ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಹೈದರಾಬಾದ್ ನಲ್ಲಿಂದು ಲಸಿಕೆ ಉತ್ಪಾದನೆಯ ಪ್ರಗತಿ ಪರಿಶೀಲಿಸಿದ ಶ್ರೀ ಮನ್ಸೂಕ್ ಮಾಂಡವಿಯಾ ಮತ್ತು ಶ್ರೀ ಜಿ. ಕಿಶನ್ ರೆಡ್ಡಿ

Posted On: 27 JUN 2021 6:23PM by PIB Bengaluru

ಹೈದರಾಬಾದ್ ಭಾರತ್ ಬಯೋಟೆಕ್ ನಲ್ಲಿ ಇಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರೊಂದಿಗೆ ಕೇಂದ್ರ ರಾಸಾಯನಿಕ ಮತ್ತು ಸರಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸೂಕ್ ಮಾಂಡವಿಯಾ ಅವರು ಲಸಿಕೆ ಉತ್ಪಾದನೆ ಮತ್ತು 3 ನೇ ಹಂತದ ಜೈವಿಕ ಸುರಕ್ಷತೆಯ ಸೌಲಭ್ಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಔಷಧ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಅಪರ್ಣಾ ಅವರು ಸಹ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಾಂಡವಿಯಾ, ಪ್ರತಿಯೊಬ್ಬರಿಗೂ ಲಸಿಕೆ ದೊರಕಿಸಿಕೊಡುವ ಉದ್ದೇಶದಿಂದ ಲಸಿಕೆ ಅಭಿವೃದ್ಧಿದಾರರು ಮತ್ತು ಉತ್ಪಾದಕರಿಗೆ ಬೆಂಬಲ ನೀಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಾಯಕತ್ವದ ಸರ್ಕಾರ ಬದ್ಧವಾಗಿದೆ ಎಂದರು.

 

ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ ಕುರಿತು ಸಚಿವರು ಉತ್ಪಾದಕರೊಂದಿಗೆ ಚರ್ಚೆ ನಡೆಸಿದರು.

ದಿನದ ಕೊನೆಗೆ ಸಚಿವರು ಭಾರತದಲ್ಲಿ ಕೋವಿಡ್ – 19 ಲಸಿಕೆ ಅಭಿವೃದ್ಧಿಪಡಿಸಿರುವ ಬಯೋಲಾಜಿಕಲ್ ಲಿಮಿಟೆಡ್ ಕೋರ್ಬೆವಕ್ಸ್ಎನ್ ಗೆ ಭೇಟಿ ನೀಡಿದರು.

ರಷ್ಯಾದಿಂದ ಆಮದುಮಾಡಿಕೊಳ್ಳುವ ಸಿಂಗಲ್ ಶಾಟ್ ಕೋವಿಡ್ – 19 ಲಸಿಕೆಸ್ಪುಟ್ನಿಕ್ ಲೈಟ್ ಸ್ಥಿತಿಗತಿ ಕುರಿತಂತೆ ಡಾ. ರೆಡ್ಡಿ ತಂಡದೊಂದಿಗೆ ಸಭೆ ನಡೆಸಿದರು. ಸ್ಪುಟ್ನಿಕ್ ಲಸಿಕೆಯನ್ನು ದೇಶೀಯವಾಗಿ ಉತ್ಪಾದಿಸುತ್ತಿರುವ ತಂಡಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು

***


(Release ID: 1730796) Visitor Counter : 240