ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಇಂದಿನ ಪರಿಷ್ಕೃತ ವರದಿ
Posted On:
22 JUN 2021 9:15AM by PIB Bengaluru
ಭಾರತ ಸರ್ಕಾರ ದೇಶವ್ಯಾಪಿ ಹಮ್ಮಿಕೊಂಡಿರುವ ಬೃಹತ್ ಕೋವಿಡ್-19 ಲಸಿಕಾ ಆಂದೋಲನದಲ್ಲಿ ನಿನ್ನೆ ಒಂದೇ ದಿನ 86.16 ಲಕ್ಷ ಲಸಿಕೆ ಡೋಸ್|ಗಳನ್ನು ಹಾಕುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇಡೀ ವಿಶ್ವದಲ್ಲೇ ಭಾರತ ಒಂದೇ ದಿನ ಗರಿಷ್ಠ ಲಸಿಕೆ ಡೋಸ್|ಗಳನ್ನು ಹಾಕಿದ ಸಾಧನೆ ಮಾಡಿದೆ.
ದೇಶಾದ್ಯಂತ ಇಲ್ಲಿಯ ತನಕ 28.87 ಕೋಟಿ ಲಸಿಕೆ ಡೋಸ್|ಗಳನ್ನು ಹಾಕಲಾಗಿದೆ.
ಭಾರತದಲ್ಲಿ ನಿನ್ನೆ ಒಂದೇ ದಿನ ದೇಶಾದ್ಯಂತ 42,640 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಹೊಸ ಪ್ರಕರಣಗಳ ಪ್ರಮಾಣ 91 ದಿನಗಳಲ್ಲಿ 50 ಸಾವಿರ ಮಟ್ಟದಿಂದ ಕೆಳಗಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 6,62,521ಕ್ಕೆ ಇಳಿಕೆ ಕಂಡಿದ್ದು, 79 ದಿನಗಳ ನಂತರ ಅದು 7 ಲಕ್ಷ ಮಟ್ಟದಿಂದ ಕೆಳಗಿದೆ.
ದೇಶದಲ್ಲಿ ಇಲ್ಲಿಯ ತನಕ 2,89,26,038 ಜನರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಕಳೆದ 24 ತಾಸುಗಳಲ್ಲಿ 81,839 ಸೋಂಕಿತರು ಚೇತರಿಸಿಕೊಂಡಿದ್ದಾರೆ.
ಸತತ 40 ದಿನಗಳಿಂದ ದೈನಂದಿನ ಚೇತರಿಕೆ ಪ್ರಕರಣಗಳ ಸಂಖ್ಯೆಯು ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಪ್ರಕರಣಗಳನ್ನು ಹಿಂದಿಕ್ಕುತ್ತಿದೆ.
ಚೇತರಿಕೆ ದರ ಇದೀಗ 96.49%ಗೆ ಸುಧಾರಣೆ ಕಂಡಿದೆ.
ವಾರದ ಪಾಸಿಟಿವಿಟಿ ದರ 5% ಮಟ್ಟದ ಒಳಗೆ ಕಾಯ್ದುಕೊಂಡಿದ್ದು, ಅದೀಗ 3.21%ಗೆ ತಗ್ಗಿದೆ.
ಸತತ 15 ದಿನಗಳಿಂದ ದೈನಂದಿನ ಪಾಸಿಟಿವಿಟಿ ದರವೂ 5% ಮಟ್ಟದ ಕೆಳಗಿದ್ದು, 2.56%ಗೆ ತಗ್ಗಿದೆ.
ಗಂಟಲು ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ದೇಶಾದ್ಯಂತ ಇದುವರೆಗೆ 39.40 ಕೋಟಿ ಜನರಿಗೆ ಪರೀಕ್ಷೆ ನಡೆಸಲಾಗಿದೆ.
***
(Release ID: 1729320)
Visitor Counter : 253
Read this release in:
Tamil
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Telugu
,
Malayalam