ಸಂಸದೀಯ ವ್ಯವಹಾರಗಳ ಸಚಿವಾಲಯ

ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಇಂದು ನಡೆದ ಸರ್ವಪಕ್ಷ ನಾಯಕರ ಸಭೆ


ಸದನದಲ್ಲಿ ಅರ್ಥಪೂರ್ಣ ಚರ್ಚೆಗೆ ಪ್ರಧಾನಿ ಕರೆ

19 ದಿನಗಳ ಅಧಿವೇಶನದಲ್ಲಿ, 31 ವಿಷಯಗಳನ್ನು ಕೈಗೆತ್ತಿಕೊಳ್ಳಲಾಗುವುದು

ನಿಯಮಗಳ ಅಡಿಯಲ್ಲಿ ಯಾವುದೇ ವಿಷಯದ ಚರ್ಚೆಗೆ ಸರ್ಕಾರ ಸಿದ್ಧ

Posted On: 18 JUL 2021 4:05PM by PIB Bengaluru

ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗುವ ಒಂದು ದಿನದ ಮೊದಲು ಇಂದು ಸರ್ವಪಕ್ಷಗಳ ನಾಯಕರ ಸಭೆ ನವದೆಹಲಿಯಲ್ಲಿ ನಡೆಯಿತು.
ಸಂಸದರು ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ, ಉಭಯ ಸದನಗಳಲ್ಲೂ ಅರ್ಥಪೂರ್ಣ ಚರ್ಚೆ ನಡೆಯಬೇಕು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಸಭೆಯಲ್ಲಿ ಹೇಳಿದರು. ಸಲಹೆಗಳನ್ನು ಒಮ್ಮತದಿಂದ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು  ಅವರು ಭರವಸೆ ನೀಡಿದರು.

WhatsApp Image 2021-07-18 at 13.44.38.jpeg

ನಮ್ಮ ಆರೋಗ್ಯಕರ ಪ್ರಜಾಪ್ರಭುತ್ವದ ಸಂಪ್ರದಾಯಗಳ ಪ್ರಕಾರ, ಜನರಿಗೆ ಸಂಬಂಧಿಸಿದ ವಿಷಯಗಳನ್ನು ಸೌಹಾರ್ದಯುತವಾಗಿ ಎತ್ತಬೇಕು ಮತ್ತು ಈ ಚರ್ಚೆಗಳಿಗೆ ಸ್ಪಂದಿಸಲು ಸರ್ಕಾರಕ್ಕೆ ಅವಕಾಶ ನೀಡಬೇಕು ಎಂದು ಪ್ರಧಾನಿ ಹೇಳಿದರು. ಇಂತಹ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಜನಪ್ರತಿನಿಧಿಗಳು ತಳಮಟ್ಟದ ಸಮಸ್ಯೆಗಳ ಬಗ್ಗೆ ತಿಳಿದಿರುತ್ತಾರೆ, ಆದ್ದರಿಂದ ಚರ್ಚೆಗಳಲ್ಲಿ ಅವರ ಭಾಗವಹಿಸುವಿಕೆಯು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಉತ್ಕೃಷ್ಟಗೊಳಿಸುತ್ತದೆ ಎಂದು ಅವರು ಹೇಳಿದರು. ಬಹುತೇಕ ಸಂಸದರಿಗೆ ಲಸಿಕೆ ಹಾಕಲಾಗಿದೆ, ಸಂಸತ್ತಿನಲ್ಲಿ ಚಟುವಟಿಕೆಗಳನ್ನು ವಿಶ್ವಾಸದಿಂದ ಕೈಗೊಳ್ಳಲು ಇದು ಸಹಾಯ ಮಾಡಲಿದೆ ಎಂದು ಶ್ರೀ ಮೋದಿ ಆಶಿಸಿದರು.
ಸಂಸತ್ತಿನಲ್ಲಿ ಆರೋಗ್ಯಕರ ಚರ್ಚೆಗೆ ಪ್ರಧಾನಮಂತ್ರಿಯವರು ಕರೆ ನೀಡಿದರು. ಇದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಸಹಕಾರವನ್ನು ಕೋರಿದರು. ಅಧಿವೇಶನಗಳು ಸುಗಮವಾಗಿ ನಡೆಯುತ್ತವೆ ಮತ್ತು ಅದರ ಕೆಲಸವನ್ನು ಪೂರ್ಣಗೊಳಿಸುತ್ತವೆ ಎಂಬ ಭರವಸೆ ವ್ಯಕ್ತಪಡಿಸಿದರು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾದ ಪ್ರಾಣಹಾನಿಗೆ ಪ್ರಧಾನಿ ಸಂತಾಪ ವ್ಯಕ್ತಪಡಿಸಿದರು. 
ಸಭೆಯಲ್ಲಿ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಭಾಗವಹಿಸಿದ್ದರು. ರಾಜ್ಯ ಸಚಿವರಾದ ಎಸ್. ಅರ್ಜುನ್ ರಾಮ್ ಮೇಘವಾಲ್ ಮತ್ತು ಎಸ್. ವಿ.ಮುರಳೀಧರನ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
 

WhatsApp Image 2021-07-18 at 14.55.19.jpeg

ಸಭೆಯ ಪ್ರಾರಂಭದಲ್ಲಿ ಮಾತನಾಡಿದ ಶ್ರೀ ಪ್ರಲ್ಹಾದ್ ಜೋಶಿ, ನಿಯಮಗಳ ಅಡಿಯಲ್ಲಿ ಯಾವುದೇ ವಿಷಯದ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದರು. ಸದನಗಳು ಸುಗಮವಾಗಿ ನಡೆಯಲು ಎಲ್ಲ ಪಕ್ಷಗಳ ಸಂಪೂರ್ಣ ಸಹಕಾರ ಕೋರಿದ ಅವರು, ಈ ಕುರಿತು ರಚನಾತ್ಮಕ ಚರ್ಚೆ ನಡೆಯಬೇಕು ಎಂದರು. 2021 ರ ಸಂಸತ್ತಿನ ಮುಂಗಾರು  ಅಧಿವೇಶನವು ಜುಲೈ 19 ರ ಸೋಮವಾರದಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 13 ರವರೆಗೆ ನಡೆಯಲಿದೆ ಎಂದು ಶ್ರೀ ಜೋಶಿ ಮಾಹಿತಿ ನೀಡಿದರು. 19 19 ದಿನಗಳ ಅಧಿವೇಶನದಲ್ಲಿ, 31 ವಿಷಯಗಳನ್ನು (29 ಮಸೂದೆಗಳು ಮತ್ತು 2 ಹಣಕಾಸು ವಿಷಯಗಳು ಸೇರಿದಂತೆ) ಕೈಗೆತ್ತಿಕೊಳ್ಳಲಾಗುವುದು. ಸುಗ್ರೀವಾಜ್ಞೆಗಳನ್ನು ಬದಲಾಯಿಸಲು ಆರು ಮಸೂದೆಗಳನ್ನು ಮಂಡಿಸಲಾಗುವುದು ಎಂದರು.
2021 ರ ಮುಂಗಾರು ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಲಿರುವ ಮಸೂದೆಗಳ ಪಟ್ಟಿ
I.    ಕಾನೂನು ವಿಷಯಗಳು 

1. ನ್ಯಾಯಮಂಡಳಿ ಸುಧಾರಣೆಗಳು (ತರ್ಕಬದ್ಧಗೊಳಿಸುವಿಕೆ ಮತ್ತು ಸೇವೆಯ ಷರತ್ತುಗಳು) ಮಸೂದೆ, 2021 - ಸುಗ್ರೀವಾಜ್ಞೆಯನ್ನು ಬದಲಿಸಲು.
2. ದಿವಾಳಿ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ, 2021- ಸುಗ್ರೀವಾಜ್ಞೆಯನ್ನು ಬದಲಾಯಿಸಲು.
3. ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆ ಆಯೋಗ ಮಸೂದೆ, 2021 - ಸುಗ್ರೀವಾಜ್ಞೆಯನ್ನು ಬದಲಾಯಿಸಲು.
4. ಅಗತ್ಯ ರಕ್ಷಣಾ ಸೇವಾ ಮಸೂದೆ, 2021- ಸುಗ್ರೀವಾಜ್ಞೆಯನ್ನು ಬದಲಾಯಿಸಲು.
5. ಇಂಡಿಯನ್ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್ (ತಿದ್ದುಪಡಿ) ಮಸೂದೆ, 2021 - ಸುಗ್ರೀವಾಜ್ಞೆಯನ್ನು ಬದಲಾಯಿಸಲು.
6. ಹೋಮಿಯೋಪತಿ ಸೆಂಟ್ರಲ್ ಕೌನ್ಸಿಲ್ (ತಿದ್ದುಪಡಿ) ಮಸೂದೆ, 2021 - ಸುಗ್ರೀವಾಜ್ಞೆಯನ್ನು ಬದಲಾಯಿಸಲು.
7. ಡಿಎನ್ಎ ತಂತ್ರಜ್ಞಾನ (ಬಳಕೆ ಮತ್ತು ಅನ್ವಯ) ನಿಯಂತ್ರಣ ಮಸೂದೆ, 2019.
8. ದಲ್ಲಾಳಿ ನಿಯಂತ್ರಣ (ತಿದ್ದುಪಡಿ) ಮಸೂದೆ, 2020
9. ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ಟೆಕ್ನಾಲಜಿ (ನಿಯಂತ್ರಣ) ಮಸೂದೆ, 2020.
10. ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ (ತಿದ್ದುಪಡಿ) ಮಸೂದೆ, 2019.
11. ರಾಜ್ಯಸಭೆ ಅಂಗೀಕರಿಸಿದ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣಾ ಮಸೂದೆ, 2019.
12. ಲೋಕಸಭೆಯಿಂದ ಅಂಗೀಕರಿಸಲ್ಪಟ್ಟ ನ್ಯಾವಿಗೇಷನ್ ಸಾಗರ ಸಹಾಯಗಳು ಮಸೂದೆ, 2021. 
13. ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ತಿದ್ದುಪಡಿ ಮಸೂದೆ, 2021 ಲೋಕಸಭೆಯಿಂದ ಅಂಗೀಕರಿಸಲ್ಪಟ್ಟಿದೆ.
14. ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ, 2019.
15. ಕಲ್ಲಿದ್ದಲು ಪ್ರದೇಶಗಳ (ಸ್ವಾಧೀನ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ, 2021.
16. ಚಾರ್ಟರ್ಡ್ ಅಕೌಂಟೆಂಟ್ಸ್, ವೆಚ್ಚ ಮತ್ತು ಕೆಲಸಗಳ ಅಕೌಂಟೆಂಟ್ಸ್ ಮತ್ತು ಕಂಪನಿ ಸೆಕ್ರೆಟರಿಗಳ (ತಿದ್ದುಪಡಿ) ಮಸೂದೆ, 2021
17. ಸೀಮಿತ ಹೊಣೆಗಾರಿಕೆ ಸಹಭಾಗಿತ್ವ (ತಿದ್ದುಪಡಿ) ಮಸೂದೆ, 2021.
18. ಕಂಟೋನ್ಮೆಂಟ್ ಮಸೂದೆ, 2021.
19. ಭಾರತೀಯ ಅಂಟಾರ್ಕ್ಟಿಕಾ ಮಸೂದೆ, 2021.
20. ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ, 2021.
21. ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆಯ ಮಸೂದೆ, 2021.
22. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, 2021.
23. ಠೇವಣಿ ವಿಮೆ ಮತ್ತು ಸಾಲ ಖಾತ್ರಿ ನಿಗಮ (ತಿದ್ದುಪಡಿ) ಮಸೂದೆ, 2021.
24. ಭಾರತೀಯ ಸಾಗರ ಮೀನುಗಾರಿಕೆ ಮಸೂದೆ, 2021.
25. ಪೆಟ್ರೋಲಿಯಂ ಮತ್ತು ಖನಿಜಗಳ ಪೈಪ್ಲೈನ್ಗಳು (ತಿದ್ದುಪಡಿ) ಮಸೂದೆ, 2021.
26. ಒಳನಾಡಿನ ನೌಕೆಗಳ ಮಸೂದೆ, 2021.
27. ವಿದ್ಯುತ್ (ತಿದ್ದುಪಡಿ) ಮಸೂದೆ, 2021.
28. ವ್ಯಕ್ತಿಗಳ ಕಳ್ಳಸಾಗಣೆ (ತಡೆಗಟ್ಟುವಿಕೆ, ರಕ್ಷಣೆ ಮತ್ತು ಪುನರ್ವಸತಿ) ಮಸೂದೆ, 2021.
29. ತೆಂಗು ಅಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆ, 2021.
II - ಹಣಕಾಸು ವಿಷಯಗಳು
1. 2021-22ರ ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಪ್ರಸ್ತುತಿ, ಚರ್ಚೆ ಮತ್ತು ಮತದಾನ ಮತ್ತು ಸಂಬಂಧಿತ ವಿನಿಯೋಜನೆ ಮಸೂದೆಯ ಮಂಡನೆ, ಪರಿಗಣನೆ ಮತ್ತು ಅಂಗೀಕಾರ
2. 2017-18ರ ಅನುದಾನಕ್ಕಾಗಿ ಹೆಚ್ಚುವರಿ ಬೇಡಿಕೆಗಳ ಪ್ರಸ್ತುತಿ, ಚರ್ಚೆ ಮತ್ತು ಮತದಾನ ಮತ್ತು ಸಂಬಂಧಿತ ಹಂಚಿಕೆ ಮಸೂದೆಯ ಮಂಡನೆ, ಪರಿಗಣನೆ ಮತ್ತು ಅಂಗೀಕಾರ.
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ವೈ ಎಸ್ ಆರ್ ಪಿ, ಶಿವಸೇನೆ, ಜೆಡಿಯು, ಬಿಜೆಡಿ, ಎಸ್ ಪಿ, ಟಿ ಆರ್ ಎಸ್, ಎಐಡಿಎಂಕೆ, ಬಿ ಎಸ್ ಪಿ, ಎನ್ಸಿಪಿ, ಟಿಡಿಪಿ, ಅಕಾಲಿ ದಳ, ಆರ್ಜೆಡಿ, ಎಎಪಿ, ಸಿಪಿಐ, ಸಿಪಿಐ(ಎಂ), ಐಯುಎಂಎಲ್, ಎಜೆಎಸ್ಯು, ಆರ್ಎಲ್ಪಿ, ಆರ್ಎಸ್ಪಿ, ಎಂಡಿಎಂಕೆ, ತಮಿಳು ಮಾನಿಲ ಕಾಂಗ್ರೆಸ್, ಕೇರಳ ಕಾಂಗ್ರೆಸ್, ಜೆಎಂಎಂ, ಎಂಎನ್ಎಫ್, ಆರ್ಪಿಐ, ಎನ್ಪಿಎಫ್ ಸೇರಿದಂತೆ 33 ರಾಜಕೀಯ ಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

****


(Release ID: 1736625) Visitor Counter : 277