ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಸಂದರ್ಭದಲ್ಲಿ    ಶ್ರೀ ತಾವರ್ ಚಂದ್  ಗೆಹ್ಲೋಟ್ ಅವರು ‘ನಶಾ ಮುಕ್ತ ಭಾರತ್ ಅಭಿಯಾನ’ ದ ಜಾಲತಾಣಕ್ಕೆ ಚಾಲನೆ ನೀಡಿದರು


ಯಾವುದೇ ಪರಿಸ್ಥಿತಿ ಎದುರಾದರೂ ಮಾದಕ ದ್ರವ್ಯದ ಪಿಡುಗನ್ನು ನಿರ್ಮೂಲನೆ ಮಾಡಲು ಭಾರತ ಬದ್ಧವಾಗಿದೆ: ತಾವರ್‌ಚಂದ್ ಗೆಹ್ಲೋಟ್

Posted On: 26 JUN 2021 6:27PM by PIB Bengaluru

ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಶ್ರೀ ತಾವರ್ ಚಂದ್  ಗೆಹ್ಲೋಟ್  ರವರು, ಶ್ರೀ ಕ್ರಿಶನ್ ಪಾಲ್ ಗುರ್ಜಾರ್, ಶ್ರೀ ರಾಮದಾಸ್ ಅಥಾವಾಲೆ ಮತ್ತು ಶ್ರೀ ರತನ್ ಲಾಲ್ ಕಟಾರಿಯಾ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರ ಉಪಸ್ಥಿತಿಯಲ್ಲಿ, ಅವರುನಶಾ ಮುಕ್ತ ಭಾರತ್ ಅಭಿಯಾನ’ (ಎನ್‌ಎಂಬಿಎ) ಜಾಲತಾಣಕ್ಕೆ ಚಾಲನೆ ನೀಡಿದರು.   ಮಾದಕದ್ರವ್ಯದಿಂದ ಮುಕ್ತವಾದ ಸುಸ್ಥಿರ ಪ್ರಪಂಚದ ಗುರಿಯನ್ನು ಸಾಧಿಸುವಲ್ಲಿ ಕ್ರಮ ಮತ್ತು ಸಹಕಾರವನ್ನು ಬಲಪಡಿಸಲು ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆಮಾದಕ ದ್ರವ್ಯ ಬೇಡಿಕೆ ಕಡಿತ ಯೋಜನೆಯ ನೋಡಲ್ ಸಚಿವಾಲಯವಾಗಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದೇಶಾದ್ಯಂತ ಮಾದಕ ದ್ರವ್ಯ ಸೇವನೆ ತಡೆಗಟ್ಟುವಿಕೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.

  ವರ್ಷ, ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಅಂಗವಾಗಿಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 6 ದಿನಗಳನಶಾ ಮುಕ್ತ ಭಾರತ್ಶೃಂಗಸಭೆಯನ್ನು ಆಯೋಜಿಸಿತ್ತು, ಇದು ಮಾದಕವಸ್ತು ತಡೆಗಟ್ಟುವಿಕೆಗಾಗಿ ಸಚಿವಾಲಯ ಕೈಗೊಂಡ ಹಲವಾರು ಉಪಕ್ರಮಗಳ -ಚಾಲನೆಯೊಂದಿಗೆ ಕೊನೆಗೊಂಡಿತು .

ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಕಾರ್ಯದರ್ಶಿ ಶ್ರೀ ಆರ್. ಸುಬ್ರಹ್ಮಣ್ಯಂ ಅವರು ಕಾರ್ಯಕ್ರಮದ ಪರಿಚಯವನ್ನು ಮಾಡಿದರು ಮತ್ತು ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಉಪ್ಮಾ ಶ್ರೀವಾಸ್ತವ ಅವರು ಭಾಷಣ ನೀಡಿದರು. ಜಂಟಿ ಕಾರ್ಯದರ್ಶಿ  ಶ್ರೀಮತಿ ರಾಧಿಕಾ ಚಕ್ರವರ್ತಿ ಅವರು ಎನ್‌ಎಮ್‌ ಬಿಎ ಬಗ್ಗೆ ವಿವರಗಳನ್ನು ನೀಡಿದರು ಮತ್ತು ಕಾರ್ಯಕ್ರಮವನ್ನು ನಡೆಸಿದರು.

ಇಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವ ಶ್ರೀ ತಾವರ್ ಚಂದ್ ಗೆಹ್ಲೋಟ್ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ, ಯಾವುದೇ ರೂಪದಲ್ಲಿ ಮಾದಕ ದ್ರವ್ಯ ಸೇವನೆಯ ವಿರುದ್ಧದ ನಮ್ಮ ಸಂಕಲ್ಪವನ್ನು ಬಲಪಡಿಸಲು ಮತ್ತು ಭಾರತದಿಂದ ವಿಶ್ವಕ್ಕೆ  ಒಂದು ಸಂದೇಶವನ್ನು ಕಳುಹಿಸಲು ನಾವು ಒಗ್ಗೂಡಿದ್ದೇವೆ ಎಂದು ಹೇಳಿದರು. ಯಾವುದೇ ಪರಿಸ್ಥಿತಿ ಎದುರಾದರೂ ಪಿಡುಗನ್ನು ನಿರ್ಮೂಲನೆ ಮಾಡಲು ಭಾರತ ಬದ್ಧವಾಗಿದೆಸಾಮಾಜಿಕ ಗುರಿಗಳನ್ನು ಸಾಧಿಸುವ ನಮ್ಮ ಬದ್ಧತೆ, ಮಾದಕ ದ್ರವ್ಯ ಸೇವನೆಯನ್ನು ಕೊನೆಗೊಳಿಸಲು ಮತ್ತು ಸಮುದಾಯ ಕೇಂದ್ರಿತ ವಿಧಾನಗಳು ಮತ್ತು ಫಲಿತಾಂಶಗಳನ್ನು ಬಲಪಡಿಸುವ ಉಪಕ್ರಮಗಳನ್ನು ಇದು ಪುನರುಚ್ಚರಿಸುತ್ತದೆ. ಮಾದಕ ದ್ರವ್ಯ ಸೇವನೆಯ ಪಿಡುಗನ್ನು ತೊಲಗಿಸಲು ಸರ್ವ ಪ್ರಯತ್ನಗಳನ್ನು ಮಾಡಲು  ಭಾರತ ಬದ್ಧವಾಗಿದೆ ಎಂಬ ನಿರ್ಧಾರವನ್ನು ಶ್ರೀ  ಗೆಹ್ಲೋಟ್ ವ್ಯಕ್ತಪಡಿಸಿದರು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನಡೆಸಿದ ರಾಷ್ಟ್ರೀಯ ಸಮಗ್ರ ಸಮೀಕ್ಷೆಯ ಪ್ರಕಾರ, ದೇಶದಲ್ಲಿ 60 ದಶಲಕ್ಷಕ್ಕೂ ಹೆಚ್ಚು ಮಾದಕ ವ್ಯಸನಿಗಳಿದ್ದಾರೆ, ಅದರಲ್ಲಿ ಹೆಚ್ಚಿನವರು 10 - 17 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಶ್ರೀ ಗೆಹ್ಲೋಟ್ ಹೇಳಿದ್ದಾರೆ.

ಸಚಿವಾಲಯವು ಮಾದಕ ದ್ರವ್ಯ ಬೇಡಿಕೆ ಕಡಿತ ಯೋಜನೆಯ ನೋಡಲ್ ಸಚಿವಾಲಯವಾಗಿದೆ ಎಂದು ಸಚಿವರು ವಿವರಿಸಿದರು. ಮಾದಕ ದ್ರವ್ಯಗಳ ಮತ್ತು ಅದರ ಪರಿಣಾಮಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಚಿವಾಲಯ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ದೇಶಾದ್ಯಂತ 500 ಕ್ಕೂ ಹೆಚ್ಚು ಸ್ವಯಂಸೇವಾ ಸಂಸ್ಥೆಗಳು ಇದ್ದು, ಸಚಿವಾಲಯದ ಎನ್‌ಎಪಿಡಿಡಿಆರ್ ಯೋಜನೆಯಡಿ ಆರ್ಥಿಕವಾಗಿ ನೆರವು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಎನ್‌ಜಿಒಗಳು ಮಾದಕವಸ್ತು ಮುಕ್ತ ಭಾರತ ಅಭಿಯಾನದ ಅನುಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿವೆ. ಸಂಸ್ಥೆಗಳು / ಸಂಸ್ಥೆಗಳ ಸ್ವಯಂಸೇವಕರು ಮತ್ತು  ಕಾರ್ಯಕರ್ತರು ಮನೆ ಮನೆಗೆ ತೆರಳಿ, ಹಳ್ಳಿಯಿಂದ ಹಳ್ಳಿಗೆ ಮತ್ತು ಹತ್ತಿರದ ಪ್ರದೇಶಗಳಿಗೆ ಹೋಗಿದ್ದಾರೆದೇಶದಲ್ಲಿ ಕೋವಿಡ್-19ರಿಂದ ಉದ್ಭವಿಸಿದ ಪರಿಸ್ಥಿತಿಯ ಹೊರತಾಗಿಯೂ, ‘ನಶಾ ಮುಕ್ತ ಭಾರತ್ಅಭಿಯಾನದ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಮುಂದುವರಿದಿದೆ ಎಂದು ಶ್ರೀ ಗೆಹ್ಲೋಟ್ ವಿವರಿಸಿದರು. ಜನರ ಸಹಭಾಗಿತ್ವದಿಂದ ಮಾತ್ರ  ಪಿಡುಗನ್ನು ಸಮಾಜದಿಂದ ನಿರ್ಮೂಲನೆ ಮಾಡಬಹುದಾದ್ದರಿಂದ ಜನಸಾಮಾನ್ಯರುನಶಾ ಮುಕ್ತ ಭಾರತ್ ಅಭಿಯಾನ ಭಾಗವಾಗಬೇಕು ಎಂದು ಸಚಿವರು ಆಗ್ರಹಿಸಿದರು.

ಸಂದರ್ಭದಲ್ಲಿ ಮಾದಕದ್ರವ್ಯದ ಪಿಡುಗಿನಿಂದ  ಹೆಚ್ಚಿನ ಸಂಖ್ಯೆಯ ಜನರ ಜೀವನ  ಹಾಳಾಗಿದೆ ಎಂದು ಶ್ರೀ ರಾಮದಾಸ್ ಅಠಾವಳೆ ಹೇಳಿದರು.   ದುಶ್ಚಟದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಮತ್ತು ನಾವು ಮಾದಕ ದ್ರವ್ಯಗಳ  ವ್ಯಾಪಾರವನ್ನು ಕೊನೆಗೊಳಿಸಬೇಕು. ನಾವು ಮಾದಕದ್ರವ್ಯ ಮುಕ್ತ ಭಾರತವನ್ನು ಸಾಧಿಸಬೇಕಾಗಿದೆ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು  ಇದನ್ನು ಸಾಧಿಸುವ ನಿಟ್ಟಿನಲ್ಲಿ ಬಹಳ ಗಂಭೀರವಾಗಿದೆ ಎಂದು ಅವರು ಹೇಳಿದರು.

 

ಶ್ರೀ ರತನ್ ಲಾಲ್ ಕಟಾರಿಯಾ ತಮ್ಮ ಭಾಷಣದಲ್ಲಿ ಇಡೀ ಜಗತ್ತು ಪಿಡುಗನ್ನು ಎದುರಿಸುತ್ತಿದೆ ಮತ್ತು ಮಾದಕ ವ್ಯಸನವು ವ್ಯಸನಿ, ವ್ಯಕ್ತಿ, ಕುಟುಂಬ ಮತ್ತು ಸಮಾಜದ  ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಿದೆ ಮತ್ತು ಇದು ಗಂಭೀರ ಕಾಳಜಿಯ ವಿಷಯವಾಗಿದೆ ಎಂದು ಹೇಳಿದರುಮಾದಕ ದ್ರವ್ಯದ ಬೇಡಿಕೆಯನ್ನು ಕಡಿಮೆ ಮಾಡಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಆದೇಶ ನೀಡಲಾಗಿದೆಇದು ಮಾದಕವಸ್ತು ತಡೆಗಟ್ಟುವಿಕೆಯ ಎಲ್ಲಾ ಅಂಶಗಳನ್ನು ಸಮನ್ವಯಗೊಳಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ, ಇದು ಸಮಸ್ಯೆಯ ವ್ಯಾಪ್ತಿಯನ್ನು ನಿರ್ಣಯಿಸುವುದು, ತಡೆಗಟ್ಟುವ ಕ್ರಮ, ವ್ಯಸನಿಗಳ ಚಿಕಿತ್ಸೆ ಮತ್ತು ಪುನರ್ವಸತಿ, ಮಾಹಿತಿಯ ಪ್ರಸಾರ ಮತ್ತು ಸಾರ್ವಜನಿಕ ಜಾಗೃತಿ ಮತ್ತು ವ್ಯಸನ ಕೇಂದ್ರಗಳನ್ನು ನಡೆಸಲು ಕಡ್ಡಾಯವಾಗಿದೆ. ದೇಶಾದ್ಯಂತದ ಎನ್‌ ಜಿಒಗಳಿಗೆ ಸರ್ಕಾರ ಆರ್ಥಿಕ ನೆರವು ನೀಡುತ್ತದೆ ಎಂದು ಶ್ರೀ ಕಟಾರಿಯಾ ಹೇಳಿದರು ಸಂದರ್ಭದಲ್ಲಿ, ಮಾದಕವಸ್ತು ಮುಕ್ತ ಸಮಾಜವನ್ನು ಸಾಧಿಸಲು ನಾವು ಪ್ರತಿಜ್ಞೆ ಮಾಡಬೇಕು ಎಂದು ಅವರು ಹೇಳಿದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ಕ್ರಿಶನ್ ಪಾಲ್ ಗುರ್ಜರ್, ನಾವು ಮಾದಕ ವಸ್ತುವಿನ ವ್ಯಾಪಾರವು  ಅಪಾಯಕಾರಿ ಮಟ್ಟವನ್ನು ಪಡೆಯುತ್ತಿರುವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳಿದರು. ಮಾದಕ ವಸ್ತುವು ವ್ಯಕ್ತಿಯ ಜೀವನವನ್ನು ಹಾಳುಮಾಡುವುದು ಮಾತ್ರವಲ್ಲದೆ ಕುಟುಂಬ ಮತ್ತು ಸಮಾಜಕ್ಕೆ ಹಾನಿಕಾರಕವಾಗಿದೆ. ಮಾದಕ ವ್ಯಸನವು ಸಮಾಜ ಮತ್ತು ದೇಶಕ್ಕೂ ಕಳವಳಕಾರಿಯಾಗಿದೆ. ಸಚಿವಾಲಯವು ರೂಪಿಸಿರುವ ಯೋಜನೆಗಳ ಉದ್ದೇಶವು ಮಾದಕವಸ್ತುಗಳ ಸೇವನೆಯನ್ನು ತಗ್ಗಿಸುವುದು ಮತ್ತು ವ್ಯಸನಿಗಳಿಗೆ ಪುನರ್ವಸತಿ ಕಲ್ಪಿಸುವುದು ಮತ್ತು ನಾವು  ನಿಟ್ಟಿನಲ್ಲಿ ಸಂಪೂರ್ಣ ದೃಢನಿಶ್ಚಯದಿಂದ ಮುಂದುವರಿಯುತ್ತಿದ್ದೇವೆ ಎಂದು ಶ್ರೀ ಗುರ್ಜರ್ ವಿವರಿಸಿದರು.

ಪರಿಚಯದ ಹೇಳಿಕೆಯಲ್ಲಿ, ಸಚಿವಾಲಯದ ಕಾರ್ಯದರ್ಶಿ ಶ್ರೀ ಆರ್. ಸುಬ್ರಹ್ಮಣ್ಯಂ ಅವರು ಕಳೆದ ವರ್ಷ ನಾವು 'ನಶಾ ಮುಕ್ತ ಭಾರತ್ ಅಭಿಯಾನ್' (ಎನ್‌ಎಂಬಿಎ) ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಮತ್ತು   ಅಲ್ಪ ಅವಧಿಯಲ್ಲಿ  ಈಗಾಗಲೇ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ ಎಂದು ಹೇಳಿದರು. ಎನ್‌ಎಂಬಿಎ ಅಡಿಯಲ್ಲಿ 272 ಹೆಚ್ಚಿನ ಹೊರೆ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಸುಮಾರು 8000 ಯುವ ಸ್ವಯಂಸೇವಕರು ಮನೆ ಮನೆಗೆ ತೆರಳಿ ಮಾದಕ ದ್ರವ್ಯ ಸೇವನೆಯ ಪಿಡುಗಿನ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. 75ನೇ ಸ್ವಾತಂತ್ರ್ಯದ ಆಚರಣೆಯ ಅಂಗವಾಗಿ (ಆಜಾ಼ದಿ ಕಾ ಅಮೃತ್ ಮಹೋತ್ಸವ್) ಶೀಘ್ರದಲ್ಲೇ ಕನಿಷ್ಠ 100 ಜಿಲ್ಲೆಗಳನ್ನು ಮಾದಕ ದ್ರವ್ಯ ಮುಕ್ತ ಎಂದು ಘೋಷಿಸಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ವಿವರಿಸಿದರು.

ಇಂದು ಪ್ರಾರಂಭಿಸಲಾದನಶಾ ಮುಕ್ತ ಭಾರತ್ ಅಭಿಯಾನಜಾಲತಾಣ ಮತ್ತು ಅದರ ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ, ಫೋಟೋ ಮತ್ತು ವಿಡಿಯೋ ಗ್ಯಾಲರಿಯ ಮೂಲಕ ವಿವರಗಳನ್ನು ನೀಡುತ್ತದೆ, ಐಇಸಿ ಸಂಪನ್ಮೂಲ ಸಾಮಗ್ರಿಗಳು ಮತ್ತು  ಮಾದಕ ದ್ರವ್ಯ ಬೇಡಿಕೆ ಕಡಿತದ ಉದ್ದೇಶದಿಂದ ಸಚಿವಾಲಯ ಸ್ಥಾಪಿಸಿದ ಸಂಸ್ಥೆಗಳ ಮಾಹಿತಿಯನ್ನು ಒದಗಿಸುತ್ತದೆ. ಶ್ರೀ ತಾವರ್‌ ಚಂದ್ ಗೆಹ್ಲೋಟ್ ಅವರು ಮಾಸಿಕ ಸುದ್ದಿಪತ್ರದ ವಿಶೇಷ ನಶಾ ಮುಕ್ತ ಭಾರತ್ ಶೃಂಗಸಭೆಯ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದರು, ಇದು ವಾರ ಪೂರ್ತಿ ಶೃಂಗಸಭೆಯಲ್ಲಿ ನಡೆದ ಘಟನೆಗಳ ಜೊತೆಗೆ ದೇಶಾದ್ಯಂತ ಅಭಿಯಾನಕ್ಕಾಗಿ ನಡೆಯುತ್ತಿರುವ ಚಟುವಟಿಕೆಗಳನ್ನು ತೋರಿಸುತ್ತದೆ. ಅಭಿಯಾನಕ್ಕಾಗಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಕೈಗೊಂಡಿರುವ ಚಟುವಟಿಕೆಗಳನ್ನು ಮತ್ತು ಬೀರಿದ ಪರಿಣಾಮವನ್ನು ಚಿತ್ರಿಸುವ ನಶಾ ಮುಕ್ತ ಭಾರತ್ ಅಭಿಯಾನದ ಮೇಲೆ ಮಾಡಿದ ಕಿರುಚಿತ್ರವನ್ನು ಸಹ ಬಿಡುಗಡೆ ಮಾಡಲಾಯಿತು.

ಐದು ಜಿಲ್ಲೆಗಳಿಂದ ಆಯ್ಕೆಯಾದ ತಮ್ಮ ಜಿಲ್ಲೆಯ ಅಭಿಯಾನಕ್ಕಾಗಿ ಕೆಲಸ ಮಾಡುತ್ತಿರುವ ಮಾಸ್ಟರ್ ಸ್ವಯಂಸೇವಕರೊಂದಿಗೆ ಮತ್ತು ಮಾದಕ ದ್ರವ್ಯ ಸೇವನೆಯಿಂದ ಹೊರಬಂದು ಈಗ ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ನಡೆಸುತ್ತಿರುವ ಮೂರು ವ್ಯಕ್ತಿಗಳೊಂದಿಗೆ ಸಚಿವರು  ಮಾತನಾಡಿಸುವ ಮೂಲಕ ಕಾರ್ಯಕ್ರಮವು ಮುಕ್ತಾಯವಾಯಿತು

ವಿವಿಧ ಮೂಲಗಳಿಂದ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ದೇಶದ 272 ಜಿಲ್ಲೆಗಳಲ್ಲಿ 2020 ಆಗಸ್ಟ್ 15 ರಂದುನಶಾ ಮುಕ್ತ ಭಾರತ್ ಅಭಿಯಾನ್ ಅಥವಾಮಾದಕದ್ರವ್ಯ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ವ್ಯಸನ ತಡೆಗಟ್ಟುವಿಕೆ, ಸಾಮೂಹಿಕ ಶಿಕ್ಷಣ ಮತ್ತು ಸಂವೇದನೆ, ಸೇವಾ ಪೂರೈಕೆದಾರರ ಸಾಮರ್ಥ್ಯವನ್ನು ಹೆಚ್ಚಿಸುವುದು, ಶಿಕ್ಷಣ ಸಂಸ್ಥೆಗಳೊಂದಿಗೆ ಸಕಾರಾತ್ಮಕ ಸಹಭಾಗಿತ್ವ ಮತ್ತು ಚಿಕಿತ್ಸೆ, ಪುನರ್ವಸತಿ ಮತ್ತು ಸಮಾಲೋಚನೆ ಸೌಲಭ್ಯಗಳ ವರ್ಧನೆಯು ಅಭಿಯಾನದ ಮುಖ್ಯ ಉದ್ದೇಶಗಳಾಗಿವೆ.

***(Release ID: 1730790) Visitor Counter : 3511