ಹಣಕಾಸು ಸಚಿವಾಲಯ

ಹೊಸ ಆದಾಯ ತೆರಿಗೆ ಪೋರ್ಟಲ್ ನ ತೊಂದರೆಗಳ ಬಗ್ಗೆ 2021ರ ಜೂನ್ 22ರಂದು ಇನ್ಫೋಸಿಸ್ ಜೊತೆ ಸಭೆ ನಡೆಸಲಿರುವ ಹಣಕಾಸು ಸಚಿವಾಲಯ

Posted On: 15 JUN 2021 8:22PM by PIB Bengaluru

ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು 2021ರ ಜೂನ್ 22ರಂದು ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಹೊಸದಾಗಿ ಆರಂಭಿಸಿರುವ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಎದುರಾಗಿರುವ ಸಮಸ್ಯೆಗಳು/ತಾಂತ್ರಿಕ ಅಡಚಣೆಗಳ ಕುರಿತು ಇನ್ಫೋಸಿಸ್ ( ವೆಂಡರ್ ಮತ್ತು ಅದರ ತಂಡ)ದ ಜೊತೆ ಸಂವಾದಾತ್ಮಕ ಸಭೆಯನ್ನು ನಡೆಸಲಿದ್ದಾರೆ. ಐಸಿಎಐನ ಸದಸ್ಯ, ಲೆಕ್ಕ ಪರಿಶೋಧಕರು, ಸಲಹೆಗಾರರು ಮತ್ತು ತೆರಿಗೆ ಪಾವತಿದಾರರು ಸೇರಿ ಎಲ್ಲ ಪಾಲುದಾರರು ಈ ಸಂವಾದಾತ್ಮಕ ಸಭೆಯಲ್ಲಿ ಪಾಲ್ಗೊಳ್ಳುವರು. ಹೊಸ ತೆರಿಗೆ ಪೋರ್ಟಲ್ ನಲ್ಲಿ ಹಲವು ತಾಂತ್ರಿಕ ದೋಷಗಳು/ಸಮಸ್ಯೆಗಳು ಕಾಣಿಸಿಕೊಂಡಿರುವುದರಿಂದ ತೆರಿಗೆ ಪಾವತಿದಾರರಿಗೆ ಅನಾನುಕೂಲವಾಗುತ್ತಿದೆ.  ಪಾಲುದಾರರರಿಂದ ಪೋರ್ಟಲ್ ನಲ್ಲಿ ಎದುರಿಸುತ್ತಿರುವ ಸಮಸ್ಯೆಗಳು/ತೊಂದರೆಗಳ ಕುರಿತು ಲಿಖಿತ ಮನವಿಗಳನ್ನು ಸಲ್ಲಿಸುವಂತೆ ಕೋರಲಾಗಿದೆ. ಇನ್ಫೋಸಿಸ್ ನ ತಂಡದ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿರಲಿದ್ದು, ಅವರು ಸಮಸ್ಯೆಗಳಿಗೆ ಸ್ಪಷ್ಟ ಉತ್ತರ ನೀಡಲಿದ್ದಾರೆ ಮತ್ತು ಪೋರ್ಟಲ್ ನ ಕಾರ್ಯವೈಖರಿ ಕುರಿತು ಮಾಹಿತಿಗಳನ್ನು ಪಡೆದು, ತಾಂತ್ರಿಕ ದೋಷಗಳನ್ನು ಸರಿಪಡಿಸುವರು ಮತ್ತು ತೆರಿಗೆ ಪಾವತಿದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವರು.  

***



(Release ID: 1727380) Visitor Counter : 224