ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಕಿರಣ್‌ ರಿಜಿಜು ಅವರು `ಟೋಕಿಯೊ 2020’ಗೆ ಭಾರತೀಯ ಒಲಿಂಪಿಕ್ ತಂಡದ ಅಧಿಕೃತ ಆಶಯ ಗೀತೆಯನ್ನು ಲೋಕಾರ್ಪಣೆ ಮಾಡಿದರು


ರಸಪ್ರಶ್ನೆಗಳು, ಸೆಲ್ಫೀ ಪಾಯಿಂಟ್‌ಗಳು, ಸಂವಾದಗಳು ಮತ್ತು ಒಲಿಂಪಿಕ್ಸ್ ಕುರಿತ ಚರ್ಚೆಗಳಂತಹ ವಿವಿಧ ಚಟುವಟಿಕೆಗಳ ಮೂಲಕ ರಾಷ್ಟ್ರವ್ಯಾಪಿ #Cheer4India ಅಭಿಯಾನಕ್ಕೆ ಚಾಲನೆ ನೀಡಿದ ಕ್ರೀಡಾ ಸಚಿವಾಲಯ

Posted On: 24 JUN 2021 12:33PM by PIB Bengaluru

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಕಿರಣ್ರಿಜಿಜು ಅವರು ನವದೆಹಲಿಯಲ್ಲಿ ಒಲಿಂಪಿಕ್ ದಿನದ ಸಂದರ್ಭದಲ್ಲಿ, ʻಟೋಕಿಯೊ- 2020ʼ ಒಲಿಂಪಿಕ್ ಕ್ರೀಡಾಕೂಟದ ಭಾರತೀಯ ಒಲಿಂಪಿಕ್ ತಂಡದ ಅಧಿಕೃತ ʻಆಶಯ ಗೀತೆʼಗೆ ಚಾಲನೆ ನೀಡಿದರು. ಸಂದರ್ಭದಲ್ಲಿ ಭಾರತ ಸರಕಾರದ ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಶ್ರೀ ರವಿ ಮಿತ್ತಲ್, ಐಒಎ ಅಧ್ಯಕ್ಷ ಶ್ರೀ ನರೀಂದರ್ ಬಾತ್ರಾ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ರಾಜೀವ್ ಮೆಹ್ತಾ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಡಿಜಿ ಶ್ರೀ ಸಂದೀಪ್ಪ್ರಧಾನ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು ಗೀತೆಯನ್ನು ಜನಪ್ರಿಯ ಹಿನ್ನಲೆ ಗಾಯಕ ಮೋಹಿತ್ ಚೌಹಾಣ್ ಸಂಯೋಜಿಸಿ, ಹಾಡಿದ್ದಾರೆ. ಅವರ ಪತ್ನಿ ಶ್ರೀಮತಿ ಪ್ರತ್ನಾ ಗಹಿಲೋಟೆ ಅವರು ಗೀತೆಗೆ ಸಾಹಿತ್ಯ ರಚನೆ ಮಾಡಿದ್ದಾರೆ.

ಆಶಯ ಗೀತೆ ಲೋಕಾರ್ಪಣೆ ಮಾಡಿದ ಕೇಂದ್ರ ಕ್ರೀಡಾ ಸಚಿವ ಶ್ರೀ ಕಿರಣ್ರಿಜಿಜು ಅವರು, "ಟೋಕಿಯೊ ಒಲಿಂಪಿಕ್ಸ್ಗೆ ಹೋಗುವ ಭಾರತೀಯ ಕ್ರೀಡಾಪಟುಗಳನ್ನು ಬೆಂಬಲಿಸಲು ಮತ್ತು ಪ್ರೇರೇಪಿಸಲು ಇಡೀ ರಾಷ್ಟ್ರವು ಒಗ್ಗೂಡಬೇಕು ಎಂಬುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಾಗಿದೆ. ಇಂದು ಅಧಿಕೃತ ಆಶಯ ಗೀತೆಯ ಬಿಡುಗಡೆಯು ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಮೋಹಿತ್ ಚೌಹಾಣ್ ಸಂಯೋಜಿಸಿದ ಮತ್ತು ಹಾಡಿದ ಉತ್ಕಟ ಚೈತನ್ಯದ ಗೀತೆಯು ಪ್ರತಿಷ್ಠಿತ ವೇದಿಕೆಯಲ್ಲಿ ದೇಶಕ್ಕೆ ವೈಭವವನ್ನು ತರುವ ಪ್ರತಿಯೊಬ್ಬ ಕ್ರೀಡಾಪಟುವಿನ ಕನಸಿಗೂ ಉತ್ಸಾಹವನ್ನು ತುಂಬುತ್ತದೆ. ಕ್ರೀಡಾ ಸಚಿವಾಲಯವು ರಸಪ್ರಶ್ನೆಗಳು, ಸೆಲ್ಫೀ ಪಾಯಿಂಟ್ಗಳು, ಸಂವಾದಗಳು ಮತ್ತು ಒಲಿಂಪಿಕ್ಸ್ ಕುರಿತ ಚರ್ಚೆಗಳಂತಹ ವಿವಿಧ ಚಟುವಟಿಕೆಗಳ ಮೂಲಕ ರಾಷ್ಟ್ರವ್ಯಾಪಿ #Cheer4India ಅಭಿಯಾನವನ್ನು ಪ್ರಾರಂಭಿಸಿದೆ. ಭಾರತದ ಉನ್ನತ ಕ್ರೀಡಾಪಟುಗಳು ಭಾರತಕ್ಕೆ ಕೀರ್ತಿ ತರಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದು, ಅವರನ್ನು ಹುರಿದುಂಬಿಸಲು ಪ್ರತಿಯೊಬ್ಬ ಭಾರತೀಯರೂ ಮುಂದೆ ಬಂದು ಆಂದೋಲನದಲ್ಲಿ ಪಾಲ್ಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ", ಎಂದರು.

ಭಾರತೀಯ ಒಲಿಂಪಿಕ್ಸ್ಸಂಸ್ಥೆ (ಐಒಎ) ಅಧ್ಯಕ್ಷ ಡಾ. ನರೀಂದರ್ ಧ್ರುವ್ ಬಾತ್ರಾ ಅವರು ಮಾತನಾಡಿ, "ಆಶಯ ಗೀತೆಯು ಕೇವಲ ಸ್ಫೂರ್ತಿದಾಯಕ ಹಾಡು ಮಾತ್ರವಲ್ಲ ಎಂಬುದನ್ನು ಕ್ರೀಡಾಪಟುಗಳು ಅರಿತುಕೊಳ್ಳಬೇಕು. ಗೀತೆಯು ಕ್ರೀಡಾಪಟುಗಳ ಹಿಂದಿರುವ 1.4 ಶತಕೋಟಿ ಪ್ರಾರ್ಥನೆಗಳ ಪ್ರತಿಧ್ವನಿಯಾಗಿದೆ,ʼʼ ʼʼ ಎಂದರು. ನೀವು ನಿಮ್ಮ ಶ್ರೇಷ್ಠ ಪ್ರಯತ್ನಗಳನ್ನು ಮಾಡಿ, ನಮ್ಮ ರಾಷ್ಟ್ರಕ್ಕೆ ಕೀರ್ತಿ ತರುತ್ತೀರಿ ಎಂದು ನಾನು ಬಲವಾಗಿ ನಂಬುತ್ತೇನೆ,ʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಂದನಾರ್ಪಣೆ  ನುಡಿಗಳನ್ನಾಡಿದ ಐಒಎ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೀವ್ ಮೆಹ್ತಾ ಅವರು, "ಆಶಯ ಗೀತೆಯು ತುಂಬಾ ಸ್ಫೂರ್ತಿದಾಯಕವಾಗಿದೆ. ಇದು ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಲು ಅವರಲ್ಲಿ ಸಾಕಷ್ಟು ಉತ್ಸಾಹ ಮತ್ತು ಶಕ್ತಿಯನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ,ʼʼ ಎಂದರು. ಟೋಕಿಯೊ ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಲು ಸಜ್ಜಾಗಿರುವ ಭಾರತೀಯ ಕ್ರೀಡಾಪಟುಗಳಿಗಾಗಿ ರೋಮಾಂಚಕ ಆಶಯ ಗೀತೆ ಸಂಯೋಜಿಸಿದ್ದಕ್ಕಾಗಿ ಐಒಎ ಪರವಾಗಿ ಮೋಹಿತ್ ಚೌಹಾಣ್ ಅವರಿಗೆ ಧನ್ಯವಾದ ಅರ್ಪಿಸಿದರುಇಲ್ಲಿಯವರೆಗೆ 15 ವಿಭಾಗಗಳ ಕ್ರೀಡಾಪಟುಗಳು ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. ಮತ್ತಷ್ಟು ಆಟಗಾರರು ಅವರೊಂದಿಗೆ ಸೇರುತ್ತಾರೆಂದು ನಾನು ಆಶಿಸುತ್ತೇನೆ. ಪದಕಗಳ ಸಂಖ್ಯೆಯ ದೃಷ್ಟಿಯಿಂದ, ನಾವು ಭಾರಿ ನಿರೀಕ್ಷೆಯನ್ನು ಹೊಂದಿದ್ದೇವೆ,ʼʼ ಎಂದು ಹೇಳಿ ಶ್ರೀ ಮೆಹ್ತಾ ಮಾತು ಮುಗಿಸಿದರು.

ಟೋಕಿಯೋದ ಒಲಿಂಪಿಕ್ ಗ್ರಾಮದಲ್ಲಿ ಪ್ರತ್ಯೇಕವಾಗಿದ್ದಾಗ ಕ್ರೀಡಾಪಟುಗಳು ತಮ್ಮ ಮನಸ್ಸನ್ನು ಸದೃಢವಾಗಿರಿಸಿಕೊಳ್ಳಲು ಮತ್ತು ಉಲ್ಲಾಸದಿಂದ ಇರಿಸಲು ಐಒಎ ನೆರವಾಗುತ್ತಿದೆ. ಇದಕ್ಕಾಗಿ ಎಲ್ಲಾ ಕ್ರೀಡಾಪಟುಗಳು ಮತ್ತು ಭಾರತೀಯ ತಂಡದ ಪ್ರತಿಯೊಬ್ಬ ಸದಸ್ಯರಿಗೆ ಧರಿಸಬಹುದಾದ ಧ್ಯಾನ (ವೇರೆಬಲ್ಮೆಡಿಟೇಷನ್ಡಿವೈಸ್‌) ಸಾಧನಗಳನ್ನು ಒದಗಿಸಲು ಭಾರತೀಯ ಬ್ಯಾಡ್ಮಿಂಟನ್ ತಂಡದ ಮಾಜಿ ಆಟಗಾರ ಮತ್ತು ಭಾರತೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ರಾಷ್ಟ್ರೀಯ ತರಬೇತುದಾರ ಪುಲ್ಲೇಲಾ ಗೋಪಿಚಂದ್ ಮತ್ತು 'ಧ್ಯಾನ' ಕ್ರೀಡಾ ಸಂಸ್ಥೆಯೊಂದಿಗೆ ಐಒಎ ಸಹಭಾಗಿತ್ವಕ್ಕೆ ಮುಂದಾಗಿದೆ ಎಂದು ಶ್ರೀ ಮೆಹ್ತಾ ಘೋಷಿಸಿದರು.

***


(Release ID: 1730095) Visitor Counter : 332