ಜವಳಿ ಸಚಿವಾಲಯ

ಜವಳಿ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡ ಸಚಿವ ಶ್ರೀ ಪಿಯೂಷ್ ಗೋಯಲ್


ಜವಳಿ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಶ್ರೀಮತಿ ದರ್ಶನ ವಿಕ್ರಮ್ ಜರ್ದೋಷ್

Posted On: 08 JUL 2021 3:44PM by PIB Bengaluru

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಸ್ಮೃತಿ ಝಬಿನ್ ಇರಾನಿ ಅವರಿಂದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಜವಳಿ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡರು. ಶ್ರೀಮತಿ ದರ್ಶನ ವಿಕ್ರಮ್ ಜರ್ದೋಷ್ ಅವರು ಜವಳಿ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

ಅಧಿಕಾರ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದ ಶ್ರೀ ಪಿಯೂಷ್ ಗೋಯಲ್, ಹೊಸ ಅವಕಾಶ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದರು. ಶ್ರೀಮತಿ ಸ್ಮೃತಿ ಇರಾನಿ ಅವರು ಇಲಾಖೆಯಲ್ಲಿ ಹಲವಾರು ಉತ್ತಮ ಕೆಲಸ ಮಾಡಿದ್ದಾರೆ ಮತ್ತು ಇದರ ಫಲವಾಗಿ ಇಲಾಖೆಗೆ ಬೇಡಿಕೆ ಹಲವು ಪಟ್ಟು ಹೆಚ್ಚಾಗಿದೆ. ಈ ವಲಯ ಮತ್ತಷ್ಟು ಬಲಗೊಳ್ಳಬೇಕು ಹಾಗೂ ದೇಶದ ಆರ್ಥಿಕತೆಗೆ ದೊಡ್ಡ ಬೆಂಬಲ ನೀಡಬೇಕು ಎಂಬುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿಲುವಾಗಿದೆ. ವಾಣಿಜ್ಯ, ಕೈಗಾರಿಕೆ ಹಾಗೂ ಜವಳಿ ಇಲಾಖೆಗಳನ್ನು ಇನ್ನಷ್ಟು ನಿಕಟಗೊಳಿಸುವುದು ಪ್ರಧಾನಮಂತ್ರಿ ಅವರ ಉದ್ದೇಶವಾಗಿದ್ದು, ಈ ಕಾರಣದಿಂದಲೇ ಈ ಸಚಿವಾಲಯದ ಉಸ್ತುವಾರಿಯನ್ನು ತಮಗೆ ನೀಡಲಾಗಿದೆ ಎಂದು ಹೇಳಿದರು.

ಉದ್ಯೋಗ ಕ್ಷೇತ್ರದಲ್ಲಿ ಜವಳಿ ಅತಿ ದೊಡ್ಡ ಅವಕಾಶ ನೀಡಿರುವ ಪ್ರಮುಖ ವಲಯವಾಗಿದ್ದು, ಈ ಮೂಲಕ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ, ಅದರಲ್ಲೂ ಪ್ರಮುಖವಾಗಿ ಮಹಿಳೆಯರಿಗೆ ದೊಡ್ಡ ಆದಾಯದ ಬೆಂಬಲ ನೀಡಲು ಸರ್ಕಾರ ಪ್ರಯತ್ನ ನಡೆಸಲಿದೆ. ಈ ವಲಯವನ್ನು ಇನ್ನಷ್ಟು ಸುಧಾರಿಸಲು ಮತ್ತು ರಫ್ತು ಹೆಚ್ಚಿಸಲು ಸಾಧ್ಯವಾಗುವಂತೆ ನೋಡಿಕೊಳ್ಳಲಾಗುವುದು. ಈ ಕ್ಷೇತ್ರದಲ್ಲಿ ಅತಿ ದೊಡ್ಡ ಬೆಳವಣಿಗೆಯಾಗಲಿದೆ ಎಂದು ಸಚಿವರು ವಿಶ‍್ವಾಸ ವ್ಯಕ್ತಪಡಿಸಿದರು.

ಸರ್ಕಾರ ಬ್ರಾಂಡ್ ಇಂಡಿಯಾ ಮತ್ತು ಭಾರತೀಯ ಜವಳಿಯನ್ನು ಉತ್ತೇಜಿಸಲು ಉದ್ದೇಶಿಸಿದೆ. ಈ ಮುನ್ನ ಬ್ರಾಂಡ್ ಇಂಡಿಯಾವನ್ನು ನಿರ್ಮಿಸಿ ಉತ್ತೇಜಿಸಲು ಸಾಕಷ್ಟು ಪ್ರಯತ್ನಗಳು ನಡೆದಿತ್ತು. ಈ ನಿಟ್ಟಿನಲ್ಲಿ ಈಗಲೂ ಪ್ರಮುಖ ಪಾತ್ರ ವಹಿಸಲು ತೀರ್ಮಾನಿಸಲಾಗಿದೆ. ಜವಳಿ ಖಾತೆ ರಾಜ್ಯ ಸಚಿವರಾದ ಶ‍್ರೀಮತಿ ದರ್ಶನ ವಿಕ್ರಮ್ ಜರ್ದೋಷ್ ಅವರನ್ನು ಸ್ವಾಗತಿಸಿದ ಶ್ರೀ ಪಿಯೂಷ್ ಗೋಯಲ್, ಇಲಾಖೆಗೆ ಇವರು ಬೆಂಬಲದ ಆಧಾರ ಸ್ಥಂಭವಾಗಿದ್ದಾರೆ ಮತ್ತು ಈ ಕ್ಷೇತ್ರದ ಬೆಳವಣಿಗೆಗೆ ಸಹಾಯ ಮಾಡಲಿದ್ದಾರೆ ಎಂದು ಹೇಳಿದರು.

ಜವಳಿ ರಾಜ್ಯ ಸಚಿವೆ ಶ‍್ರೀಮತಿ ದರ್ಶನ ವಿಕ್ರಮ್ ಜರ್ದೋಷ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಗೆ ಈ ಅವಕಾಶ ನೀಡಿದ್ದು, ಅವರ ನಾಯಕತ್ವದಲ್ಲಿ ಕೆಲಸ ಮಾಡುತ್ತೇನೆ. ಸಂಪುಟ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ ಮಾರ್ಗದರ್ಶನದಲ್ಲಿ ಜವಳಿ ವಲಯವನ್ನು ಉತ್ತೇಜಿಸುವ ಜತೆಗೆ ಭಾರತದಲ್ಲೇ ತಯಾರಿಸು ಕ್ಷೇತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವಂತೆ ಮಾಡಲಾಗುವುದು ಎಂದು ಹೇಳಿದರು.

***



(Release ID: 1733830) Visitor Counter : 175