ರೈಲ್ವೇ ಸಚಿವಾಲಯ
ಇದೇ ಮೊದಲ ಬಾರಿಗೆ, ಭಾರತೀಯ ರೈಲ್ವೆಯ ಆಕ್ಸಿಜನ್ ಎಕ್ಸ್|ಪ್ರೆಸ್ ರೈಲಿನಿಂದ ಅತಿಶೀಘ್ರವೇ ಬಾಂಗ್ಲಾದೇಶಕ್ಕೆ 10 ಕಂಟೈನರ್ ಗಳಲ್ಲಿ 200 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕ ಸಾಗಣೆ
ಆಕ್ಸಿಜನ್ ಎಕ್ಸ್|ಪ್ರೆಸ್ ರೈಲುಗಳ ಮೂಲಕ ಆಮ್ಲಜನಕ ಪೂರೈಕೆ ಸೇವೆ ಮುಂದುವರಿಸಿದ ಭಾರತೀಯ ರೈಲ್ವೆ
Posted On:
24 JUL 2021 1:03PM by PIB Bengaluru
ಭಾರತೀಯ ರೈಲ್ವೆಯ ಆಕ್ಸಿಜನ್ ಎಕ್ಸ್|ಪ್ರೆಸ್ ರೈಲು ಅತಿ ಶೀಘ್ರವೇ ಬಾಂಗ್ಲಾದೇಶಕ್ಕೆ ತನ್ನ ಪ್ರಯಾಣ ಬೆಳೆಸಲಿದೆ. ಇದೇ ಮೊದಲ ಬಾರಿಗೆ ಆಕ್ಸಿಜನ್ ಎಕ್ಸ್|ಪ್ರೆಸ್ ರೈಲು ನೆರೆ ರಾಷ್ಟ್ರಕ್ಕೆ ತನ್ನ ಪ್ರಯಾಣ ಮತ್ತು ಸೇವಾ ಕಾರ್ಯಾಚರಣೆ ಆರಂಭಿಸುತ್ತಿದೆ. ಬಾಂಗ್ಲಾದೇಶದ ಬೆನಪೋಲ್|ಗೆ 200 ಮೆಟ್ರಿಕ್ ಟನ್ ತೂಕದ ದ್ರವೀಕೃತ ವೈದ್ಯಕೀಯ ಆಮ್ಲಜನಕ ಸಾಗಿಸಲು ಆಗ್ನೇಯ ರೈಲ್ವೆ ಇಲಾಖೆಯು ಇಂದು ಚಕ್ರಧಾರ್|ಪುರ್ ವಿಭಾಗದ ಟಾಟಾದಲ್ಲಿ ಬೇಡಿಕೆ ಪತ್ರ (ಇಂಡೆಂಟ್) ಸಲ್ಲಿಸಿದೆ.
200 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು 10 ಕಂಟೈನರ್|ಗಳಿಗೆ ಭರ್ತಿ ಮಾಡಿ, ಬೋಗಿಗಳಿಗೆ ತುಂಬಿ, ಆಕ್ಸಿಜನ್ ಎಕ್ಸ್|ಪ್ರೆಸ್ ರೈಲು ಪ್ರಯಾಣಕ್ಕೆ ಸಜ್ಜುಗೊಳಿಸಲಾಗಿದೆ.
ಕೊರೊನಾ 2ನೇ ಅಲೆ ದೇಶದಲ್ಲಿ ವ್ಯಾಪಕವಾದಾಗ, ದೇಶದೆಲ್ಲೆಡೆ ಎದುರಾದ ವೈದ್ಯಕೀಯ ಆಮ್ಲಜನಕದ ಕೊರತೆ ನೀಗಿಸಲು ಆಕ್ಸಿಜನ್ ಎಕ್ಸ್|ಪ್ರೆಸ್ ರೈಲುಗಳು, 2021 ಏಪ್ರಿಲ್ 24ರಂದು ಕಾರ್ಯಾಚರಣೆ ಆರಂಭಿಸಿದವು. ದೇಶದ 15 ರಾಜ್ಯಗಳಿಗೆ 35,000 ಮೆಟ್ರಿಕ್ ಟನ್ ಗಿಂತ ಹೆಚ್ಚಿನ ದ್ರವೀಕೃತ ವೈದ್ಯಕೀಯ ಆಮ್ಲಜನಕ ಸಾಗಿಸಲು 480ಕ್ಕಿಂತ ಹೆಚ್ಚಿನ ಆಕ್ಸಿಜನ್ ಎಕ್ಸ್|ಪ್ರೆಸ್ ರೈಲುಗಳು ಕಾರ್ಯಾಚರಣೆ ನಡೆಸಿದವು.
ಭಾರತೀಯ ರೈಲ್ವೆಯು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ತಲುಪಿಸಲು ಪ್ರಯತ್ನಿಸುತ್ತಿದೆ.
***
(Release ID: 1738570)
Visitor Counter : 317