ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

38.76 ಕೋಟಿ ಡೋಸ್ ದಾಟಿದ ರಾಷ್ಟ್ರೀಯ ಕೋವಿಡ್-19 ಲಸಿಕೆ ನೀಡಿಕೆ ಪ್ರಮಾಣ


ಕೋವಿಡ್-19 ಸೋಂಕಿನ ಚೇತರಿಕೆ ದರ 97.28%ಗೆ ಸುಧಾರಣೆ 

ಕಳೆದ 24 ತಾಸುಗಳಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 38,792ಕ್ಕೆ ಇಳಿಕೆ

ಭಾರತದ ಸಕ್ರಿಯ ಪ್ರಕರಣಗಳ ಪ್ರಮಾಣ 4,29,946ಕ್ಕೆ ಕುಸಿತ; ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.39%

ದೈನಂದಿನ ಪಾಸಿಟಿವಿಟಿ ದರ 2.10%ಗೆ ಇಳಿಕೆ; ಸತತ 23ನೇ ದಿನದಲ್ಲಿ 3% ಮಟ್ಟದಿಂದ ಕೆಳಗೆ

Posted On: 14 JUL 2021 11:07AM by PIB Bengaluru

ಭಾರತದಲ್ಲಿ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಇದುವರೆಗೆ ಒಟ್ಟು 38.76 ಕೋಟಿಗಿಂತ ಹೆಚ್ಚಿನ ಅಂದರೆ 38,76,97,935 ಡೋಸ್ ಲಸಿಕೆ ನೀಡಲಾಗಿದೆ. 49,10,876 ಆಂದೋಲನಗಳಲ್ಲಿ ಪ್ರಮಾಣದ ಲಸಿಕೆ ಹಾಕಲಾಗಿದೆ. ಇಂದು ಬೆಳಗ್ಗೆ 7 ಗಂಟೆಗೆ ಲಭ್ಯವಾಗಿರುವ ತಾತ್ಕಾಲಿಕ ವರದಿಯ ಪ್ರಕಾರ, ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 37,14,441 ಡೋಸ್ ಲಸಿಕೆ ಹಾಕಲಾಗಿದೆ.

ಕೆಳಗಿನ ಗುಂಪುಗಳು ಅದರಲ್ಲಿ ಸೇರಿವೆ.

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು

ಮೊದಲ ಡೋಸ್

1,02,56,229

2ನೇ ಡೋಸ್

74,47,783

ಮುಂಚೂಣಿ ಕಾರ್ಯಕರ್ತರು

ಮೊದಲ ಡೋಸ್

1,77,30,845

2ನೇ ಡೋಸ್

1,00,52,409

18-44 ವಯೋಮಾನದವರು

ಮೊದಲ ಡೋಸ್

11,64,12,064

2ನೇ ಡೋಸ್

40,30,999

45-59 ವಯೋಮಾನದವರು

ಮೊದಲ ಡೋಸ್

9,56,42,767

2ನೇ ಡೋಸ್

2,54,39,376

60 ವರ್ಷ ದಾಟಿದವರು

ಮೊದಲ ಡೋಸ್

7,13,45,634

2ನೇ ಡೋಸ್

2,93,39,829

ಒಟ್ಟು

38,76,97,935

ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರವು ದೇಶವ್ಯಾಪಿ ಕೋವಿಡ್-19 ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಕಾರ್ಯಕ್ರಮದ ಗತಿಗೆ ವೇಗ ನೀಡಲು ಬದ್ಧವಾಗಿದೆ.

ಕೊರೊನಾ ಸಾಂಕ್ರಾಮಿಕ ಸೋಂಕು ದೇಶದಲ್ಲಿ ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ 3,01,04,720 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ತಾಸುಗಳಲ್ಲೇ 41,000 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ದೇಶಾದ್ಯಂತ ಚೇತರಿಕೆ ದರ ಒಟ್ಟಾರೆ 97.28%ಗೆ ಸುಧಾರಣೆ ಕಂಡಿದೆ. ಚೇತರಿಕೆ ದರ ಸುಸ್ಥಿರವಾಗಿ ಏರಿಕೆ ಕಾಣುತ್ತಿರುವುದನ್ನು ಇದು ಸೂಚಿಸುತ್ತದೆ.

ಭಾರತದಲ್ಲಿ ಕಳೆದ 24 ತಾಸುಗಳಲ್ಲಿ 38,792 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಸತತ 17 ದಿನಗಳಿಂದ ಪ್ರತಿದಿನ 50 ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾಗಲು ನಿರಂತರ ನಡೆಸುತ್ತಾ ಬಂದಿರುವ ಸುಸ್ಥಿರ ಮತ್ತು ಜಂಟಿ(ಸಹಭಾಗಿತ್ವ) ಪ್ರಯತ್ನಗಳೇ ಇದಕ್ಕೆ ಕಾರಣ.

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 4,29,946ಕ್ಕೆ ಇಳಿಕೆ ಕಂಡಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.39% ಇದೆ.

ದೇಶಾದ್ಯಂತ ಗಂಟಲು ಮತ್ತು ಮೂಗು ದ್ರವ ಪರೀಕ್ಷೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಕಳೆದ 24 ತಾಸುಗಳಲ್ಲಿ ಒಟ್ಟಾರೆ 19,15,501 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ ಭಾರತದಲ್ಲಿ ಇದುವರೆಗೆ 43.59 ಕೋಟಿಗಿಂತ ಹೆಚ್ಚಿನ ಅಂದರೆ 43,59,73,639 ಪರೀಕ್ಷೆಗಳನ್ನು ನಡೆಸಲಾಗಿದೆ.

ಒಂದು ಕಡೆ ದೇಶಾದ್ಯಾಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿರುವ ಪರಿಣಾಮ, ವಾರದ ಪಾಸಿಟಿವಿಟಿ ದರ ಗಣನೀಯವಾಗಿ ಇಳಿಕೆ ಕಾಣುತ್ತಿರುವುದು ಕಂಡುಬಂದಿದೆ. ವಾರದ ಪಾಸಿಟಿವಿಟಿ ದರ ಇದೀಗ 2.25%ಗೆ ತಗ್ಗಿದೆ. ದೈನಂದಿನ ಪಾಸಿಟಿವಿಟಿ ದರ ಪ್ರಸ್ತುತ 2.10%ಗೆ ಇಳಿಕೆ ಕಂಡಿದೆ. ಸತತ 23 ದಿನಗಳಿಂದ ಅದು 3% ಮಟ್ಟದಿಂದ ಕೆಳಗಿದೆ. ಅಲ್ಲದೆ, 37 ದಿನಗಳಿಂದ ಅದು 5% ಮಟ್ಟದಿಂದ ಕೆಳಗೆ ಕಾಯ್ದುಕೊಂಡಿದೆ.

***



(Release ID: 1735322) Visitor Counter : 291