ಪರಿಸರ ಮತ್ತು ಅರಣ್ಯ ಸಚಿವಾಲಯ

ಅರಣ್ಯ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಪರಿಶಿಷ್ಟ ಪಂಗಡ ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳನ್ನು ಮತ್ತಷ್ಟು ಬಾಧ್ಯಸ್ಥರನ್ನಾಗಿ ಮಾಡುವುದು


ಶ್ರೀ ಅರ್ಜುನ್ ಮುಂಡಾ ಮತ್ತು ಶ್ರೀ ಪ್ರಕಾಶ್ ಜಾವಡೇಕರ್ ಅವರು ನಾಳೆ ʻಜಂಟಿ ಸಂವಹನʼ ಬಿಡುಗಡೆ ಮಾಡಲಿದ್ದಾರೆ

Posted On: 05 JUL 2021 4:14PM by PIB Bengaluru

ಅರಣ್ಯ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಬುಡಕಟ್ಟು ಸಮುದಾಯಗಳಿಗೆ ಮತ್ತಷ್ಟು ಅಧಿಕಾರವನ್ನು ನೀಡಲು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಜಂಟಿಯಾಗಿ ನಿರ್ಧರಿಸಿವೆ. ಕುರಿತ ಜಂಟಿ ಸಂವಹನಕ್ಕೆ ಭಾರತೀಯ ಕಾಲಮಾನ ನಾಳೆ ಬೆಳಗ್ಗೆ 11 ಗಂಟೆಗೆ ನವದೆಹಲಿಯ ಇಂದಿರಾ ಪರ್ಯಾವರಣ್ ಭವನದಲ್ಲಿ ಸಹಿ ಹಾಕಲು ನಿರ್ಧರಿಸಲಾಗಿದೆ.

ಸಹಿ ಸಮಾರಂಭವು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಅರಣ್ಯ ಕಾರ್ಯದರ್ಶಿ ಶ್ರೀ ರಾಮೇಶ್ವರ ಪ್ರಸಾದ್ ಗುಪ್ತಾ, ಬುಡಕಟ್ಟು ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್ ಝಾ ಮತ್ತು ಎಲ್ಲಾ ರಾಜ್ಯಗಳ ಕಂದಾಯ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.

ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ಪರಿಸರ ಖಾತೆ ಸಹಾಯಕ ಸಚಿವ ಶ್ರೀ ಬಾಬುಲ್ ಸುಪ್ರಿಯೋ ಮತ್ತು ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀಮತಿ ರೇಣುಕಾ ಸಿಂಗ್ ಸಾರುಟಾ ಸಹ ಭಾಗವಹಿಸಲಿದ್ದಾರೆ.

`ಜಂಟಿ ಸಂವಹನವು ಅರಣ್ಯ ಹಕ್ಕುಗಳ ಕಾಯ್ದೆ (ಎಫ್ಆರ್)ಎಂದೂ ಕರೆಯಲಾಗುವ ʻಪರಿಶಿಷ್ಟ ಪಂಗಡ ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯ್ದೆ-2006ʼ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದ್ದಾಗಿದೆ

ಕಾಯಿದೆಯು ಹಲವು ತಲೆಮಾರುಗಳಿಂದ ಅರಣ್ಯದಲ್ಲೇ ವಾಸಿಸುತ್ತಿರುವ ಆದರೆ ಹಕ್ಕುಗಳಿಂದ ವಂಚಿತರಾಗಿರುವ ʻಅರಣ್ಯವಾಸಿ ಬುಡಕಟ್ಟು ಜನಾಂಗʼ(ಎಫ್ಡಿಎಸ್ಟಿ) ಮತ್ತು ʻಇತರ ಸಾಂಪ್ರದಾಯಿಕ ಅರಣ್ಯವಾಸಿʼಗಳ (ಒಟಿಎಫ್ಡಿ) ಅರಣ್ಯ ಹಕ್ಕುಗಳನ್ನು ಹಾಗೂ ಅರಣ್ಯ ವಾಸವನ್ನು ಗುರುತಿಸುತ್ತದೆ. ಜೊತೆಗೆ ಅಂತಹ ಅರಣ್ಯ ಹಕ್ಕುಗಳನ್ನು ದಾಖಲಿಸಲು ಅಗತ್ಯವಾದ ಮಾನದಂಡ ಮತ್ತುಅಂತಹ ಗುರುತಿಸುವಿಕೆ ಅಗತ್ಯವಾಗಿರುವ ಸಾಕ್ಷ್ಯಾಧಾರಗಳಿಗೆ ಮಾನದಂಡವನ್ನು ಕಾಯ್ದೆಯು ಒದಗಿಸುತ್ತದೆ.

***(Release ID: 1732959) Visitor Counter : 248