ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಪರಿಷ್ಕೃತ ವರದಿ

Posted On: 26 JUL 2021 9:16AM by PIB Bengaluru

ದೇಶಾದ್ಯಂತ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನದಲ್ಲಿ ಇದುವರೆಗೆ 43.51 ಕೋಟಿ ಡೋಸ್  ಲಸಿಕೆ ನೀಡಲಾಗಿದೆ.

ಕೋವಿಡ್-19 ಸಾಂಕ್ರಾಮಿಕ ಸೋಂಕು ದೇಶದಲ್ಲಿ ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ 3,05,79,106 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇದರೊಂದಿಗೆ ಚೇತರಿಕೆ ದರ ಪ್ರಸ್ತುತ 97.35%ಗೆ ಸುಧಾರಣೆ ಕಂಡಿದೆ.

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 35,968 ರೋಗಿಗಳು ಗುಣಮುಖರಾಗಿದ್ದಾರೆ.

ಭಾರತದಲ್ಲಿ ನಿನ್ನೆ ಅಂದರೆ ಕಳೆದ 24 ತಾಸುಗಳಲ್ಲಿ 39,361 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಪ್ರಸ್ತುತ 4,11,189ಕ್ಕೆ ಇಳಿಕೆ ಕಂಡಿದೆ.

ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.31% ಇದೆ.

ವಾರದ ಪಾಸಿಟಿವಿಟಿ ದರ  ನಿರಂತರ 5% ಮಟ್ಟದಿಂದ ಕೆಳಗೆ ಮುಂದುವರಿಯುತ್ತಿದ್ದು, ಪ್ರಸ್ತುತ 2.31% ಇದೆ.

ದೈನಂದಿನ ಪಾಸಿಟಿವಿಟಿ ದರ 3.41% ಇದ್ದು, ಅದು ಸಹ ನಿರಂತರ 5% ಮಟ್ಟದ ಕೆಳಗಿದೆ.

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಇದುವರೆಗೆ 45.74 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

***



(Release ID: 1738960) Visitor Counter : 202