ಪ್ರಧಾನ ಮಂತ್ರಿಯವರ ಕಛೇರಿ
‘ಡಿಜಿಟಲ್ ಇಂಡಿಯಾ’ ಫಲಾನುಭವಿಗಳೊಂದಿಗೆ ಜುಲೈ 1ರಂದು ಸಂವಾದ ನಡೆಸಲಿರುವ ಪ್ರಧಾನಮಂತ್ರಿ
Posted On:
29 JUN 2021 7:06PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಫಲಾನುಭವಿಗಳೊಂದಿಗೆ ಜುಲೈ 1ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ.
2015ರಲ್ಲಿ ಪ್ರಧಾನಮಂತ್ರಿಯವರು ಚಾಲನೆ ನೀಡಿದ “ಡಿಜಿಟಲ್ ಇಂಡಿಯಾ’ ಆರು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಮಾಹಿತಿ ತಂತ್ರಜ್ಞಾನ ಮತ್ತು ವಿಧ್ಯುನ್ಮಾನ ಸಚಿವಾಲಯ ಆಯೋಜಿಸಿದೆ. “ಡಿಜಿಟಲ್ ಇಂಡಿಯಾ’ ನವ ಭಾರತದ ಅತ್ಯಂತ ದೊಡ್ಡ ಯಶೋಗಾಥೆಗಳಲ್ಲಿ ಒಂದಾಗಿದ್ದು ಸೇವೆಗಳನ್ನು ಮತ್ತು ಸರ್ಕಾರವನ್ನು ಜನರ ಸಮೀಪಕ್ಕೆ ತಂದಿದೆ, ಜನರ ಕಾರ್ಯಚಟುವಟಿಕೆ ಪ್ರೋತ್ಸಾಹಿಸಿ ಜನರನ್ನು ಸಬಲೀಕರಿಸುತ್ತಿದೆ.
ಕೇಂದ್ರ ವಿದ್ಯುನ್ಮಾನ ಮತ್ತು ಐಟಿ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.
***
(Release ID: 1731379)
Visitor Counter : 182
Read this release in:
Malayalam
,
Assamese
,
Tamil
,
Telugu
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia