ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

39 ಕೋಟಿ ಮೈಲಿಗಲ್ಲು ದಾಟಿದ ಭಾರತದ ಒಟ್ಟು ಕೋವಿಡ್ -19 ಲಸಿಕೆ ವ್ಯಾಪ್ತಿ


ಚೇತರಿಕೆಯ ಪ್ರಮಾಣ ಶೇ.97.28

ಕಳೆದ 24 ಗಂಟೆಗಳಲ್ಲಿ 41,806 ದೈನಿಕ ಹೊಸ ಪ್ರಕರಣಗಳ ವರದಿ

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ (4,32,041) ಪ್ರಸ್ತುತ, ಒಟ್ಟು ಪ್ರಕರಣದ ಶೇ.1.39ರಷ್ಟಿದೆ

ದೈನಿಕ ಪಾಸಿಟಿವಿಟಿ ದರ (ಶೇ.2.15) ಸತತ 24ನೇ ದಿನವೂ ಶೇ.3ಕ್ಕಿಂತ ಕಡಿಮೆ

Posted On: 15 JUL 2021 9:44AM by PIB Bengaluru

ಭಾರತದಲ್ಲಿ ಕೋವಿಡ್ -19 ಲಸಿಕಾ ವ್ಯಾಪ್ತಿ 39 ಕೋಟಿ ಮೈಲಿಗಲ್ಲು ದಾಟಿದೆ. ಇಂದು ಬೆಳಗ್ಗೆ 7 ಗಂಟೆಗೆ ಲಭ್ಯವಾದ ತಾತ್ಕಾಲಿಕ ವರದಿಯ ರೀತ್ಯ ಒಟ್ಟಾರೆಯಾಗಿ 39,13,40,491 ಲಸಿಕಾ ಡೋಸ್ ಗಳನ್ನು   49,41,567 ಸೆಷನ್ ಗಳಲ್ಲಿ ನೀಡಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 34,97,058  ಡೋಸ್ ಲಸಿಕೆಗಳನ್ನು ನೀಡಲಾಗಿದೆ.

ಇದರಲ್ಲಿ ಈ ಕೆಳಗಿನವು ಸೇರಿವೆ:

ಎಚ್.ಸಿ.ಡಬ್ಲ್ಯು.ಗಳು

1ನೇ ಡೋಸ್

1,02,59,902

2ನೇ ಡೋಸ್

74,67,814

ಎಫ್.ಎಲ್.ಡಬ್ಲ್ಯು.ಗಳು

1ನೇ ಡೋಸ್

1,77,49,670

2ನೇ ಡೋಸ್

1,01,08,761

18-44 ವರ್ಷ ವಯೋಮಿತಿಯವರು

1ನೇ ಡೋಸ್

11,80,17,979

2ನೇ ಡೋಸ್

42,03,947

45-59 ವರ್ಷ ವಯೋಮಿತಿಯವರು

1ನೇ ಡೋಸ್

9,60,12,486

2ನೇ ಡೋಸ್

2,62,71,510

60 ವರ್ಷ ಮೇಲ್ಪಟ್ಟ ವಯೋಮಿತಿಯವರು

1ನೇ ಡೋಸ್

7,14,89,465

2ನೇ ಡೋಸ್

2,97,58,957

ಒಟ್ಟು

39,13,40,491

 2021ರ ಜೂನ್ 21ರಿಂದ ಕೋವಿಡ್ -19 ಸಾರ್ವತ್ರಿಕ ಲಸಿಕೀಕರಣ ಹೊಸ ಹಂತ ಆರಂಭಗೊಂಡಿದೆ. ದೇಶದಾದ್ಯಂತ ಕೋವಿಡ್ -19 ಲಸಿಕೆಯನ್ನು ವಿಸ್ತರಿಸುವ ಮತ್ತು ಅದರ ವೇಗ ಹೆಚ್ಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ.

ಹೆಚ್ಚಿನ ಲಸಿಕೆಗಳ ಲಭ್ಯತೆರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಲಭ್ಯತೆಯ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತಿದ್ದು ಅವು ಉತ್ತಮವಾಗಿ ಯೋಜನೆಯನ್ನು ಸಕ್ರಿಯಗೊಳಿಸಲು ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುವ್ಯವಸ್ಥಿತಗೊಳಿಸುವ ಮೂಲಕ ಲಸಿಕೆ ಅಭಿಯಾನವನ್ನು ಹೆಚ್ಚಿಸಲಾಗಿದೆ.

ದೇಶದಲ್ಲಿ ಸಾಂಕ್ರಾಮಿಕ ಆರಂಭವಾದ ದಿನದಿಂದ ಒಟ್ಟು 3,01,43,850  ಸೋಂಕಿತ ಜನರು ಕೋವಿಡ್ -19ರಿಂದ ಗುಣಮುಖರಾಗಿದ್ದರೆ, ಕಳೆದ 24 ಗಂಟೆಗಳ ಅವಧಿಯಲ್ಲಿ 39,130 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟಾರೆ ಚೇತರಿಕೆಯ ಪ್ರಮಾಣ ಶೇ.97.28 ಆಗಿದೆ. ಇದು ಸುಸ್ಥಿರ ಚೇತರಿಕೆಯ ಪ್ರವೃತ್ತಿ ತೋರಿದೆ.   

 

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 41,806 ಹೊಸ ದೈನಿಕ ಪ್ರಕರಣಗಳು ವರದಿಯಾಗಿವೆ.

ಸತತ 18ನೇ ದಿನವೂ 50 ಸಾವಿರಕ್ಕಿಂತಲೂ ಕಡಿಮೆ ಹೊಸ ದೈನಿಕ ಪ್ರಕರಣ ವರದಿಯಾಗಿದೆ. ಇದು ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಂಘಟಿತ ಪ್ರಯತ್ನದ ಫಲವಾಗಿದೆ.

 

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 4,32,041 ಆಗಿದ್ದು, ಈಗ ಸಕ್ರಿಯ ಪ್ರಕರಣಗಳು ಒಟ್ಟು ದೃಢಪಟ್ಟ ಪ್ರಕರಣಗಳ ಶೇ.1.39 ಮಾತ್ರ ಆಗಿದೆ.

ದೇಶದಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ, ಒಟ್ಟು 19,43,488 ಪರೀಕ್ಷೆಗಳನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ನಡೆಸಲಾಗಿದೆ. ಒಟ್ಟಾರೆಯಾಗಿ ದೇಶದಲ್ಲಿ ಈವರೆಗೆ 43.80 ಕೋಟಿ ಪರೀಕ್ಷೆ (43,80,11,958) ನಡೆಸಲಾಗಿದೆ

ಒಂದು ಕಡೆ ಪರೀಕ್ಷಾ ಸಾಮರ್ಥ್ಯವನ್ನು ದೇಶಾದ್ಯಂತ ಹೆಚ್ಚಿಸಲಾಗಿದ್ದುಸಾಪ್ತಾಹಿಕ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ನಿರಂತರ ಕುಸಿತ ಕಾಣುತ್ತಿದೆ. ಸಾಪ್ತಾಹಿಕ ಪಾಸಿಟಿವಿಟಿ ದರವು ಪ್ರಸ್ತುತ ಶೇ.2.21ರಷ್ಟಿದ್ದರೆದೈನಂದಿನ ಪಾಸಿಟಿವಿಟಿ ದರವು ಇಂದು ಶೇ.2.15ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಸತತ 24 ದಿನಗಳಿಂದ ಶೇ.3ಕ್ಕಿಂತ ಕಡಿಮೆಯಿದೆ ಮತ್ತು ಈಗ ಸತತ 38 ದಿನಗಳವರೆಗೆ ಶೇ. ಕ್ಕಿಂತಲೂ ಕಡಿಮೆಯಾಗಿದೆ.

 

****



(Release ID: 1735787) Visitor Counter : 191