ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಇಂದಿನ ಪರಿಷ್ಕೃತ ವರದಿ

Posted On: 14 JUL 2021 10:16AM by PIB Bengaluru

ರಾಷ್ಟ್ರವ್ಯಾಪಿ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಇದುವರೆಗೆ 38.76 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.

ದೇಶಾದ್ಯಂತ 3,01,04,720 ಜನರು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇದರೊಂದಿಗೆ ಚೇತರಿಕೆ ದರ ಇದೀಗ 97.28%ಗೆ ಸುಧಾರಣೆ ಕಂಡಿದೆ.

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 41,000 ರೋಗಿಗಳು ಗುಣಮುಖರಾಗಿದ್ದಾರೆ.

ಭಾರತದಲ್ಲಿ ನಿನ್ನೆ ಅಂದರೆ ಕಳೆದ 24 ತಾಸುಗಳಲ್ಲಿ 38,792 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 4,29,946ಕ್ಕೆ ಇಳಿಕೆ ಕಂಡಿದೆ.

ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.39% ಇದೆ.

ವಾರದ ಪಾಸಿಟಿವಿಟಿ ದರ 5% ಮಟ್ಟದ ಕೆಳಗೆ ಕಾಯ್ದುಕೊಂಡಿದ್ದು, ಪ್ರಸ್ತುತ 2.25%ಗೆ ಇಳಿಕೆ ಕಂಡಿದೆ.

ದೈನಂದಿನ ಪಾಸಿಟಿವಿಟಿ ದರ ಸತತ 23 ದಿನಗಳಿಂದ 3% ಮಟ್ಟದಿಂದ ಕೆಳಗಿದ್ದು, ಅದೀಗ 2.10%ಗೆ ತಗ್ಗಿದೆ.

ದೇಶವ್ಯಾಪಿ ಕೊರೊನಾ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಇದುವರೆಗೆ 43.59 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

***



(Release ID: 1735317) Visitor Counter : 262