದ್ದು, ಇದು ದೀರ್ಘಾವಧಿಯ ಪ್ರಕ್ರಿಯೆ ಆಗಿದೆ. ಆದರೆ ಯಾವೊಂದು ಸಾವು ಲೆಕ್ಕದಿಂದ ತಪ್ಪಿಸಿಕೊಳ್ಳದಂತೆ ಖಾತ್ರಿಪಡಿಸಲಾಗುವುದು. ಚಟುವಟಿಕೆಗಳ ವಿಸ್ತರಣೆ ಮತ್ತು ವ್ಯಾಪ್ತಿಯ ವಿಸ್ತರಣೆಯಿಂದಾಗಿ, ಅಂಕಿ ಸಂಖ್ಯೆಗಳನ್ನು ಮುಂದಿನ ವರ್ಷ ಪ್ರಕಟಿಸಲಾಗುವುದು. ಅದನ್ನು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಿರುವುದನ್ನು ಗಮನಿಸಲಾಗಿದೆ. ಸಾವುಗಳ ಲೆಕ್ಕಾಚಾರದ ಸಮನ್ವಯವನ್ನು ಇನ್ನೂ ನಡೆಸಲಾಗುತ್ತಿದೆ, ಕೋವಿಡ್ ನಿಂದಾದ ಸಾವುಗಳ ವರದಿ ಕಡಿಮೆ ಮಾಡುವುದು ಮತ್ತು ಕಡಿಮೆ ಎಣಿಕೆ ಮಾಡುವುದು ಎಂಬೆಲ್ಲಾ ಊಹೆಗಳನ್ನು ನಿವಾರಿಸಲಾಗುತ್ತಿದೆ.
ಎರಡನೇ ಅಲೆ ಉತ್ತುಂಗದಲ್ಲಿರುವಾಗ ದೇಶಾದ್ಯಂತ ಆರೋಗ್ಯ ವ್ಯವಸ್ಥೆಯು ವೈದ್ಯಕೀಯ ಸಹಾಯದ ಅಗತ್ಯವಿರುವ ಪ್ರಕರಣಗಳ ಪರಿಣಾಮಕಾರಿ ವೈದ್ಯಕೀಯ ನಿರ್ವಹಣೆ ಮೇಲೆ ಕೆಂದ್ರೀಕೃತವಾಗಿತ್ತು ಮತ್ತು ಈ ಕಾರಣಗಳಿಂದಾಗಿ ಕೋವಿಡ್ ಸಾವುಗಳ ಸರಿಯಾದ ವರದಿ ದಾಖಲೀಕರಣ ಗಮನಿಸುವುದರಿಂದ ಸತ್ಯಾಂಶ ಎಲ್ಲರಿಗೂ ತಿಳಿಯುತ್ತದೆ ಕೋವಿಡ್ ಸಾವುಗಳ ದಾಖಲೀಕರಣ ವಿಳಂಬವಾಗಬಹುದು, ಆದರೆ ಅವುಗಳಲ್ಲಿ ರಾಜೀ ಆಗುವುದಿಲ್ಲ.
ಕೋವಿಡ್ ಸಾಂಕ್ರಾಮಿಕದಂತಹ ಗಂಭೀರವಾದ ಮತ್ತು ದೀರ್ಘಕಾಲದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಮರಣದ ಸಂಖ್ಯೆ ದಾಖಲಾಗುವುದರಲ್ಲಿ ಕೆಲವು ವ್ಯತ್ಯಾಸಗಳು ಎಲ್ಲರಿಗೂ ತಿಳಿದಿರುವ ಸತ್ಯ. ವಿಶ್ವಾಸಾರ್ಹ ಮೂಲಗಳಿಂದ ಮರಣದ ಮಾಹಿತಿಯು ಲಭ್ಯವಿದ್ದಾಗ ಸಾವಿನ ಬಗ್ಗೆ ಉತ್ತಮವಾಗಿ ನಡೆಸಿದ ಸಂಶೋಧನಾ ಅಧ್ಯಯನಗಳನ್ನು ಸಾಮಾನ್ಯವಾಗಿ ಘಟನೆಯ ನಂತರ ಮಾಡಲಾಗುವುದು. ಅಂತಹ ಅಧ್ಯಯನ ವಿಧಾನಗಳು ಉತ್ತಮವಾಗಿ ಸ್ಥಾಪಿತವಾಗಿವೆ, ಮರಣ ಲೆಕ್ಕಾಚಾರ ಮಾಡಲು ದತ್ತಾಂಶ ಮೂಲಗಳನ್ನು ಊಹೆಗಳೆಂದು ವ್ಯಾಖ್ಯಾನಿಸಲಾಗಿದೆ.
***
(Release ID: 1742297)
Visitor Counter : 386