ಸಂಪುಟ
ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಇಂಡಿಯಾ [ಐ.ಸಿ.ಒ.ಎ.ಐ] ಮತ್ತು ಅಸೋಸಿಯೇಷನ್ ಆಪ್ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್ [ಎ.ಸಿ.ಸಿ.ಎ], ಯುನೈಟೆಡ್ ಕಿಂಗ್ ಡಮ್ [ಯು.ಕೆ] ನಡುವೆ ತಿಳಿವಳಿಕೆ ಪತ್ರಕ್ಕೆ ಸಚಿವ ಸಂಪುಟ ಅನುಮೋದನೆ
Posted On:
08 JUL 2021 7:30PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಇಂಡಿಯಾ [ಐ.ಸಿ.ಒ.ಎ.ಐ] ಮತ್ತು ಅಸೋಸಿಯೇಷನ್ ಆಫ್ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್ [ಎ.ಸಿ.ಸಿ.ಎ], ಯುನೈಟೆಡ್ ಕಿಂಗ್ ಡಮ್ [ಯು.ಕೆ] ನಡುವೆ ತಿಳಿವಳಿಕೆ ಪತ್ರಕ್ಕೆ ಅನುಮೋದನೆ ನೀಡಲಾಗಿದೆ. ಇತರೆ ವೃತ್ತಿಪರ ಸಂಸ್ಥೆಯ ಅರ್ಹತೆ ಪಡೆಯಲು ಮತ್ತು ಜಂಟಿ ಸಂಶೋಧನೆ, ವೃತ್ತಿಪರ ಅಭಿವೃದ್ಧಿ ಚಟುವಟಿಕೆಗಳನ್ನು ಮುಂದುವರಿಸಲು ಹೆಚ್ಚಿನ ಪತ್ರಗಳನ್ನು ಪಡೆದು ಎರಡೂ ಸಂಸ್ಥೆಗಳ ಸದಸ್ಯರಿಗೆ ಪರಸ್ಪರ ಸುಧಾರಿತ ಪ್ರವೇಶ ಒದಗಿಸಲು ಇದರಿಂದ ಸಹಕಾರಿಯಾಗಲಿದೆ.
ಪರಿಣಾಮ:
ಈ ಒಪ್ಪಂದ ಜ್ಞಾನದ ಹಂಚಿಕೆ ಮತ್ತು ಸಂಶೋಧನೆ ಹಾಗೂ ಪ್ರಕಟಣೆಗಳ ವಿನಿಯಮದತ್ತ ಗಮನಹರಿಸಲು ಕಾರಣವಾಗುತ್ತದೆ ಮತ್ತು ಎರಡೂ ಬದಿಗಳಲ್ಲಿ ಉತ್ತಮ ಆಡಳಿತ ಅಭ್ಯಾಸವನ್ನು ಇದು ಬಲಪಡಿಸುತ್ತದೆ. ಎರಡೂ ಕ್ಷೇತ್ರಗಳ ತಾಂತ್ರಿಕ ವಲಯಗಳಲ್ಲಿ ಸಂಶೋಧನೆ ಒಳಗೊಂಡಿರುವ ವೆಚ್ಚ ಲೆಕ್ಕಪರಿಶೋಧನಾ ವೃತ್ತಿಗೆ ಸಂಬಂಧಿಸಿದಂತೆ ಜಂಟಿ ಸಂಶೋಧನೆ ಕೈಗೊಳ್ಳಲು ಸಹಕಾರಿಯಾಗಲಿದೆ. ಈ ಒಪ್ಪಂದದಿಂದ ಎರಡೂ ಕಡೆಗಳಲ್ಲಿ ವೃತ್ತಿಪರರ ಸಂಚಾರಕ್ಕೆ ಅನುಕೂಲವಾಗಲಿದೆ ಮತ್ತು ಭಾರತ ಹಾಗೂ ವಿದೇಶಗಳಲ್ಲಿ ವೆಚ್ಚ ಲೆಕ್ಕಪರಿಶೋಧನಾ ಉದ್ಯೋಗ ಸಾಮರ್ಥ್ಯವನ್ನು ಇದು ವೃದ್ಧಿಸುತ್ತದೆ.
ವಿವರಗಳು:
ವೃತ್ತಿಪರರ ಮಟ್ಟದ ಕನಿಷ್ಠ ಸಂಖ್ಯೆಯ ವಿಷಯಗಳಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದಲ್ಲಿ ಎರಡೂ ಕಡೆಗಳಲ್ಲಿ ವೃತ್ತಿಪರರ ಚಲನೆಗೆ ಅನುಕೂಲವಾಗುತ್ತದೆ. ಒಂದು ಸಂಸ್ಥೆಯ ಸದಸ್ಯರಿಗೆ ಇತರೆ ಸಂಸ್ಥೆಯ ಪೂರ್ಣ ಸದಸ್ಯತ್ವದ ಸ್ಥಾನಮಾನ ಪಡೆಯಲು ಅನುವು ಮಾಡಿಕೊಡುವ ಮಾರ್ಗಕ್ಕೆ ಈ ಒಪ್ಪಂದ ಸಹಕಾರಿಯಾಗಲಿದೆ.
ಹಿನ್ನೆಲೆ:
ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆ 1944 ರಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಕಂಪೆನಿ ಕಾಯ್ದೆಯಡಿ ಇದು ನೋಂದಣಿಯಾಗಿದ್ದು, ವೆಚ್ಚ ಲೆಕ್ಕಪರಿಶೋಧನಾ ವೃತ್ತಿಯನ್ನು ಅಭಿವೃದ್ಧಿಪಡಿಸುವ, ನಿಯಂತ್ರಣ ಮತ್ತು ಉತ್ತೇಜಿಸುವ ಉದ್ದೇಶವನ್ನು ಇದು ಒಳಗೊಂಡಿದೆ. 1959 ರ ಮೇ 28 ರಂದು ಸಂಸತ್ತಿನ ವಿಶೇಷ ಕಾಯ್ದೆಯಡಿ ಇದು ಸ್ಥಾಪನೆಗೊಂಡಿದ್ದು, ವೆಚ್ಚ ಮತ್ತು ಲೆಕ್ಕಪರಿಶೋಧನಾ ಕಾಯ್ದೆ 1959ರ ಶಾಸನಬದ್ಧ ವೃತ್ತಿಪರ ಸಂಸ್ಥೆಯಾಗಿ ಇದು ರೂಪುಗೊಂಡಿದೆ ಮತ್ತು ಲೆಕ್ಕಪರಿಶೋಧನೆ ಕೆಲವನ್ನು ಇದು ನಿರ್ವಹಿಸಲಿದೆ. ಈ ಸಂಸ್ಥೆ ಭಾರತದ ಏಕಮಾತ್ರ ಮಾನ್ಯತೆ ಪಡೆದ ಶಾಸನಬದ್ಧ ವೃತ್ತಿಪರ ಮತ್ತು ಪರವಾನಗಿ ನೀಡುವ ಸಂಸ್ಥೆಯಾಗಿದೆ. ವೆಚ್ಚ ಮತ್ತು ಲೆಕ್ಕ ಪರಿಶೋಧನೆಯಲ್ಲಿ ಪ್ರತ್ಯೇಕವಾದ ಪರಿಣತಿ ಪಡೆದಿದೆ.
ದಿ ಅಸೋಸಿಯೇಷನ್ ಆಫ್ ಚಾರ್ಟೆಡ್ ಸರ್ಟಿಫೈಡ್ ಅಕೌಂಟ್ಸ್ [ಎಸಿಸಿಎ] 1904 ರಲ್ಲಿ ಸ್ಥಾಪನೆಯಾಗಿದೆ ಮತ್ತು 1947 ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕಾನೂನಿನಡಿಯಲ್ಲಿ ರಾಯಲ್ ಚಾರ್ಟರ್ ನಿಂದ ಇದು ಸಂಯೋಜಿಸಲ್ಪಟ್ಟಿದೆ. ಇದು ಜಾಗತಿಕ ವೃತ್ತಿಪರ ಲೆಕ್ಕಪರಿಶೋಧಕರ ಸಂಸ್ಥೆಯಾಗಿದ್ದು, 2,27,000 ಕ್ಕೂ ಪೂರ್ಣ ಅರ್ಹ ಸದಸ್ಯರು ಮತ್ತು ಜಗತ್ತಿನಾದ್ಯಂತ 5,44,000 ಸದಸ್ಯರನ್ನು ಇದು ಹೊಂದಲಿದೆ.
***
(Release ID: 1734001)
Visitor Counter : 269
Read this release in:
Bengali
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam