ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

​​​​​​​ಭಾರತದಲ್ಲಿ 28 ಕೋಟಿ ಹೆಗ್ಗುರುತು ದಾಟಿದ ಕೋವಿಡ್-19 ಲಸಿಕೆ


ತಗ್ಗುವ ಹಾದಿಯಲ್ಲಿ ಭಾರತದ ಸಕ್ರಿಯ ಸೋಂಕು: 7,02,887 ಪ್ರಕರಣಗಳಿಗೆ ಇಳಿಕೆ

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 53,256 ಪ್ರಕರಣಗಳು ಪತ್ತೆ: 88 ದಿನಗಳಲ್ಲೇ ಅತಿ ಕಡಿಮೆ

ಸತತ 39 ನೇ ದಿನವೂ ಹೊಸ ಪ್ರಕರಣಗಳಿಗಿಂತ ದೈನಂದಿನ ಚೇತರಿಕೆ ಸಂಖ್ಯೆ ಹೆಚ್ಚು

ಚೇತರಿಕೆ ದರ ಶೇ 96.36 ರಷ್ಟು ಏರಿಕೆ

ದೈನಂದಿನ ಪಾಸಿಟಿವಿಟಿ ದರ ಶೇ 3.83 ರಷ್ಟು, ಸತತ 14 ದಿನಗಳಲ್ಲಿ ಶೇ 5 ಕ್ಕೂ ಕಡಿಮೆ ಪಾಸಿಟಿವಿಟಿ ದರ ದಾಖಲು

Posted On: 21 JUN 2021 11:16AM by PIB Bengaluru

ಮಹತ್ವದ ಬೆಳವಣಿಗೆಯಲ್ಲಿ ದೇಶದ ಒಟ್ಟಾರೆ ಕೋವಿಡ್ ಲಸಿಕೆ ಸಂಖ್ಯೆ ನಿನ್ನೆ 28 ಕೋಟಿ ದಾಟಿದೆ. ಇಂದು ಬೆಳಿಗ್ಗೆ 7 ಗಂಟೆವರೆಗೆ ದೊರೆತ ತಾತ್ಕಾಲಿಕ ಮಾಹಿತಿಯಂತೆ ದೇಶದಲ್ಲಿ 38,24,408 ಅವಧಿಯಲ್ಲಿ 28,00,36,898 ಲಸಿಕೆ ಡೋಸ್ ಗಳನ್ನು ಹಾಕಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 30,39,996 ಲಸಿಕೆ ಡೋಸ್ ಗಳನ್ನು ಹಾಕಲಾಗಿದೆ.   

ಇವುಗಳು ಒಳಗೊಂಡಂತೆ

ಎಚ್.ಸಿ.ಡಬ್ಲ್ಯೂಗಳು

ಮೊದಲ ಡೋಸ್

1,01,25,143

ಎರಡನೇ ಡೊಸ್

70,72,595

ಎಫ್.ಎಲ್.ಡಬ್ಲ್ಯೂಗಳು

ಮೊದಲ ಡೋಸ್

1,71,73,646

ಎರಡನೇ ಡೋಸ್

90,51,173

18-44 ವಯೋಮಿತಿಯವರು

ಮೊದಲ ಡೋಸ್

5,59,54,551

ಎರಡನೇ ಡೋಸ್

12,63,242

45-59 ವಯೋಮಿತಿಯವರು

ಮೊದಲ ಡೋಸ್

8,07,11,132

ಎರಡನೇ ಡೋಸ್

1,27,56,299

60 ವರ್ಷ ಮೀರಿದರು

ಮೊದಲ ಡೋಸ್

6,47,77,302

ಎರಡನೇ ಡೋಸ್

2,11,51,815

ಒಟ್ಟು

28,00,36,898

ಹೊಸ ಸಾರ್ವತ್ರೀಕರಣದ ಕೋವಿಡ್ – 19 ಲಸಿಕೆ ಅಭಿಯಾನ ಇಂದಿನಿಂದ ಪ್ರಾರಂಭವಾಗಿದೆ. ದೇಶಾದ್ಯಂತ ಕೋವಿಡ್ – 19 ಲಸಿಕೆ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ವೇಗ ಹೆಚ್ಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕೋವಿಡ್ – 19 ಲಸಿಕೆ ಅಭಿಯಾನವನ್ನು ಗೌರವಾನ್ವಿತ ಪ್ರಧಾನಮಂತ್ರಿ ಅವರು 2021 ರ ಜನವರಿ 16 ರಂದು ರಾಷ್ಟ್ರವ್ಯಾಪಿ ಆರಂಭಿಸಿದ್ದರು.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 53,256 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, 88 ದಿನಗಳಲ್ಲೇ ಇದು ಅತಿ ಕಡಿಮೆಯಾಗಿದೆ. ಭಾರತದಲ್ಲಿ ದೈನಂದಿನ ಕೋವಿಡ್- 19 ಪ್ರಕರಣಗಳಲ್ಲಿ ನಿರಂತರ ಇಳಿಕೆಯಾಗುತ್ತಿದೆ.

ಸತತ 14 ದಿನಗಳಿಂದ ಪ್ರತಿನಿತ್ಯ ಒಂದು ಲಕ್ಷಕ್ಕೂ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಸಹಯೋಗದ ಪ್ರಯತ್ನದಿಂದಾಗಿ ಈ ಫಲಿತಾಂಶ ದೊರೆತಿದೆ.  

ಸಕ್ರಿಯ ಪ್ರಕರಣಗಳಲ್ಲಿ ನಿರಂತರ ಇಳಿಕೆಯಾಗುತ್ತಿರುವುದಕ್ಕೆ ಸಾಕ್ಷಿಯಾಗಿದ್ದೇವೆ. ಇಂದಿನ ಒಟ್ಟು ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ  7,02,887 ರಷ್ಟಿದೆ.

24 ಗಂಟೆಗಳ ಅವಧಿಯಲ್ಲಿ ಒಟ್ಟು 26,356 ಪ್ರಕರಣಗಳು ಇಳಿಕೆಯಾಗಿವೆ ಮತ್ತು ದೇಶದ ಒಟ್ಟಾರೆ ಸೋಂಕು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2.35 ರಷ್ಟಿದೆ.  

ಹೆಚ್ಚು ಜನ ಕೋವಿಡ್ – 19 ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದು, ಸತತ 39 ನೇ ದಿನವೂ ಹೊಸ ಪ್ರಕರಣಗಳಿಗಿಂತ ದೈನಂದಿನ ಚೇತರಿಕೆ ಸಂಖ್ಯೆ ಹೆಚ್ಚಾಗಿದೆ. 24 ಗಂಟೆಗಳಲ್ಲಿ 78,190 ಮಂದಿ ಸೋಂಕಿನಿಂದ ಹೊರ ಬಂದಿದ್ದಾರೆ. ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಸುಮಾರು 25,000(24,934) ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ.

ಸಾಂಕ್ರಾಮಿಕ ಆರಂಭವಾದ ದಿನದಿಂದ ಈ ವರೆಗೆ 2,88,44,199 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು 24 ಗಂಟೆಗಳಲ್ಲಿ 78,190 ಸೋಂಕಿತರು ಗುಣಮುಖರಾಗಿದ್ದಾರೆ. ಚೇತರಿಕೆ ದರದಲ್ಲಿ ನಿರಂತರ ಏರಿಕೆ ಪ್ರವೃತ್ತಿ ಕಾಣುತ್ತಿದ್ದು, ಈ ಪ್ರಮಾಣ ಶೇ 96.36 ಕ್ಕೆ ಹೆಚ್ಚಳವಾಗಿದೆ.

ಇದರೊಂದಿಗೆ ದೇಶದಲ್ಲಿ ಪರೀಕ್ಷೆ ಸಾಮರ್ಥ್ಯವನ್ನು ಸಹ ಹೆಚ್ಚಿಸಲಾಗಿದ್ದು, 24 ಗಂಟೆಗಳಲ್ಲಿ 13,88,699 ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ. ಒಟ್ಟಾರೆ ಈವರೆಗೆ 39.24 ಕೋಟಿ (39,24,07,782) ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ.

ಒಂದೆಡೆ ದೇಶಾದ್ಯಂತ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದ್ದು, ಮತ್ತೊಂದೆಡೆ ವಾರದ ಪಾಸಿಟಿವಿಟಿ ದರ ಇಳಿಕೆಯಾಗುತ್ತಿರುವುದನ್ನು ಗಮನಿಸಲಾಗಿದೆ.  ವಾರದ ಪಾಸಿಟಿವಿಟಿ ದರ ಪ್ರಸ್ತುತ ಶೇ 3.32 ರಷ್ಟಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ 3.83 ರಷ್ಟಿದೆ. ಸತತ 14 ದಿನಗಳಲ್ಲಿ ಶೇ 5 ಕ್ಕೂ ಕಡಿಮೆ ದಾಖಲಾಗಿದೆ.

***



(Release ID: 1729016) Visitor Counter : 207