ಚುನಾವಣಾ ಆಯೋಗ

ಚುನಾವಣಾ ಆಯೋಗದಿಂದ 2019 ಸಾರ್ವತ್ರಿಕ ಚುನಾವಣೆಗಳನ್ನು ಕುರಿತ ಅಟ್ಲಾಸ್ ಬಿಡುಗಡೆ

Posted On: 18 JUN 2021 12:31PM by PIB Bengaluru

ಮುಖ್ಯ ಚುನಾವಣಾ ಆಯುಕ್ತ ಶ್ರೀ ಸುಶೀಲ್ ಚಂದ್ರ ಮತ್ತು ಚುನಾವಣಾ ಆಯುಕ್ತರಾದ ಶ್ರೀ ರಾಜೀವ್ ಕುಮಾರ್ ಮತ್ತು ಶ್ರೀ ಅನೂಪ್ ಚಂದ್ರ ಪಾಂಡೆ ಅವರು 2021 ರ ಜೂನ್ 15 ರಂದು 'ಸಾರ್ವತ್ರಿಕ ಚುನಾವಣೆಗಳು 2019 - ಆ್ಯನ್ ಅಟ್ಲಾಸ್' ಅನ್ನು ಬಿಡುಗಡೆ ಮಾಡಿದರು. ಈ ಹೊಸ ದಾಖಲೆಯನ್ನು ಸಂಕಲಿಸಿದ್ದಕ್ಕಾಗಿ ಶ್ರೀ ಸುಶೀಲ್ ಚಂದ್ರ ಅವರು ಆಯೋಗದ ಅಧಿಕಾರಿಗಳನ್ನು ಶ್ಲಾಘಿಸಿದರು. ಇದು ಭಾರತದ ಚುನಾವಣೆಗಳಗಳ ಬಗ್ಗೆ ಇನ್ನಷ್ಟು ಅನ್ವೇಷಣೆ ನಡೆಸಲು ಶಿಕ್ಷಣ ತಜ್ಞರು ಮತ್ತು ಸಂಶೋಧಕರಿಗೆ ಪ್ರೇರಣೆ ನೀಡುತ್ತದೆ ಎಂದು ಅವರು ಆಶಿಸಿದರು.

WhatsApp Image 2021-06-15 at 12.37.46 PM (2).jpeg

2019ರ ಚುನಾವಣೆಯ ಎಲ್ಲಾ ಡೇಟಾ ಮತ್ತು ಸಂಖ್ಯಾಶಾಸ್ತ್ರೀಯ ಅಂಕಿಅಂಶಗಳನ್ನು ಅಟ್ಲಾಸ್ ಒಳಗೊಂಡಿದೆ. ಇದರಲ್ಲಿರುವ 42 ವಿಷಯಾಧಾರಿತ ನಕ್ಷೆಗಳು ಮತ್ತು 90 ಕೋಷ್ಟಕಗಳು ಚುನಾವಣೆಯ ವಿವಿಧ ಅಂಶಗಳನ್ನು ಹೇಳುತ್ತವೆ. ಅಟ್ಲಾಸ್ ಭಾರತದ ಚುನಾವಣೆಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ಸಂಗತಿಗಳು, ಉಪಾಖ್ಯಾನಗಳು ಮತ್ತು ಕಾನೂನು ನಿಬಂಧನೆಗಳ ಬಗ್ಗೆಯೂ ಹೇಳುತ್ತದೆ.

1951-52ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ, ಆಯೋಗವು ಚುನಾವಣಾ ದತ್ತಾಂಶಗಳ ಸಂಕಲನವನ್ನು ನಿರೂಪಣೆ ಮತ್ತು ಸಂಖ್ಯಾಶಾಸ್ತ್ರೀಯ ಪುಸ್ತಕಗಳ ರೂಪದಲ್ಲಿ ಪ್ರಕಟಿಸುತ್ತಿದೆ. 2019 ರಲ್ಲಿ ನಡೆದ 17 ನೇ ಸಾರ್ವತ್ರಿಕ ಚುನಾವಣೆಗಳು ಮಾನವ ಇತಿಹಾಸದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ಕ್ರಮವಾಗಿದ್ದು, ಭಾರತದ 32 ಲಕ್ಷ ಚದರ ಕಿಲೋಮೀಟರ್ ಪ್ರದೇಶದಾದ್ಯಂತ ಹರಡಿದ 10.378 ಕೋಟಿ ಮತಗಟ್ಟೆಗಳಲ್ಲಿ 61.468 ಕೋಟಿ ಮತದಾರರು ಭಾಗವಹಿಸಿದ್ದರು.

ಭಾರತದ ಚುನಾವಣೆಗಳಲ್ಲಿ, ಚುನಾವಣಾ ನೋಂದಣಿ ಅಧಿಕಾರಿಗಳು ಮತದಾರರ ಪಟ್ಟಿ ಸಿದ್ಧಪಡಿಸುವಾಗ ಮತ್ತು ಚುನಾವಣೆ ಪ್ರಕ್ರಿಯೆಯ ಚುನಾವಣಾ ಡೇಟಾವನ್ನು ಚುನಾವಣಾ ಅಧಿಕಾರಿಗಳಿಂದ ಪ್ರಾಥಮಿಕವಾಗಿ ಸಂಗ್ರಹಿಸಲಾಗುತ್ತದೆ. ಈ ಡೇಟಾವನ್ನು ನಂತರ ಶಾಸನಬದ್ಧ ಅಧಿಕಾರಿಗಳು ಸಂಯೋಜಿಸುತ್ತಾರೆ. ಅದರ ನಂತರ, ಚುನಾವಣಾ ಪ್ರಕ್ರಿಯೆಯ ಮುಕ್ತಾಯದ ನಂತರ, ಭಾರತದ ಚುನಾವಣಾ ಆಯೋಗವು ಚುನಾವಣಾ ದತ್ತಾಂಶವನ್ನು ಸಂಗ್ರಹ, ಸಂಕಲನ, ದಾಖಲೆ ಮತ್ತು ಪ್ರಸಾರ ಉದ್ದೇಶಗಳಿಗಾಗಿ ವಿವಿಧ ವರದಿಗಳನ್ನು ಸಿದ್ಧಪಡಿಸುತ್ತದೆ.

543 ಸಂಸದೀಯ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳಿಂದ ಲಭ್ಯವಿರುವ ಚುನಾವಣಾ ಮಾಹಿತಿಯ ಆಧಾರದ ಮೇಲೆ ಆಯೋಗವು 2019 ರ ಅಕ್ಟೋಬರ್‌ನಲ್ಲಿ ಸಂಖ್ಯಾಶಾಸ್ತ್ರೀಯ ವರದಿಗಳನ್ನು ಬಿಡುಗಡೆ ಮಾಡಿತು. ಈ ಅಟ್ಲಾಸ್ ನಲ್ಲಿ ಇರಿಸಲಾಗಿರುವ ನಕ್ಷೆಗಳು ಮತ್ತು ಕೋಷ್ಟಕಗಳು ಮಾಹಿತಿಯನ್ನು ಚಿತ್ರಿಸುತ್ತವೆ ಮತ್ತು ದೇಶದ ಚುನಾವಣಾ ವೈವಿಧ್ಯತೆಯ ಬಗ್ಗೆ ಉತ್ತಮ ತಿಳುವಳಿಕೆ ನೀಡುತ್ತವೆ. ಡೇಟಾವನ್ನು ಸಾಂದರ್ಭಿಕಗೊಳಿಸುವುದರ ಜೊತೆಗೆ, ಈ ವಿವರವಾದ ನಕ್ಷೆಗಳು ವಿವಿಧ ಹಂತಗಳಲ್ಲಿ ಚುನಾವಣಾ ಮಾದರಿಗಳನ್ನು ಬಹಿರಂಗಪಡಿಸುತ್ತವೆ ಮತ್ತು ಅದರ ಪ್ರಾದೇಶಿಕ ಮತ್ತು ಕಾಲಸೂಚಕ ವ್ಯವಸ್ಥೆಳನ್ನು ಸೂಚಿಸುತ್ತವೆ. ಚುನಾವಣಾ ದತ್ತಾಂಶವನ್ನು ಉತ್ತಮವಾಗಿ ದೃಶ್ಯೀಕರಿಸುವ ಮತ್ತು ಪ್ರತಿನಿಧಿಸುವ ಗುರಿಯೊಂದಿಗೆ, ಈ ಅಟ್ಲಾಸ್ ಒಂದು ಮಾಹಿತಿ ಮತ್ತು ವಿವರಣಾತ್ಮಕ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಭಾರತದ ಚುನಾವಣಾ ಪ್ರಕ್ರಿಯೆಯ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿಸುತ್ತದೆ ಮತ್ತು ಪ್ರವೃತ್ತಿಗಳು ಮತ್ತು ಬದಲಾವಣೆಗಳನ್ನು ವಿಶ್ಲೇಷಿಸಲು ಓದುಗರಿಗೆ ನೆರವಾಗುತ್ತದೆ.

Capture.PNG

ಅಟ್ಲಾಸ್ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರ ಶೇಕಡಾವಾರು ಮತದಾನ ಪುರುಷರ ಮತದಾನಕ್ಕಿಂತ ಅಧಿಕ ಇಂತಹ ಪ್ರಮುಖ ಲಕ್ಷಣಗಳನ್ನು ಹೊಂದಿದೆ. ಮತದಾರರು, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಅತಿದೊಡ್ಡ ಮತ್ತು ಚಿಕ್ಕ ಸಂಸದೀಯ ಕ್ಷೇತ್ರದ ಬಗ್ಗೆ ಮಾಹಿತಿ ನೀಡುತ್ತದೆ.

ಅಟ್ಲಾಸ್ ಮತದಾರರ ದತ್ತಾಂಶವನ್ನು ಮತದಾರರ ಲಿಂಗಾನುಪಾತ ಮತ್ತು ಅವರ ವಿವಿಧ ವಯಸ್ಸಿನ ವರ್ಗಗಳ ಬಗ್ಗೆ ಹೋಲಿಕೆಯನ್ನು ಚಿತ್ರಿಸುತ್ತದೆ. 2019 ರ ಸಾರ್ವತ್ರಿಕ ಚುನಾವಣೆಗಳು ಭಾರತದ ಚುನಾವಣೆಯ ಇತಿಹಾಸದಲ್ಲಿ ಅತ್ಯಂತ ಕಡಿಮೆ ಲಿಂಗ ಅಂತರವನ್ನು ಕಂಡವು. 1971 ರಿಂದ ಸಕಾರಾತ್ಮಕ ಪ್ರವೃತ್ತಿಯನ್ನು ತೋರಿಸಿರುವ ಮತದಾರರ ಲಿಂಗ ಅನುಪಾತವು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ 926 ಆಗಿತ್ತು.

ಅಟ್ಲಾಸ್ 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಪ್ರತಿ ಮತಗಟ್ಟೆಯ ಸರಾಸರಿ ಮತದಾರರ ಸಂಖ್ಯೆಯನ್ನು ಹೋಲಿಕೆ ಮಾಡುತ್ತದೆ. ಪ್ರತೀ ಮತಗಟ್ಟೆಗೆ ಅತಿ ಕಡಿಮೆ ಮತದಾರರನ್ನು ಹೊಂದಿದ ಅರುಣಾಚಲ ಪ್ರದೇಶದೊಂದಿಗೆ (365) ಚುನಾವಣಾ ಆಯೋಗವು 2019 ರ ಸಾರ್ವತ್ರಿಕ ಚುನಾವಣೆ 10 ದಶಲಕ್ಷಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಿತ್ತು.

ಇತರ ವಿವಿಧ ವರ್ಗಗಳ ಪೈಕಿ, ಅಟ್ಲಾಸ್ 1951 ರಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆಯನ್ನು ಹೋಲಿಸುತ್ತದೆ. 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ, ದೇಶಾದ್ಯಂತ ದಾಖಲಾದ ಒಟ್ಟು 11692 ನಾಮನಿರ್ದೇಶನಗಳಿಂದ ನಾಮಪತ್ರಗಳು ಮತ್ತು ವಾಪಸಾತಿಗಳನ್ನು ತಿರಸ್ಕರಿಸಿದ ನಂತರ ಅರ್ಹ 8054 ಅರ್ಹ ಅಭ್ಯರ್ಥಿಗಳು ಕಣದಲ್ಲಿದ್ದರು.

ವಿವರಗಳಿಗಾಗಿ https://eci.gov.in/ebooks/eci-atlas/index.html ನಲ್ಲಿ ಇ-ಅಟ್ಲಾಸ್ ಲಭ್ಯವಿದೆ. ಸಲಹೆಗಳನ್ನು ಆಯೋಗದ ಇಡಿಎಂಡಿ ವಿಭಾಗದೊಂದಿಗೆ ಹಂಚಿಕೊಳ್ಳಬಹುದು.

****



(Release ID: 1728184) Visitor Counter : 1948