ಪ್ರವಾಸೋದ್ಯಮ ಸಚಿವಾಲಯ
ಭಾರತದಲ್ಲಿ ಎಂ.ಐ.ಸಿ.ಇ. ಉದ್ಯಮವನ್ನು ಉತ್ತೇಜಿಸಲು ಕರಡು ರಾಷ್ಟ್ರೀಯ ಕಾರ್ಯತಂತ್ರ ಮತ್ತು ಮಾರ್ಗಸೂಚಿಗಳ ಕುರಿತು ಪ್ರವಾಸೋದ್ಯಮ ಸಚಿವಾಲಯದಿಂದ ಹಿಮ್ಮಾಹಿತಿ ಆಹ್ವಾನ
ಸಲಹೆಗಳನ್ನು ಸಚಿವಾಲಯಕ್ಕೆ 2021ರ ಜೂನ್ 30ರೊಳಗೆ ಕಳುಹಿಸಬಹುದು
Posted On:
18 JUN 2021 5:00PM by PIB Bengaluru
ಎಂ.ಐ.ಸಿ.ಇ. ಎಂಬುದು ಸಭೆಗಳು, ಪ್ರೋತ್ಸಾಹಧನ, ಸಮ್ಮೇಳನಗಳು ಮತ್ತು ಪ್ರದರ್ಶನಗಳನ್ನು ಒಳಗೊಂಡ ಸಂಕ್ಷಿಪ್ತ ರೂಪವಾಗಿದೆ. ಎಂ.ಐ.ಸಿ.ಇ.ಯು ಪ್ರವಾಸೋದ್ಯಮದ ಪ್ರಮುಖ ವಿಭಾಗವಾಗಿದೆ, ಇದು ವಿರಾಮ ಪ್ರವಾಸೋದ್ಯಮದ ಜೊತೆ ಜೊತೆಗೆ ಸಾಗುತ್ತದೆ. ಇದು ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ವಿಭಾಗವಾಗಿದ್ದು, ದೇಶಕ್ಕೆ ಹಲವು ಅನುಕೂಲಗಳನ್ನು ತರಲಿದೆ. ಬೃಹತ್ ಸಾಮರ್ಥ್ಯ ಇದ್ದಾಗಲೂ, ಭಾರತದ ಸ್ಥಿತಿ ಮಾತ್ರ ತುಲನಾತ್ಮಕವಾಗಿ ಕೆಳಮಟ್ಟದಲ್ಲಿದೆ, ಅಂದರೆ ಜಾಗತಿಕ ಎಂ.ಐ.ಸಿ.ಇ. ವ್ಯಾಪಾರೋದ್ಯಮಕ್ಕೆ ಹೋಲಿಸಿದರೆ ಬರೇ 1% ಇದೆ. ಇನ್ನೊಂದೆಡೆ, ಭಾರತ ಬಹಳ ದೊಡ್ಡ ಹೊರಹೋಗುವಂತಹ ಎಂ.ಐ.ಸಿ.ಇ. ಮಾರುಕಟ್ಟೆಯನ್ನು ಹೊಂದಿದೆ ಮತ್ತು ಅದು ಗಮನಾರ್ಹವಾಗಿ ಬೆಳೆಯುತ್ತಿದೆ.
ಪ್ರವಾಸೋದ್ಯಮ ಸಚಿವಾಲಯವು ಎಂ.ಐ.ಸಿ.ಇ. ಯ ಅಪಾರ ಸಾಮರ್ಥ್ಯವನ್ನು ಮನಗಂಡಿದೆ, ಮತ್ತು ಅದು ಪ್ರವಾಸೋದ್ಯಮದ ಈ ಕ್ಷೇತ್ರದ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ಸಕ್ರಿಯವಾಗಿ ದುಡಿಯುತ್ತಿದೆ. ಅದರನ್ವಯ ಪ್ರವಾಸೋದ್ಯಮ ಸಚಿವಾಲಯ ಭಾರತದಲ್ಲಿ ಎಂ.ಐ.ಸಿ.ಇ. ಉದ್ಯಮವನ್ನು ಉತ್ತೇಜಿಸಲು ಮಾರ್ಗಸೂಚಿ ಮತ್ತು ರಾಷ್ಹ್ಟ್ರೀಯ ಕಾರ್ಯತಂತ್ರವನ್ನು ಒಳಗೊಂಡ ಕರಡನ್ನು ರೂಪಿಸಿದ್ದು, ಅದನ್ನು ಪ್ರವಾಸೋದ್ಯಮ ಸಚಿವಾಲಯದ ಜಾಲತಾಣ https://tourism.gov.in ದಲ್ಲಿ “ಹೊಸತು ಯಾವುದಿದೆ” ಎಂಬ ವಿಭಾಗದಲ್ಲಿ ನೋಡಬಹುದು.
https://tourism.gov.in/sites/default/files/2021-06/Draft%20Strategy%20for%20MICE%20tourism%20June%2012.pdf
ಕರಡು ಕಾರ್ಯತಂತ್ರ ದಾಖಲೆಯನ್ನು ಅಂತಿಮಗೊಳಿಸುವುದಕ್ಕೆ ಮೊದಲು ಮತ್ತು ಕರಡನ್ನು ಹೆಚ್ಚು ಸಮಗ್ರಗೊಳಿಸಲು ಪ್ರವಾಸೋದ್ಯಮ ಸಚಿವಾಲಯ ಕರಡು ರಾಷ್ಟ್ರೀಯ ಕಾರ್ಯತಂತ್ರ ಮತ್ತು ಮಾರ್ಗಸೂಚಿಗಳ ಕುರಿತಂತೆ ಹಿಮ್ಮಾಹಿತಿ/ಪ್ರತಿಕ್ರಿಯೆ/ಸಲಹೆಗಳನ್ನು ಆಹ್ವಾನಿಸಿದೆ. ಪ್ರತಿಕ್ರಿಯೆಗಳನ್ನು 2021 ರ ಜೂನ್ 30ರ ಒಳಗೆ ಪ್ರವಾಸೋದ್ಯಮ ಸಚಿವಾಲಯದ ಮಿಂಚಂಚೆ ಐಡಿ: js.tourism[at]gov[dot]in, bibhuti.dash72[at]gov[dot]in, prakash.om50[at]nic[dot]in ಗಳಿಗೆ ಕಳುಹಿಸಿಕೊಡಬಹುದು.
***
(Release ID: 1728362)
Visitor Counter : 174