ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ 41.78 ಕೋಟಿ ದಾಟಿದ ಕೋವಿಡ್ – 19 ಲಸಿಕೆ


ಚೇತರಿಕೆ ದರ 97.35% ಕ್ಕೆ ಏರಿಕೆ

ಕಳೆದ 24 ಗಂಟೆಗಳಲ್ಲಿ 41,383 ಹೊಸ ದೈನಂದಿನ ಪ್ರಕರಣಗಳು ಪತ್ತೆ

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ (4,09,394) ಪ್ರಸ್ತುತ 1.31% ರಷ್ಟು

ದೈನಂದಿನ ಪಾಸಿಟಿವಿಟಿ ದರ 2.41% ರಷ್ಟು: ನಿರಂತರ 31 ದಿನಗಳಿಂದ 3% ಕ್ಕಿಂತ ಕಡಿಮೆ

Posted On: 22 JUL 2021 12:04PM by PIB Bengaluru

ಭಾರತದಲ್ಲಿ ಕೋವಿಡ್19 ಲಸಿಕೆ ಪ್ರಮಾಣ 41.78 ಕೋಟಿ ದಾಟಿದೆ. ಇಂದು ಬೆಳಿಗ್ಗೆ ದೊರೆತ ತಾತ್ಕಾಲಿಕ ಮಾಹಿತಿಯಂತೆ 51,60,995 ಅವಧಿಗಳಲ್ಲಿ 41,78,51,151 ಡೋಸ್ ಲಸಿಕೆ ಲಸಿಕೆ ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 22,77,679 ಡೋಸ್ ಲಸಿಕೆ ನೀಡಲಾಗಿದೆ.

ಇವರನ್ನು ಒಳಗೊಂಡಂತೆ

ಎಚ್.ಸಿ.ಡಬ್ಲ್ಯೂ ಗಳು

ಮೊದಲ ಡೋಸ್

1,02,77,386

ಎರಡನೇ ಡೋಸ್

76,11,600

ಎಫ್.ಎಲ್.ಡಬ್ಲ್ಯೂ ಗಳು

ಮೊದಲ ಡೋಸ್

1,78,24,546

ಎರಡನೇ ಡೋಸ್

1,05,49,835

18-44 ವಯೋಮಿತಿಯೊಳಗಿನವರು

ಮೊದಲ ಡೋಸ್

13,05,53,816

ಎರಡನೇ ಡೋಸ್

53,22,634

45-59 ವಯೋಮಿತಿಯೊಳಗಿನವರು

ಮೊದಲ ಡೋಸ್

9,89,17,103

ಎರಡನೇ ಡೋಸ್

3,15,85,098

60 ವರ್ಷ ಮೀರಿದವರು

ಮೊದಲ ಡೋಸ್

7,26,86,361

ಎರಡನೇ ಡೋಸ್

3,25,22,772

ಒಟ್ಟು

41,78,51,151

ಕೋವಿಡ್19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21 ರಂದು ಪ್ರಾರಂಭವಾಗಿದೆ. ದೇಶಾದ್ಯಂತ ಕೋವಿಡ್19 ಲಸಿಕೆಯ ವೇಗವನ್ನು ತ್ವರಿತಗೊಳಿಸುವ ಮತ್ತು ಲಸಿಕೆ ವ್ಯಾಪ್ತಿಯನ್ನು ವಿಸ್ತರಿಸಲು ಸರ್ಕಾರ ಬದ್ಧವಾಗಿದೆ

ಕೋವಿಡ್19 ಸಾಂಕ್ರಾಮಿಕ ಪ್ರಾರಂಭವಾದ ನಂತರದಿಂದ ವರೆಗೆ 3,04,29,339 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 38,652 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟಾರೆ ಚೇತರಿಕೆ ದರ 97.35% ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ 41,383 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಸತತ 25 ದಿನಗಳಿಂದ 50,000 ಕ್ಕಿಂತ ಕಡಿಮೆ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಸಾಮೂಹಿಕ ಪ್ರಯತ್ನದಿಂದ ಫಲಿತಾಂಶ ಸಾಧ್ಯವಾಗಿದೆ.

ದೇಶದ ಒಟ್ಟಾರೆ ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,09,394 ರಷ್ಟಿದ್ದು, ಒಟ್ಟಾರೆ ಸಕ್ರಿಯ ಪ್ರಕರಣಗಳ ಪ್ರಮಾಣ 1.31% ರಷ್ಟಿದೆ.

ದೇಶಾದ್ಯಂತ ಸೋಂಕು ಪತ್ತೆ ಪರೀಕ್ಷೆ ಸಾಮರ್ಥ್ಯವನ್ನು ಹೆಚ್ಚಳ ಮಾಡಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಒಟ್ಟು 17,18,439 ಪರೀಕ್ಷೆಗಳನ್ನು ನಡೆಸಲಾಗಿದೆ. ವರೆಗೆ ಭಾರತದಲ್ಲಿ ಒಟ್ಟು 45.09 ಕೋಟಿ (45,09,11,712) ಪರೀಕ್ಷೆಗಳನ್ನು ನಡೆಸಲಾಗಿದೆ.

ಒಂದು ಕಡೆ ದೇಶಾದ್ಯಂತ ಸೋಂಕು ಪತ್ತೆ ಪರೀಕ್ಷೆಯನ್ನು ಹೆಚ್ಚಿಸಲಾಗಿದ್ದು, ವಾರದ ಪಾಸಿಟಿವಿಟಿ ದರ 2.12% ರಷ್ಟಿದೆ ಮತ್ತು ದೈನಂದಿನ ಪಾಸಿಟಿವಿಟಿ ದರ 2.41% ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಸತತ 31 ದಿನಗಳಿಂದ 3% ರಲ್ಲಿದೆ ಮತ್ತು ನಿರಂತರ 45 ದಿನಗಳಲ್ಲಿ 5% ಕ್ಕೂ ಕಡಿಮೆ ಇದೆ.

***



(Release ID: 1737750) Visitor Counter : 200