ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ಮುಂಚೂಣಿ ಕಾರ್ಯಕರ್ತರಿಗಾಗಿ ತ್ವರಿತ ಕಾರ್ಯಕ್ರಮ (ಕ್ರ್ಯಾಷ್ ಕೋರ್ಸ್)  ಆರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 18 JUN 2021 1:39PM by PIB Bengaluru

ನಮಸ್ಕಾರ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಮಹೇಂದ್ರ ನಾಥ್ ಪಾಂಡೇ ಜೀ, ಆರ್.ಕೆ.ಸಿಂಗ್ ಜೀಎಲ್ಲಾ ಹಿರಿಯ ಸಚಿವರೇ, ಎಲ್ಲಾ ಯುವ ಸಹೋದ್ಯೋಗಿಗಳೇ, ವೃತ್ತಿಪರರೇ, ಮತ್ತು ಇತರ ಗಣ್ಯರೇ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸಹೋದರರೇ ಮತ್ತು ಸಹೋದರಿಯರೇ.

ಕೊರೊನಾ ವಿರುದ್ಧ ಬಲು ದೊಡ್ಡ ಸಮರದಲ್ಲಿ ಇಂದು ಪ್ರಮುಖ ಆಂದೋಲನದ ಮುಂದಿನ ಹಂತ ಆರಂಭವಾಗುತ್ತಿದೆ. ಕೊರೊನಾ ಮೊದಲ ಅಲೆಯಲ್ಲಿ ಸಾವಿರಾರು ವೃತ್ತಿಪರರು ದೇಶದಲ್ಲಿ ಕೌಶಲ್ಯ ಅಭಿವೃದ್ಧಿಯ ಆಂದೋಲನಕ್ಕೆ ಸೇರ್ಪಡೆಗೊಂಡಿದ್ದರು. ಇದು ಕೊರೊನಾ ವಿರುದ್ಧ ದೇಶ ನಡೆಸುತ್ತಿದ್ದ ಹೋರಾಟಕ್ಕೆ ಶಕ್ತಿ ನೀಡಿತು. ಈಗ ಕೊರೊನಾ ಎರಡನೇ ಅಲೆಯ ಬಳಿಕ ಗಳಿಸಿಕೊಂಡ ಅನುಭವ ಇಂದಿನ ಕಾರ್ಯಕ್ರಮಕ್ಕೆ ಪ್ರಮುಖ ಆಧಾರ. ಕೊರೊನಾ ಎರಡನೇ ಅಲೆಯಲ್ಲಿ ನಾವು ರೂಪಾಂತರದ ಸವಾಲುಗಳನ್ನು ಎದುರಿಸಿದೆವು. ಕೊರೊನಾವೈರಸ್ ಪದೇ ಪದೇ ರೂಪಾಂತರಗೊಳ್ಳುತ್ತಿತ್ತು. ವೈರಸ್ ಈಗಲೂ ನಮ್ಮ ನಡುವೆ ಇದೆ ಮತ್ತು ಅದು ರೂಪಾಂತರಗೊಳ್ಳುತ್ತಿರುವ ಸಾಧ್ಯತೆಗಳಿವೆ. ಆದುದರಿಂದ ಚಿಕಿತ್ಸೆಯ ಜೊತೆ ಮುಂಜಾಗರೂಕತೆ ಕೂಡಾ ಅವಶ್ಯ. ನಾವು ಮುಂದಿರುವ ಸವಾಲುಗಳನ್ನು ಎದುರಿಸಲು ದೇಶದ ಸಿದ್ಧತಾ ಸ್ಥಿತಿಯನ್ನು ಹೆಚ್ಚಿಸುವುದು ಅವಶ್ಯ. ಗುರಿಯೊಂದಿಗೆ ಒಂದು ಲಕ್ಷ ಮುಂಚೂಣಿ ಕೊರೊನಾ ವಾರಿಯರ್ ಗಳನ್ನು ತಯಾರು ಮಾಡುವ ಬೃಹತ್ ಆಂದೋಲನ ದೇಶದಲ್ಲಿ ಇಂದಿನಿಂದ  ಆರಂಭಗೊಳ್ಳುತ್ತಿದೆ.

ಸ್ನೇಹಿತರೇ,

ಜಾಗತಿಕ ಸಾಂಕ್ರಾಮಿಕವು ಪ್ರತೀ ದೇಶದ, ಸಂಸ್ಥೆಗಳ, ಸಮಾಜದ, ಕುಟುಂಬದ, ಮತ್ತು ಪ್ರತೀ ಮಾನವ ಜೀವಿಯ ಮಿತಿ ಮತ್ತು ಸಾಮರ್ಥ್ಯವನ್ನು ಪದೇ ಪದೇ ಪರೀಕ್ಷೆ ಮಾಡಿದೆ. ಇದೇ ಸಮಯದಲ್ಲಿ ಜಾಗತಿಕ ಸಾಂಕ್ರಾಮಿಕ ನಮ್ಮ ಸಾಮರ್ಥ್ಯಗಳನ್ನು ವಿಜ್ಞಾನವಾಗಿ , ಸರ್ಕಾರವಾಗಿ, ಸಮಾಜವಾಗಿ, ಸಾಂಸ್ಥಿಕವಾಗಿ, ಮತ್ತು ವ್ಯಕ್ತಿಗತವಾಗಿ ವಿಸ್ತರಿಸಲು ಅನುವು ಮಾಡಿಕೊಟ್ಟಿದೆ. ಭಾರತದಲ್ಲಿ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಪಿ.ಪಿ.. ಕಿಟ್ ಗಳಿಂದ ಹಿಡಿದು ಪರೀಕ್ಷಾ ಮೂಲಸೌಕರ್ಯ, ವೈದ್ಯಕೀಯ ಮೂಲಸೌಕರ್ಯ ಮತ್ತು ಚಿಕಿತ್ಸಾ ಸವಲತ್ತುಗಳನ್ನು ಒಳಗೊಂಡ ಬೃಹತ್ ಜಾಲವನ್ನು ನಿರ್ಮಾಣ ಮಾಡಲಾಗಿದೆ. ಮತ್ತು ಅದು ಈಗಲೂ ಮುಂದುವರಿದಿದೆ. ದೇಶದ ಬಹಳ ದೂರದಲ್ಲಿ, ದುರ್ಗಮ ಪ್ರದೇಶಗಳಲ್ಲಿ ಇರುವ ಆಸ್ಪತ್ರೆಗಳಿಗೆ ತ್ವರಿತಗತಿಯಲ್ಲಿ ವೆಂಟಿಲೇಟರುಗಳನ್ನು ಮತ್ತು ಆಮ್ಲಜನಕ ಕಾನ್ಸಂಟ್ರೇಟರುಗಳನ್ನು ಸರಬರಾಜು ಮಾಡುವ ಪ್ರಯತ್ನಗಳು ಜಾರಿಯಲ್ಲಿವೆ. 1,500 ಆಮ್ಲಜನಕ ಸ್ಥಾವರಗಳನ್ನು ಯುದ್ಧೋಪಾದಿಯಲ್ಲಿ ನಿರ್ಮಾಣ ಮಾಡಲಾಗಿದೆ. ಮತ್ತು ಭಾರತದ ಪ್ರತೀ ಜಿಲ್ಲೆಗಳಲ್ಲಿಯೂ ಇವುಗಳು ಇರುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ಆಗುತ್ತಿವೆ. ಬೃಹತ್ ಪ್ರಮಾಣದಲ್ಲಿ ಕೌಶಲಯುಕ್ತ ಮಾನವ ಸಂಪನ್ಮೂಲವನ್ನು ಇದಕ್ಕಾಗಿ ಹೊಂದುವುದು ಬಹಳ ಮುಖ್ಯ ಮತ್ತು ಪ್ರಯತ್ನಕ್ಕೆ ಪೂರಕವಾಗಿ ಹೊಸ ಜನರನ್ನು ಇದಕ್ಕೆ ಸೇರ್ಪಡೆ ಮಾಡುವುದೂ ಮುಖ್ಯ. ನಿಟ್ಟಿನಲ್ಲಿ ಗುರಿಯನ್ನು ನಿಗದಿ ಮಾಡಲಾಗಿದ್ದು, ದೇಶದಲ್ಲಿ ಸುಮಾರು 1 ಲಕ್ಷ ಯುವಜನರನ್ನು ಕೊರೊನಾ ವಿರುದ್ಧದ ಈಗಿನ ಯುದ್ಧದಲ್ಲಿ ಹಾಲಿ ಇರುವ ಮಾನವ ಸಂಪನ್ಮೂಲವನ್ನು ಬೆಂಬಲಿಸಲು ಅನುಕೂಲವಾಗುವಂತೆ ತರಬೇತಿಗೊಳಿಸಲು ನಿರ್ಧರಿಸಲಾಗಿದೆ. ಕೋರ್ಸ್ ಎರಡು-ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಮತ್ತು ಜನರು ತಕ್ಷಣವೇ ಕೆಲಸಕ್ಕೆ ಒದಗಿ ಬರುತ್ತಾರೆ. ತರಬೇತಿ ಪಡೆದ ಸಹಾಯಕರಾಗಿ ಅವರು ಈಗಿನ ವ್ಯವಸ್ಥೆಗೆ ಬಹಳ ಬೆಂಬಲವನ್ನು ಕೊಡುತ್ತಾರೆ ಮತ್ತು ಹೊರೆಯನ್ನು ಕಡಿಮೆ ಮಾಡುತ್ತಾರೆ. ದೇಶದ ಪ್ರತೀ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬೇಡಿಕೆ ಆಧರಿಸಿ ದೇಶದ ಉನ್ನತ ತಜ್ಞರು ಕ್ರ್ಯಾಶ್ ಕೋರ್ಸ್ ನ್ನು ವಿನ್ಯಾಸ ಮಾಡಿದ್ದಾರೆ. ಇಂದು ಆರು ಹೊಸ ಕೋರ್ಸ್ ಗಳನ್ನು ಆರಂಭ ಮಾಡಲಾಗುತ್ತಿದೆ. ಯುವಜನತೆಯನ್ನು ನರ್ಸಿಂಗ್, ಮನೆ ಶುಶ್ರೂಷೆ, ಸಂಕೀರ್ಣ ಚಿಕಿತ್ಸೆಯಲ್ಲಿ ನೆರವು, ಮಾದರಿ ಸಂಗ್ರಹ, ವೈದ್ಯಕೀಯ ಟೆಕ್ನಿಶಿಯನ್ , ಹೊಸ ಸಲಕರಣೆಗಳ ನಿರ್ವಹಣೆ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡಿ ಅವರನ್ನು ತಯಾರು ಮಾಡಲಾಗುತ್ತದೆ. ಹೊಸ ಯುವಜನತೆ ಕೌಶಲಯುಕ್ತರಾಗಿರುತ್ತಾರೆ ಮತ್ತು ಮಾದರಿಯ ಕೆಲಸದಲ್ಲಿ ಈಗಾಗಲೇ ತರಬೇತಿ ಪಡೆದವರು ಇನ್ನಷ್ಟು ಕುಶಲಿಗಳಾಗುತ್ತಾರೆ. ಆಂದೋಲನದೊಂದಿಗೆ ಕೋವಿಡ್ ವಿರುದ್ಧ ಹೋರಾಡುತ್ತಿರುವ ನಮ್ಮ ಆರೋಗ್ಯ ವಲಯದ ಮುಂಚೂಣಿ ಕಾರ್ಯಕರ್ತರ ಪಡೆಗೆ ಹೆಚ್ಚಿನ ಬಲ ಬರಲಿದೆ ಮತ್ತು ಅದು ನಮ್ಮ ಯುವಜನತೆಗೆ ಉದ್ಯೋಗದ ಅವಕಾಶಗಳನ್ನು ತೆರೆಯಲಿದೆ.

ಸ್ನೇಹಿತರೇ,

ಕೌಶಲ ಮರು ಕೌಶಲದ ಅಗತ್ಯ ಮತ್ತು ಕೌಶಲದ ಉನ್ನತೀಕರಣ  ಎಂಬ ಮಂತ್ರದ ಮಹತ್ವ ಕೊರೊನಾ ಅವಧಿಯಲ್ಲಿ ಸಾಬೀತಾಗಿದೆ. ಆರೋಗ್ಯ ವಲಯದ ಜನರು ಈಗಾಗಲೇ ಕೌಶಲಗಳನ್ನು ಗಳಿಸಿಕೊಂಡಿದ್ದಾರೆ, ಅವರು ಕೊರೊನಾ ನಿಭಾಯಿಸುವ ಬಗ್ಗೆ ಬಹಳಷ್ಟು ಕಲಿತುಕೊಂಡಿದ್ದಾರೆ. ರೀತಿಯಲ್ಲಿ ಅವರು ತಮ್ಮನ್ನು ತಾವೇ ಕೌಶಲಕ್ಕೆ ಒಡ್ಡಿಕೊಂಡಿದ್ದಾರೆ. ಮತ್ತು ಕೌಶಲ್ಯಗಳನ್ನು ವಿಸ್ತರಿಸಿಕೊಂಡಿದ್ದಾರೆ. ಈಗಾಗಲೇ ಹೊಂದಿರುವ ಕೌಶಲಗಳ ವಿಸ್ತರಣೆ ಅಥವಾ ಬದಲಾದ ಪರಿಸ್ಥಿತೆಗಳಿಗೆ ಸಂಬಂಧಿಸಿ ಅವುಗಳ ಮೌಲ್ಯವರ್ಧನೆ ಸಂದರ್ಭದ ಆವಶ್ಯಕತೆಯಾಗಿದೆ. ಜೀವನದ ಪ್ರತಿಯೊಂದು ರಂಗದಲ್ಲಿಯೂ ತಂತ್ರಜ್ಞಾನ ಪ್ರವೇಶಿಸುವ ವೇಗ ನೋಡಿದರೆ ಕೌಶಲಗಳನ್ನು ಮೇಲ್ದರ್ಜೆಗೆ ಏರಿಸುವ ಚಲನಶೀಲ ವ್ಯವಸ್ಥೆ ಕಡ್ಡಾಯವಾಗಿದೆ. ಕೌಶಲಗಳ ಮಹತ್ವವನ್ನು ಮನಗಂಡು, ಮರು ಕೌಶಲದ ಅಗತ್ಯ ಹಾಗು ಕೌಶಲಗಳ ಮೇಲ್ದರ್ಜೆಗೇರಿಸುವಿಕೆಯನ್ನು ಮನಗಂಡು, ಸ್ಕಿಲ್ ಇಂಡಿಯಾ ಆಂದೋಲನವನ್ನು ದೇಶದಲ್ಲಿ ಹಮ್ಮಿಕೊಳ್ಳಲಾಯಿತು. ಇದೇ ಮೊದಲ ಬಾರಿಗೆ ದೇಶಾದ್ಯಂತ ಪ್ರಧಾನ ಮಂತ್ರಿ ಕೌಶಲಾಭಿವೃದ್ಧಿ ಕೇಂದ್ರಗಳನ್ನು ತೆರೆಯಲು, ..ಟಿ.ಗಳ ಸಂಖ್ಯೆಯನ್ನು ಹೆಚ್ಚಿಸಲು, ಲಕ್ಷಾಂತರ ಸೀಟುಗಳನ್ನು ಹೆಚ್ಚಿಸಲು ಕೌಶಲಾಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯವನ್ನು ರೂಪಿಸುವ ಪ್ರಯತ್ನಗಳನ್ನು ಮಾಡಲಾಯಿತು. ಇಂದು ಸ್ಕಿಲ್ ಇಂಡಿಯಾ ಆಂದೋಲನ  ಈಗಿನ ಆವಶ್ಯಕತೆಗಳಿಗೆ ಸಂಬಂಧಿಸಿದಂತೆ ಪ್ರತೀ ವರ್ಷ ಮಿಲಿಯಾಂತರ ಯುವಕರಿಗೆ ತರಬೇತಿ ನೀಡುತ್ತಿದೆ. ಆದರೆ ಅದು ಬಹಳ ಚರ್ಚೆಯಾಗುತ್ತಿಲ್ಲ. ಕೌಶಲ್ಯ ಅಭಿವೃದ್ಧಿಯ ಆಂದೋಲನ ಕೊರೊನಾ ಅವಧಿಯಲ್ಲಿ ದೇಶಕ್ಕೆ ಬಹಳ ದೊಡ್ಡ ಬಲವನ್ನು ನೀಡಿದೆ. ನಾವು ಕಳೆದ ವರ್ಷದಿಂದ ಕೊರೊನಾ ಸವಾಲನ್ನು ಎದುರಿಸಲಾರಂಭಿಸಿದಂದಿನಿಂದ ಕೌಶಲಾಭಿವೃದ್ಧಿ ಸಚಿವಾಲಯ ದೇಶಾದ್ಯಂತ ಲಕ್ಷಾಂತರ ಆರೋಗ್ಯ ಕಾರ್ಯಕರ್ತರನ್ನು ತರಬೇತಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಚಿವಾಲಯವನ್ನು ರೂಪಿಸಿದ ಸಂದರ್ಭದಲ್ಲಿ ಇದ್ದ ಸ್ಫೂರ್ತಿ; ಬೇಡಿಕೆ ಆಧಾರಿತ ಕೌಶಲ್ಯಗಳನ್ನು ರೂಪಿಸುವುದಾಗಿತ್ತು, ಅದು ಈಗ ಇನ್ನಷ್ಟು ಬಲಿಷ್ಠ ವಾಗಿದೆ.

ಸ್ನೇಹಿತರೇ,

ನಮ್ಮ ಜನಸಂಖ್ಯೆಗೆ ಹೋಲಿಸಿದರೆ ಆರೋಗ್ಯ ವಲಯದಲ್ಲಿ ತೊಡಗಿಕೊಂಡಿರುವ ವೈದ್ಯರು, ದಾದಿಯರು, ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ವಿಶೇಷ ಸೇವೆಯನ್ನು ನಿರಂತರವಾಗಿ ವಿಸ್ತರಿಸಿಕೊಂಡು ಹೋಗುವ ಅಗತ್ಯ ಬಹಳವಿದೆ. ಇದನ್ನೂ ಆದ್ಯತಾ ಧೋರಣೆಯಡಿ ಮಾಡುತ್ತಲೇ ಬರಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಹೊಸ ...ಎಂ.ಎಸ್., ವೈದ್ಯಕೀಯ ಕಾಲೇಜು, ಮತ್ತು ನರ್ಸಿಂಗ್ ಕಾಲೇಜುಗಳಿಗೆ ಒತ್ತು ನೀಡಲಾಗಿದೆ. ಇವುಗಳಲ್ಲಿ ಹೆಚ್ಚಿನವುಗಳು ಕಾರ್ಯಾರಂಭ ಮಾಡಿವೆ. ಅದೇ ರೀತಿ ವೈದ್ಯಕೀಯ ಶಿಕ್ಷಣದಲ್ಲಿ ಮತ್ತು ಸಂಬಂಧಿತ ಸಂಸ್ಥೆಗಳಲ್ಲಿ ಸುಧಾರಣೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಇಂದು ಆರೋಗ್ಯ ವೃತ್ತಿಪರರನ್ನು ತಯಾರು ಮಾಡುತ್ತಿರುವ ವೇಗ ಅಭೂತಪೂರ್ವವಾದುದು.

ಸ್ನೇಹಿತರೇ,

ನಾನು ಇಂದಿನ ಕಾರ್ಯಕ್ರಮದಲ್ಲಿ ಆರೋಗ್ಯ ವಲಯದ ಬಹಳ ಬಲಿಷ್ಠ ಸ್ಥಂಭವೊಂದರ ಬಗ್ಗೆ ಚರ್ಚಿಸಲು ಬಯಸುತ್ತೇನೆ. ನಮ್ಮ ಕಾಮ್ರೆಡ್ ಗಳು ಆಗಾಗ ಚರ್ಚೆಯಿಂದ ಕೈಬಿಡಲ್ಪಡುತ್ತಾರೆ. ಸಹೋದ್ಯೋಗಿಗಳೆಂದರೆ ಹಳ್ಳಿಗಳಲ್ಲಿ ನಿಯೋಜಿಸಲ್ಪಟ್ಟಿರುವ  ನಮ್ಮ ಆಶಾ, .ಎನ್.ಎಂ., ಅಂಗನವಾಡಿ, ಮತ್ತು‍ ಔಷಧಾಲಯಗಳಲ್ಲಿ ನಿಯೋಜಿಸಲ್ಪಟ್ಟಿರುವ ಆರೋಗ್ಯ ಕಾರ್ಯಕರ್ತರು. ಇವರು ಸೋಂಕು ತಡೆಯಿಂದ ಹಿಡಿದು ಜಗತ್ತಿನಲ್ಲೇ ಅತಿ ದೊಡ್ಡ ಲಸಿಕಾ ಕಾರ್ಯಕ್ರಮದವರೆಗೆ ಬಹಳ ಮುಖ್ಯವಾದ ಪಾತ್ರವನ್ನು ನಿಭಾಯಿಸುತ್ತಾರೆ. ಹವಾಮಾನ ಎಷ್ಟೇ ಪ್ರತಿಕೂಲವಾಗಿರಲಿ ಅಥವಾ ಕ್ಲಿಷ್ಟವಾದ ಭೌಗೋಳಿಕ ಪರಿಸ್ಥಿತಿ ಇರಲಿ ಕಾಮ್ರೆಡ್ ಗಳು ದೇಶದ ಪ್ರತಿಯೊಬ್ಬ ನಾಗರಿಕರ ಸುರಕ್ಷೆಗಾಗಿ ರಾತ್ರಿ ಹಗಲು ಕೆಲಸ ಮಾಡುತ್ತಿರುತ್ತಾರೆ. ಕಾಮ್ರೆಡ್ ಗಳು ಗ್ರಾಮಗಳಲ್ಲಿ ಸೋಂಕು ಹರಡದಂತೆ ತಡೆಯುವಲ್ಲಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸಿದ್ದಾರೆ ಮತ್ತು ಗ್ರಾಮೀಣ ದುರ್ಗಮ, ಬುಡಕಟ್ಟು ಪ್ರದೇಶಗಳು, ಗಿರಿ ಪ್ರದೇಶಗಳಲ್ಲಿ ಲಸಿಕಾ ಕಾರ್ಯಕ್ರಮ ಸಾಂಗವಾಗಿಸುವಲ್ಲಿಯೂ ಶ್ರಮಿಸಿದ್ದಾರೆ. ಜೂನ್ 21 ರಿಂದ ದೇಶದಲ್ಲಿ ನಡೆಯುತ್ತಿರುವ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲಾ ಕಾಮ್ರೆಡ್ ಗಳು ಬಲ ಮತ್ತ್ತು ಶಕ್ತಿ ತುಂಬುತ್ತಿದ್ದಾರೆ. ನಾನಿಂದು ಅವರನ್ನು ಸಾರ್ವಜನಿಕವಾಗಿ ಶ್ಲಾಘಿಸುತ್ತೇನೆ.

ಸ್ನೇಹಿತರೇ,

ಜೂನ್ 21 ರಿಂದ ಆರಂಭಗೊಂಡ ಲಸಿಕಾ ಆಂದೋಲನಕ್ಕೆ ಸಂಬಂಧಿಸಿ ಹಲವಾರು ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಾಗಿದೆ. ಈಗ 18 ವರ್ಷಕ್ಕಿಂತ ಮೇಲ್ಪಟ್ಟ ಸಹೋದ್ಯೋಗಿಗಳು ಇದುವರೆಗೆ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದೊರೆಯುತ್ತಿದ್ದಂತಹ ಸೌಲಭ್ಯಗಳನ್ನು ಪಡೆಯುತ್ತಾರೆ. ಕೇಂದ್ರ ಸರಕಾರವು ದೇಶದ ಪ್ರತಿಯೊಬ್ಬ ನಾಗರಿಕರಿಗೂಉಚಿತಲಸಿಕೆ ಒದಗಿಸಲು ಕಟಿ ಬದ್ಧವಾಗಿದೆ. ನಾವು ಕೊರೊನಾ ಶಿಷ್ಟಾಚಾರದ ಬಗ್ಗೆಯೂ ಪೂರ್ಣ ಕಾಳಜಿಯ ಬಿಡಬೇಕು. ಮುಖಗವಸು ಮತ್ತು ಎರಡು ಯಾರ್ಡ್ ದೂರ ಬಹಳ ಮುಖ್ಯ. ಕೊನೆಯದಾಗಿ ನಾನು   ತರಬೇತಿ ಕೋರ್ಸ್ ಕೈಗೊಳ್ಳುತ್ತಿರುವ ಎಲ್ಲರಿಗೂ ಶುಭ ಹಾರೈಸುತ್ತೇನೆ. ದೇಶವಾಸಿಗಳ ಜೀವವನ್ನು ರಕ್ಷಿಸುವಲ್ಲಿ ಹೊಸ ಕೌಶಲಗಳು ಬಹಳ ದೊಡ್ಡ ಸಹಾಯ ಮಾಡುತ್ತವೆ ಎಂದು ನಂಬಿದ್ದೇನೆಮತ್ತು ನಿಮ್ಮ ಮೊದಲ ಕೆಲಸ ಮಾನವ ಜೀವಗಳನ್ನು ಉಳಿಸುವುದಕ್ಕೆ ಸಂಬಂಧಿಸಿದುದಾದುದರಿಂದ  ಅದು ನಿಮಗೆ ಬಹಳಷ್ಟು ತೃಪ್ತಿ ನೀಡುತ್ತದೆ. ನಮ್ಮ ವೈದ್ಯರು, ದಾದಿಯರು, ಕಳೆದ ಒಂದೂವರೆ ವರ್ಷದಿಂದ ರಾತ್ರಿ ಹಗಲು ದುಡಿಯುತ್ತಿದ್ದಾರೆ, ಅವರು ಹೆಚ್ಚಿನ ಹೊರೆ ಹೊತ್ತಿದ್ದಾರೆ. ನೀವು ಕೆಲಸಕ್ಕೆ ಸೇರಿದಾಗ ಅವರ ಹೊರೆ ಇಳಿಯುತ್ತದೆ. ಅವರಿಗೆ ಹೊಸ ಶಕ್ತಿ ದೊರೆಯುತ್ತದೆ. ತರಬೇತಿಯು ನಿಮಗೆ ಜೀವನದಲ್ಲಿ ಆಯಾಚಿತವಾಗಿ ಬಂದಿರುವ ಹೊಸ ಅವಕಾಶ. ನೀವು ಸಾರ್ವಜನಿಕ ಕಲ್ಯಾಣಕ್ಕಾಗಿ ಮಾನವತೆಗೆ ಸೇವೆ ಸಲ್ಲಿಸಲು ವಿಶೇಷ ಅವಕಾಶವನ್ನು ಪಡೆಯುತ್ತಿದ್ದೀರಿ. ಮುಖ್ಯ ಕಾರ್ಯದಲ್ಲಿ ಮತ್ತು ಮಾನವ ಸೇವಾ ಕಾರ್ಯದಲ್ಲಿ ತೊಡಗಿರುವ ನಿಮಗೆ ದೇವರು ಬಹಳಷ್ಟು ಶಕ್ತಿ ಕೊಡಲಿ.ನೀವು ತರಬೇತಿ ಕೋರ್ಸ್ ಪ್ರತಿಯೊಂದು ವಿವರವನ್ನು ಆದಷ್ಟು ಬೇಗ ಕಲಿಯುವಂತಾಗಲಿ. ನಿಮ್ಮನ್ನು ನೀವು ಉತ್ತಮ ಮಾನವನನ್ನಾಗಿಸಲು ಪ್ರಯತ್ನ ಮಾಡಿರಿ. ನಿಮ್ಮ ಕೌಶಲ್ಯಗಳು ಪ್ರತಿಯೊಬ್ಬರ ಜೀವವನ್ನು ಉಳಿಸಲು ಬಳಕೆಯಾಗಲಿ. ಇದಕ್ಕಾಗಿ ನಾನು ನಿಮಗೆ ಒಳಿತನ್ನು ಹಾರೈಸುತ್ತೇನೆ

ಬಹಳ ಬಹಳ ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***


(Release ID: 1729325) Visitor Counter : 293