ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
43.51 ಕೋಟಿ ದಾಟಿದ ಭಾರತ ಒಟ್ಟಾರೆ ಕೋವಿಡ್-19 ಲಸಿಕಾ ವ್ಯಾಪ್ತಿ
ಚೇತರಿಕೆ ಪ್ರಮಾಣ ಶೇ.97.35ಕ್ಕೆ ಏರಿಕೆ
ಕಳೆದ 24 ಗಂಟೆಗಳಲ್ಲಿ 39,361 ಹೊಸ ಕೋವಿಡ್ ಪ್ರಕರಣ ದಾಖಲು
ಭಾರತದ ಒಟ್ಟಾರೆ ಪ್ರಕರಣಗಳಿಗೆ ಹೋಲಿಸಿದರೆ ಸದ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ(4,11,189) ಶೇ.1.31 ಮಾತ್ರ
ಸತತ 49 ದಿನಗಳಿಂದ ದಿನದ ಪಾಸಿಟಿವಿಟಿ ದರ (ಶೇ.3.41)
Posted On:
26 JUL 2021 10:26AM by PIB Bengaluru
ಭಾರತದ ಕೋವಿಡ್-19 ಲಸಿಕೀಕರಣ ವ್ಯಾಪ್ತಿ ನಿನ್ನೆ 43.51 ಕೋಟಿ ತಲುಪಿದೆ. ಇಂದು ಬೆಳಿಗ್ಗೆ 8 ಗಂಟೆವರೆಗೆ ಲಭ್ಯವಾಗಿರುವ ತಾತ್ಕಾಲಿಕ ವರದಿಗಳ ಪ್ರಕಾರ 52,95,458 ಶಿಬಿರಗಳಲ್ಲಿ ಒಟ್ಟಾರೆ 43,51,96,001 ಲಸಿಕೆ ಡೋಸ್ ಗಳನ್ನು ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 18,99,874 ಲಸಿಕೆಗಳನ್ನು ಹಾಕಲಾಗಿದೆ.
ಅವುಗಳ ವಿವರ ಈ ಕೆಳಗಿನಂತಿದೆ.
ಎಚ್ ಸಿಡಬ್ಲೂ
|
1ನೇ ಡೋಸ್
|
1,02,87,343
|
2ನೇ ಡೋಸ್
|
77,06,397
|
ಎಫ್ಎಲ್ ಡಬ್ಲೂ
|
1ನೇ ಡೋಸ್
|
1,78,56,000
|
2ನೇ ಡೋಸ್
|
1,08,45,879
|
18ರಿಂದ 44 ವರ್ಷ ವಯೋಮಾನದವರು
|
1ನೇ ಡೋಸ್
|
13,91,72,057
|
2ನೇ ಡೋಸ್
|
62,18,541
|
45ರಿಂದ 59 ವರ್ಷ ವಯೋಮಾನದವರು
|
1ನೇ ಡೋಸ್
|
10,09,68,508
|
2ನೇ ಡೋಸ್
|
3,45,89,799
|
60 ವರ್ಷ ಮೇಲ್ಪಟ್ಟವರು
|
1ನೇ ಡೋಸ್
|
7,35,18,799
|
2ನೇ ಡೋಸ್
|
3,40,32,678
|
ಒಟ್ಟು
|
43,51,96,001
|
ಕೋವಿಡ್-19 ಲಸಿಕೆ ಸಾರ್ವತ್ರೀಕರಣದ ಹೊಸ ಹಂತ 2021ರ ಜೂ.21ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್-19 ಲಸಿಕೀಕರಣದ ವ್ಯಾಪ್ತಿ ಮತ್ತು ವೇಗವನ್ನು ವಿಸ್ತರಿಸಲು ಬದ್ಧವಾಗಿದೆ.
ಸಾಂಕ್ರಾಮಿಕ ಕಾಣಿಸಿಕೊಡಾಗಿನಿಂದ ಸೋಂಕು ತಗುಲಿರುವವರ ಪೈಕಿ ಈಗಾಗಲೇ 3,05,79,106 ಸೋಂಕಿತರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 35,968 ಸೋಂಕಿತರು ಗುಣಮುಖರಾಗಿದ್ದಾರೆ. ಇದರಿಂದಾಗಿ ಒಟ್ಟಾರೆ ಚೇತರಿಕೆ ಪ್ರಮಾಣ ಶೇ.97.35 ರಷ್ಟಾಗಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 39,361 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಸತತ 29 ದಿನಗಳಿಂದ ಪ್ರತಿದಿನ 50,000ಕ್ಕೂ ಕಡಿಮೆ ಪ್ರಕರಣಗಳು ವರದಿಯಾಗುತ್ತಿವೆ. ಇದು ಕೇಂದ್ರ ಸರ್ಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಸಹಭಾಗಿತ್ವದ ಪ್ರಯತ್ನಗಳ ಪರಿಣಾಮವಾಗಿದೆ.

ಭಾರತದಲ್ಲಿ ಇಂದು ಸಕ್ರಿಯ ಪ್ರಕರಣಗಳ ಸಂಖ್ಯೆ 4,11,189 ಇದೆ ಮತ್ತು ಸಕ್ರಿಯ ಪ್ರಕರಣಗಳು ಒಟ್ಟು ಸೋಂಕಿತರ ಪ್ರಕರಣಗಳಲ್ಲಿ ಶೇ.1.31ರಷ್ಟು ಮಾತ್ರ.

ದೇಶಾದ್ಯಂತ ಸೋಂಕು ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ, ಕಳೆದ 24 ಗಂಟೆಗಳಲ್ಲಿ 11,54,444 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ ಈವರೆಗೆ ದೇಶದಲ್ಲಿ ಸುಮಾರು 45.74 ಕೋಟಿ (45,74,44,011)ಪರೀಕ್ಷೆಗಳನ್ನು ನಡೆಸಲಾಗಿದೆ.
ಒಂದೆಡೆ ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯ ವೃದ್ಧಿಸಲಾಗಿದ್ದು, ವಾರದ ಪಾಸಿಟಿವಿಟಿ ದರ ಸದ್ಯ ಶೇ.2.31ರಷ್ಟಿದೆ ಮತ್ತು ಇಂದು ಪಾಸಿಟಿವಿಟಿ ದರ ಶೇ.3.41ರಷ್ಟಿದೆ. ದಿನದ ಪಾಸಿಟಿವಿಟಿ ದರ ಸತತ 49 ದಿನಗಳಿಂದ ಶೇ.5ಕ್ಕಿಂತ ಕಡಿಮೆ ಇದೆ.

***
(Release ID: 1738963)
Visitor Counter : 296
Read this release in:
Gujarati
,
English
,
Urdu
,
Hindi
,
Marathi
,
Bengali
,
Punjabi
,
Odia
,
Tamil
,
Telugu
,
Malayalam