ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಲಸಿಕೆಯ – ಮಿಥ್ಯಾ ಮತ್ತು ವಾಸ್ತವ
Posted On:
15 JUN 2021 2:43PM by PIB Bengaluru
ಲಸಿಕೆಯ ಸೇವೆಯನ್ನು ಪಡೆದುಕೊಳ್ಳಲು ಆನ್ ಲೈನ್ ಮೂಲಕ ಮುಂಗಡ ನೋಂದಣಿ ಮಾಡಿಕೊಳ್ಳಬೇಕು ಮತ್ತು ಮೊದಲೇ ಸಮಯ ಕಾಯ್ದಿರಿಸಬೇಕು ಎಂಬುದು ಕಡ್ಡಾಯವೇನಲ್ಲ.
18 ವರ್ಷ ಅಥವಾ ಮೇಲ್ಪಟ್ಟ ಯಾವುದೇ ವ್ಯಕ್ತಿ ನೇರವಾಗಿ ಹತ್ತಿರದ ಲಸಿಕಾ ಕೇಂದ್ರಕ್ಕೆ ಹೋದರೆ, ಅಲ್ಲಿ ವ್ಯಾಕ್ಸಿನೇಟರ್ ಸ್ಥಳದಲ್ಲಿಯೇ ನೋಂದಣಿ ಮಾಡಿ ಅದೇ ಭೇಟಿಯಲ್ಲೇ ಲಸಿಕೆಯನ್ನು ನೀಡುತ್ತಾರೆ. ಇದು ‘ವಾಕ್ -ಇನ್ಸ್’ ಎಂದೇ ಖ್ಯಾತವಾಗಿದೆ.
ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ.ಗಳು)ಗಳ ಮೂಲಕ ಕೋವಿನ್ ನಲ್ಲಿ ನೋಂದಣಿಯು, ಕೋವಿನ್ ನ ಹಲವು ಸುಗಮ ನೋಂದಣಿ ಅವಕಾಶಗಳಲ್ಲಿ ಒಂದಾಗಿರುತ್ತದೆ. ಆರೋಗ್ಯ ಕಾರ್ಯಕರ್ತರು ಅಥವಾ ಆಶಾ ಮೊದಲಾದವರು ಗ್ರಾಮೀಣ ಪ್ರದೇಶದ ಫಲಾನುಭವಿಗಳನ್ನು ಮತ್ತು ನಗರ ಕೊಳೆಗೇರಿಗಳಲ್ಲಿ ವಾಸಿಸುವವರಿಗೆ ಸ್ಥಳದಲ್ಲೇ ನೋಂದಣಿ ಮಾಡಿಸಿ, ಲಸಿಕೆಗಾಗಿ ನೇರವಾಗಿ ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಅದಕ್ಕೆ ಅವಕಾಶ ಮಾಡಿಕೊಡುತ್ತಾರೆ. 1075 ಸಹಾಯವಾಣಿ ಮೂಲಕ ನೆರವಿನ ನೋಂದಣಿ ಸೌಲಭ್ಯವನ್ನು ಸಹ ಕಾರ್ಯಗತಗೊಳಿಸಲಾಗಿದೆ.
ಅಂದರೆ, ಮೇಲಿನ ಎಲ್ಲಾ ವಿಧಾನಗಳು, ನಿರ್ದಿಷ್ಟವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಗತವಾಗಿವೆ, ಅವು ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆಗೆ ಸಮನಾಗಿ ಪ್ರವೇಶವನ್ನು ಒದಗಿಸುತ್ತವೆ, 13.06.2021 ರ ಮಾಹಿತಿಯಂತೆ, ಕೋ-ವಿನ್ ನಲ್ಲಿ ನೋಂದಾಯಿಸಿಕೊಂಡ 28.36 ಕೋಟಿ ಫಲಾನುಭವಿಗಳಲ್ಲಿ, 16.45 ಕೋಟಿ (ಶೇ.58) ಫಲಾನುಭವಿಗಳನ್ನು ಲಸಿಕೆ ನೀಡುವ ಸ್ಥಳದಲ್ಲಿಯೇ ನೋಂದಾಯಿಸಲಾಗಿದೆ. ಅಲ್ಲದೆ, 2021ರ ಜೂನ್ 13ರಲ್ಲಿದ್ದಂತೆ ಕೋ-ವಿನ್ ನಲ್ಲಿ ದಾಖಲಾದ ಒಟ್ಟು 24.84 ಕೋಟಿ ಲಸಿಕೆ ಡೋಸ್ ಗಳಲ್ಲಿ 19.84 ಕೋಟಿ ಡೋಸ್ ಗಳನ್ನು (ಎಲ್ಲಾ ಲಸಿಕೆ ಡೋಸ್ ಗಳಲ್ಲಿ ಸುಮಾರು ಶೇ.80) ಸ್ಥಳದಲ್ಲಿಯೇ / ವಾಕ್-ಇನ್ಸ್ ಲಸಿಕೆಯ ಮೂಲಕ ನೀಡಲಾಗಿದೆ.
01.05.21 ರಿಂದ 12.06.21ರವರೆಗೆ 1,03,585 ಕೋವಿಡ್ ಲಸಿಕಾ ಕೇಂದ್ರ (ಸಿವಿಸಿಗಳು)ಗಳು ಲಸಿಕಾ ಸೇವೆ ಒದಗಿಸಿದ್ದು, 26,114 ಕೇಂದ್ರಗಳು ಉಪ ಆರೋಗ್ಯ ಕೇಂದ್ರಗಳಲ್ಲಿ, 26,287 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು 9,441 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿದ್ದು, ಇದು ಒಟ್ಟು ಲಸಿಕಾ ಕೇಂದ್ರಗಳ ಶೇ.59.7ರಷ್ಟಾಗುತ್ತದೆ. ಉಪ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ಈ ಎಲ್ಲ ಸಿವಿಸಿಗಳು ಗ್ರಾಮೀಣ ಪ್ರದೇಶದಲ್ಲಿದ್ದು, ಇಲ್ಲಿ ಜನರು ನೇರವಾಗಿ ಲಸಿಕಾ ಕೇಂದ್ರಕ್ಕೆ ಆಗಮಿಸಿ ನೋಂದಣಿ ಮಾಡಿಸಿ ಲಸಿಕೆ ಪಡೆಯಬಹುದಾಗಿದೆ.
ಕೋ-ವಿನ್ ನಲ್ಲಿ ರಾಜ್ಯಗಳು ಗ್ರಾಮೀಣ ಅಥವಾ ನಗರ ಎಂದು ವರ್ಗೀಕರಿಸಿದ ಒಟ್ಟು 69,995 ಲಸಿಕಾ ಕೇಂದ್ರಗಳ ಪೈಕಿ 49,883 ಲಸಿಕಾ ಕೇಂದ್ರಗಳು, ಅಂದರೆ ಶೇ.71ರಷ್ಟು ಗ್ರಾಮೀಣ ಪ್ರದೇಶಗಳಲ್ಲಿವೆ.
2021 ಜೂನ್ 3ರವರೆಗೆ ಕೋ-ವಿನ್ ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಬುಡಕಟ್ಟು ಪ್ರದೇಶಗಳಲ್ಲಿ ಲಸಿಕಾ ವ್ಯಾಪ್ತಿ -
1. ಬುಡಕಟ್ಟು ಜಿಲ್ಲೆಗಳಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ ನೀಡಿದ ಲಸಿಕೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ.
2. 176 ಬುಡಕಟ್ಟು ಜಿಲ್ಲೆಗಳ ಪೈಕಿ 128 ಜಿಲ್ಲೆಗಳು ಅಖಿಲ ಭಾರತ ಲಸಿಕಾ ವ್ಯಾಪ್ತಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.
3. ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಬುಡಕಟ್ಟು ಜಿಲ್ಲೆಗಳಲ್ಲಿ ಹೆಚ್ಚಿನ ವಾಕ್-ಇನ್ ಲಸಿಕೆ ನಡೆಯುತ್ತಿದೆ.
4. ಲಸಿಕೆ ಹಾಕಿದ ಜನರ ಲಿಂಗಾನುಪಾತವು ಸಹ ಬುಡಕಟ್ಟು ಜಿಲ್ಲೆಗಳಲ್ಲಿ ಉತ್ತಮವಾಗಿದೆ.
|
ರಾಷ್ಟ್ರೀಯ
|
ಬುಡಕಟ್ಟು ಜಿಲ್ಲೆಗಳು
|
ಪ್ರತಿ ಹತ್ತು ಲಕ್ಷಕ್ಕೆ ನೀಡಲಾದ ಡೋಸ್
|
1,68,951
|
1,73,875
|
ಪುರುಷರು : ಮಹಿಳೆಯರ ಅನುಪಾತ
|
54 : 46
|
53 : 47
|
ವಾಕ್-ಇನ್: ಆನ್ ಲೈನ್ ಲಸಿಕೆ
|
81 : 19
|
88. : 12
|
ಮೇಲಿನ ಅಂಕಿ ಅಂಶಗಳು ಗ್ರಾಮೀಣ-ನಗರದ ಅಂತರದ ಬಗ್ಗೆ ಇರುವ ಮಿಥ್ಯ/ ತಪ್ಪು ಕಲ್ಪನೆಗಳನ್ನು ಬಯಲು ಮಾಡಿ, ಕೋ-ವಿನ್ ವ್ಯವಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ವಿಶೇಷವಾಗಿ ದೇಶದ ದೂರದ ಪ್ರದೇಶಗಳಲ್ಲಿ ಲಸಿಕೆ ದಾಖಲಾತಿಗೆ ಅನುಕೂಲವಾಗುವಂತೆ ಸಂಪೂರ್ಣವಾಗಿ ನಮ್ಯ ಮತ್ತು ಸಮಗ್ರ ಚೌಕಟ್ಟನ್ನು ಒದಗಿಸುತ್ತದೆ.
***
(Release ID: 1727228)
Visitor Counter : 245