ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

1988 ರ ಮೋಟಾರು ವಾಹನ ಕಾಯ್ದೆ ಮತ್ತು 1989 ರ ಮೋಟಾರು ವಾಹನ ಕಾಯ್ದೆಗಳ ಮಾನ್ಯತೆ ಅವಧಿ 2021 ರ ಸೆಪ್ಟೆಂಬರ್ ವರೆಗೆ ವಿಸ್ತರಿಸಿದ ರೆಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 

Posted On: 17 JUN 2021 6:57PM by PIB Bengaluru

ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆಯುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ನಾಗರಿಕರಿಗೆ ಸಹಾಯ ಮಾಡುವ ಉದ್ದೇಶದಿಂದ 1988 ಮೋಟಾರು ವಾಹನ ಕಾಯ್ದೆ ಮತ್ತು 1989 ಮೋಟಾರು ವಾಹನ ಕಾಯ್ದೆಗಳ ಮಾನ್ಯತೆ ಅವಧಿಯನ್ನು 2021 ಸೆಪ್ಟೆಂಬರ್ 30 ವರೆಗೆ ರೆಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವಿಸ್ತರಿಸಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2020  ಮಾರ್ಚ್ 30, 2020 ಜೂನ್ 9, 2020 ಆಗಸ್ಟ್ 24, 2020 ಡಿಸೆಂಬರ್ 27 ಮತ್ತು 2021 ಮಾರ್ಚ್ 26 ಮಾರ್ಚ್ ನಲ್ಲಿ ರಸ್ತೆ ಸಾರಿಗೆ ಮತ್ತು ಭೂ ಸಾರಿಗೆ ಸಚಿವಾಲಯ ಸಲಹೆಗಳನ್ನು ಹೊರಡಿಸಿದೆ

ವಾಹನ ಸದೃಢತೆಯ ಅವಧಿ, ಅನುಮತಿ [ಎಲ್ಲಾ ರೀತಿಯ], ಪರವಾನಗಿ, ನೋಂದಣಿ ಅಥವಾ ಯಾವುದೇ ಸಂಬಂಧಿತ ದಾಖಲೆಗಳನ್ನು 2021 ಜೂನ್ 30 ರವರೆಗೆ ಮಾನ್ಯತೆ ಇರುವುದಾಗಿ ಪರಿಗಣಿಸಬಹುದು ಎಂದು ಸಲಹೆ ನೀಡಲಾಗಿದೆ

2020 ಫೆಬ್ರವರಿ 1 ವರೆಗೆ ಅವಧಿ ಮುಕ್ತಾಯವಾದ ಅಥವಾ 2021  ಸೆಪ್ಟೆಂಬರ್ 30 ಅವಧಿ ಮುಕ್ತಾಯವಾಗುವ ಎಲ್ಲಾ ದಾಖಲೆಗಳು ಇದರಡಿ ಬರುತ್ತವೆ. ಅನುಷ್ಠಾನ ಪ್ರಾಧಿಕಾರಗಳು ಇವುಗಳನ್ನು 2021  ಸೆಪ್ಟೆಂಬರ್ 30 ವರೆಗೆ ಊರ್ಜಿತವಾಗಿರುತ್ತವೆ ಎಂದು ಪರಿಗಣಿಸಬೇಕಾಗಿ ಸಲಹೆ ನೀಡಲಾಗಿದೆ.

ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆಯಲು ಇದರಿಂದ ಸಹಾಯಕವಾಗುತ್ತದೆ.

***



(Release ID: 1728078) Visitor Counter : 248