ಕಲ್ಲಿದ್ದಲು ಸಚಿವಾಲಯ

ಕಲ್ಲಿದ್ದಲು ಮಾರಾಟಕ್ಕಾಗಿ ಕಲ್ಲಿದ್ದಲು ಗಣಿಗಳನ್ನು ಹರಾಜು ಮಾಡಲು ತಾಂತ್ರಿಕ ಬಿಡ್‌ಗಳ ಆರಂಭ


19 ಕಲ್ಲಿದ್ದಲು ಗಣಿಗಳಿಂದ 34 ಬಿಡ್ ಗಳ ಸ್ವೀಕಾರ

Posted On: 09 JUL 2021 4:03PM by PIB Bengaluru

ಕಲ್ಲಿದ್ದಲು ಸಚಿವಾಲಯದ ನಾಮನಿರ್ದೇಶನ ಪ್ರಾಧಿಕಾರ 67 ಕಲ್ಲಿದ್ದಲು ಗಣಿಗಳನ್ನು ಮಾರಾಟ ಮಾಡಲು 2021 ರ ಮಾರ್ಚ್ 25 ರಂದು ಹರಾಜು ಪ್ರಕ್ರಿಯೆ ಆರಂಭಿಸಿತು. ತಾಂತ್ರಿಕ ಬಿಡ್ ಸ್ವೀಕರಿಸಲು 2021 ರ ಜುಲೈ 08 ಕಡೆಯ ದಿನವಾಗಿತ್ತು. ಹರಾಜು ಪ್ರಕ್ರಿಯೆ ಭಾಗವಾಗಿ ಆನ್ ಲೈನ್ ಮತ್ತು ಆಫ್ ಲೈನ್ ಬಿಡ್ ದಾಖಲೆಗಳನ್ನು ಇಂದು 2021, ಜುಲೈ 09 ರಂದು ಬೆಳಿಗ್ಗೆ 10:00 ಗಂಟೆ ನಂತರ ನವ ದೆಹಲಿಯಲ್ಲಿ ಬಿಡ್ ದಾರರ ಸಮ್ಮುಖದಲ್ಲಿ ತೆರೆಯಲಾಯಿತು.

ಆನ್ ಲೈನ್ ಬಿಡ್ ಗಳ ಡೀಕೋಡಿಂಗ್ ಮಾಡ ಲಾಯಿತು ಮತ್ತು ಬಿಡ್ ದಾರರ ಸಮ್ಮುಖದಲ್ಲಿ ವಿದ್ಯುನ್ಮಾನ ವಿಧಾನಗಳ ಅನುಸಾರ ತೆರೆಯಲಾಯಿತು. ಇದೇ ಸಂದರ್ಭದಲ್ಲಿ ಬಿಡ್ ದಾರರ ಸಮ್ಮುಖದಲ್ಲಿ ಮುಚ್ಚಿದ ಆಫ್ ಲೈನ್ ಬಿಡ್ ದಾಖಲೆಗಳನ್ನು ಸಹ ತೆರೆಯಲಾಯಿತು. ಬಿಡ್ಡರ್ ಗಳಿಗೆ ಈ ಎಲ್ಲಾ ಪ್ರಕ್ರಿಯೆಯನ್ನು ಪರದೆಯ ಮೇಲೆ ತೋರಿಸಲಾಯಿತು. ಒಟ್ಟು 34 [ಮೂವತ್ತನಾಲ್ಕು] ಬಿಡ್ ಗಳನ್ನು 19 [ಹತ್ತೊಂಬತ್ತು] ಕಲ್ಲಿದ್ದಲು ಗಣಿಗಳಿಗಾಗಿ ಸ್ವೀಕರಿಸಲಾಗಿದ್ದು, ಈ ಪೈಕಿ 10 [ಹತ್ತು] ಕಲ್ಲಿದ್ದಲು ಗಣಿಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಶೋಧಿಸಲಾಗಿದೆ ಮತ್ತು 9 [ಒಂಬತ್ತು] ಗಣಿಗಳನ್ನು ಭಾಗಶಃ ಪರಿಶೋಧಿಸಲಾಗಿದೆ.  ಈ ಪೈಕಿ 4 [ನಾಲ್ಕು] ಕೋಕಿಂಗ್ ಕಲ್ಲಿದ್ದಲು ಗಣಿಗಳಾಗಿವೆ ಮತ್ತು ಉಳಿದ 15 [ಹದಿನೈದು] ಕಲ್ಲಿದ್ದಲು ಗಣಿಗಳು, ಕೋಕಿಂಗ್ ಅಲ್ಲದ ಕಲ್ಲಿದ್ದಲು ಗಣಿಗಳಾಗಿವೆ. 8 [ಎಂಟು] ಕಲ್ಲಿದ್ದಲು ಗಣಿಗಳಿಗೆ ಎರಡು ಅಥವಾ ಅದಕ್ಕೂ ಹೆಚ್ಚಿನ ಬಿಡ್ ಗಳನ್ನು ಸ್ವೀಕರಿಸಲಾಗಿದೆ. ಸ್ವೀಕರಿಸಲಾದ ಗಣಿ ಬಿಡ್ ಗಳ ಪಟ್ಟಿ ಈ ಕೆಳಕಂಡಂತಿದೆ. 

 

ಕ್ರಮ ಸಂಖ್ಯೆ

ಕಲ್ಲಿದ್ದಲು ಗಣಿಯ ಹೆಸರು

ಬಿಡ್ ಗಳ ಸಂಖ್ಯೆ

  1.  

ಅಲಕ್ ನಂದಾ

1

  1.  

ಬೆಹರಾಬಂದ್ ಉತ್ತರ ಎಕ್ಸ್ ಟೆನ್ಷನ್

1

  1.  

ಭಾಸ್ಕರ್ ಪಾರ

3

  1.  

ಬೀವ್ಕುಂದ್

2

  1.  

ಬುರಾಖಪ್ ಸ್ಮಾಲ್ ಪ್ಯಾಚ್

5

  1.  

ಬುರಾಪಹರ್

1

  1.  

ಚೊರಿತಂದ್ ತಿಲೈಯಾ

1

  1.  

ದೆಹೆಗಾವ್/ಮಕರ್ಧೋಕ್ರ- IV

1

  1.  

ಡೀಪ್ ಎಕ್ಸ್ ಟೆನ್ಷನ್ ಆಪ್ ಬೆಲ್ಪಹರ್

1

  1.  

ಗೋದ್ಬಹೆರಾ ಉಜ್ಹೈನಿ ಈಸ್ಟ್

1

  1.  

ಗೊಂಡ್ಕಹರಿ

2

  1.  

ಜ್ಹಿಗದೊರ್

2

  1.  

ಜೊಗೇಶ್ವರ್ ಅಂಡ್ ಖಾಸ್ ಜೋಗೇಶ್ವರ್

3

  1.  

ಖಾರ್ಗೋವ್

2

  1.  

ಲಾಲ್ಘರ್ [ನಾರ್ಥ್]

1

  1.  

ರಾಮ್ ನಗರ್

1

  1.  

ರೌತಾ ಕ್ಲೋಸ್ಡ್ ಮೈನ್

4

  1.  

ಶಂಕರ್ಪುರ್ ಭಟ್ಗಾನ್ಪುರ್ II ಎಕ್ಸ್ ಟೆನ್ಷನ್

1

  1.  

ಟೀಕಿಸುದ್ ಬ್ಲಾಕ್ II

1

 

ಒಟ್ಟು ಬಿಡ್ ಗಳು

34

ಒಟ್ಟು 20 ಕಂಪೆನಿಗಳು ತಮ್ಮ ಬಿಡ್ ಗಳನ್ನು ಸಲ್ಲಿಸಿದ್ದು, ಪಟ್ಟಿ ಈ ಕೆಳಕಂಡಂತೆ ಇದೆ.

ಕ್ರಮ ಸಂಖ್ಯೆ

ಬಿಡ್ ದಾರರ ಹೆಸರು

ಸಲ್ಲಿಕೆಯಾದ ಒಟ್ಟು ಬಿಡ್ ಗಳ ಸಂಖ್ಯೆ

1.

ಅದಾನಿ ಪವರ್ ಮಹಾರಾಷ್ಟ್ರ ಲಿಮಿಟೆಡ್

1

2.

ಆಧುನಿಕ್ ಪವರ್ ಅಂಡ್ ನ್ಯಾಚುರಲ್ ರಿಸೋರ್ಸ್ ಲಿಮಿಟೆಡ್

2

3.

ಔರೋಬಿಂದೋ ರಿಯಾಲಿಟಿ ಅಂಡ್ ಇನ್ಪ್ರಾಸ್ಟಕ್ಚರ್ ಪ್ರವೈಟ್ ಲಿಮಿಟೆಡ್

4

4.

ಭಾರತ್ ಅಲ್ಯೂಮಿನಿಯಮ್ ಕಂಪೆನಿ ಲಿಮಿಟೆಡ್

1

5.

ಸಿಜಿ ನ್ಯಾಚುರಲ್ ರಿಸೋರ್ಸ್ ಪ್ರವೈಟ್ ಲಿಮಿಟೆಡ್

2

6.

ಚತ್ತೀಸ್ ಘರ್ ಮಿನರಲ್ ಡವಲಪ್ ಮೆಂಟ್ ಕಾರ್ಪೋರೇಷನ್ ಲಿಮಿಟೆಡ್

1

7.

ಧನ್ಸಾರ್ ಇಂಜಿನಿಯರಿಂಗ್ ಕೋ ಪ್ರೈ ಲಿಮಿಟೆಡ್

1

8.

ಗೋದಾವರಿ ಪವರ್ ಅಂಡ್ ಇನ್ಪಾಟ್ ಲಿಮಿಟೆಡ್

1

9.

ಹಿಲ್ಟಾಪ್ ಹಿರಿಸೆ ಪ್ರವೈಟ್ ಲಿಮಿಟೆಡ್

1

10.

ಹಿಂಡಲ್ಕೋ ಇಂಡಸ್ಟ್ರೀ ಲಿಮಿಟೆಡ್

1

11.

ಝಾರ್ ಮಿನರಲ್ ರಿಸೋರ್ಸ್ ಪ್ರವೈಟ್ ಲಿಮಿಟೆಡ್

2

12.

ಎಂಪಿ ನ್ಯಾಚುರಲ್ ರಿಸೋರ್ಸ್ ಪವರ್ ಲಿಮಿಟೆಡ್

1

13.

ಪ್ರಕಾಶ್ ಇಂಡಸ್ಟ್ರೀಸ್ ಲಿಮಿಟೆಡ್

1

14.

ರಾಮಘರ್ ಸ್ಪಾಂಜ್ ಐರನ್ ಪ್ರವೈಟ್ ಲಿಮಿಟೆಡ್

1

15.

ರುಂಗ್ಟಾ ಮೈನ್ಸ್ ಲಿಮಿಟೆಡ್

1

16.

ಶ್ರೀ ಸಾಯಿ ಉರ್ಜಾ ಲಿಮಿಟೆಡ್

2

17.

ಶ್ರೀ ಸತ್ಯಾ ಮೈನ್ಸ್ ಪ್ರೈವೈಟ್ ಲಿಮಿಟೆಡ್

3

18.

ಸೌತ್ ವೆಸ್ಟ್ ಪಿನಾಕಲ್ ಎಕ್ಸ್ ಪ್ಲೋರೇಷನ್ ಲಿಮಿಟೆಡ್

3

19.

ಸನ್ ಪ್ಲಾಗ್ ಐರನ್ ಅಂಡ್ ಸ್ಟೀಲ್ ಕಂಪೆನಿ ಲಿಮಿಟೆಡ್

4

20.

ವೇದಾಂತ ಲಿಮಿಟೆಡ್

1

 

ಒಟ್ಟು ಬಿಡ್ ಗಳು

34

ಬಿಡ್ ಗಳನ್ನು ಬಹು ಶಿಸ್ತಿನ ತಾಂತ್ರಿಕ ಮೌಲ್ಯಮಾಪನ ಸಮಿತಿ ಮೌಲ್ಯಮಾಪನ ಮಾಡಲಿದೆ ಮತ್ತು ಎಂ.ಎಸ್.ಟಿ.ಸಿ ಪೋರ್ಟಲ್ ನಲ್ಲಿ ನಡೆಸಬೇಕಾದ ಎಲೆಕ್ಟ್ರಾನಿಕ್ ಹರಾಜಿನಲ್ಲಿ ಭಾಗವಹಿಸಲು ತಾಂತ್ರಿಕವಾಗಿ ಅರ್ಹ ಬಿಡ್ ದಾರರ ಪಟ್ಟಿ ಮಾಡಲಾಗುತ್ತದೆ.

***


(Release ID: 1734280) Visitor Counter : 259