ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಹೊಸಶೊಧಕ್ಕಾಗಿ ಪರಸ್ಪರ ಸಹಕಾರವನ್ನು ನೀಡಲು ಬ್ರಿಕ್ಸ್ ರಾಷ್ಟ್ರಗಳು ಒಪ್ಪಿಕೊಂಡಿವೆ
Posted On:
23 JUN 2021 4:34PM by PIB Bengaluru
11 ನೇ ಬ್ರಿಕ್ಸ್ ಎಸ್ & ಟಿ ಸ್ಟೀರಿಂಗ್ ಕಮಿಟಿ ಸಭೆಯಲ್ಲಿ ಹೊಸಶೊಧಕ್ಕಾಗಿ ಪರಸ್ಪರ ಸಹಕಾರಕ್ಕಾಗಿ ಬ್ರಿಕ್ಸ್ ರಾಷ್ಟ್ರಗಳು ಸರ್ವಾನುಮತದಿಂದ ಒಪ್ಪಿಕೊಂಡಿವೆ. ಕ್ರಿಯಾ ಯೋಜನೆಯನ್ನು ವಿಸ್ತಾರಗೊಳಿಸಲು ಭಾರತ ಮಂಡಿಸಿದ ಪ್ರಸ್ತಾವನೆಯನ್ನು ಬ್ರಿಕ್ಸ್ ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸ ಶೊಧನೆಯ ಉದ್ಯಮಶೀಲತೆ (ಎಸ್‌ಟಿಐಇಪಿ) ಕಾರ್ಯ ಸಮೂಹದಲ್ಲಿ ಪರಿಗಣಿಸಲಾಗುವುದು.
ಬ್ರಿಕ್ಸ್ ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸ ಶೋಧನೆಯ (ಎಸ್‌ಟಿಐ) ಚಟುವಟಿಕೆಗಳ ವೇಳಾಪಟ್ಟಿಯ ಅನುಷ್ಠಾನವನ್ನು ಪರಿಶೀಲಿಸಲು ಜೂನ್ 22, 2021 ರಂದು ಆಯೋಜಿಸಲಾದ ಸಭೆಯಲ್ಲಿ ಬ್ರಿಕ್ಸ್ ಇನ್ನೋವೇಶನ್ ಕೋಆಪರೇಶನ್ 2021-2024ರ ಪರಿಕಲ್ಪನೆಯ ಟಿಪ್ಪಣಿ ಮತ್ತು ಕ್ರಿಯಾ ಯೋಜನೆ ಕುರಿತು ಚರ್ಚಿಸಲಾಯಿತು. ಚರ್ಚೆಗಳಲ್ಲಿ ಬ್ರಿಕ್ಸ್ ಯುವ ವಿಜ್ಞಾನಿ ಖಾಸಗಿ ಸಭೆ, ಬ್ರಿಕ್ಸ್ ಹಿರಿಯ ಅಧಿಕೃತ ಸಭೆಗಳು ಮತ್ತು ಬ್ರಿಕ್ಸ್ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಸಭೆ; ಭಾರತದ ತಂತ್ರಜ್ಞಾನ ಶೃಂಗಸಭೆಯಲ್ಲಿ ಬ್ರಿಕ್ಸ್ ಪಾಲುದಾರಿಕೆ, ಮತ್ತು 2021 ರ ಪ್ರಸ್ತಾಪಗಳಿಗೆ ಕರೆ ನೀಡುವಿಕೆ ಬಗ್ಗೆ ವಿಚಾರಗಳು ಒಳಗೊಂಡಿದ್ದವು. ಇದರಲ್ಲಿ ಬ್ರಿಕ್ಸ್ ವೈಜ್ಞಾನಿಕ ಸಚಿವಾಲಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ)ಯು ಆಯೋಜಿಸಿದ್ದ ಈ ಸಭೆಯನ್ನು ಭಾರತದ ಕಡೆಯಿಂದ ಸಲಹೆಗಾರ ಮತ್ತು ಮುಖ್ಯ ಅಂತರರಾಷ್ಟ್ರೀಯ ಸಹಕಾರ ಮುಖ್ಯಸ್ಥರಾದ ಸಂಜೀವ್ ಕುಮಾರ್ ವರ್ಷನಿ ವಹಿಸಿದ್ದರು. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರವನ್ನು ಉತ್ತೇಜಿಸುವ ಇಲಾಖೆ (ಡಿಪಿಐಐಟಿ) ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ದ ಪ್ರತಿನಿಧಿಗಳು ಸಹ ಇದರಲ್ಲಿ ಭಾಗವಹಿಸಿದ್ದರು. ಸಚಿವರ ಮಟ್ಟದ ಸಭೆ ಮತ್ತು ಬ್ರಿಕ್ಸ್ ಶೃಂಗಸಭೆ ಸೇರಿದಂತೆ ವಲಯದ ಕಾರ್ಯಕ್ರಮಗಳ ಸರಣಿಯ ಭಾಗವಾಗಿ ಈ ಸಭೆಯನ್ನು ಆಯೋಜಿಸಲಾಗಿತ್ತು.
2021 ರ ಜನವರಿಯಿಂದ ಬ್ರಿಕ್ಸ್ ನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಭಾರತವು 2021 ಸೆಪ್ಟೆಂಬರ್ 13-16ರ ಅವಧಿಯಲ್ಲಿ ಬ್ರಿಕ್ಸ್ ಯಂಗ್ ಸೈಂಟಿಸ್ಟ್ ಕಾನ್ಕ್ಲೇವ್ ನ 6 ನೇ ಆವೃತ್ತಿಯನ್ನು ಆಯೋಜಿಸುತ್ತದೆ. ಭಾರತವು ಪ್ರಸ್ತಾಪಿಸಿದಂತೆ, ಸಭೆಯ ವಿಷಯಾಧಾರಿತ ಕ್ಷೇತ್ರಗಳು ಆರೋಗ್ಯ ರಕ್ಷಣೆಯನ್ನು ಒಳಗೊಂಡಿರುತ್ತವೆ; ಶಕ್ತಿ ಪರಿಹಾರ ಮತ್ತು; ಅಂತರಶಿಕ್ಷಣ ಸೈಬರ್ ಭೌತಿಕ ವ್ಯವಸ್ಥೆ. ಕಾನ್ಕ್ಲೇವ್ ಬಗ್ಗೆ ಪ್ರಕಟಣೆಯನ್ನು ಜುಲೈ ಮೊದಲ ವಾರದಲ್ಲಿ ಮಾಡಲಾಗುವುದು.
****
(Release ID: 1729799)
Visitor Counter : 244