ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೋವಿಡ್ -19 ಶಿಷ್ಟಾಚಾರಗಳ ಕಟ್ಟುನಿಟ್ಟಿನ ಪಾಲನೆಯೊಂದಿಗೆ 2021ರ ಸೆಪ್ಟೆಂಬರ್ 12ರಂದು ನಡೆಯಲಿರುವ ನೀಟ್ (ಯು.ಜಿ.) 2021


ಅರ್ಜಿ ಪ್ರಕ್ರಿಯೆ ನಾಳೆ ಸಂಜೆ 5ರಿಂದ ಆರಂಭ

Posted On: 12 JUL 2021 6:54PM by PIB Bengaluru

ಕೋವಿಡ್ -19 ಶಿಷ್ಟಾಚಾರಗಳ ಅನುಸರಣೆಯೊಂದಿಗೆ ದೇಶಾದ್ಯಂತ 2021 ಸೆಪ್ಟೆಂಬರ್ 12ರಂದು ನೀಟ್ (ಯುಜಿ)2021 ನಡೆಯಲಿದೆ. ನಾಳೆ ಸಂಜೆ 5 ಗಂಟೆಯಿಂದ ಎನ್.ಟಿ.. ಅಂತರ್ಜಾಲ ತಾಣ(ಗಳ) ಮೂಲಕ ಪ್ರಕ್ರಿಯೆ ಆರಂಭವಾಗಲಿದೆ

ಮುನ್ನ ಪರೀಕ್ಷೆಯನ್ನು 2021 ಆಗಸ್ಟ್ 1ಕ್ಕೆ ನಿಗದಿ ಮಾಡಲಾಗಿತ್ತು.

ವ್ಯಕ್ತಿಗತ ಅಂತರದ ನಿಯಮಗಳನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ, ಪರೀಕ್ಷೆಗಳು ನಡೆಯುವ ನಗರಗಳ ಸಂಖ್ಯೆಯನ್ನು 155ರಿಂದ 198ಕ್ಕೆ ಹೆಚ್ಚಿಸಲಾಗಿದೆ. 2020ರಲ್ಲಿ ಬಳಸಲಾದ 3862 ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನೂ  ಹೆಚ್ಚಿಸಲಾಗುವುದು

ಕೋವಿಡ್-19 ಶಿಷ್ಟಾಚಾರಗಳ ಪಾಲನೆಯನ್ನು ಖಾತ್ರಿಪಡಿಸಿಕೊಳ್ಳಲು, ಕೇಂದ್ರದಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಮುಖಗವಸು (ಮಾಸ್ಕ್) ಒದಗಿಸಲಾಗುವುದು. ಪ್ರವೇಶ ಮತ್ತು ನಿರ್ಗಮನಕ್ಕೆ ಬೇರೆ ಬೇರೆ ಸಮಯ ನಿಗದಿ, ಸಂಪರ್ಕರಹಿತ ನೋಂದಣಿ, ಸೂಕ್ತ ನಿರ್ಮಲೀಕರಣ, ದೈಹಿಕ ಅಂತರದೊಂದಿಗೆ ಆಸನಗಳ ವ್ಯವಸ್ಥೆ ಇತ್ಯಾದಿಯನ್ನೂ ಖಾತ್ರಿಪಡಿಸಲಾಗುವುದು. ಇದರ ಜೊತೆಗೆ ಸಾಮಾನ್ಯ ಪ್ರದೇಶಗಳು, ಎಲ್ಲ ಪೀಠೋಪಕರಣಗಳು ಮತ್ತು ಆಸನಗಳನ್ನು ಪರೀಕ್ಷೆಗೆ ಮುನ್ನ ಮತ್ತು ನಂತರ ಸ್ವಚ್ಛಗೊಳಿಸಿ ರೊಗಾಣುರಹಿತ ಮಾಡಲಾಗುವುದು. ಪರೀಕ್ಷೆಯ ಕೊಠಡಿ/ಕೋಣೆಗಳು ಸೂಕ್ತ ವಾಯು ಸಂಚಾರಕ್ಕಾಗಿ ತೆರೆದ ಕಿಟಕಿಗಳನ್ನು ಮತ್ತು ಫ್ಯಾನ್ ಗಳನ್ನು ಹೊಂದಿರಬೇಕು.

***


(Release ID: 1734943) Visitor Counter : 212