ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಟೋಕಿಯೋಗೆ ಆಗಮಿಸಿದ 54 ಅಥ್ಲೀಟ್ ಗಳು ಸೇರಿದಂತೆ 88 ಸದಸ್ಯರ ಭಾರತೀಯ ತಂಡ
ಈ ತಂಡಕ್ಕೆ ನಿನ್ನೆ ಸಂಜೆ ಸ್ಫೂರ್ತಿದಾಯಕ ಬೀಳ್ಕೊಡುಗೆ ನೀಡಿದ ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ರಾಜ್ಯ ಸಚಿವ ಶ್ರೀ ನಿಸಿತ್ ಪ್ರಾಮಾಣಿಕ್
प्रविष्टि तिथि:
18 JUL 2021 12:52PM by PIB Bengaluru
54 ಅಥ್ಲೀಟ್ ಗಳೂ ಸೇರಿದಂತೆ 88 ಸದಸ್ಯರ ಭಾರತದ ತಂಡ ಟೋಕಿಯೋದ ನರಿಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬಂದಿದಿಳಿದಿದೆ. ಕುರ್ಬೆ ನಗರದ ಪ್ರತಿನಿಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ತಂಡವನ್ನು ಬರಮಾಡಿಕೊಂಡರು.
ನಿನ್ನೆ ರಾತ್ರಿ ಇಂದಿರಾಗಾಂಧೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಯುವ ಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ ಅವರು, ತಂಡಕ್ಕೆ ಔಪಚಾರಿಕ ಬೀಳ್ಕೊಡುಗೆ ನೀಡಿ, ಶುಭ ಕೋರಿದರು.


8 ಕ್ರೀಡೆಗಳ ಅಂದರೆ ಬ್ಯಾಡ್ಮಿಂಟನ್, ಬಿಲ್ಲುಗಾರಿಕೆ, ಹಾಕಿ, ಜುಡೋ, ಈಜು, ಭಾರ ಎತ್ತುವ ಸ್ಪರ್ಧೆ, ಜಿಮ್ನಾಸ್ಟಿಕ್ಸ್ ಮತ್ತು ಟೆಬಲ್ ಟೆನಿಸ್ ಗೆ ಸಂಬಂಧಿಸಿದ ಅಥ್ಲೀಟ್ ಗಳು ಮತ್ತು ಬೆಂಬಲ ಸಿಬ್ಬಂದಿ ನಿನ್ನೆ ರಾತ್ರಿ ನವದೆಹಲಿಯಿಂದ ಟೋಕಿಯೋಗೆ ಪ್ರಯಾಣ ಬೆಳೆಸಿದರು. ಟೋಕಿಯೋ ಒಲಿಂಪಿಕ್ಸ್ ಗೆ 127 ಅಥ್ಲೀಟ್ ಗಳು ಹೋಗುತ್ತಿದ್ದು, ಇದು ಒಲಿಂಪಿಕ್ಸ್ ಗೆ ತೆರಳಿದ ಭಾರತದ ಅತಿ ದೊಡ್ಡ ಕ್ರೀಡಾಪಟುಗಳ ತಂಡವಾಗಿದೆ.


ಭಾರತ ತಂಡದೊಂದಿಗೆ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ವೇಳೆ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಟೋಕಿಯೋ ಒಲಿಂಪಿಕ್ಸ್ 2020 ದೇಶಕ್ಕೆ ಒಂದು ಸ್ಮರಣಾರ್ಹ ಸಂದರ್ಭವಾಗಿದೆ 135 ಕೋಟಿ ಜನರ ಶುಭ ಹಾರೈಕೆ ಪಾಲ್ಗೊಳ್ಳುತ್ತಿರುವ ಎಲ್ಲ ಕ್ರೀಡಾಪಟುಗಳ ಮೇಲಿದೆ ಎಂದರು. ಇಂತಹ ಶ್ರೇಷ್ಠ ಅವಕಾಶ ಪಡೆದ ಆಯ್ದ ಕೆಲವೇ ಕೆಲವರಲ್ಲಿ ನೀವೂ ಸೇರಿದ್ದೀರಿ, ನೀವು ಜೀವನದಲ್ಲಿ ಇನ್ನೂ ದೂರ ಸಾಗಬೇಕಾಗಿದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಲಹೆ ಮಾಡಿರುವಂತೆ ಒತ್ತಡಕ್ಕೆ ಒಳಗಾಗದೆ ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಎಂದು ತಿಳಿಸಿದರು. ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವಾಗ ಅಥ್ಲೀಟ್ ಗಳು ಸದೃಢರಾಗಿರಬೇಕು, ಇದು ತಂತ್ರಗಾರಿಕೆ ಆಧರಿಸಿರುವಂತಹುದು ಮತ್ತು ಅಂತಿಮವಾಗಿ ಮನೋಬಲದ ಸಮರ, ಇದು ಅವರ ಪ್ರದರ್ಶನದಲ್ಲಿ ಪ್ರತಿಬಿಂಬಿತವಾಗುತ್ತದೆ ಎಂದರು.
ಟೋಕಿಟೋ ವಿಮಾನ ನಿಲ್ದಾಣದಲ್ಲಿ ಭಾರತದ ಹಾಕಿ ತಂಡ.
***
(रिलीज़ आईडी: 1736573)
आगंतुक पटल : 380