ಕಾನೂನು ಮತ್ತು ನ್ಯಾಯ ಸಚಿವಾಲಯ

ಕಾನೂನು ಮತ್ತು ನ್ಯಾಯ ಖಾತೆ ಸಚಿವರಾಗಿ ಶ್ರಿ ಕಿರಣ್ ರಿಜಿಜು ಅಧಿಕಾರ ಸ್ವೀಕಾರ

Posted On: 08 JUL 2021 1:01PM by PIB Bengaluru

ಶ್ರೀ ಕಿರಣ್ ರಿಜಿಜು ಅವರು ಇಂದು ಕಾನೂನು ಮತ್ತು ನ್ಯಾಯ ಖಾತೆ ಸಚಿವರಾಗಿ ಸಚಿವಾಲಯದ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಅಧಿಕಾರ ಸ್ವೀಕರಿಸಿದರು. ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ  ಸಚಿವರು, “ಕಾನೂನು ಮತ್ತು ನ್ಯಾಯ ಖಾತೆ ಸಚಿವರಾಗಿ ಕಾರ್ಯನಿರ್ವಹಿಸುವ ಅತಿದೊಡ್ಡ ಜವಾಬ್ದಾರಿ ತಮ್ಮ ಮೇಲಿದೆ. ಸಾರ್ವಜನಿಕರ ನಿರೀಕ್ಷೆಗಳನ್ನು ಈಡೇರಿಸುವುದು ತಮ್ಮ ಮೊದಲ ಆದ್ಯತೆ ಮತ್ತು ತಾವು ಸದಾ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸುವುದಾಗಿ" ಹೇಳಿದರು

ಕಾನೂನು ಮತ್ತು ನ್ಯಾಯ ಖಾತೆ ಸಚಿವ ಸ್ಥಾನ ಅಲಂಕರಿಸುವ ಮುನ್ನ ಶ್ರೀ ರಿಜಿಜು ಅವರು 2019 ಮೇ ತಿಂಗಳಿಂದ 2021 ಜುಲೈವರೆಗೆ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ (ಸ್ವತಂತ್ರ ಹೊಣೆಗಾರಿಕೆ) ರಾಗಿದ್ದರು. ಮೇ 2014ರಿಂದ ಮೇ 2019ರವರೆಗೆ  ಅಲ್ಪ ಸಂಖ್ಯಾತ ವ್ಯವಹಾರಗಳ ಸಹಾಯಕ ಸಚಿವರೂ ಆಗಿದ್ದರು

ರಾಜಕೀಯವಾಗಿ ಸಕ್ರೀಯವಾಗಿರುವ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಶ್ರೀ ರಿಜಿಜು ತಮ್ಮ ವಿದ್ಯಾರ್ಥಿ ದಿನಗಳಿಂದಲೇ ಸಾರ್ವಜನಿಕ ವ್ಯವಹಾರಗಳಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಅವರು ತಮ್ಮ 31ನೇ ವಯಸ್ಸಿಗೆ ಭಾರತ ಸರ್ಕಾರದ ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಆಯೋಗದ ಸದಸ್ಯರಾಗಿ (2002-04) ನೇಮಕಗೊಂಡಿದ್ದರು. 2004ರಲ್ಲಿ ಅವರು 14ನೇ ಲೋಕಸಭೆಗೆ ದೇಶದಲ್ಲಿಯೇ ಅತಿದೊಡ್ಡ ಕ್ಷೇತ್ರವೆಂದು ಹೆಸರಾಗಿರುವ ಪಶ್ಚಿಮ ಅರುಣಾಚಲಪ್ರದೇಶ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಸಂಸದರಾಗಿ ಶ್ರೀ ರಿಜಿಜು, ಸದನದ ಒಳಗೆ ಮತ್ತು ಹೊರಗೆ ಸಂಸದೀಯ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಹೆಚ್ಚು ಅನುಭವಿ ಸಹೋದ್ಯೋಗಿಗಳ ಗೌರವವನ್ನು ಸಂಪಾದಿಸಿದರು. ಅವರು 14ನೇ ಲೋಕಸಭೆಯ ಅವಧಿಯಲ್ಲಿ ಸಂಸತ್ತಿನ ಹಲವು ಪ್ರಮುಖ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆಶೇ.90ಕ್ಕೂ ಅಧಿಕ ಹಾಜರಾತಿಯ ದಾಖಲೆ ಹೊಂದಿರುವ ಅವರು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಾಮುಖ್ಯದ ಪ್ರಶ್ನೆಗಳನ್ನು ಹುಟ್ಟು ಹಾಕುವಲ್ಲಿ ಮತ್ತು ಪ್ರಮುಖ ಚರ್ಚೆಗಳಲ್ಲಿ ಭಾಗವಹಿಸುವಲ್ಲಿ ಪ್ರಭಾವಶಾಲಿಯಾಗಿದ್ದರು, ಹಾಗಾಗಿ ಮಾಧ್ಯಮಗಳು ಅವರನ್ನು ಅತ್ಯುತ್ತಮ ಯುವ ಸಂಸದರೆಂದು  ಗುರುತಿಸಿವೆ.

ದೇಶದ ಅತ್ಯಂತ ದೂರದ ಮತ್ತು ಅಭಿವೃದ್ಧಿ ಹೊಂದಿಲ್ಲದ ಪ್ರದೇಶದಲ್ಲಿ ಬೆಳೆದಿದ್ದರೂ, ಜೀವನವು ಅವರಿಗೆ ನೀಡಿರುವ ಅವಕಾಶಗಳನ್ನು ಬಳಸಿಕೊಂಡು ಅವರು ಇಂದು ಸಾರ್ವಜನಿಕರ ದೃಷ್ಟಿಯಲ್ಲಿ ಭಾರತ ಸರ್ಕಾರದಲ್ಲಿ ಈಶಾನ್ಯದ ಧ್ವನಿಯಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ. ಅವರು ಈಶಾನ್ಯವನ್ನು ರಾಷ್ಟ್ರೀಯ ಮುಖ್ಯವಾಹಿನಿಯೊಂದಿಗೆ ಬೆರೆಸುವ ಉತ್ಸಾಹಿ ವಕೀಲರಾಗಿದ್ದಾರೆ. 2014 ಮೇ16ರಂದು 16ನೇ ಲೋಕಸಭೆಗೆ ಶ್ರೀ ರಿಜಿಜು ಆಯ್ಕೆಯಾದರು. ಅವರ ಕಾರ್ಯದಕ್ಷತೆಯನ್ನು ಗುರುತಿಸಿ, ಪ್ರಧಾನಮಂತ್ರಿ ಅವರು 2014 ಮೇ 26ರಂದು ಗೃಹ ವ್ಯವಹಾರಗಳ ಸಚಿವಾಲಯದ ಸಹಾಯಕ ಸಚಿವರನ್ನಾಗಿ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು

***



(Release ID: 1733749) Visitor Counter : 205