ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಅಂತಾರಾಷ್ಟ್ರೀಯ ಯೋಗ ದಿನ 2021 ಯಲ್ಲಿ ಒಟ್ಟು 42,28,802 ಮಕ್ಕಳು, 22,72,197 ವಯಸ್ಕರು ಮತ್ತು 17,37,440 ಗರ್ಭಿಣಿ ಮತ್ತು ಬಾಣಂತಿಯರು ಯೋಗಾಭ್ಯಾಸದಲ್ಲಿ ಭಾಗಿ

Posted On: 23 JUN 2021 5:25PM by PIB Bengaluru

ಅಂತಾರಾಷ್ಟ್ರೀಯ ಯೋಗ ದಿನವಾದ 2021 ಜೂನ್ 21ರಂದು ಒಟ್ಟು 42,28,802 ಮಕ್ಕಳು, 22,72,197 ವಯಸ್ಕರು ಮತ್ತು 17,37,440 ಗರ್ಭಿಣಿ ಮತ್ತು ಬಾಣಂತಿಯರು ತಮ್ಮ ಉತ್ತಮ ಆರೋಗ್ಯ ಮತ್ತು ಸೌಖ್ಯಕ್ಕಾಗಿ ಯೋಗಾಭ್ಯಾಸಗಳಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಗಳಲ್ಲಿ 32 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಮತ್ತು ಸುಮಾರು 82 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಪಾಲ್ಗೊಂಡಿದ್ದರು. 22 ಲಕ್ಷಕ್ಕೂ ಅಧಿಕ ಮಂದಿ ಯೋಗದ ವಿಡಿಯೋಗಳನ್ನು ಡೌನ್ ಲೋಡ್ ಮಾಡಿದ್ದಾರೆ, 24.64 ಲಕ್ಷ ಮಂದಿ ಯೋಗ ವಿಡಿಯೋಗಳನ್ನು ಫಾರ್ವರ್ಡ್ ಮಾಡಿದ್ದಾರೆ ಮತ್ತು 29.18 ಲಕ್ಷ ಮಂದಿ ತಮ್ಮ ತಮ್ಮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಗಾಭ್ಯಾಸಗಳನ್ನು ಮಾಡಿದ್ದಾರೆ.

ಅರುಣಾಚಲಪ್ರದೇಶ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಜಾರ್ಖಂಡ್

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ, ಸಾರ್ವಜನಿಕ ಆರೋಗ್ಯ ಮತ್ತು ಸೌಖ್ಯ ವಲಯದಲ್ಲಿ ದೀರ್ಘಾವಧಿಯ ಲಾಭಗಳನ್ನು ಪಡೆಯಲು ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಕರೆ ನೀಡಿದೆ. ಯೋಗ ದಿನ ಕಾರ್ಯಕ್ರಮಗಳಲ್ಲಿ ಹೆಚ್ಚು ಜನರು ಭಾಗವಹಿಸುವುದನ್ನು ಖಾತ್ರಿಪಡಿಸಲು ರಾಜ್ಯ ಸರ್ಕಾರಗಳು ಮತ್ತು ಎಲ್ಲಾ ಭಾಗೀದಾರರು ಹಲವು ಬಗೆಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದವು.

ಕರ್ನಾಟಕ

ಸದ್ಯದ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜನರು ತಮ್ಮ ಕುಟುಂಬದವರೊಂದಿಗೆ ಮನೆಗಳಷ್ಟೇ ಯೋಗ ಮಾಡಲಿಲ್ಲ, ಅಂಗನವಾಡಿ ಕೇಂದ್ರಗಳಲ್ಲೂ ಸಹ ಯೋಗಾಭ್ಯಾಸ ಮಾಡಲಾಯಿತು. ಕಾರ್ಯಕ್ರಮಗಳಲ್ಲಿ ಕ್ಷೇತ್ರ ಕಾರ್ಯಕರ್ತರು ಮತ್ತು ಫಲಾನುಭವಿಗಳು ಭಾಗವಹಿಸುವುದನ್ನು ಉತ್ತೇಜಿಸಲು ಸಚಿವಾಲಯ ಹ್ಯಾಶ್ ಟ್ಯಾಗ್ ##BeWithYogaBeAtHome ಅನ್ನು ಬಿಡುಗಡೆ ಮಾಡಿತ್ತು.

ಮಣಿಪುರ

ಮೇಘಾಲಯ

 

ಮಧ್ಯಪ್ರದೇಶ

ನಾಗಾಲ್ಯಾಂಡ್

ಸಾಮಾಜಿಕ ಮತ್ತು ಡಿಜಿಟಲ್ ಮಾದ್ಯಮ ವೇದಿಕೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಆಯುಷ್ ಸಚಿವಾಲಯ ಜನರು ಆನ್ ಲೈನ್ ನಲ್ಲಿ ಭಾಗವಹಿಸಲು ನೆರವು ನೀಡಿತು ಮತ್ತು ಯೋಗ ಶಿಷ್ಟಾಚಾರ, ಕೋವಿಡ್-19 ನಿಯಂತ್ರಣಕ್ಕೆ ಯೋಗ ಶಿಷ್ಟಾಚಾರ, ಒತ್ತಡ ನಿರ್ವಹಣೆಗೆ ಯೋಗ ಶಿಷ್ಟಾಚಾರ, ದುಡಿಯುವ ಜನರು ವಿದ್ಯಾರ್ಥಿಗಳು ಮತ್ತು ಕುಟುಂಬಕ್ಕೆ ಯೋಗ ಕುರಿತಂತೆ ತಲಾ 5 ನಿಮಿಷಗಳ ಕಿರು ವಿಡಿಯೋಗಳನ್ನು ಸಿದ್ಧಪಡಿಸಿತ್ತು. ನಿಟ್ಟಿನಲ್ಲಿ ನಾನಾ ಯೋಗ ಮಾದರಿಗಳ ವಿಡಿಯೋಗಳನ್ನು ಸ್ವಯಂ ಅಭ್ಯಾಸಕ್ಕೆ ಮತ್ತು ಎಲ್ಲ ಫಲಾನುಭವಿಗಳಿಗೆ ನೆರವಾಗುವಂತೆ ಪ್ರಚುರಪಡಿಸಲು ಬಳಕೆ ಮಾಡಿಕೊಳ್ಳುವಂತೆ ಕ್ಷೇತ್ರ ಕಾರ್ಯಕರ್ತರಿಗೆ ನಿರ್ದೇಶಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಲಾಗಿದೆ.

***



(Release ID: 1730504) Visitor Counter : 169