ಕಾನೂನು ಮತ್ತು ನ್ಯಾಯ ಸಚಿವಾಲಯ

ಎಲ್ಲಾ ಹೈಕೋರ್ಟ್ ವೆಬ್ ಸೈಟ್ ಗಳಲ್ಲಿ ಮಾಹಿತಿ ವೀಕ್ಷಣೆಗೆ ವಿಶೇಷಚೇತನರಿಗಾಗಿ ಸೌಲಭ್ಯ


ಭಾರತೀಯ ನ್ಯಾಯಾಂಗ ವ್ಯವಸ್ಥೆಯನ್ನು ವಿಶೇಷ ಚೇತನರಿಗೆ ಲಭ್ಯವಾಗುವಂತೆ ಮಾಡಲು ಸುಪ್ರೀಂ ಕೋರ್ಟ್ ಇ ಸಮಿತಿಯಿಂದ ವಿಶೇಷ ಉಪಕ್ರಮ

ನ್ಯಾಯಾಲಯದ ದಾಖಲೆಗಳು ಕೈಗೆಟುವಂತೆ ಮಾಡಲು ಮಾದರಿ ಕಾರ್ಯಾಚರಣೆ ಪ್ರಕ್ರಿಯೆ ರಚನೆಯಲ್ಲಿ

ತೀರ್ಪುಗಳ ದಾಖಲೆ ಹುಡುಕಲು ವಿಶೇಷಚೇತನರಿಗೆ ಪೋರ್ಟಲ್ ರಚನೆ

Posted On: 27 JUN 2021 10:09AM by PIB Bengaluru

ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿಜಿಟಲ್ ಮೂಲ ಸೌಕರ್ಯವನ್ನು ವಿಶೇಷಚೇತನರೂ ಬಳಸಲು ಸಾಧ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರತದ ಸರ್ವೋಚ್ಚ ನ್ಯಾಯಾಲಯದ ಸಮಿತಿ ಕಾರ್ಯನಿರತವಾಗಿದೆ ಉದ್ದೇಶ ಸಾಕಾರಕ್ಕಾಗಿ ಸಮಿತಿ ವಿಶೇಷ ಪ್ರಯತ್ನಗಳನ್ನು ನಡೆಸುತ್ತಿದ್ದು, ಪ್ರಯತ್ನದ ಫಲವಾಗಿ ಎಲ್ಲಾ ಹೈಕೋರ್ಟ್ ವೆಬ್ ಸೈಟ್ ಗಳು ಇದೀಗ ವಿಶೇಷಚೇತನರು ಬಳಸಲು ಸಾಧ್ಯವಾಗುವಂತೆ ಕ್ಯಾಪ್ಚಾಸ್ [ಪಿಡಬ್ಲ್ಯೂಡಿಗಳು] ಗಳನ್ನು ಹೊಂದಿದ್ದು, ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶೇಷ ಮೈಲಿಗಲ್ಲಾಗಿದೆ

https://static.pib.gov.in/WriteReadData/userfiles/image/image0011H29.jpg

ನ್ಯಾಯಾಲಯದ ವೆಬ್ ಸೈಟ್ ಹಲವಾರು ಅಗತ್ಯ ತಾಣಗಳನ್ನು ಪ್ರವೇಶಿಸಲು ಕ್ಯಾಪ್ಚಾ ಗಳು ಪ್ರವೇಶ ದ್ವಾರಗಳಾಗಿ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ ತೀರ್ಪುಗಳು/ ಆದೇಶಗಳು, ಪ್ರಕರಣಗಳ ಪಟ್ಟಿ ಮತ್ತು ಪ್ರಕರಣಗಳ ಸ್ಥಿತಿಗತಿಯನ್ನು ಆನ್ ಲೈನ್ ಮೂಲಕ ಪರಿಶೀಲಿಸಬಹುದಾಗಿದೆಅನೇಕ ಹೈಕೋರ್ಟ್ ವೆಬ್ ಸೈಟ್ ಗಳಲ್ಲಿ  ದೃಷ್ಟಿ ವಿಕಲ ಚೇತನರಿಗೆ ದಾಖಲೆ ಪಡೆಯಲು ಸಾಧ್ಯವಾಗದಂತಹ ಅಂಶಗಳು ಇದ್ದು ಇದರಿಂದ ಅವರಿಗೆ ಬೇಕಾದ ಮಾಹಿತಿ ಪಡೆಯಲು ಕಷ್ಟಪಡಬೇಕಾಗಿತ್ತು. ಇಂತಹ ವಿಷಯವನ್ನು ಸ್ವತಂತ್ರವಾಗಿ ಪ್ರವೇಶಿಸಲು ವರ್ಗಕ್ಕೆ ಅಸಾಧ್ಯವಾಗಿತ್ತು. ಎಲ್ಲಾ ಹೈಕೋರ್ಟ್ ಗಳ ಸಮನ್ವಯದೊಂದಿಗೆ ಸಮಿತಿ ಇದೀಗ ದೃಶ್ಯ ಕ್ಯಾಪ್ಚಾ ಗಳೊಂದಿಗೆ ಪಠ್ಯ, ವೆಬ್ ಸೈಟ್ ನಲ್ಲಿ ಆಡಿಯೋ ಕ್ಯಾಪ್ಚಾ ಗಳಲ್ಲಿ ವಿಷಯಗಳನ್ನು ಅಳವಡಿಸಿಕೊಂಡಿದ್ದು, ದೃಷ್ಟಿ ವಿಕಲಚೇತನರು ಇದೀಗ ತಾಣಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಿದೆ.    

2020 ಡಿಸೆಂಬರ್ 16 ರಂದು ತನ್ನ ಪತ್ರದಲ್ಲಿ -ಸಮಿತಿಯ ಅಧ್ಯಕ್ಷ ಡಾ. ಜಸ್ಟಿಸ್ ಡಿ.ವೈ. ಚಂದ್ರಚೂಡ್ವಿಶೇಷಚೇತನರ ಸಾಂವಿಧಾನಿಕ ಮತ್ತು ಶಾಸನಬದ್ಧ ಅರ್ಹತೆಗಳಿಗೆ ಅನುಗುಣವಾಗಿ ವಿಶೇಷಚೇತನರಿಗೆ  ಡಿಜಿಟಲ್ ಮೂಲ ಸೌಕರ್ಯ ಪ್ರವೇಶಿಸುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದ್ದರು. ನಿಟ್ಟಿನಲ್ಲಿ ಎಲ್ಲಾ ಹೈಕೋರ್ಟ್ ಗಳು ಕೈಗೊಳ್ಳಬೇಕಾದ ರಚನಾತ್ಮಕ ಸಲಹೆಯನ್ನು  ಪತ್ರ ಒಳಗೊಂಡಿತ್ತು.

ಎಲ್ಲಾ ಹೈಕೋರ್ಟ್ ಗಳ ವೆಬ್ ಸೈಟ್ ಗಳ ಡಿಜಿಟಲ್ ಇಂಟರ್ಫೇಸ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಕ್ರಿಯಾ ಯೋಜನೆ 1 ರಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ಪತ್ರದಲ್ಲಿ ತಿಳಿಸಲಾಗಿದೆಜತೆಗೆ ನಿರ್ದಿಷ್ಟ ಹೈಕೋರ್ಟ್ ಗಳಲ್ಲಿ ವೆಬ್ ಸೈಟ್ ಗಳನ್ನು ಪ್ರವೇಶಿಸಲಾಗಿದೆಯೇ ಎಂಬುದನ್ನು ನಿರ್ಧರಿಸಲು ಆರು ಮಾನದಂಡಗಳನ್ನು ರೂಪಿಸಲಾಗಿದೆ. ಇದರಲ್ಲಿ ತೀರ್ಪುಗಳನ್ನು ಪಡೆಯಲು, ಪ್ರಕರಣಗಳ ಪಟ್ಟಿ, ಪ್ರಕರಣದ ಸ್ಥಿತಿಗತಿ, ಕಾಂಟ್ರಾಸ್ಟ್, ಬಣ್ಣದ ತೀಮ್, ಪಠ್ಯ ಗಾತ್ರ, [ + ಎಎ] ಮತ್ತು ಸ್ಕ್ರೀನ್ ರೀಡರ್ ಪ್ರವೇಶ ಪಡೆಯುವ ಅಂಶಗಳನ್ನು ಇದು ಒಳಗೊಂಡಿದೆ. ಎಲ್ಲಾ ಹೈಕೋರ್ಟ್ ಗಳ ವೆಬ್ ಸೈಟ್ ಡಿಜಿಟಲ್ ಇಂಟರ್ಫೇಸ್ ಖಾತರಿಪಡಿಸುವ ಮತ್ತು ಪ್ರವೇಶಿಸಬಹುದಾದ ಪಿ..ಡಿ.ಎಫ‍್ ಗಳನ್ನು ರಚಿಸುವ ಕುರಿತು ಜಾಗೃತಿ ಮೂಡಿಸಲು ಮತ್ತು ತರಬೇತಿ ನೀಡಲು ಸಮಿತಿ ಎಲ್ಲಾ ಹೈಕೋರ್ಟ್ ಗಳ ಕೇಂದ್ರ ಯೋಜನಾ ಸಂಯೋಜಕರು ಮತ್ತು ಅವರ ತಾಂತ್ರಿಕ ತಂಡಗಳಿಗೆ ಸರಣಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಕೆಲವು ವೆಬ್ ಸೈಟ್ ಗಳನ್ನು ಹೊರತುಪಡಿಸಿ ಹೈಕೋರ್ಟ್ ಬಹಳಷ್ಟು ವೆಬ್ ಸೈಟ್ ಗಳು ಮೇಲಿನ ಮಾನದಂಡಗಳನ್ನು ಅನುಸರಿಸುತ್ತಿವೆಹೈಕೋರ್ಟ್ ಗಳು ಅನುಸರಿಸುವ ಮಾನದಂಡಗಳ ಅನುಸರಣಿ ಕುರಿತ ಮಾಹಿತಿ ಅನುಬಂಧ ನಲ್ಲಿದೆ.

ನ್ಯಾಯಾಲಯದ ದಾಖಲೆಗಳನ್ನು ಪಡೆಯಲು ಸಮಿತಿ ಮಾದರಿ ಕಾರ್ಯಾಚರಣೆ ಪ್ರಕ್ರಿಯೆ [ಎಸ್..ಪಿ] ರಚಿಸಿದೆ ಮತ್ತು ಪಾಲುದಾರರು ಸೇವೆ ಪಡೆಯಲು  ಬಳಕೆದಾರರ ಮಾರ್ಗದರ್ಶಿ ನೆರವು ನೀಡಲಿದೆಇದು ವಾಟರ್ ಮಾರ್ಕ್ ಗಳ ಸಮಸ್ಯೆಗಳನ್ನು, ಕೈಯಿಂದ ವಿಷಯಗಳನ್ನು ನಮೂದಿಸುವ, ಅಂಚೆಚೀಟಿಗಳ ಸಮರ್ಪಕ ನಿಯೋಜನೆ ಮತ್ತು ಕಡತಗಳನ್ನು ಪ್ರವೇಶಿಸುವ ವಿನ್ಯಾಸವನ್ನು ಸಹ ರಚಿಸಲಾಗಿದೆ. ನಿಟ್ಟಿನಲ್ಲಿ ಸಮಿತಿ ಅಧ್ಯಕ್ಷ ಡಾ. ಜಸ್ಟಿಸ್. ಡಿ.ವೈ. ಚಂದ್ರಚೂಡ್ 2021.06.25 ರಂದು ಹೈಕೋರ್ಟ್ ಗಳ ಎಲ್ಲಾ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದು, ಎಸ್..ಪಿಯನ್ನು ರಚಿಸುವಂತೆ ಸಲಹೆ ಮಾಡಿದ್ದಾರೆ.

ಎನ್..ಸಿ ಸಹಯೋಗದೊಂದಿಗೆ ವಿಶೇಷಚೇತನರು ತೀರ್ಪುಗಳನ್ನು ಜಾಲಾಡಲು ಪೋರ್ಟಲ್ ಅನ್ನು (https://judgments.ecourts.gov.in) ಸಮಿತಿ ರಚಿಸಿದ್ದು, ಮೂಲಕ ಮತ್ತೊಂದು ಮಹತ್ವದ ಕ್ರಮ ಕೈಗೊಂಡು ಮೈಲಿಗಲ್ಲು ಸ್ಥಾಪಿಸಿದೆ. ಪೋರ್ಟಲ್ ತೀರ್ಪುಗಳು ಮತ್ತು ಹೈಕೋರ್ಟ್ ಗಳು ನೀಡುವ ಅಂತಿಮ ಆದೇಶಗಳನ್ನು ಒಳಗೊಂಡಿದೆ. ಪೋರ್ಟಲ್ ನಲ್ಲಿ ಬಳಕೆದಾರರಿಗೆ ಉಚಿತವಾಗಿ ಪಠ್ಯ ಜಾಲಾಡುವ ಸರ್ಚ್ ಎಂಜಿನ್ ಸಹ ಒಳಗೊಂಡಿರುವುದು ವಿಶೇಷವಾಗಿದೆ. ಇದರ ಜತೆಗೆ ಪೋರ್ಟಲ್ ಹೆಚ್ಚುವರಿಯಾಗಿ ಆಡಿಯೋ ಕ್ಯಾಪ್ಚಾ, ಪಠ್ಯ ಕ್ಯಾಪ್ಚಾ ಗಳನ್ನು ಸಹ ಒಳಗೊಂಡಿದೆ. ಇದು  ಕಾಂಬೋಪಟ್ಟಿಗೆಗಳನ್ನು ಸಹ ಬಳಸುತ್ತದೆ. ಇದರಿಂದ ದೃಷ್ಟಿ ವಿಕಲಚೇತನರಿಗೆ ವೆಬ್ ಸೈಟ್ ಗಳನ್ನು ಜಾಲಾಡಲು ಸುಲಭವಾಗುತ್ತದೆ

ಸಮಿತಿಯ ವೆಬ್ ಸೈಟ್ ( https://ecommitteesci.gov.in/) ಮತ್ತು ಕೋರ್ಟ್ ಸಮಿತಿ ವೆಬ್ ಸೈಟ್ ಗಳು (https://ecourts.gov.in/ecourts_home/) ಸಹ ವಿಶೇಷ ಚೇತನ ವ್ಯಕ್ತಿಗಳಿಗೆ ದೊರೆಯಲಿದೆ. ಸಮಿತಿಯ ವೆಬ್ ಪೇಜ್ ಅನ್ನು ಎಸ್3ಡಬ್ಲ್ಯೂಎಎಎಸ್ ವೇದಿಕೆಯಲ್ಲಿ ರಚಿಸಲಾಗಿದೆ. ಇದು ವಿಶೇಷಚೇತನರ ವೆಬ್ ಸೈಟ್ ಗಳನ್ನು ಪ್ರವೇಶಿಸುವ ಮಾನದಂಡಗಳಿಗೆ ಅನುಗುಣವಾಗಿರುತ್ತದೆ. ವಕೀಲರಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ಸಮಿತಿ ಸಂವೇದನಾಶೀಲವಾಗಿ ಅಳವಡಿಸಿಕೊಂಡಿದೆ

ವಿಶೇಷ ಕ್ರಮಗಳು ವಿಶೇಷ ಚೇತನರಿಗೆ ನ್ಯಾಯಾಂಗ ಪ್ರವೇಶವನ್ನು ಗಮನಾರ್ಹವಾಗಿ ಹೆಚ್ಚಿಸಿವೆ ಮತ್ತು ನ್ಯಾಯ ವ್ಯವಸ್ಥೆಯ ಸಮಾನವಾಗಿ ಅವಕಾಶ ಮಾಡಿಕೊಟ್ಟಿದೆ. ವಿಶೇಷಚೇತನರಾಗಿರುವ ಕಾನೂನು ವೃತ್ತಿಪರರಿಗೆ ಕ್ರಮಗಳು ಅವರ ಸಾಮರ್ಥ್ಯದ ಪ್ರತಿರೂಪಗಳಂತೆ ಅದೇ ಹಾದಿಯಲ್ಲಿ ವೃತ್ತಿಯಲ್ಲಿ ಭಾಗವಹಿಸಲು ಅನುವು ಮಾಡಿಕೊಡುವ ಮಹತ್ವದ ಹೆಜ್ಜೆಯಾಗಿದೆ ಸಮಿತಿಯ ಉಪಕ್ರಮಗಳು ನಮ್ಮ ನ್ಯಾಯಾಲಯಗಳನ್ನು ಹೊರಗಿಡುವುದರಿಂದ ವಿಶೇಷಚೇತನರ ಒಳಗೊಳ್ಳುವಿಕೆಯ ಭದ್ರಕೋಟೆಗಳಾಗಿ ಪರಿವರ್ತನೆಯಾಗಲು ಸಹಾಯ ಮಾಡಿದೆ ಮತ್ತು  ಎಲ್ಲರನ್ನೊಳಗೊಂಡ ಕಾನೂನು ವ್ಯವಸ್ಥೆಯನ್ನು ರಚಿಸುವಲ್ಲಿ ಇದು ಪ್ರಮುಖ ಮಾರ್ಗವಾಗಿದೆ.

***


(Release ID: 1730798) Visitor Counter : 524