ಗೃಹ ವ್ಯವಹಾರಗಳ ಸಚಿವಾಲಯ

ಸುಭದ್ರ ಮತ್ತು ಸುರಕ್ಷಿತ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ಒದಗಿಸುವ ಮೋದಿ ಸರ್ಕಾರದ ಬದ್ಧತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ನೇತೃತ್ವದ ಕೇಂದ್ರ ಗೃಹ ಸಚಿವಾಲಯ ಸೈಬರ್ ವಂಚನೆಯಿಂದಾಗಿ ಆರ್ಥಿಕ ನಷ್ಟವನ್ನು ತಡೆಗಟ್ಟಲು ರಾಷ್ಟ್ರೀಯ ಸಹಾಯವಾಣಿ 155260 ಮತ್ತು ವರದಿ ಮಾಡುವ ವೇದಿಕೆಯನ್ನು ಕಾರ್ಯಗತಗೊಳಿಸಿದೆ


ಸೈಬರ್ ಅಪರಾಧಗಳಿಂದ ವಂಚನೆಗೆ ಒಳಗಾದ ವ್ಯಕ್ತಿಗಳಿಗೆ ಅಂತ ಪ್ರಕರಣಗಳಿಂದ ತಮ್ಮ ಕಷ್ಟಾರ್ಜಿತ ಹಣದ ನಷ್ಟವನ್ನು ತಪ್ಪಿಸಲು ರಾಷ್ಟ್ರೀಯ ಸಹಾಯವಾಣಿ ಮತ್ತು ವರದಿ ಮಾಡುವ ವೇದಿಕೆ ಒದಗಿಸುತ್ತದೆ

Posted On: 17 JUN 2021 7:38PM by PIB Bengaluru

ಸುರಕ್ಷಿತ ಮತ್ತು ಸುಭದ್ರ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ಒದಗಿಸುವ ಮೋದಿ ಸರ್ಕಾರದ ಬದ್ಧತೆಯನ್ನು ಬಲಪಡಿಸಲು ಗೃಹ ಸಚಿವ ಶ್ರೀ ಅಮಿತ್ ಶಾ ಅವರ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು ಸೈಬರ್ ವಂಚನೆಯಿಂದಾಗುವ ಆರ್ಥಿಕ ನಷ್ಟವನ್ನು ತಡೆಗಟ್ಟಲು ರಾಷ್ಟ್ರೀಯ ಸಹಾಯವಾಣಿ 155260 ಮತ್ತು ವರದಿ ಮಾಡುವ ವೇದಿಕೆಯನ್ನು ಕಾರ್ಯಗತಗೊಳಿಸಿದೆ. ಸೈಬರ್ ವಂಚನೆಗಳಿಂದ ಮೋಸ ಹೋದ ವ್ಯಕ್ತಿಗಳ ಕಷ್ಟಾರ್ಜಿತ ಹಣದ ನಷ್ಟವನ್ನು ತಡೆಗಟ್ಟಲು ಇಂತಹ ಪ್ರಕರಣಗಳನ್ನು ವರದಿ ಮಾಡಲು ರಾಷ್ಟ್ರೀಯ ಸಹಾಯವಾಣಿ ಮತ್ತು ವರದಿ ಮಾಡುವ ವೇದಿಕೆಯ ಒಂದು ವ್ಯವಸ್ಥೆಯನ್ನು ಒದಗಿಸುತ್ತದೆ.

ಸಹಾಯವಾಣಿಯನ್ನು 2021 ಏಪ್ರಿಲ್ 1ರಂದು ಆರಂಭಿಸಲಾಗಿದೆ. ಸಹಾಯವಾಣಿ 155260 ಮತ್ತು ಅದರ ವರದಿ ಮಾಡುವ ವೇದಿಕೆಯನ್ನು ಗೃಹ ವ್ಯವಹಾರಗಳ ಸಚಿವಾಲಯದಡಿಯಲ್ಲಿನ ಭಾರತೀಯ ಸೈಬರ್ ಅಪರಾಧ ಸಹಯೋಗ ಕೇಂದ್ರ (4ಸಿ), ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ..), ಎಲ್ಲ ಪ್ರಮುಖ ಬ್ಯಾಂಕ್ ಗಳು, ಪಾವತಿ ಬ್ಯಾಂಕ್ ಗಳು ಮತ್ತು ಆನ್ ಲೈನ್ ವರ್ತಕರ ಸಹಯೋಗ ಮತ್ತು ಸಕ್ರಿಯ ಬೆಂಬಲದೊಂದಿಗೆ ಕಾರ್ಯಗತಗೊಳಿಸಿದೆ.

ಕಾನೂನು ಜಾರಿ ಸಂಸ್ಥೆಗಳು ಮತ್ತು ಬ್ಯಾಂಕುಗಳು ಹಾಗೂ ಹಣಕಾಸು ಮಧ್ಯವರ್ತಿಗಳನ್ನು ಒಗ್ಗೂಡಿಸಲು ನಾಗರಿಕರು ಸೈಬರ್ ಹಣಕಾಸು ಅಪರಾಧದ ವರದಿ ಮಾಡುವ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಆಂತರಿಕವಾಗಿ 4ಸಿ ಅಭಿವೃದ್ಧಿಪಡಿಸಿದೆ. ಇದನ್ನು ಪ್ರಸ್ತುತ 155260ರೊಂದಿಗೆ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಛತ್ತೀಸಗಢ, ದೆಹಲಿ, ಮಧ್ಯ ಪ್ರದೇಶ, ರಾಜಾಸ್ಥಾನ, ತೆಲಂಗಾಣ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ) ಬಳಸುತ್ತಿದ್ದು, ಇದು ದೇಶದ ಒಟ್ಟು ಜನಸಂಖ್ಯೆಯ ಶೇ.35ರಷ್ಟು ವ್ಯಾಪ್ತಿ ಹೊಂದಿದೆವಂಚಕರಿಂದ ಹೊರಬಂದ ಹಣದ ಹರಿವನ್ನು ತಡೆಗಟ್ಟಲು ರಾಷ್ಟ್ರಾದ್ಯಂತದ ವ್ಯಾಪ್ತಿಗಾಗಿ ಇತರ ರಾಜ್ಯಗಳಲ್ಲೂ ಇದರ ಅನುಷ್ಠಾನದ ಸಿದ್ಧತೆ ನಡೆಯುತ್ತಿದೆ. ಇದರಿಂದ ಎರಡು ತಿಂಗಳ ಅಲ್ಪಾವಧಿಯಲ್ಲಿ, ಸಹಾಯವಾಣಿ -155260, ವಂಚನೆಗೊಳಗಾದ ಹಣ ವಂಚಕರ ಕೈಗೆ ತಲುಪದಂತೆ ತಡೆದಿದ್ದು, 1.85 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಉಳಿಸಲು ಸಾಧ್ಯವಾಗಿದೆ, ದೆಹಲಿ ಮತ್ತು ರಾಜಸ್ಥಾನಗಳು ಅನುಕ್ರಮವಾಗಿ 58 ಲಕ್ಷ ರೂ. ಮತ್ತು.53 ಲಕ್ಷ ರೂ. ಉಳಿಸಿವೆ.

ಸೌಲಭ್ಯವು ಹೊಸ-ಯುಗದ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿ ಕೊಳ್ಳುವ ಮೂಲಕ ಆನ್ಲೈನ್ ವಂಚನೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಬಹುತೇಕ ಸಕಾಲದಲ್ಲಿ ಕ್ರಮ ಕೈಗೊಳ್ಳಲು ಬ್ಯಾಂಕುಗಳು ಮತ್ತು ಪೊಲೀಸರಿಗೆ ಅಧಿಕಾರ ನೀಡುತ್ತದೆ. ಆನ್ಲೈನ್ ವಂಚನೆ ಪ್ರಕರಣಗಳಲ್ಲಿ ವಂಚನೆಗೊಳಗಾದ ಆರ್ಥಿಕ ನಷ್ಟವನ್ನು ತಪ್ಪಿಸಿ, ಹಣದ ಹಾದಿಯನ್ನು ಬೆನ್ನಟ್ಟುವ ಮೂಲಕ ಮತ್ತು ವಂಚಕರ ಡಿಜಿಟಲ್ ಪರಿಸರ ವ್ಯವಸ್ಥೆಯಿಂದ ಹೊರತೆಗೆಯುವ ಮೊದಲು ಅದರ ಮುಂದಿನ ಹರಿವನ್ನು ನಿಲ್ಲಿಸುವ ಮೂಲಕ ತಡೆಯಬಹುದು.

ಸಹಾಯವಾಣಿ ಮತ್ತು ಅದಕ್ಕೆ ಸಂಬಂಧಿಸಿದ ವೇದಿಕೆ ಕೆಳಕಂಡ ಕಾರ್ಯವಿಧಾನದಂತೆ ಕಾರ್ಯ ನಿರ್ವಹಿಸುತ್ತದೆ:

  1. ಸೈಬರ್ ವಂಚನೆಗೆ ಒಳಗಾದವರು ಸಹಾಯವಾಣಿ ಸಂಖ್ಯೆ. 155260ಕ್ಕೆ ಕರೆ ಮಾಡಿದರೆ, ಇದನ್ನು ಸಂಬಂಧಪಟ್ಟ ರಾಜ್ಯ ಪೊಲೀಸರು ನಿರ್ವಹಿಸುತ್ತಾರೆ.
  2. ಪೊಲೀಸ್ ಆಪರೇಟರ್ ವಂಚನೆ ವಹಿವಾಟಿನ ವಿವರಗಳನ್ನು  ಮತ್ತು ಕರೆ ಮಾಡಿದವರ ಅಗತ್ಯ ವೈಯಕ್ತಿಕ  ಮಾಹಿತಿಯನ್ನು ಬರೆದುಕೊಳ್ಳುತ್ತಾರೆ ಮತ್ತು ನಂತರ ಅದನ್ನು ನಾಗರಿಕ ಸೈಬರ್ ಹಣಕಾಸು ವಂಚನೆ ವರದಿ ಮಾಡುವುದು ಮತ್ತು ನಿರ್ವಹಣಾ ವ್ಯವಸ್ಥೆಯಲ್ಲಿ ಟಿಕೆಟ್ ರೂಪದಲ್ಲಿ ಸಲ್ಲಿಸುತ್ತಾರೆ.
  3. ವಂಚನೆಗೆ ಒಳಗಾದವರ ಬ್ಯಾಂಕ್ ಅಥವಾ ವಂಚನೆಗೊಳಗಾದ ಹಣ ವರ್ಗಾವಣೆಯಾದ ಬ್ಯಾಂಕ್ / ವ್ಯಾಲೆಟ್ ಅನ್ನು ಅವಲಂಬಿಸಿ, ಟಿಕೆಟ್ ಅನ್ನು ಸಂಬಂಧಪಟ್ಟ ಬ್ಯಾಂಕುಗಳುವಾಲೆಟ್ಸ್, ವ್ಯಾಪಾರಿಗಳು ಮತ್ತು ಮೊದಲಾದವರಿಗೆ ಕಳುಹಿಸಲಾಗುತ್ತದೆ.
  4. ವಂಚನೆಯ ಸಂಪೂರ್ಣ ಮಾಹಿತಿಯನ್ನು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ (https://cybercrime.gov.in/) ನಲ್ಲಿ 24 ಗಂಟೆಗಳ ಒಳಗಾಗಿ  ದೂರು ಸ್ವೀಕೃತಿ ಸಂಖ್ಯೆಯೊಂದಿಗೆ ದಾಖಲಿಸುವಂತೆ ಸೂಚಿಸಿ ವಂಚನೆಗೊಳಗಾದವರಿಗೆ ದೂರು ಸ್ವೀಕೃತಿಯ ಸಂಖ್ಯೆಯೊಂದಿಗೆ ಒಂದು ಎಸ್.ಎಂ.ಎಸ್. ಅನ್ನು ಕೂಡ ಕಳುಹಿಸಲಾಗುತ್ತದೆ.
  5. ಸಂಬಂಧಿತ ಬ್ಯಾಂಕ್, ವರದಿ ಮಾಡುವ ಪೋರ್ಟಲ್ ಡ್ಯಾಷ್ ಬೋರ್ಡ್ ನಲ್ಲಿ ಟಿಕೆಟ್ ಅನ್ನು ಈಗ ನೋಡಿ, ವಿವರಗಳನ್ನು ತನ್ನ ಆಂತರಿಕ ವ್ಯವಸ್ಥೆಯಲ್ಲಿ ಪರಿಶೀಲಿಸುತ್ತದೆ.
  6. ವಂಚನೆಗೆ ಒಳಗಾದ ಹಣ ಇನ್ನೂ ಲಭ್ಯವಿದ್ದರೆಅಂದರೆ, ವಂಚಕ ಇನ್ನೂ ಹಣ ಹಿಂಪಡೆಯದೇ ಇದ್ದಲ್ಲಿ ಬ್ಯಾಂಕ್ ಅದನ್ನು ತಡೆಹಿಡಿಯುತ್ತದೆಒಂದೊಮ್ಮೆ ವಂಚನೆಯಾದ ಹಣ ಮತ್ತೊಂದು ಬ್ಯಾಂಕ್ ಗೆ ಹೋಗಿದ್ದರೆ, ಟಿಕೆಟ್ ಹಣ ಹೋಗಿರುವ ಮುಂದಿನ ಬ್ಯಾಂಕ್ ಗೆ ಹೋಗುತ್ತದೆ. ಉಳಿಸಲಾದ ಹಣ ವಂಚಕರ ಕೈ ತಲುಪದಂತೆ ಮಾಡುವವರೆಗೆ ಪ್ರಕ್ರಿಯೆ ಪುನರಾವರ್ತನೆಯಾಗುತ್ತದೆ

ಪ್ರಸ್ತುತ, ಸಹಾಯವಾಣಿ ಮತ್ತು ಅದರ ವರದಿ ಮಾಡುವ ವೇದಿಕೆ ಎಲ್ಲ ಪ್ರಮುಖ ಸಾರ್ವಜನಿಕ ವಲಯದ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳನ್ನು ತನ್ನ ಆನ್ ಬೋರ್ಡ್ ನಲ್ಲಿ ಒಳಗೊಂಡಿದೆ. ಅವುಗಳಲ್ಲಿ ಉಲ್ಲೇಖಾರ್ಹವಾದವುಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್, ಇಂಡನ್ ಲ್ಯಾಂಡ್, ಎಚ್.ಡಿ.ಎಫ್.ಸಿ. ಬ್ಯಾಂಕ್, .ಸಿ..ಸಿ.. ಬ್ಯಾಂಕ್, ಆಕ್ಸಿಸ್, ಯಸ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಸೇರಿವೆ. ಇದು ಎಲ್ಲ ಪ್ರಮುಖ ವ್ಯಾಲೆಟ್ ಗಳು ಅಂದರೆ ಪೇಟಿಎಂ, ಫೋನ್ ಪೇ, ಮೋಬಿಕ್ ವಿಕ್, ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಅನ್ನು ಸಹ ಇದರಲ್ಲಿ ಸಂಪರ್ಕಿಸಿದೆ.

ಸಹಾಯವಾಣಿಯ ಮತ್ತು ವರದಿ ಮಾಡುವ ವೇದಿಕೆಯ ಯಶಸ್ಸನ್ನು ಹಲವಾರು ಸಂದರ್ಭಗಳಲ್ಲಿ, ವಂಚನೆಗೊಳಗಾದ ಹಣದ ಜಾಡು ಮರೆ ಮಾಚಿಸಲು, ವಂಚಕರಿಂದ ಐದು ವಿಭಿನ್ನ ಬ್ಯಾಂಕುಗಳಿಗೆ ವರ್ಗಾವಣೆಯಾಗಿದ್ದರೂ, ಹಣ ವಂಚಕರನ್ನು ತಲುಪುವುದನ್ನು ತಡೆಯುವುದರಿಂದ ನಿರ್ಧರಿಸಲಾಗುತ್ತದೆ.

***



(Release ID: 1728074) Visitor Counter : 272