ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

33.57 ಕೋಟಿ ಡೋಸ್ ದಾಟಿದ ಭಾರತದ ಕೋವಿಡ್-19 ಲಸಿಕೆ ನೀಡಿಕೆ ಪ್ರಮಾಣ


ಕಳೆದ 24 ತಾಸುಗಳಲ್ಲಿ 48,786 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಸತತ 4 ದಿನಗಳಿಂದ 50 ಸಾವಿರ ಮಟ್ಟದಿಂದ ಕೆಳಗಿಳಿದ ಹೊಸ ಪ್ರಕರಣಗಳು

ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 5,23,257ಕ್ಕೆ ಇಳಿಕೆ; ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ 1.72%

ಸತತ 24ನೇ ದಿನದಲ್ಲಿ ದೈನಂದಿನ ಪಾಸಿಟಿವಿಟಿ ದರ 5% ಮಟ್ಟ(2.54%)ದಿಂದ ಇಳಿಕೆ

Posted On: 01 JUL 2021 10:16AM by PIB Bengaluru

ಭಾರತದಲ್ಲಿ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಇದುವರೆಗೆ 33.57 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇಂದು ಬೆಳಗ್ಗೆ 7 ಗಂಟೆಗೆ ಲಭ್ಯವಾಗಿರುವ ತಾತ್ಕಾಲಿಕ ವರದಿಯ ಪ್ರಕಾರ, ದೇಶಾದ್ಯಂತ 44,75,791 ಅಭಿಯಾನಗಳಲ್ಲಿ (ಲಸಿಕೆ ನೀಡಿಕೆ ಕಾರ್ಯಕ್ರಮ) ಒಟ್ಟು 33,57,16,019 ಜನರಿಗೆ ಕೋವಿಡ್-19 ಲಸಿಕೆ ನೀಡಲಾಗಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 27,60,345 ಜನರಿಗೆ ಲಸಿಕೆ ಹಾಕಲಾಗಿದೆ.
ನಿನ್ನೆ ಹಾಕಿರುವ ಲಸಿಕೆಯಲ್ಲಿ ಪಟ್ಟಿಯಲ್ಲಿರುವ ಗುಂಪುಗಳು ಅದರಲ್ಲಿ ಸೇರಿವೆ.

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು

ಮೊದಲ ಡೋಸ್

1,02,12,078

2ನೇ ಡೋಸ್

72,56,031

ಮುಂಚೂಣಿ ಕಾರ್ಯಕರ್ತರು

ಮೊದಲ ಡೋಸ್

1,75,12,765

2ನೇ ಡೋಸ್

95,16,814

18-44 ವಯೋಮಾನದವರು

ಮೊದಲ ಡೋಸ್

9,16,00,418

2ನೇ ಡೋಸ್

21,82,234

45-59 ವಯೋಮಾನದವರು

ಮೊದಲ ಡೋಸ್

8,86,47,056

2ನೇ ಡೋಸ್

1,63,14,943

60 ವರ್ಷ ದಾಟಿದವರು

ಮೊದಲ ಡೋಸ್

6,81,27,563

2ನೇ ಡೋಸ್

2,43,46,117

ಒಟ್ಟು

33,57,16,019

ಕೋವಿಡ್-19 ಲಸಿಕಾ ಅಭಿಯಾನದ ಸಾರ್ವತ್ರೀಕರಣ ಹೊಸ ಹಂತ ಜೂನ್ 21ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್-19 ಲಸಿಕಾ ಆಂದೋಲನದ ವ್ಯಾಪ್ತಿ ವಿಸ್ತರಣೆ ಮಾಡಲು ಮತ್ತು ವೇಗವರ್ಧನೆ ನೀಡಲು ಬದ್ಧವಾಗಿದೆ.

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 48,786 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಸತತ 4 ದಿನಗಳಿಂದ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರ ಮಟ್ಟದಿಂದ ಕೆಳಗಿದೆ. ಕೇಂದ್ರ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಜಂಟಿಯಾಗಿ ನಡೆಸುತ್ತಿರುವ ಸುಸ್ಥಿರ ಮತ್ತು ಸಹಭಾಗಿತ್ವದ ಹೋರಾಟಗಳ ಫಲವಾಗಿ ಹೊಸ ಪ್ರಕರಣಗಳ ಸಂಖ್ಯೆ ದಿನೇದಿನೆ ತಗ್ಗುತ್ತಾ ಬಂದಿದೆ.

https://static.pib.gov.in/WriteReadData/userfiles/image/image001YK2W.jpg

ಇದರಿಂದಾಗಿ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯ ಹಾದಿ ಹಿಡಿದಿದೆ. ದೇಶದಲ್ಲಿ ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 5,23,257ಕ್ಕೆ ಇಳಿಕೆಯಾಗಿದೆ.

ಕಳೆದ 24 ತಾಸುಗಳಲ್ಲೇ 13,807 ಸಕ್ರಿಯ ಪ್ರಕರಣಗಳು ತಗ್ಗಿವೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ 1.72% ಇದೆ.

https://static.pib.gov.in/WriteReadData/userfiles/image/image002C2IE.jpg

ಕೋವಿಡ್-19 ಸೋಂಕಿನಿಂದ ಅತ್ಯಧಿಕ ಸಂಖ್ಯೆಯ ಜನರು ಗುಣಮುಖರಾಗುತ್ತಿರುವುದರಿಂದ, ಭಾರತದಲ್ಲಿ ದೈನಂದಿನ ಚೇತರಿಕೆ ಪ್ರಮಾಣವು ಹೊಸ ಪ್ರಕರಣಗಳ ಪ್ರಮಾಣವನ್ನು ಹಿಂದಿಕ್ಕುತ್ತಿದೆ. ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 61,588 ಸೋಂಕಿತರು ಗುಣಮುಖರಾಗಿದ್ದಾರೆ.

ನಿನ್ನೆ ಒಂದೇ ದಿನ 12,802 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

https://static.pib.gov.in/WriteReadData/userfiles/image/image0038FIS.jpg

ದೇಶದಲ್ಲಿ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ದಿನದಿಂದ ಇಲ್ಲಿಯ ತನಕ ಒಟ್ಟು 2,94,88,918 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಚೇತರಿಕೆ ದರ ಇದೀಗ 96.97%ಗೆ ಸುಧಾರಣೆ ಕಂಡಿದೆ. ಚೇತರಿಕೆ ದರ ಗಣನೀಯವಾಗಿ ಸುಧಾರಣೆ ಕಾಣುತ್ತಿರುವುದು ಆಶಾದಾಯಕ ಬೆಳವಣಿಗೆ.

https://static.pib.gov.in/WriteReadData/userfiles/image/image004LU8R.jpg

ದೇಶಾದ್ಯಂತ ಗಂಟಲು ದ್ರವ ಪರೀಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸುತ್ತಿದ್ದು, ನಿನ್ನೆ ಒಂದೇ ದಿನ 19,21,450 ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೆ ದೇಶದಲ್ಲಿ 41,20,21,494 ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ವಾರದ ಪಾಸಿಟಿವಿಟಿ ದರ ಪ್ರಸ್ತುತ ಸ್ಥಿರವಾಗಿ ಇಳಿಕೆ ಕಾಣುತ್ತಿದ್ದು, ಅದೀಗ 2.64%ಗೆ ಕುಸಿದಿದೆ. ದೈನಂದಿನ ಪಾಸಿಟಿವಿಟ ದರವೂ 2.54%ಗೆ ಇಳಿಕೆ ಕಂಡಿದ್ದು, ಸತತ 24ನೇ ದಿನದಲ್ಲೂ 5% ಮಟ್ಟದಿಂದ ಕೆಳಗಿದೆ.

https://static.pib.gov.in/WriteReadData/userfiles/image/image0050C9J.jpg

***



(Release ID: 1731874) Visitor Counter : 199