ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ 29 ಕೋಟಿ ದಾಟಿದ ಕೋವಿಡ್- 19 ಲಸಿಕೆ


ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 50,848 ಹೊಸ ಪ್ರಕರಣಗಳು ದೃಢ

ಇಳಿಮುಖ ಪ್ರವೃತ್ತಿ ಮುಂದುವರಿಕೆ, ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 6,43,194 ಗೆ ಇಳಿಕೆ: 82 ದಿನಗಳಲ್ಲಿ ಅತಿ ಕಡಿಮೆ

ಸತತ 41 ನೇ ದಿನವೂ ಹೊಸ ಪ್ರಕರಣಗಳಿಗಿಂತ ಚೇತರಿಕೆ ಹೆಚ್ಚು

ಚೇತರಿಕೆ ದರ ಶೇ 96.56 ಕ್ಕೆ ಹೆಚ್ಚಳ

ದೈನಂದಿನ ಪಾಸಿಟಿವಿಟಿ ದರ ಶೇ 2.67 ರಲ್ಲಿ, ಸತತ 16 ನೇ ದಿನ ಶೇ 5 ಕ್ಕೂ ಕಡಿಮೆ ಪ್ರಕರಣ

Posted On: 23 JUN 2021 11:06AM by PIB Bengaluru

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಭಾರತದಲ್ಲಿ ಲಸಿಕೆ ಹಾಕಿರುವ ಪ್ರಮಾಣ ನಿನ್ನೆ 29 ಕೋಟಿ ದಾಟಿದೆ. ಇಂದು ಬೆಳಿಗ್ಗೆ 7 ಗಂಟೆಗೆ ದೊರೆತ ತಾತ್ಕಾಲಿಕ ಮಾಹಿತಿಯಂತೆ 39,49,630  ಅವಧಿಯಲ್ಲಿ 29,46,39,511 ಡೋಸ್ ಲಸಿಕೆಯನ್ನು ಜನತೆ ಪಡೆದಿದ್ದು, ಕಳೆದ 24 ಗಂಟೆಗಳಲ್ಲಿ 54,24,374 ಡೋಸ್ ಲಸಿಕೆ ಹಾಕಲಾಗಿದೆ.

ಇವುಗಳು ಒಳಗೊಂಡಂತೆ

 

ಎಚ್.ಸಿ.ಡಬ್ಲ್ಯೂಗಳು

ಮೊದಲ ಡೋಸ್

1,01,45,382

ಎರಡನೇ ಡೋಸ್

71,14,021

ಎಫ್.ಎಲ್.ಡಬ್ಲ್ಯೂಗಳು

 

1,72,70,889

ಎರಡನೇ ಡೋಸ್

91,37,511

18-44 ವಯೋಮಿತಿಯವರು

ಮೊದಲ ಡೋಸ್

6,59,41,855

ಎರಡನೇ ಡೋಸ್

14,28,117

45-59 ವಯೋಮಿತಿಯವರು

ಮೊದಲ ಡೋಸ್

8,28,91,130

ಎರಡನೇ ಡೋಸ್

1,31,57,562

60 ವರ್ಷ ಮೀರಿದವರು

ಮೊದಲ ಡೋಸ್

6,56,45,248

ಎರಡನೇ ಡೋಸ್

2,19,07,796

ಒಟ್ಟು

29,46,39,511

 

ಕೋವಿಡ್ – 19 ಲಸಿಕಾ ಅಭಿಯಾನದ ಹೊಸ ಸಾರ್ವತ್ರೀಕರಣದ ಹಂತ 2021 ರ ಜೂನ್ 21 ರಿಂದ ಆರಂಭಗೊಂಡಿದೆ. ದೇಶಾದ್ಯಂತ ಲಸಿಕಾ ಕಾರ್ಯಕ್ರಮದ ವೇಗ ಹೆಚ್ಚಿಸಲು ಮತ್ತು ಕೋವಿಡ್ – 19 ಲಸಿಕೆ ಅಭಿಯಾನದ ವ್ಯಾಪ್ತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 50,848 ಹೊಸ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಸತತ 16 ದಿನಗಳಿಂದ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 1 ಲಕ್ಷಕ್ಕೂ ಕಡಿಮೆ ಇದೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಸಹಭಾಗಿತ್ವದ ಫಲವಾಗಿ ಈ ಫಲಿತಾಂಶ ದಾಖಲಾಗಿದೆ.

https://static.pib.gov.in/WriteReadData/userfiles/image/image0016AIA.jpg

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 6,43,194 ರಷ್ಟಿದೆ. ಇದು 82 ದಿನಗಳಲ್ಲೇ ಅತಿ ಕಡಿಮೆ.

ಕಳೆದ 24 ಗಂಟೆಗಳಲ್ಲಿ 19,327 ರಷ್ಟು ಪ್ರಕರಣಗಳು ಇಳಿಕೆಯಾಗಿವೆ ಮತ್ತು ದೇಶದ ಒಟ್ಟಾರೆ ಸೋಂಕು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ 2.14 ರಷ್ಟಿದೆ.

https://static.pib.gov.in/WriteReadData/userfiles/image/image0020R17.jpg

 ಕೋವಿಡ್ – 19 ಸೋಂಕಿನಿಂದ ಹೆಚ್ಚು ಮಂದಿ ಚೇತರಿಸಿಕೊಳ್ಳುತ್ತಿದ್ದು, ಭಾರತದಲ್ಲಿ ಸತತ 41 ದಿನಗಳಿಂದ ಹೊಸ ಪ್ರಕರಣಗಳಿಗಿಂತ ದೈನಂದಿನ ಚೇತರಿಕೆ ಸಂಖ್ಯೆ ಹೆಚ್ಚಾಗುತ್ತಿದೆ. 24 ಗಂಟೆಗಳಲ್ಲಿ 68,817 ಮಂದಿ ಗುಣಮುಖರಾಗಿದ್ದಾರೆ. ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಸುಮಾರು 18,000(17,969) ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.

https://static.pib.gov.in/WriteReadData/userfiles/image/image003YGJZ.jpg

ಸಾಂಕ್ರಾಮಿಕ ಆರಂಭವಾದ ದಿನದಿಂದ ಈವರೆಗೆ ಒಟ್ಟು 2,89,94,855 ಮಂದಿ ಕೋವಿಡ್ – 19 ನಿಂದ ಚೇತರಿಸಿಕೊಂಡಿದ್ದಾರೆ ಮತ್ತು 24 ಗಂಟೆಗಳಲ್ಲಿ 68,817 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟಾರೆ ಚೇತರಿಕೆ ದರ ಶೇ 96.56 ರಷ್ಟಿದ್ದು, ಗುಣಮುಖರಾಗುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದೆ.

https://static.pib.gov.in/WriteReadData/userfiles/image/image004G02Z.jpg

ದೇಶಾದ್ಯಂತ ಇದೇ ಸಂದರ್ಭದಲ್ಲಿ ಸೋಂಕು ಪತ್ತೆ ಪರೀಕ್ಷೆಯ ಸಾಮರ್ಥ್ಯವನ್ನು ಸಹ ಹೆಚ್ಚಿಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 19,01,056 ಪರೀಕ್ಷೆಗಳನ್ನು ನಡೆಸಲಾಗಿದೆ. ಈ ವರೆಗೆ ದೇಶಾದ್ಯಂತ 39.59 ಕೋಟಿಗೂ  (39,59,73,198) ಹೆಚ್ಚು  ಸೋಂಕು ಪತ್ತೆ ಪರೀಕ್ಷೆಗಳನ್ನು ಮಾಡಲಾಗಿದೆ

https://static.pib.gov.in/WriteReadData/userfiles/image/image005HEAM.jpg

*****



(Release ID: 1729663) Visitor Counter : 244