ಆಯುಷ್
2021 ರ ಅಂತಾರಾಷ್ಟ್ರೀಯ ಯೋಗ ದಿನ: 2021 ರ ಜೂನ್ 21 ರಂದು ಪ್ರಧಾನಮಂತ್ರಿ ಅವರ ಕಾರ್ಯಕ್ರಮ ದೂರದರ್ಶನದ ಕೇಂದ್ರಬಿಂದು
ಆಧುನಿಕ ಡಿಜಿಟಲ್ ವ್ಯವಸ್ಥೆಗೆ ಧನ್ಯವಾದ: ಜಗತ್ತು ಮತ್ತೊಂದು ಯೋಗ ದಿನ ಆಚರಿಸಲು ಸಜ್ಜು
Posted On:
19 JUN 2021 4:07PM by PIB Bengaluru
ಕೋವಿಡ್ – 19 ಸಾಂಕ್ರಾಮಿಕದಿಂದಾಗಿ ಸಭಾ ಕಾರ್ಯಕ್ರಮ, ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ 2021 ರ ಅಂತಾರಾಷ್ಟ್ರೀಯ ಯೋಗ [ಐಡಿವೈ] ದಿನಾಚರಣೆಯ ಪ್ರಮುಖ ಕಾರ್ಯಕ್ರಮ ದೂರದರ್ಶನದ ಕಾರ್ಯಕ್ರಮವಾಗಲಿದ್ದು, ಪ್ರಧಾನಮಂತ್ರಿ ಅವರ ಭಾಷಣ ಪ್ರಮುಖ ಆಕರ್ಷಣೆಯಾಗಿದೆ.
ದೂರದರ್ಶನದ ಎಲ್ಲಾ ವಾಹಿನಿಗಳಲ್ಲಿ ಇದು ಪ್ರಸಾರವಾಗಲಿದ್ದು, ಬೆಳಿಗ್ಗೆ 6.30 ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಆಯುಷ್ ಇಲಾಖೆಯ ರಾಜ್ಯ ಸಚಿವ ಕಿರೆನ್ ರಿಜಿಜು ಅವರ ಭಾಷಣವೂ ಸಹ ಕಾರ್ಯಕ್ರಮ ಪಟ್ಟಿಯಲ್ಲಿದೆ ಮತ್ತು ಮೋರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯಿಂದ ನೇರವಾಗಿ ಯೋಗ ಪ್ರದರ್ಶನ ಕೂಡ ಇರಲಿದೆ.
ಜಗತ್ತು ಕೋವಿಡ್-19 ವಿರುದ್ಧ ಹೋರಾಟ ಮಾಡುತ್ತಿರುವಾಗ ಏಳನೇ ಅಂತಾರಾಷ್ಟ್ರೀಯ ಯೋಗ ದಿನ ಬಂದಿದೆ. ಆದರೆ ಈ ಸಾಂಕ್ರಾಮಿಕ ಯೋಗದ ಉತ್ಸಾಹವನ್ನು ಕುಂದಿಸಿದಂತೆ ಕಾಣುತ್ತಿಲ್ಲ. ಕಳೆದ ಕೆಲವು ವಾರಗಳಲ್ಲಿ ಡಿಜಿಟಲ್ ಮಾಧ್ಯಮದಲ್ಲಿ ಇದಕ್ಕೆ ಸ್ಥಳಾವಕಾಶ ದೊರೆತಿರುವುದು ಕಂಡು ಬರುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನ – ಐಡಿಐ ಗೆ ಆಯುಷ್ ಸಚಿವಾಲಯ ನೋಡೆಲ್ ಸಚಿವಾಲವಾಗಿದ್ದು, ಒಟ್ಟಾರೆ ಯೋಗಕ್ಷೇಮದಲ್ಲಿ ಯೋಗದ ಮಹತ್ವದ ಕುರಿತು ವಿವಿಧ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಯೋಗ [ಐಡಿವೈ] ದಿನದಂದು ಬೆಳಕು ಚೆಲ್ಲಲಾಗುತ್ತಿದೆ. 2021 ರ ಐಡಿವೈ ನ ಪ್ರಮುಖ ಘೋಷವಾಕ್ಯವೆಂದರೆ “ ಕ್ಷೇಮಕ್ಕಾಗಿ ಯೋಗ” ಎಂಬುದಾಗಿದ್ದು, ಇದು ಈಗಿನ ಪರಿಸ್ಥಿತಿಗಳಿಗೆ ಹೊಂದಿಕೆಯಾಗಿದೆ. ಸಚಿವಾಲಯ ಕೈಗೊಂಡ ಹಲವಾರು ಡಿಜಿಟಲ್ ಉಪಕ್ರಮಗಳು ಮತ್ತು ಸಾಂಕ್ರಾಮಿಕದಿಂದಾಗಿ ಜಾರಿಗೊಳಿಸಿದ ನಿರ್ಬಂಧಗಳ ನಡುವೆಯೂ ಸುಮಾರು 1000 ಇತರೆ ಪಾಲುದಾರ ಸಂಸ್ಥೆಗಳೊಂದಿಗೆ ಯೋಗಾಭ್ಯಾಸ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದೆ. ವಿದೇಶಗಳಲ್ಲಿರುವ ಭಾರತೀಯ ವ್ಯವಸ್ಥೆಗಳು ಆಯಾ ದೇಶಗಳಲ್ಲಿ ಜೂನ್ 21 ರ ವರೆಗೆ ವಿವಿಧ ಚಟುವಟಿಕೆಗಳನ್ನು ಸಂಘಟಿಸುತ್ತಿವೆ ಮತ್ತು ವರದಿಗಳ ಪ್ರಕಾರ ಜಾಗತಿಕವಾಗಿ 190 ದೇಶಗಳಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ. ಕೋವಿಡ್ – 19 ತುರ್ತು ಪರಿಸ್ಥಿತಿಯಿಂದಾಗಿ ಆರೋಗ್ಯ ಇಂದು ಎಲ್ಲರ ಆಲೋಚನೆಗಳಲ್ಲಿ ಅಗ್ರಗಣ್ಯವಾಗಿರುವುದರಿಂದ ಯೋಗ ದಿನ ಆಚರಿಸುವುದು ಸಮಯೋಚಿತವಾಗಿದೆ. ವಿಶ್ವ ಸಂಸ್ಥೆಯು ಜೂನ್ 21 ಅನ್ನು ಐಡಿವೈ ಎಂದು ಗುರುತಿಸಿರುವುದರ ಹಿಂದಿನ ಪ್ರಮುಖ ಉದ್ದೇಶವೆಂದರೆ ಜಾಗತಿಕವಾಗಿ ಸಾರ್ವಜನಿಕ ಆರೋಗ್ಯದಲ್ಲಿ ಯೋಗದ ಸಾಮರ್ಥ್ಯವನ್ನು ಒತ್ತಿ ಹೇಳುವುದಾಗಿದೆ.
2014 ರ ಡಿಸೆಂಬರ್ ನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಐಡಿವೈ ಆಚರಣೆಗೆ ನಿರ್ಣಯ ಕೈಗೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉಪಕ್ರಮದಿಂದ ಇದು ಜಾರಿಗೆ ಬಂತು ಮತ್ತು ಸರ್ವಾನುಮತದ ಒಪ್ಪಿಗೆಯಿಂದ ಅಂಗೀಕರಿಸಲ್ಪಟ್ಟಿರುವುದು ಸ್ವತಃ ಒಂದು ದಾಖಲೆಯಾಗಿದೆ. 2015 ರಿಂದ ಐಡಿವೈ ಜಗತ್ತಿನಾದ್ಯಂತ ಆರೋಗ್ಯ ರಕ್ಷಣೆಯ ಸಮೂಹಿಕ ಆಂದೋಲನವಾಗಿದೆ.
ವರ್ಷಗಳಲ್ಲಿ ಐಡಿವೈ ಯೋಗದ ಜನಪ್ರಿಯತೆಯನ್ನು ಹೆಚ್ಚಿಸಿದೆ, ಆದರೆ ಹಲವಾರು ಹೊಸ ಪ್ರದೇಶಗಳಲ್ಲಿ ಇದನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವ ಮೂಲಕ ತನ್ನ ಬೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಈ ಕಾರ್ಯಕ್ರಮ ಎಲ್ಲಾ ವಯೋಮಾನದ ಜನರಿಗೆ ಸಾರ್ವತ್ರಿಕ ಯೋಗ ಶಿಷ್ಟಾಚಾರಗಳ ಅಭಿವೃದ್ಧಿ, ಜೀವನ ಶೈಲಿ, ಕಾಯಿಲೆಗಳನ್ನು ಗುಣಪಡಿಸುವ, ಅಭಿವೃದ್ಧಿ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಸಾಧನವಾಗಿಯೂ ಯೋಗದ ಸಾಮರ್ಥ್ಯದ ಬಗೆಗೆ ಸಂಶೋಧನೆ ನಡೆಯುತ್ತಿದೆ. ಜತೆಗೆ ಯೋಗ ಕ್ಷೇತ್ರದಲ್ಲಿ ಇನ್ನೂ ಹಲವಾರು ಹೊಸ ಪ್ರಗತಿಯನ್ನು ಕಾಣಲಾಗುತ್ತಿದೆ.
ಸಾಂಕ್ರಾಮಿಕದ ಅನುಭವದಿಂದಾಗಿ ಸಾರ್ಜನಿಕರು ಯೋಗದ ಆರೋಗ್ಯ ಲಾಭಗಳ ಬಗ್ಗೆ ಇನ್ನಷ್ಟು ಜಾಗೃತರಾಗಲು ಕಾರಣವಾಗಿದೆ ಮತ್ತು ಇದೇ ಅನುಭವಗಳ ಹಿನ್ನೆಲೆಯಲ್ಲಿ ಆಯುಷ್ ಸಚಿವಾಲಯವು ಯೋಗವನ್ನು ಉತ್ತೇಜಿಸಿದೆ. ಕೋವಿಡ್ – 19 ವಿರುದ್ದ ಹೋರಾಡುವ ಕುರಿತ ಸಚಿವಾಲಯದ ಸಲಹೆಯಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಕೋವಿಡ್-19 ವಿರುದ್ಧ ಹೋರಾಡಲು ನಿಯಮಿತವಾಗಿ ಯೋಗಾಭ್ಯಾಸ ಮಾಡುವಂತೆ ಹೇಳಿದೆ. ಈ ಸಲಹೆಗಳನ್ನು ಸರ್ಕಾರದ ವಿವಿಧ ವಾಹಿನಿಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ ಮತ್ತು ಇತರ ಪಾಲುದಾರರು, ಸಾರ್ವಜನಿಕರು ಹಾಗೂ ಆರೋಗ್ಯ ವೃತ್ತಿಪರರಿಗೂ ಇದರ ಮಹತ್ವದ ಬಗ್ಗೆ ತಿಳಿಸಲಾಗಿದೆ. ದೇಶದ ವಿವಿಧ ಭಾಗಗಳ ಆಸ್ಪತ್ರೆಗಳಲ್ಲಿ ಕೋವಿಡ್ -19 ಸೋಂಕಿತರಿಗೆ ಯೋಗಾಭ್ಯಾಸವನ್ನು ಪೂರಕ ಕ್ರಮಗಳಾಗಿ ಯಶಸ್ವಿಯಾಗಿ ಅಳವಡಿಸಲಾಗಿದೆ ಮತ್ತು ರೋಗದಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಯೋಗದ ಕೊಡುಗೆ ಮಹತ್ವದ್ದಾಗಿದೆ.
ಹಿಂದಿನ ವರ್ಷಗಳಂತೆ 2021 ರ ಜೂನ್ 21 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನ – ಐಡಿವೈ ನಲ್ಲಿ ಹಲವಾರು ವ್ಯಕ್ತಿಗಳು ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವ, ಪ್ರದರ್ಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದನ್ನು ಪ್ರೇರೇಪಿಸುವುದನ್ನು ಸಹ ಇದು ಒಳಗೊಂಡಿದೆ.
ನಿರ್ದಿಷ್ಟವಾಗಿ 45 ನಿಮಿಷಗಳ ಯೋಗದ ಅಭ್ಯಾಸ, ಇದಕ್ಕೆ ಸೌಹಾರ್ದಯುತ ವಾತಾವರಣದಲ್ಲಿ ಸೌಲಭ್ಯ ಕಲ್ಪಿಸುವುದು ಸಹ ಸಾಮಾನ್ಯ ಯೋಗ ಶಿಷ್ಟಾಚಾರದಲ್ಲಿ [ಸಿವೈಪಿ] ಬರುತ್ತದೆ. ಈ ಚಟುವಟಿಯಲ್ಲಿ ಭಾಗಿಯಾಗುವುದಾಗಿ ಲಕ್ಷಾಂತರ ಯೋಗ ಪ್ರಿಯರು ಹೇಳಿದ್ದು, ತಮ್ಮ ಮನೆಗಳಲ್ಲಿಯೇ ಯೋಗ ಮಾಡುವ ತಮ್ಮ ಬದ್ಧತೆಯನ್ನು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಇಂತಹವರಿಗಾಗಿ ಯೋಗ ಶಿಷ್ಟಾಚಾರ - ಸಿವೈಪಿ ಅಗತ್ಯವಾಗಿದ್ದು, ಇವರೆಲ್ಲರೂ ದೂರದರ್ಶನದ ಯಾವುದೇ ವಾಹಿನಿಗಳನ್ನು ಅನುಸರಿಸಿ ನೇರವಾಗಿ ಪ್ರದರ್ಶನ ಮಾಡಬಹುದಾಗಿದೆ. ಪ್ರಧಾನಮಂತ್ರಿಗಳ ಭಾಷಣದ ನಂತರ ಯೋಗ ಪ್ರದರ್ಶನ ನಡೆಯಲಿದೆ ಮತ್ತು ಇದು ಬೆಳಿಗ್ಗೆ 7 ರಿಂದ 7.45 [ಐ.ಎಸ್.ಟಿ] ವರೆಗೆ ಇರಲಿದೆ. ಈ ನೇರ ಯೋಗ ಪ್ರದರ್ಶನ 15 ಆದ್ಯಾತ್ಮಿಕ ಮುಖಂಡರು ಮತ್ತು ಯೋಗ ಗುರುಗಳ ಸಂದೇಶಗಳನ್ನು ಅನುಸರಿಸುತ್ತದೆ: ಅವರುಗಳೆಂದರೆ ಗುರುದೇವ್ ಶ್ರೀ ಶ್ರೀ ರವಿಶಂಕರ್, ಸದ್ಗುರುಜಗ್ಗಿ ವಾಸುದೇವ್, ಡಾ,.ಎಚ್.,ಆರ್, ನಾಗೇಂದ್ರ, ಶ್ರೀ ಕಮಲೇಶ್ ಪಟೇಲ್, ಡಾ. ವೀರೇಂದ್ರ ಹೆಗ್ಗಡೆ, ಡಾ. ಹಮ್ಸಾಜಿ ಜಯದೇವ್, ಶ್ರೀ ಒ.ಪಿ. ತಿವಾರಿ, ಸ್ವಾಮಿ ಚಿದಾನಂದ ಸರಸ್ವತಿ, ಡಾ. ಚಿನ್ಮಯ್ ಪಾಂಡೆ, ಮುನಿ ಶ್ರೀ ಸಾಗರ್ ಮಹರಾಜ್, ಸ್ವಾಮಿ ಭಾರತ್ ಭೂಷಣ್, ಡಾ. ವಿಶ್ವಾಸ್ ಮಂಡಲಿಕ್, ಸಹೋದರಿ ಬಿ.ಕೆ. ಶ್ರೀವಾಣಿ, ಶ್ರೀ ಎಸ್. ಶ್ರೀಧರನ್ ಮತ್ತು ಶ್ರೀಮತಿ ಅಂಟೋನೆಟ್ ರೋಜಿ.
ಅಂತಾರಾಷ್ಟ್ರೀಯ ಯೋಗ ದಿನ – ಐಡಿವೈ ಜಾಗತಿಕ ಚಟುವಟಿಕೆ ಮತ್ತು ಜೂನ್ 21 ಕ್ಕೂ ಮುನ್ನ 3-4 ತಿಂಗಳ ಮುಂಚಿನಿಂದಲೇ ಸಿದ್ಧತೆಗಳು ಆರಂಭವಾಗುತ್ತವೆ. ಪ್ರತಿವರ್ಷ ಐಡಿವೈ ಆಚರಿಸುತ್ತಿದ್ದು, ಲಕ್ಷಾಂತರ ಜನರಿಗೆ ಸಾಮೂಹಿಕ ಚಳವಳಿಯ ಭಾಗವಾಗಿ ಉತ್ಸಾಹದಿಂದ ಯೋಗವನ್ನು ಪರಿಚಯಿಸಲಾಗುತ್ತಿದೆ.
***
(Release ID: 1728718)
Visitor Counter : 271