ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವ ಪರಿಸರ ದಿನದಂದು ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ

Posted On: 05 JUN 2021 3:15PM by PIB Bengaluru

ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳಾದ ಶ್ರೀ ನಿತಿನ್ ಗಡ್ಕರಿ ಜಿ, ಶ್ರೀ ನರೇಂದ್ರ ಸಿಂಗ್ ತೋಮರ್ ಜಿ, ಶ್ರೀ ಪ್ರಕಾಶ್ ಜಾವಡೇಕರ್ ಜಿ, ಶ್ರೀ ಪಿಯೂಷ್ ಗೋಯಲ್ ಜಿ, ಶ್ರೀ ಧರ್ಮೇಂದ್ರ ಪ್ರಧಾನ್ ಜಿ, ಗುಜರಾತ್ ನಖೇಡಾದ ಸಂಸದ ಶ್ರೀ ದೇವಸಿಂಹ್ ಜೆಸಿಂಗ್ಭಾಯ್ ಚೌಹಾನ್ ಜಿ, ಹರ್ಡೋಯಿ ಸಂಸದ ಶ್ರೀ ಜಾವ್ ಪ್ರಕಾ ಪುಣೆಯ ಮೇಯರ್ ಶ್ರೀ ಮುರ್ಲಿಧರ್ ಮೊಹೋಲ್ ಜಿ, ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಶನ್‌ನ ಮೇಯರ್ ಶ್ರೀಮತಿ ಉಷಾ ಜಿ, ಕಾರ್ಯಕ್ರಮದಲ್ಲಿ ಹಾಜರಿರುವ ಇತರ ಗಣ್ಯರು ಮತ್ತು ನನ್ನ ಆತ್ಮೀಯ ಸಹೋದರ ಸಹೋದರಿಯರೇ,

ನಾನು ನಮ್ಮ ರೈತ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, ಜೈವಿಕ ಇಂಧನಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ಅವರು ಹೇಗೆ ಸುಲಭವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ನನಗೆ ಸ್ಪಷ್ಟವಾಗಿ ವಿವರಿಸುತ್ತಿದ್ದರು. ಇದು ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಪ್ರಸ್ತುತ ನಮ್ಮ ದೇಶದಲ್ಲಿ ನಡೆಯುತ್ತಿರುವ ಬೃಹತ್ ಶುದ್ಧ ಇಂಧನ ಅಭಿಯಾನದಿಂದ ದೇಶದ ಕೃಷಿ ಕ್ಷೇತ್ರಕ್ಕೆ ಭಾರಿ ಲಾಭ ದೊರೆಯುವುದು ಸಹಜ. ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಭಾರತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಇಂದು ಎಥೆನಾಲ್ ಕ್ಷೇತ್ರದ ಅಭಿವೃದ್ಧಿಗೆ ಸವಿವರವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವ ಭಾಗ್ಯ ನನಗೆ ದೊರಕಿದೆ. ದೇಶಾದ್ಯಂತ ಎಥೆನಾಲ್ ಉತ್ಪಾದನೆ ಮತ್ತು ವಿತರಣೆಗಾಗಿ ಮಹತ್ವಾಕಾಂಕ್ಷೆಯ -100 ಪೈಲಟ್ ಯೋಜನೆಯನ್ನು ಇಂದು ಪುಣೆಯಲ್ಲಿಯೂ ಉದ್ಘಾಟಿಸಲಾಗಿದೆ. ಪುಣೆಯ ಜನರು ಮತ್ತು ಪುಣೆಯ ಮೇಯರ್ ಅವರನ್ನು ನಾನು ಇದಕ್ಕಾಗಿ ಅಭಿನಂದಿಸುತ್ತೇನೆ. ಸಮಯಕ್ಕೆ ಸರಿಯಾಗಿ ನಮ್ಮ ಗುರಿಗಳನ್ನು ಸಾಧಿಸಲು ನಾವು ಸಕಾಲಿಕವಾಗಿ ಸಮರ್ಥರಾಗುತ್ತಿದ್ದೇವೆ ಎಂದು ನಾನು ಬಯಸುತ್ತೇನೆ.  

ಸ್ನೇಹಿತರೇ,

ಸುಮಾರು 7-8 ವರ್ಷಗಳ ಹಿಂದೆ ಎಥೆನಾಲ್ ಅನ್ನು ದೇಶದಲ್ಲಿ ವಿರಳವಾಗಿ ಚರ್ಚಿಸಲಾಯಿತು. ಯಾರೂ ಕೂಡ ಇದರ ಬಗ್ಗೆ ಮಾತನಾಡಲಿಲ್ಲ. ಮತ್ತು ಅದು ಇದ್ದರೂ, ಅದು ಸಂಅನ್ಯ ( ಪ್ರಾಸಂಗಿಕ ) ರೀತಿಯಲ್ಲಿತ್ತು. ಆದರೆ ಈಗ ಎಥೆನಾಲ್ 21 ನೇ ಶತಮಾನದ ಭಾರತದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಎಥೆನಾಲ್ ಮೇಲೆ ಗಮನ ಹೆಚ್ಚು ಕೇಂದ್ರೀಕರಿಸುವುದರಿಂದ ಪರಿಸರದ ಮೇಲೆ ಮತ್ತು ರೈತರ ಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. 2025 ವೇಳೆಗೆ ಪೆಟ್ರೋಲ್‌ನಲ್ಲಿ 20 ಪ್ರತಿಶತದಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಪೂರೈಸಲು ನಾವು ನಿರ್ಧರಿಸಿದ್ದೇವೆ. ನಾವು ಮೊದಲು ಗುರಿಯ ಬಗ್ಗೆ ಯೋಚಿಸಿದಾಗ, 2030 ವೇಳೆಗೆ ಗುರಿಯನ್ನು ಸಾಧಿಸಲು ನಿರ್ಧರಿಸಲಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಯಶಸ್ಸಿನ ದೃಷ್ಟಿಯಿಂದ, ಸಾರ್ವಜನಿಕರ ಬೆಂಬಲ, ಜನರಲ್ಲಿ ಅರಿವು ಮತ್ತು ಪ್ರತಿಯೊಬ್ಬರೂ ಅದರ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವುದರಿಂದ, ಉದ್ಧೇಶಿತ ಮೂಲ ಗುರಿಯ ಐದು ವರ್ಷಗಳ ಮೊದಲು, ಅಂದರೆ 2025 ವೇಳೆಗೆ ನಮ್ಮ ಗುರಿಯನ್ನು ತಲುಪಲು ನಾವು ನಿರ್ಧರಿಸಿದ್ದೇವೆ

ಸ್ನೇಹಿತರೇ,

ಕಳೆದ 7 ವರ್ಷಗಳಲ್ಲಿ ದೇಶ ಸಾಧಿಸಿದ ಗುರಿಗಳು, ದೇಶ ಮಾಡಿದ ಪ್ರಯತ್ನಗಳು ಮತ್ತು ಅದು ಸಾಧಿಸಿದ ಯಶಸ್ಸಿನಿಂದಾಗಿ ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ತುಂಬಿದೆ. 2014 ರವರೆಗೆ, ಭಾರತದಲ್ಲಿ ಸರಾಸರಿ 1.5 ಪ್ರತಿಶತದಷ್ಟು ಎಥೆನಾಲ್ ಅನ್ನು ಮಾತ್ರ ಮಿಶ್ರಣ ಮಾಡಬಹುದಾಗಿದೆ, ಅದು ಈಗ ಸುಮಾರು 8.5 ಪ್ರತಿಶತವನ್ನು ತಲುಪಿದೆ. 2013-14ರಲ್ಲಿ ದೇಶದಲ್ಲಿ ಸುಮಾರು 38 ಕೋಟಿ ಲೀಟರ್ ಎಥೆನಾಲ್ ಖರೀದಿಸಲಾಗಿದೆ. ಈಗ ಇದು 320 ಕೋಟಿ ಲೀಟರ್‌ ಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ, ಅಂದರೆ, ಎಥೆನಾಲ್ ಖರೀದಿಯನ್ನು ಸುಮಾರು ಎಂಟು ಪಟ್ಟು ಹೆಚ್ಚಿಸಲಾಗಿದೆ. ಕಳೆದ ವರ್ಷವಷ್ಟೇ ತೈಲ ಮಾರುಕಟ್ಟೆ ಕಂಪನಿಗಳು ಸುಮಾರು 21,000 ಕೋಟಿ ರೂಪಾಯಿ ಮೌಲ್ಯದ ಎಥೆನಾಲ್ ಖರೀದಿಸಿವೆ. 21,000 ಕೋಟಿ ರೂಪಾಯಿಗಳ ಬಹುಪಾಲು ಭಾಗವು ದೇಶದ ರೈತರ ಪಾಲಿಗೆ ಸೇರಿದೆ (ರೈತರ ಜೇಬಿಗೆ ಹೋಗಿದೆ). ಇದು ಕಬ್ಬಿನ ರೈತರಿಗೆ ವಿಶೇಷವಾಗಿ ಪ್ರಯೋಜನವನ್ನು ನೀಡಿದೆ. 2025 ವೇಳೆಗೆ 20 ಪ್ರತಿಶತದಷ್ಟು ಎಥೆನಾಲ್ ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡಲು ಪ್ರಾರಂಭಿಸಿದಾಗ, ಬೃಹತ್‌ ಪ್ರಮಾಣದಲ್ಲಿ ಹಣವನ್ನು ತೈಲ ಕಂಪನಿಗಳಿಂದ ನೇರವಾಗಿ ರೈತರು ಪಡೆಯುತ್ತಾರೆ ಎಂದು ನೀವು ಈಗ ಸ್ಪಷ್ಟವಾಗಿ ಊಹಿಸಬಹುದು. ಸಕ್ಕರೆಯ ಅಧಿಕ ಉತ್ಪಾದನೆಗೆ ಸಂಬಂಧಿಸಿದ ಸವಾಲುಗಳನ್ನು ತಗ್ಗಿಸಲು ಇದು ಸಹಾಯ ಮಾಡುತ್ತದೆ. ಕೆಲವೊಮ್ಮೆ, ಹೆಚ್ಚಿನ ಇಳುವರಿಯಿಂದಾಗಿ ಜಗತ್ತಿನಲ್ಲಿ ಖರೀದಿದಾರರು ಇಲ್ಲ ಮತ್ತು ದೇಶದಲ್ಲಿ ಬೆಲೆಗಳು ಸಹ ಕುಸಿಯುತ್ತವೆ. ನಂತರ ಅದನ್ನು ಎಲ್ಲಿ ಸಂಗ್ರಹಿಸಬೇಕು ಎಂಬ ದೊಡ್ಡ ಸವಾಲು ಇದೆ. ಅಂತಹ ಎಲ್ಲಾ ಸವಾಲುಗಳನ್ನು ತಗ್ಗಿಸುವುದರಿಂದ ಕಬ್ಬಿನ ರೈತರಿಗೆ ನೇರವಾಗಿ ಪ್ರಯೋಜನವಾಗುತ್ತದೆ.

ಸ್ನೇಹಿತರೇ,

21 ನೇ ಶತಮಾನದ ಆಧುನಿಕ ಚಿಂತನೆ ಮತ್ತು ಆಧುನಿಕ ನೀತಿಗಳಿಂದ ಮಾತ್ರ 21 ನೇ ಶತಮಾನದ ಭಾರತವು ಇಂಧನ-ಶಕ್ತಿಯನ್ನು ಪಡೆಯಬಹುದು. ಚಿಂತನೆಯೊಂದಿಗೆ ಸರ್ಕಾರ ಪ್ರತಿಯೊಂದು ಕ್ಷೇತ್ರದಲ್ಲೂ ನೀತಿ ನಿರ್ಧಾರಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದೆ. ದೇಶದಲ್ಲಿ ಎಥೆನಾಲ್ ಉತ್ಪಾದನೆ ಮತ್ತು ಖರೀದಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಲ್ಲಿಯವರೆಗೆ, ಹೆಚ್ಚಿನ ಎಥೆನಾಲ್ ಉತ್ಪಾದನಾ ಘಟಕಗಳು ಸಕ್ಕರೆ ಉತ್ಪಾದನೆ ಹೆಚ್ಚಿರುವ 4-5 ರಾಜ್ಯಗಳಲ್ಲಿ ಕೇಂದ್ರೀಕೃತವಾಗಿತ್ತು. ಕೊಳೆತ ಧಾನ್ಯವನ್ನು ಬಳಸಲು ಮತ್ತು ಇದನ್ನು ಇಡೀ ದೇಶಕ್ಕೆ ವಿಸ್ತರಿಸಲು ಈಗ ಆಹಾರ ಧಾನ್ಯ ಆಧಾರಿತ ಡಿಸ್ಟಿಲರಿಗಳನ್ನು ಸ್ಥಾಪಿಸಲಾಗುತ್ತಿದೆ. ಕೃಷಿ ತ್ಯಾಜ್ಯದಿಂದ ಎಥೆನಾಲ್ ತಯಾರಿಸಲು ಆಧುನಿಕ ತಂತ್ರಜ್ಞಾನ ಆಧಾರಿತ ಸಸ್ಯಗಳನ್ನು ದೇಶದಲ್ಲಿ ಸ್ಥಾಪಿಸಲಾಗುತ್ತಿದೆ

ಸ್ನೇಹಿತರೇ,

ಹವಾಮಾನ ಬದಲಾವಣೆಯ ಭೀತಿಯನ್ನು ನಿಭಾಯಿಸುವ ಜಾಗತಿಕ ಪ್ರಯತ್ನಗಳಲ್ಲಿ ಭಾರತವು ಇಡೀ ವಿಶ್ವಕ್ಕೇ ಭರವಸೆಯ ಕಿರಣವಾಗಿ ಹೊರಹೊಮ್ಮಿದೆ. ಇಂದು, ಭಾರತವು ಮಾನವಕುಲದ ಕಲ್ಯಾಣಕ್ಕಾಗಿ ವಿಶ್ವಾಸಾರ್ಹ ಪಾಲುದಾರನಾಗಿ ತನ್ನ ಛಾಪು ಮೂಡಿಸಿದೆ. ಭಾರೀ ಜನಸಂಖ್ಯೆಯಿಂದಾಗಿ ಭಾರತವು ಹವಾಮಾನ ಬದಲಾವಣೆಗೆ ಸವಾಲಾಗಿದೆ ಎಂಬ ರೀತಿಯಲ್ಲಿ ಇಡೀವಿಶ್ವವೇ ಭಾರತವನ್ನು ಒಮ್ಮೆ ನೋಡುತ್ತಿದ್ದ ಕಾಲವಿತ್ತು. ಇಂದು ಪರಿಸ್ಥಿತಿ ಬದಲಾಗಿದೆ. ಇಂದು ನಮ್ಮ ದೇಶವು ಹವಾಮಾನ ನ್ಯಾಯದ ನಾಯಕ (ಮುಂಚೂಣಿ) ದೇಶವಾಗಿ ಹೊರಹೊಮ್ಮುತ್ತಿದೆ ಮತ್ತು ಭೀಕರ ಬಿಕ್ಕಟ್ಟಿನ ವಿರುದ್ಧ ದೊಡ್ಡ ಶಕ್ತಿಯಾಗಿದೆ. ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್‌ (ಒನ್ ಸನ್, ಒನ್ ವರ್ಲ್ಡ್, ಒನ್ ಗ್ರಿಡ್ ) ಮತ್ತು ಒಕ್ಕೂಟದ ವಿಪತ್ತು ನಿರೋಧಕ ಮೂಲಸೌಕರ್ಯ ಉಪಕ್ರಮದ ಸಾಕ್ಷಾತ್ಕಾರಕ್ಕಾಗಿ ಅಂತರರಾಷ್ಟ್ರೀಯ ಸೌರ ಒಕ್ಕೂಟದ ಸ್ಥಾಪನೆಯಂತಹ ಉನ್ನತ ಜಾಗತಿಕ ದೃಷ್ಟಿಯೊಂದಿಗೆ ಭಾರತ ಮುಂದೆ ಸಾಗುತ್ತಿದೆ. ಹವಾಮಾನ ಬದಲಾವಣೆಯ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಭಾರತವು ವಿಶ್ವದ ಅಗ್ರ 10 ರಾಷ್ಟ್ರಗಳಲ್ಲಿ ಒಂದಾಗಿ ತನ್ನನ್ನು ತಾನು ಗುರುತಿಸಿಕೊಂಡು ತನ್ನ ಸ್ಥಾನ ಸ್ಥಾಪಿಸಿಕೊಂಡಿದೆ.

ಸ್ನೇಹಿತರೇ

ಹವಾಮಾನ ವೈಪರೀತ್ಯದಿಂದಾಗಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಭಾರತಕ್ಕೆ ತಿಳಿದಿದೆ ಮತ್ತು ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಒಂದೆಡೆ, ನಾವು ಗ್ಲೋಬಲ್ ಸೌತ್‌ನಲ್ಲಿ ಇಂಧನ ನ್ಯಾಯದ ಬಗ್ಗೆ ಸೂಕ್ಷ್ಮವಾಗಿರುತ್ತೇವೆ ಮತ್ತು ಗ್ಲೋಬಲ್ ನಾರ್ತ್‌ನ ಜವಾಬ್ದಾರಿಗಳಿಗಾಗಿ ಸಲಹೆ ನೀಡುತ್ತೇವೆ, ಮತ್ತೊಂದೆಡೆ, ನಾವು ನಮ್ಮ ಪಾತ್ರವನ್ನು ಅತ್ಯಂತ ಗಂಭೀರತೆಯಿಂದ ನಿರ್ವಹಿಸುತ್ತಿದ್ದೇವೆ. ನಮ್ಮ ನೀತಿಗಳು ಮತ್ತು ನಿರ್ಧಾರಗಳಲ್ಲಿ ಕಠಿಣ ಮತ್ತು ಮೃದುವಾದ ಅಂಶಗಳು ಸಮಾನವಾಗಿ ಮುಖ್ಯವಾದ ಶಕ್ತಿಯ ಪರಿವರ್ತನೆಯ ಮಾರ್ಗವನ್ನು ಭಾರತ ಆಯ್ಕೆ ಮಾಡಿದೆ. ನಾನು ಕಠಿಣ ಘಟಕಗಳ ಬಗ್ಗೆ ಮಾತನಾಡಿದರೆ, ದೊಡ್ಡ ಗುರಿಗಳನ್ನು ಕಾರ್ಯಗತಗೊಳಿಸಲು ಭಾರತದ ಅಭೂತಪೂರ್ವ ವೇಗವನ್ನು ಜಗತ್ತು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ. ನವೀಕರಿಸಬಹುದಾದ ಇಂಧನಕ್ಕಾಗಿ ಇರುವ ನಮ್ಮ ಸಾಮರ್ಥ್ಯವು ಕಳೆದ 6-7 ವರ್ಷಗಳಲ್ಲಿ 250 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ದೃಷ್ಟಿಯಿಂದ ಭಾರತ ಇಂದು ವಿಶ್ವದ ಅಗ್ರ 5 ರಾಷ್ಟ್ರಗಳಲ್ಲಿ ಒಂದಾಗಿದೆ. ಮುಖ್ಯವಾಗಿ, ಕಳೆದ 6 ವರ್ಷಗಳಲ್ಲಿ ಸೌರ ಶಕ್ತಿಯ ಸಾಮರ್ಥ್ಯವು ಸುಮಾರು 15 ಪಟ್ಟು ಹೆಚ್ಚಾಗಿದೆ. ಇಂದು ಭಾರತವು ಗುಜರಾತ್‌ ಕಛ್‌  ಮರುಭೂಮಿಯಲ್ಲಿ ವಿಶ್ವದ ಅತಿದೊಡ್ಡ ಸೌರ ಮತ್ತು ಹೈಬ್ರಿಡ್ ಎನರ್ಜಿ ಪಾರ್ಕ್ ಅನ್ನು ನಿರ್ಮಿಸುತ್ತಿದೆ ಮತ್ತು 14 ಜಿಡಬ್ಲ್ಯೂ ಉತ್ಪಾದನೆಯ ಹಳೆಯ ಕಲ್ಲಿದ್ದಲು ಸ್ಥಾವರಗಳನ್ನು ಮುಚ್ಚಲಾಗಿದೆ. ಮೃದುವಾದ ವಿಧಾನದಿಂದ ದೇಶವು ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದೆ. ಇಂದು ದೇಶದ ಸಾಮಾನ್ಯರು ಪರಿಸರ ಪರ ಅಭಿಯಾನಕ್ಕೆ ಸೇರಿದ್ದಾರೆ ಮತ್ತು ಅವರು ಅದನ್ನು ಮುನ್ನಡೆಸುತ್ತಿದ್ದಾರೆ.

ಏಕ ಬಳಕೆಯ ಪ್ಲಾಸ್ಟಿಕ್ ಬಗ್ಗೆ ನಮ್ಮಲ್ಲಿ ಹೇಗೆ ಜಾಗೃತಿ ಮೂಡಿಸಲಾಗಿದೆ ಎಂಬುದನ್ನು ನಾವು ಒಮ್ಮೆ ನೋಡಬಹುದು. ಜನರು ಕೂಡ ತಮ್ಮದೇ ಆದ ರೀತಿಯಲ್ಲಿ ಸ್ವಲ್ಪ ಪ್ರಯತ್ನಿಸುತ್ತಿದ್ದಾರೆ. ನಿಟ್ಟಿನಲ್ಲಿ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ನಮ್ಮ ಕಡಲತೀರಗಳ ಸ್ವಚ್ಛತೆಯನ್ನು ನೋಡಿ, ಯುವಕರು ಅವರದೇ ಆದರೀತಿಯಲ್ಲಿ ನಾನಾ ಉಪಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ. ಅಥವಾ ಸ್ವಚ್ಛ ಭಾರತ್ ನಂತಹ ಅಭಿಯಾನವಾಗಲಿ, ದೇಶದ ಸಾಮಾನ್ಯ ನಾಗರಿಕರು ಇವುಗಳನ್ನು ತಮ್ಮ ಜವಾಬ್ದಾರಿಯಾಗಿ ತೆಗೆದುಕೊಂಡು ಇಂದು ಅದನ್ನು ಮುಂದೆ ತೆಗೆದುಕೊಂಡು ಹೋಗಿದ್ದಾರೆ. 37 ಕೋಟಿಗೂ ಹೆಚ್ಚು ಎಲ್‌..ಡಿ ಬಲ್ಬ್‌ಗಳು ಮತ್ತು 23 ಲಕ್ಷಕ್ಕೂ ಹೆಚ್ಚು ಇಂಧನ ದಕ್ಷತೆಯ ಫ್ಯಾನ್‌ ಗಳನ್ನು ವಿತರಿಸಲಾಗಿದೆ ಇವುಗಳು ಪರಿಸರ ಸಂರಕ್ಷಣೆಯ ಮೇಲೆ ಉತ್ತಮ ಪರಿಣಾಮ ಬೀರಿದೆ ಮತ್ತು ಜನರು ಇದನ್ನು ಚರ್ಚಿಸಲು ಸಹ ಮರೆತಿದ್ದಾರೆ. ಆದರೆ ಇದು ಪ್ರಮುಖ ಚರ್ಚೆಯ ವಿಷಯವಾಗಿರಬೇಕು. ಅಂತೆಯೇ, ಉಜ್ವಾಲಾ ಯೋಜನೆಯಡಿ ಉಚಿತ ಅನಿಲ ಸಂಪರ್ಕ ಮತ್ತು ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕವನ್ನು ಒದಗಿಸಿದ ನಂತರ ಕೋಟ್ಯಂತರ ಜನರು ಮರದ ಸೌಧೆ ಮೇಲೆ ಅವಲಂಬಿತರಾಗುವುದು ತಪ್ಪಿಹೋಗಿದೆ. ಮೊದಲು ಅವರು ಅಡಿಗೆಮನೆಗಳಲ್ಲಿ ಮರದಸೌಧೆಗಳನ್ನು ಸುಡುವ ಮೂಲಕ ಹೊಗೆಯಿಂದ ತಮ್ಮ ಜೀವನವನ್ನು ಕಳೆಯಬೇಕಾಗಿತ್ತು. ಮಾಲಿನ್ಯವನ್ನು ಕಡಿಮೆ ಮಾಡುವುದರ ಜೊತೆಗೆ, ಇದು ನಮ್ಮ ತಾಯಂದಿರು ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸಲು ಮತ್ತು ಪರಿಸರ ಸಂರಕ್ಷಣೆಯನ್ನು ಬಲಪಡಿಸಲು ಸಾಕಷ್ಟು ಸಹಾಯ ಮಾಡಿದೆ. ಆದರೆ ಇದನ್ನೂ ಹೆಚ್ಚು ಚರ್ಚಿಸಲಾಗುವುದಿಲ್ಲ. ಪ್ರಯತ್ನಗಳ ಮೂಲಕ ಭಾರತವು ಲಕ್ಷಾಂತರ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಗಟ್ಟಿದೆ ಮತ್ತು ಹವಾಮಾನ ಬದಲಾವಣೆ ತಗ್ಗಿಸುವಿಕೆಯ ದಿಕ್ಕಿನಲ್ಲಿ ಭಾರತವನ್ನು ನಾಯಕರನ್ನಾಗಿ ಮಾಡಿದೆ. ಅಂತೆಯೇ, ಮೂರು ಲಕ್ಷಕ್ಕೂ ಹೆಚ್ಚು ಇಂಧನ ದಕ್ಷತೆಯ ಪಂಪ್‌ಗಳನ್ನು ಸ್ಥಾಪಿಸುವ ಮೂಲಕ ದೇಶವು ಇಂದು ಲಕ್ಷಾಂತರ ಟನ್ ಇಂಗಾಲದ ಡೈಆಕ್ಸೈಡ್ ಗಾಳಿಯಲ್ಲಿ ಕರಗದಂತೆ ತಡೆಯುತ್ತಿದೆ.

ಸ್ನೇಹಿತರೇ

ಪರಿಸರ ಸಂರಕ್ಷಣೆಗಾಗಿ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುವ ಅಗತ್ಯವಿಲ್ಲ ಎಂದು ಜಗತ್ತಿಗೆ ಒಂದು ಉದಾಹರಣೆಯಾಗಿ ಭಾರತವು ಇಂದು ಎದ್ದ ನಿಂತಿದೆ. ಆರ್ಥಿಕತೆ ಮತ್ತು ಪರಿಸರ ವಿಜ್ಞಾನ ಎರಡೂ ಒಟ್ಟಿಗೆ ಹೋಗಿ ಮುಂದೆ ಸಾಗಬಹುದು. ಮತ್ತು ಭಾರತ ಆಯ್ಕೆ ಮಾಡಿದ ಮಾರ್ಗ ಇದು. ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ, ನಮ್ಮ ಅರಣ್ಯ ವ್ಯಾಪ್ತಿಯು ಕಳೆದ ಕೆಲವು ವರ್ಷಗಳಲ್ಲಿ 15,000 ಚದರ ಕಿಲೋಮೀಟರ್ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿದೆ ಮತ್ತು ಕಳೆದ ಕೆಲವು ವರ್ಷಗಳಲ್ಲಿ ಚಿರತೆಗಳ ಸಂಖ್ಯೆಯೂ ಸುಮಾರು 60 ಪ್ರತಿಶತದಷ್ಟು ಹೆಚ್ಚಾಗಿದೆ. ಎಲ್ಲದರ ಮಧ್ಯೆ, ಪೆಂಚ್ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ಸ್ನೇಹಿ ಕಾರಿಡಾರ್ ಕೂಡ ಇಂದು ಚರ್ಚೆಯ ವಿಷಯವಾಗಿದೆ

ಸ್ನೇಹಿತರೇ,

ಶುದ್ಧ (ಸ್ವಚ್ಛ) ಮತ್ತು ಪರಿಣಾಮಕಾರಿ ಇಂಧನ ವ್ಯವಸ್ಥೆಗಳು, ಸ್ಥಿತಿಸ್ಥಾಪಕ ನಗರ ಮೂಲಸೌಕರ್ಯ ಮತ್ತು ಯೋಜಿತ ಪರಿಸರ ಪುನಃಸ್ಥಾಪನೆ ಆತ್ಮಾ ನಿರ್ಭರ ಭಾರತ್ ಅಭಿಯಾನದ ಒಂದು ಪ್ರಮುಖ ಭಾಗವಾಗಿದೆ. ಹಸಿರು ಹೊದಿಕೆ, ಸೌರಶಕ್ತಿ ಚಾಲಿತ ಮಹಾನಗರಗಳು, ಎಲೆಕ್ಟ್ರಿಕ್ ವಾಹನಗಳತ್ತ ಗಮನಹರಿಸುವುದು ಅಥವಾ ಹೈಡ್ರೋಜನ್-ಚಾಲಿತ ವಾಹನಗಳ ಸಂಶೋಧನೆಯ ಪ್ರಚಾರವನ್ನು ಹೊಂದಿರುವ ಹೆದ್ದಾರಿ-ಎಕ್ಸ್‌ಪ್ರೆಸ್‌ವೇ ಆಗಿರಲಿ, ಇವೆಲ್ಲವನ್ನೂ ವಿವರವಾದ ಕಾರ್ಯತಂತ್ರದಿಂದ ರೂಪಿಸಲಾಗುತ್ತಿದೆ. ದೇಶದಲ್ಲಿ ಹೊಸ ಹೂಡಿಕೆ ಅವಕಾಶಗಳು ಸೃಷ್ಟಿಯಾಗುತ್ತಿವೆ ಮತ್ತು ಪರಿಸರ ಸಂಬಂಧಿತ ಪ್ರಯತ್ನಗಳಿಂದ ಲಕ್ಷಾಂತರ ಯುವಜನರು ಸಹ ಉದ್ಯೋಗ ಪಡೆಯುತ್ತಿದ್ದಾರೆ.

ಸ್ನೇಹಿತರೇ,

ವಾಯುಮಾಲಿನ್ಯವು ಉದ್ಯಮದ ಮೂಲಕ ಮಾತ್ರ ಹರಡುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಸತ್ಯವೆಂದರೆ ಸಾರಿಗೆ, ಅಶುದ್ಧ ಇಂಧನಗಳು ಮತ್ತು ಡೀಸೆಲ್ ಜನರೇಟರ್‌ಗಳಂತಹ ಅನೇಕ ಅಂಶಗಳು ಕೆಲವು ರೀತಿಯಲ್ಲಿ ಅಥವಾ ಇನ್ನೊಂದರಲ್ಲಿ ವಾಯುಮಾಲಿನ್ಯಕ್ಕೆ ಕಾರಣವಾಗುತ್ತವೆ. ಆದ್ದರಿಂದ, ಎಲ್ಲ ದಿಕ್ಕುಗಳಲ್ಲಿ ಭಾರತವು ರಾಷ್ಟ್ರೀಯ ಶುದ್ಧ ವಾಯು ಯೋಜನೆಯ ಮೂಲಕ ಸಮಗ್ರ ವಿಧಾನದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಜಲಮಾರ್ಗಗಳು ಮತ್ತು ಮಲ್ಟಿಮೋಡಲ್ ಸಂಪರ್ಕದ ಕುರಿತು ನಡೆಯುತ್ತಿರುವ ಕೆಲಸವು ಹಸಿರು ಸಾರಿಗೆಯ ಧ್ಯೇಯವನ್ನು ಬಲಪಡಿಸುವುದಲ್ಲದೆ, ದೇಶದ ಸಾರಿಗೆ ( ಲಾಜಿಸ್ಟಿಕ್ಸ್ ) ದಕ್ಷತೆಯನ್ನು ಸುಧಾರಿಸುತ್ತದೆ. ದೇಶದ ನೂರಾರು ಜಿಲ್ಲೆಗಳಲ್ಲಿ ಸಿ.ಎನ್‌.ಜಿ ಆಧಾರಿತ ಮೂಲಸೌಕರ್ಯಗಳ ರಚನೆ ಮತ್ತು ಫಾಸ್ಟ್ಯಾಗ್‌ನಂತಹ ಆಧುನಿಕ ವ್ಯವಸ್ಥೆಗಳು ಮಾಲಿನ್ಯವನ್ನು ಕಡಿಮೆ ಮಾಡಲು ಸಾಕಷ್ಟು ಸಹಾಯ ಮಾಡುತ್ತವೆ. ಇಂದು, ದೇಶದಲ್ಲಿ ಮೆಟ್ರೋ ರೈಲು ಸೇವೆ 5 ನಗರಗಳಿಂದ 18 ನಗರಗಳಿಗೆ ಹೆಚ್ಚಾಗಿದೆ. ಉಪನಗರ ರೈಲ್ವೆ ಯೋಜನೆಯು ವೈಯಕ್ತಿಕ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಸ್ನೇಹಿತರೇ,

ದೇಶದ ರೈಲ್ವೆ ಜಾಲದ ಹೆಚ್ಚಿನ ಭಾಗವನ್ನು ವಿದ್ಯುದ್ದೀಕರಿಸಲಾಗಿದೆ. ಸೌರ ವಿದ್ಯುತ್ ಆಧಾರಿತ ವಿಮಾನ ನಿಲ್ದಾಣಗಳನ್ನು ಸಹ ವೇಗವಾಗಿ ನಿರ್ಮಿಸಲಾಗುತ್ತಿದೆ. 2014 ಕ್ಕಿಂತ ಮೊದಲು, ಕೇವಲ 7 ವಿಮಾನ ನಿಲ್ದಾಣಗಳಲ್ಲಿ ಮಾತ್ರ ಸೌರಶಕ್ತಿ ಸೌಲಭ್ಯವಿತ್ತು, ಆದರೆ ಇಂದು ಸಂಖ್ಯೆ 50 ಕ್ಕಿಂತ ಹೆಚ್ಚಾಗಿದೆ. 80 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಎಲ್..ಡಿ. ದೀಪಗಳೊಂದಿಗೆ ಬೆಳಕಿನ ವ್ಯವಸ್ಥೆ ಅಳವಡಿಸಲಾಗಿದೆ. ಭವಿಷ್ಯದ ಸಿದ್ಧತೆಗಳಿಗೆ ಸಂಬಂಧಿಸಿದ ಮತ್ತೊಂದು ಉದಾಹರಣೆಯನ್ನು ನೀಡಲು ನಾನು ಬಯಸುತ್ತೇನೆ.

ವಿಶ್ವದ ಅತಿ ಎತ್ತರದ ಸ್ಮಾರಕವಾದ ಸರ್ದಾರ್ ವಲ್ಲಭಭಾಯ್ ಅವರ ಪ್ರತಿಮೆಯನ್ನು ಗುಜರಾತ್‌ನಲ್ಲಿ ನಿರ್ಮಿಸಲಾಗಿದೆ. ಪ್ರತಿಮೆಯ ಏಕತೆ ಇರುವ ಸುಂದರವಾದ ಕೆವಾಡಿಯಾ ನಗರವನ್ನು ಎಲೆಕ್ಟ್ರಿಕ್ ವೆಹಿಕಲ್ ಸಿಟಿಯಾಗಿ ಅಭಿವೃದ್ಧಿಪಡಿಸುವ ಕೆಲಸವೂ ನಡೆಯುತ್ತಿದೆ. ಭವಿಷ್ಯದಲ್ಲಿ, ಕೆವಾಡಿಯಾದಲ್ಲಿ ಬ್ಯಾಟರಿ ಆಧಾರಿತ ಬಸ್ಸುಗಳು, ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರಗಳು ಮಾತ್ರ ಚಲಿಸುತ್ತವೆ. ಇದಕ್ಕಾಗಿ ಅಗತ್ಯ ಮೂಲಸೌಕರ್ಯಗಳನ್ನು ಸಹ ಅಲ್ಲಿ ಲಭ್ಯವಾಗುವಂತೆ ಮಾಡಲಾಗುವುದು.

ಸ್ನೇಹಿತರೇ,

ನೀರಿನ ವಾರ್ಷಿಕ ಋತುಚಕ್ರವು ಹವಾಮಾನ ಬದಲಾವಣೆಗೆ ನೇರವಾಗಿ ಸಂಬಂಧಿಸಿದೆ ಮತ್ತು ನೀರಿನ ಹವಾಮಾನಚಕ್ರದಲ್ಲಿನ ಅಸಮತೋಲನವು ನೀರಿನ ಸುರಕ್ಷತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ದೇಶದಲ್ಲಿ ನೀರಿನ ಸುರಕ್ಷತೆಗೆ ಸಂಬಂಧಿಸಿದಂತೆ ಮಾಡಲಾಗುತ್ತಿರುವ ಕೆಲಸಗಳು ಹಿಂದೆಂದೂ ಮಾಡಿಲ್ಲ. ಸೃಷ್ಟಿ ಮತ್ತು ಸಂರಕ್ಷಣೆಯಿಂದ ಹಿಡಿದು ದೇಶದ ಜಲ ಸಂಪನ್ಮೂಲಗಳ ಬಳಕೆಯವರೆಗೆ ಸಮಗ್ರ ವಿಧಾನದಿಂದ ಕೆಲಸವನ್ನು ಮಾಡಲಾಗುತ್ತಿದೆ. ಜಲ ಜೀವನ್ ಮಿಷನ್ ಕೂಡ ಇದಕ್ಕಾಗಿ ಉತ್ತಮ ಮಾಧ್ಯಮವಾಗಿದೆ. ಮತ್ತು ಬಾರಿ ಜಲ ಜೀವನ್ ಮಿಷನ್‌ ನಲ್ಲಿ ಒಂದು ಕಾರ್ಯಕ್ರಮ ನಡೆಯುತ್ತಿದೆ ಎಂದು ನಾನು ನಿಮಗೆ ನೆನಪಿಸಲು ಬಯಸುತ್ತೇನೆ, ಇದರಲ್ಲಿ ನನಗೆ ದೇಶದ ನಾಗರಿಕರ ಸಹಾಯ ಬೇಕು. ಅಂದರೆ, ಮಳೆ ನೀರನ್ನು ಉಳಿಸಿ, ಮಳೆ ನೀರನ್ನು ಹಿಡಿಯಿರಿ ಅಭಿಯಾನ ಯಶಸ್ಸು ಕಾಣಬೇಕು

ಸಹೋದರರು ಮತ್ತು ಸಹೋದರಿಯರೇ,

ಸುಮಾರು 7 ದಶಕಗಳಲ್ಲಿ, ಕೊಳವೆ (ಪೈಪ್ಡ್) ನೀರು ದೇಶದ ಸುಮಾರು 30 ದಶಲಕ್ಷ ಗ್ರಾಮೀಣ ಕುಟುಂಬಗಳನ್ನು ತಲುಪಿದರೆ, ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ 40 ದಶಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕೊಳವೆ ನೀರು ಒದಗಿಸಲಾಗಿದೆ. ಒಂದೆಡೆ, ಪ್ರತಿ ಮನೆಯೂ ಕೊಳವೆಗಳೊಂದಿಗೆ ಸಂಪರ್ಕ ಹೊಂದಿದ್ದರೆ, ಮತ್ತೊಂದೆಡೆ, ಅಟಲ್ ಭೂಜಲ್ ಯೋಜನೆ ಮತ್ತು ಕ್ಯಾಚ್ ದಿ ರೇನ್ ನಂತಹ ಅಭಿಯಾನಗಳ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುವತ್ತ ಗಮನ ಹರಿಸಲಾಗಿದೆ.

ಸ್ನೇಹಿತರೇ,

ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಮತೋಲನವು ನಮ್ಮ ಪ್ರಾಚೀನ ಸಂಪ್ರದಾಯದ ಒಂದು ಪ್ರಮುಖ ಭಾಗವಾಗಿದೆ, ಅದನ್ನು ನಾವು ಸ್ವಾವಲಂಬಿ ಭಾರತದ ಬಲವನ್ನಾಗಿ ಮಾಡುತ್ತಿದ್ದೇವೆ. ಪ್ರಾಣಿಗಳು ಮತ್ತು ಪ್ರಕೃತಿಯ ಸಂಬಂಧದ ಸಮತೋಲನವನ್ನು ವಯ್ಯಕ್ತಿಕತೆ ಮತ್ತು ಸಂಪೂರ್ಣತೆ; ಮತ್ತು ಜೀವಿ ಮತ್ತು ಶಿವ ಇವುಗಳನ್ನು ನಮ್ಮ ಧರ್ಮಗ್ರಂಥಗಳು ಯಾವಾಗಲೂ ನಮಗೆ ಕಲಿಸಿವೆ. ನಮ್ಮ ದೇಶದಲ್ಲಿ यत् पिंडे तत् ब्रह्मांडे ಅಂದರೆ, ಜೀವಂತ ಅಸ್ತಿತ್ವದಲ್ಲಿರುವ ದೇಹವು ವಿಶ್ವದಲ್ಲಿದೆ ಎಂದು ಹೇಳಲಾಗುತ್ತದೆ. ನಮಗಾಗಿ ನಾವು ಮಾಡುವ ಪ್ರತಿಯೊಂದೂ ನಮ್ಮ ಪರಿಸರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ, ಅದರ ಸಂಪನ್ಮೂಲಗಳ ದಕ್ಷತೆಯ ಬಗ್ಗೆ ಭಾರತದ ಪ್ರಯತ್ನಗಳು ಹೆಚ್ಚುತ್ತಿವೆ. ಇಂದು ಮಾತನಾಡುತ್ತಿರುವ ವೃತ್ತಾಕಾರದ ಆರ್ಥಿಕತೆಯಲ್ಲಿ, ಅಂತಹ ಉತ್ಪನ್ನಗಳು ಮತ್ತು ಪ್ರಕ್ರಿಯೆಗಳತ್ತ ಗಮನ ಹರಿಸಲಾಗಿದೆ, ಇದರಲ್ಲಿ ಸಂಪನ್ಮೂಲಗಳ ಮೇಲೆ ಕನಿಷ್ಠ ಒತ್ತಡವಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಸಂಪನ್ಮೂಲಗಳನ್ನು ಮರುಬಳಕೆ ಮಾಡುವ ಮೂಲಕ ಉತ್ತಮವಾಗಿ ಬಳಸಿಕೊಳ್ಳುವ 11 ಕ್ಷೇತ್ರಗಳನ್ನು ಸರ್ಕಾರ ಗುರುತಿಸಿದೆ. ತ್ಯಾಜ್ಯದಿಂದ ಸಂಪತ್ತು/ಕಾಂಚಣ ( ಕಚ್ರಾ ಟು ಕಾಂಚನ್ / ವೇಸ್ಟ್ ಟು ವೆಲ್ತ್) ಅಭಿಯಾನದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಕೆಲಸಗಳು ನಡೆದಿವೆ ಮತ್ತು ಈಗ ಅದನ್ನು ಮಿಷನ್ ಮೋಡ್‌ನಲ್ಲಿ ಅತ್ಯಂತ ವೇಗವಾಗಿ ಮುಂದಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಮನೆಗಳು ಮತ್ತು ಸಾಕಣೆ ಕೇಂದ್ರಗಳು, ಸ್ಕ್ರ್ಯಾಪ್ ಮೆಟಲ್ ಅಥವಾ ಲಿಥಿಯಂ ಅಯಾನ್ ಬ್ಯಾಟರಿಗಳಿಂದ ವ್ಯರ್ಥವಾಗಲಿ, ಮರುಬಳಕೆಯನ್ನು ಹೊಸ ತಂತ್ರಜ್ಞಾನದ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ನಿಯಂತ್ರಕ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಇದಕ್ಕೆ ಸಂಬಂಧಿಸಿದ ಕ್ರಿಯಾ ಯೋಜನೆ ಮುಂದಿನ ತಿಂಗಳುಗಳಲ್ಲಿ ಜಾರಿಗೆ ಬರಲಿದೆ.

ಸ್ನೇಹಿತರೇ,

ಹವಾಮಾನ ಮತ್ತು ಪರಿಸರವನ್ನು ರಕ್ಷಿಸುವ ನಮ್ಮ ಪ್ರಯತ್ನಗಳನ್ನು ಸಂಘಟಿಸುವುದು ಬಹಳ ಮುಖ್ಯ. ನೀರು, ಗಾಳಿ ಮತ್ತು ಭೂಮಿಯ ಸಮತೋಲನವನ್ನು ಕಾಪಾಡಿಕೊಳ್ಳಲು ದೇಶದ ಪ್ರತಿಯೊಬ್ಬ ನಾಗರಿಕರು ಒಗ್ಗಟ್ಟಿನ ಪ್ರಯತ್ನ ಮಾಡಿದಾಗ ಮಾತ್ರ ನಮ್ಮ ಮುಂಬರುವ ಪೀಳಿಗೆಗೆ ಸುರಕ್ಷಿತ ವಾತಾವರಣವನ್ನು ನೀಡಲು ನಮಗೆ ಸಾಧ್ಯವಾಗುತ್ತದೆ. ಇದು ನಮ್ಮ ಪೂರ್ವಜರ ಆಶಯವಾಗಿತ್ತು ಮತ್ತು ಅವರು ನಮಗೆ ಬಹಳ ಮುಖ್ಯವಾದ ಸಂದೇಶವನ್ನು ಬಿಟ್ಟಿದ್ದಾರೆ. ನಮ್ಮ ಪೂರ್ವಜರು ನಮ್ಮಿಂದ ಏನನ್ನು ನಿರೀಕ್ಷಿಸಿದ್ದರುपृथ्वीः पूः उर्वी भव   ಮಾತ್ರ ನಿರೀಕ್ಷಿಸಿದ್ದರು, ಅಂದರೆ ಇದರ ಅರ್ಥ- ಇಡೀ ಭೂಮಿಯು, ಇಡೀ ಪರಿಸರವು ನಮ್ಮೆಲ್ಲರಿಗೂ ಹೆಚ್ಚು ಅನುಕೂಲಕರವಾಗಲಿ ಮತ್ತು ನಮ್ಮ ಕನಸುಗಳಿಗೆ ಅವಕಾಶವನ್ನು ನೀಡಲಿ. ನಿಮ್ಮೆಲ್ಲರಿಗೂ ವಿಶ್ವ ಪರಿಸರ ದಿನದಂದು ಶುಭ ಹಾರೈಸುತ್ತೇನೆ. ನಿಮ್ಮ ಬಗ್ಗೆ ಕಾಳಜಿ ವಹಿಸಿ, ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳಿ ಮತ್ತು ನಿಮ್ಮ ಕುಟುಂಬ ಸದಸ್ಯರನ್ನು ಆರೋಗ್ಯವಾಗಿಡಿ. ಮತ್ತು ಕೋವಿಡ್ ಶಿಷ್ಟಾಚಾರದಲ್ಲಿ ಯಾವುದೇ ಸಡಿಲತೆ (ನ್ಯೂನ್ಯತೆ/ಕೊರತೆ) ಇಲ್ಲ ಎಂಬ ನಿರೀಕ್ಷೆಯೊಂದಿಗೆ, ನಿಮಗೆಲ್ಲಾ ತುಂಬಾ ಧನ್ಯವಾದಗಳು.

ಹಕ್ಕುತ್ಯಾಗ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಭಾಷೆಯಲ್ಲಿ ಭಾಷಣ ಮಾಡಲಾಗಿದೆ.

***



(Release ID: 1727448) Visitor Counter : 278