ನೀತಿ ಆಯೋಗ

ನೀತಿ ಆಯೋಗದಿಂದ ಮಾತೃಸಹಜ, ಹದಿಹರೆಯದ ಮತ್ತು ಬಾಲ್ಯದ ಬೊಜ್ಜು ತಡೆಗಟ್ಟುವಿಕೆ ಕುರಿತ ರಾಷ್ಟ್ರೀಯ ಸಮಾವೇಶದ ಆಯೋಜನೆ

Posted On: 25 JUN 2021 12:32PM by PIB Bengaluru

ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪಾಲ್ ಅಧ್ಯಕ್ಷತೆ ಮತ್ತು ಭಾರತೀಯ ಪೌಷ್ಟಿಕ ಸಂಸ್ಥೆಯ ನಿರ್ದೇಶಕಿ ಡಾ. ಆರ್. ಹೇಮಲತಾ ಅವರ ಸಹ ಅಧ್ಯಕ್ಷತೆಯಲ್ಲಿ ನೀತಿ ಆಯೋಗ ಮಾತೃಸಹಜ, ಹದಿಹರೆಯದ ಮತ್ತು ಬಾಲ್ಯದ ಬೊಜ್ಜು ತಡೆಗಟ್ಟುವಿಕೆ ಕುರಿತ ರಾಷ್ಟ್ರೀಯ ಸಮಾವೇಶ ಆಯೋಜಿಸಿತ್ತು.

ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ ನೀತಿ ಆಯೋಗದ ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ ಮತ್ತು ಪೌಷ್ಟಿಕತೆ) ಡಾ. ರಾಕೇಶ್ ಸರ್ವಾಲ್ ಅವರು ಬೊಜ್ಜನ್ನುಮೌನವಾದ ಸಾಂಕ್ರಾಮಿಕ’’ ಎಂದು ಬಣ್ಣಿಸಿದರು. ರಾಷ್ಟ್ರೀಯ ಸಮಾಲೋಚನೆಯಲ್ಲಿ ಜಾಗತಿಕ ತಜ್ಞರು, ವಿಶ್ವಸಂಸ್ಥೆಯ ಪ್ರತಿನಿಧಿಗಳು, ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಬೊಜ್ಜು ಹೆಚ್ಚಳದ ಬಗ್ಗೆ ತಮ್ಮ ಪುರಾವೆಗಳನ್ನು ಮಂಡಿಸಿದರು ಮತ್ತು ಬೊಜ್ಜು ಕಡಿಮೆ ಮಾಡಲು ಉತ್ತಮ ರೂಢಿಗಳನ್ನೂ ಮಂಡಿಸಿದರು.

ಯುನಿಸೆಫ್ ಪೌಷ್ಟಿಕತೆಯ ಮುಖ್ಯಸ್ಥ ಅರ್ಜುನ್ ಡೆ ವಾಗಟ್, ಭಾರತದಲ್ಲಿ  ಪೌಷ್ಟಿಕತೆಯ ಮೇಲೆ ಹೆಚ್ಚುತ್ತಿರುವ ಹೊರೆಯ ಕುರಿತ ಪುರಾವೆಯನ್ನು ಪ್ರಸ್ತುತಪಡಿಸಿದರುಪ್ರೊ. ವಿಲಿಯಮ್ ಜೋ, ..ಜಿ. ಅವರು ಭಾರತದಲ್ಲಿ ಕೆಲವು ಭೌಗೋಳಿಕ ಪ್ರದೇಶದಲ್ಲಿ ಬೊಜ್ಜಿನ ಪ್ರಸಕ್ತ ಮತ್ತು ಹೊರಹೊಮ್ಮುವ ಪ್ರವೃತ್ತಿಗಳ ಕುರಿತಂತೆ ಅಮೂಲ್ಯ ದತ್ತಾಂಶ ಹಂಚಿಕೊಂಡರು.    

ಡಬ್ಲ್ಯು,ಎಫ್‌.ಪಿ ಘಟಕದ ಮುಖ್ಯಸ್ಥ ಮತ್ತು ಕಾರ್ಯಕ್ರಮ ಅಧಿಕಾರಿ (ಆರೋಗ್ಯ ಮತ್ತು ಪೋಷಣೆ) ಶರಿಕ್ವಾ ಯೂನುಸ್ ಸ್ಥೂಲಕಾಯ ಸಮಸ್ಯೆಯನ್ನು ತಡೆಗಟ್ಟಲು ಆಹಾರ ಆಧಾರಿತ ಸಾಮಾಜಿಕ ಸುರಕ್ಷತಾ ಪರದೆಗಳನ್ನು ವೈವಿಧ್ಯಗೊಳಿಸುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ಆರೋಗ್ಯ ಉತ್ತೇಜನ ವಿಭಾಗದ ನಿರ್ದೇಶಕಿ ಮೋನಿಕಾ ಅರೋರಾ, ಪಿ.ಎಚ್‌.ಎಫ್‌. ಮತ್ತು ರಾಷ್ಟ್ರೀಯ ವೃತ್ತಿಪರ ಅಧಿಕಾರಿ (ಪೌಷ್ಟಿಕತೆ) ಡಬ್ಲ್ಯು.ಎಚ್‌. ರಚಿತಾ ಗುಪ್ತಾ ಅವರೊಂದಿಗೆ ಭಾರತೀಯ ಟೆಲಿವಿಷನ್ ನಲ್ಲಿ ಒಬೆಸೋಜೆನಿಕ್ ಮಾರುಕಟ್ಟೆ ತಂತ್ರಗಳ ಕುರಿತು ಚರ್ಚಿಸಿದರು. ಜಾಗತಿಕ ತಜ್ಞರು ಕ್ಯಾಥಿನ್ ಬ್ಯಾಕ್‌ ಹೋಲರ್, ಡೀಕಿನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿಶ್ವ ಬೊಜ್ಜು ಒಕ್ಕೂಟದ ನೀತಿ ನಿರ್ದೇಶಕ ಟಿಮ್ ಲೋಬ್‌ ಸ್ಟೈನ್ ಬೊಜ್ಜಿರುವ ಜನಸಂಖ್ಯೆ ಹೇಗೆ ಅನಾರೋಗ್ಯಕರ ಜನಸಂಖ್ಯೆಯಾಗುತ್ತಿದೆ ಎಂದು ವಿವರಿಸಿದರು ಮತ್ತು ಸ್ಥೂಲಕಾಯತೆಗೆ ಚಿಕಿತ್ಸೆ ನೀಡುವ ವೆಚ್ಚವು ಜಂಕ್ ಫುಡ್ ಮಾರುಕಟ್ಟೆಯ ಕಾರಣದಿಂದ ಬಂದಿದ್ದಾಗಿದೆ ಎಂಬುದನ್ನು ತಿಳಿಸಿದರು.

ಸಮಾವೇಶದಲ್ಲಿ, ಆಯುಷ್ ಮತ್ತು ಯುವ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಗಳು ಆರೋಗ್ಯಕರ ನಡವಳಿಕೆಯನ್ನು ಉತ್ತೇಜಿಸುವ ಬಗ್ಗೆ ತಮ್ಮ ಸಲಹೆಗಳನ್ನು ನೀಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಡವಳಿಕೆಯ ಬದಲಾವಣೆ ಮತ್ತು ಅನುಕೂಲಕರ ನೀತಿ ಭೂರಮೆಯನ್ನು ಪರಿಚಯಿಸುವ ಅಗತ್ಯವನ್ನು ಪ್ರತಿಧ್ವನಿಸಿತು. ಯುನಿಸೆಫ್ ದೇಶೀಯ ಪ್ರತಿನಿಧಿ, ಯಾಸ್ಮಿನ್ಹಾಕ್ ಕೂಡ ಇದನ್ನು ಅನುಮೋದಿಸಿದರು.

ದೈಹಿಕ ಚಟುವಟಿಕೆ, ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು ಪ್ರೋತ್ಸಾಹಿಸುವುದರೊಂದಿಗೆ ಉತ್ತಮ ಸಾಮೂಹಿಕ ಸಂವಹನಕ್ಕೆ, ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲರೂ ಒತ್ತು ನೀಡಿದರು,   ಸಮಸ್ಯೆಯನ್ನು ಆದ್ಯತೆಯ ಆಧಾರದ ಮೇಲೆ ಪರಿಹರಿಸುವ ಸರ್ವಾನುಮತದ ಅಗತ್ಯವನ್ನು ವ್ಯಕ್ತಪಡಿಸಿದರು. ಬೊಜ್ಜು ಮತ್ತು ಕಡಿಮೆ ತೂಕದ ಅವಳಿ ಸವಾಲನ್ನು ನಿಭಾಯಿಸುವಲ್ಲಿ ಪೂರ್ಣ ಸರ್ಕಾರ ಮತ್ತು ಸಂಪೂರ್ಣ ಸಮಾಜದ ವಿಧಾನದ ಅಗತ್ಯವನ್ನು ಒತ್ತಿಹೇಳಲಾಯಿತು. ಹಣಕಾಸಿನ ಕ್ರಮಗಳಿಗೆ ಸಂಬಂಧಿಸಿದ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವ ತುರ್ತು ಅಗತ್ಯ, ಪೊಟ್ಟಣದ ಮುಂಭಾಗದಲ್ಲಿ ಲೇಬಲ್  ಅನ್ನು ನಿಯಂತ್ರಿಸುವುದು, ಆರೋಗ್ಯಕರ ಆಹಾರಕ್ರಮವನ್ನು ಉತ್ತೇಜಿಸುವುದು, ದೈಹಿಕ ಚಟುವಟಿಕೆ ಮತ್ತು ಜೀವನಶೈಲಿನ ಆಯ್ಕೆಗಳು ಭವಿಷ್ಯದ ಚರ್ಚೆಗಳು ಮತ್ತು ಕಾರ್ಯಗಳಿಗೆ ಪ್ರಮುಖ ವಿಷಯಗಳಾಗಿ ಹೊರಹೊಮ್ಮಿದವು.

ಅಂತಿಮವಾಗಿ ನೀತಿ ಆಯೋಗದ ಸದಸ್ಯ (ಆರೋಗ್ಯ ಮತ್ತು ಪೌಷ್ಟಿಕತೆ) ಡಾ. ವಿ.ಕೆ. ಪಾಲ್ ಚಟುವಟಿಕೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಹದಿಹರೆಯದವರನ್ನು ಗುರಿಯಾಗಿಸಿಕೊಂಡು ಬಹು-ವಲಯದ ವಿಧಾನಕ್ಕೆ ಕರೆ ನೀಡಿದರು.

***



(Release ID: 1730321) Visitor Counter : 284