ಸಂಸ್ಕೃತಿ ಸಚಿವಾಲಯ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ಜಯಂತಿಯ ಅಂಗವಾಗಿ ಸರ್ಕಾರ ಜನವರಿ 23ನ್ನು ಪರಾಕ್ರಮ ದಿವಸ್ ಆಗಿ ಘೋಷಿಸಿದೆ: ಶ್ರೀ ಜಿ. ಕಿಶನ್ ರೆಡ್ಡಿ

Posted On: 02 AUG 2021 3:19PM by PIB Bengaluru

ಪ್ರಮುಖ ಮುಖ್ಯಾಂಶಗಳು:

  • ನೇತಾಜಿ ಅವರ 125ನೇ ಜಯಂತಿಯ ಆಚರಣೆಗೆ ಸಂಬಂಧಿಸಿದ ವಿವಿಧ ಪ್ರಸ್ತಾವಗಳಿಗೆ ಭಾರತ ಸರ್ಕಾರ ಅನುಮೋದನೆ ನೀಡಿದೆ.
  • ನೇತಾಜಿ ಸುಭಾಷ್ ಚಂದ್ರ ಬೋಸ್ ವಸ್ತು ಸಂಗ್ರಹಾಲಯವನ್ನು ನವದೆಹಲಿಯ ಕೆಂಪು ಕೋಟೆಯಲ್ಲಿ ಸ್ಥಾಪಿಸಲಾಗಿದೆ.
  • ಜನವರಿ 23ನ್ನು ಪರಾಕ್ರಮ ದಿವಸವಾಗಿ ಆಚರಿಸಲು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.

ಭಾರತ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ಆಚರಿಸುತ್ತಿದೆ. 2021 ಜನವರಿ 23ರಂದು ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್ ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ಜಯಂತಿಯ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದ್ದು, ಮಾನ್ಯ ಪ್ರಧಾನಮಂತ್ರಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ವಿಚಾರಗೋಷ್ಠಿಗಳನ್ನು 2021 ಜನವರಿ 23ರಂದು ಕೋಲ್ಕತ್ತಾದಲ್ಲಿ ಮತ್ತು 2021 ಮಾರ್ಚ್ 5ರಂದು ಜಬಲ್ಪುರದಲ್ಲಿ ಆಯೋಜಿಸಲಾಗಿದೆ.

ಮಾನ್ಯ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಆಚರಣೆಗಾಗಿ ರಚಿಸಲಾಗಿದೆ. ಸಮಿತಿಯಲ್ಲಿ ಗಣ್ಯ ವ್ಯಕ್ತಿಗಳು, ಇತಿಹಾಸತಜ್ಞರು, ಲೇಖಕರು, ವಿಷಯ ತಜ್ಞರು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಸದಸ್ಯರು ಹಾಗೂ ಆಜಾದ್ ಹಿಂದ್ ಸೇನೆ  (.ಎನ್..)ಯೊಂದಿಗೆ ಸಂಪರ್ಕಿತರಾದ ಗಣ್ಯ ವ್ಯಕ್ತಿಗಳೂ ಇದ್ದಾರೆ. ಜನವರಿ 23ನ್ನು ಪ್ರತಿವರ್ಷ ಪರಾಕ್ರಮ  ದಿವಸವಾಗಿ ಆಚರಿಸಲು ಗೆಜೆಟ್ ಅಧಿಸೂಚನೆಯನ್ನೂ ಹೊರಡಿಸಲಾಗಿದೆ.

ಭಾರತ ಸರ್ಕಾರ, ಐಎನ್ಎಯ ಹುತಾತ್ಮರ ಸ್ಮಾರಕವನ್ನು ಕೆಂಪು ಕೋಟೆಯಲ್ಲಿ ಮತ್ತು ಕೋಲ್ಕತ್ತಾ ಬಳಿಯ ನೀಲ್ ಗಂಜ್ ನಲ್ಲಿ ಸ್ಥಾಪಿಸಲು, ನೇತಾಜಿ ಮತ್ತು .ಎನ್..ಕುರಿತ ಕಿರು ವಿಡಿಯೋ, ಐಎನ್ಎ ಟ್ರಯಲ್ ಕುರಿತ ಸಾಕ್ಷ್ಯ ಚಿತ್ರ ನಿರ್ಮಾಣ, ಕರ್ನಲ್ ದಿಲ್ಲಾನ್ ಮತ್ತು ಜನರಲ್ ಶಹನವಾಜ್ ಖಾನ್ ಅವರ ಜೀವನ ಚರಿತ್ರೆಯ ಪ್ರಕಟಣೆ, .ಎನ್.. ಚಿತ್ರಗಳನ್ನು ಸಚಿತ್ರ ಪುಸ್ತಕವಾಗಿ ಪ್ರಕಟಿಸುವ, ನೇತಾಜಿ ಕುರಿತಂತೆ ಮಕ್ಕಳ-ಸ್ನೇಹಿ ಕಾಮಿಕ್ ನಂತಹ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ವಿವಿಧ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ.ಭಾರತ ಸರ್ಕಾರ ನೇತಾಜಿ ಮತ್ತು .ಎನ್.. ಸಂಬಂಧಿತ ಮಹತ್ವದ ದಿನಾಂಕಗಳ ಆಚರಣೆಯನ್ನೂ ಅಂದರೆ ಮೊಯರಾಂಗ್ ದಿನ -ಬ್ರಿಟಿಷ್ ಸೇನೆಯು ಭಾರತದ ನೆಲದಲ್ಲಿ ಸೋಲಿಸಲ್ಪಟ್ಟ-14ನೇ ಏಪ್ರಿಲ್, ಐಎನ್‌ಎ ದಿನಾಚರಣೆ -21ನೇ ಅಕ್ಟೋಬರ್, ನೇತಾಜಿ ಅಂಡಮಾನ್‌ ಗೆ ಹೋಗಿ, ಧ್ವಜ ಹಾರಿಸಿದ-30 ಡಿಸೆಂಬರ್ಇಂಫಾಲದ ಐಎನ್‌ಎ ಯುದ್ಧದ ದಿನಗಳನ್ನು ಆಚರಿಸುತ್ತಿದೆ.

  • ನೇತಾಜಿ ಸುಭಾಷ್ ಚಂದ್ರ ಬೋಸ್ ವಸ್ತುಸಂಗ್ರಹಾಲಯವನ್ನು ನವ ದೆಹಲಿಯ ಕೆಂಪು ಕೋಟೆಯಲ್ಲಿ ಸ್ಥಾಪಿಸಲಾಗಿದೆ. ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್ ನಲ್ಲಿ ಪ್ರಸ್ತು ಸುಭಾಷ್ ಚಂದ್ರ ಬೋಸ್ ಕುರಿತ ವಿಸ್ತೃತ ವಸ್ತು ಪ್ರದರ್ಶನ ನಡೆಯುತ್ತಿದೆ.
  • ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಳಿಕ ಕೆಳಕಂಡ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ:
  • ನೇತಾಜಿ ಸುಭಾಷ್ ವಿಶ್ವವಿದ್ಯಾಲಯ, ಪೋಖ್ಹರಿ, ಜೆಮ್ ಷೆಡ್ಪುರ
  • ನೇತಾಜಿ ಸುಭಾಷ್ ಮುಕ್ತ ವಿಶ್ವವಿದ್ಯಾಲಯ, ಕೋಲ್ಕತ್ತಾ,
  • ನೇತಾಜಿ ಸುಭಾಷ್ ತಾಂತ್ರಿಕ ವಿಶ್ವವಿದ್ಯಾಲಯ, ನವದೆಹಲಿ
  • ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ, ಪಾಟಿಯಾಲ

ಮಾಹಿತಿಯನ್ನು ಕೇಂದ್ರ ಸಂಸ್ಕೃತಿ ಸಚಿವ ಶ್ರೀ ಜಿ. ಕೃಷ್ಣ ರೆಡ್ಡಿ ಲೋಕಸಭೆಗಿಂದು ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

***



(Release ID: 1741549) Visitor Counter : 319