ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಇತ್ತೀಚಿನ ಮಾಹಿತಿ

Posted On: 27 JUL 2021 9:25AM by PIB Bengaluru

ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಡಿಯಲ್ಲಿ ಈವರೆಗೆ 44.19 ಕೋಟಿ ಲಸಿಕೆ ಡೋಸ್ ಗಳ ನೀಡಿಕೆ.

ಈವರೆಗೆ ದೇಶದಾದ್ಯಂತ 3,06,21,469 ಆಗಿರುವ ಒಟ್ಟು ಚೇತರಿಕೆ

ಚೇತರಿಕೆ ದರ ಪ್ರಸ್ತುತ ಶೇ.97.39

42,363 ಸೋಂಕಿತರು ಕಳೆದ 24 ಗಂಟೆಗಳ ಅವಧಿಯಲ್ಲಿ ಚೇತರಿಸಿಕೊಂಡಿದ್ದಾರೆ.

ಭಾರತ 132 ದಿನಗಳ ಬಳಿಕ 30,000ಕ್ಕಿಂತ ಕಡಿಮೆ ದೈನಿಕ ಪ್ರಕರಣಗಳನ್ನು ದಾಖಲಿಸಿದೆ; 29,689 ಹೊಸ ಪ್ರಕರಣಗಳು ಕಳೆದ 24 ಗಂಟೆಗಳ ಅವಧಿಯಲ್ಲಿ ವರದಿಯಾಗಿವೆ.

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 124 ದಿನಗಳ ಬಳಿಕ 4,00,000ಕ್ಕಿಂತ ಕಡಿಮೆ ಇದೆ; ಪ್ರಸ್ತುತ 3,98,100 ಸಕ್ರಿಯ ಪ್ರಕರಣಗಳಿವೆ.

ಸಕ್ರಿಯ ಪ್ರಕರಣಗಳು, ಒಟ್ಟು ಪ್ರಕರಣದ ಶೇ. 1.27ಆಗಿವೆ.

ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇದ್ದು, ಪ್ರಸ್ತುತ ಶೇ.2.33 ಆಗಿದೆ.

ದೈನಿಕ ಪಾಸಿಟಿವಿಟಿ ದರ ಶೇ.1.73ಆಗಿದ್ದು, ಶೇ.5ಕ್ಕಿಂತ ಕಡಿಮೆ ಇದೆ.

ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಳವಾಗಿದ್ದು -45.91 ಕೋಟಿ ಪರೀಕ್ಷೆ ನಡೆಸಲಾಗಿದೆ.

***(Release ID: 1739340) Visitor Counter : 175