ಉಕ್ಕು ಸಚಿವಾಲಯ

ಉಕ್ಕು ಸಚಿವಾಲಯದ ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್

ಪ್ರಕಟಣಾ ದಿನಾಂಕ: 08 JUL 2021 2:53PM by PIB Bengaluru

ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್ ಅವರಿಂದು ಉಕ್ಕು ಸಚಿವರಾಗಿ ಉದ್ಯೋಗ ಭವನದಲ್ಲಿಂದು ಅಧಿಕಾರ ವಹಿಸಿಕೊಂಡರು. ಉಕ್ಕು ಖಾತೆ ರಾಜ್ಯ ಸಚಿವ ಶ್ರೀ ಫಗ್ಗಾನ್ ಸಿಂಗ್ ಕುಲಸ್ತೆ ಅವರು ಸಂಪುಟ ಸಚಿವರನ್ನು ಸ್ವಾಗತಿಸಿದರು.

ಉಕ್ಕು ಸಚಿವಾಲಯದ ಅಧಿಕಾರ ವಹಿಸಿಕೊಂಡ ಬಳಿಕ ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್ ಮಾತನಾಡಿ, 2024 ಹೊತ್ತಿಗೆ 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರದ ಗುರಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ಉಕ್ಕು ಸಚಿವಾಲಯ ಮಹತ್ವದ ಪಾತ್ರ ನಿರ್ವಹಿಸಬೇಕಾಗಿದೆ ಎಂದರು.   ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್ ಅವರು ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದರು.

ಮಾಜಿ ..ಎಸ್. ಅಧಿಕಾರಿಯಾದ ಶ್ರೀ ಸಿಂಗ್ ಅವರು ಬಿಹಾರದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಾರೆ.

***


(ಪ್ರಕಟಣೆ ಐ.ಡಿ.: 1733738) ವಿಸಿಟರ್ ಕೌಂಟರ್ : 227
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Punjabi , Tamil