ಹಣಕಾಸು ಸಚಿವಾಲಯ

ಆದಾಯ ತೆರಿಗೆ ಫಾರ್ಮ್ ಗಳಾದ 15ಸಿ.ಎ/15 ಸಿ.ಬಿ.ಗಳ ಇಲೆಕ್ಟ್ರಾನಿಕ್ ಸಲ್ಲಿಕೆಗೆ ರಿಯಾಯತಿ

Posted On: 14 JUN 2021 5:47PM by PIB Bengaluru

ಆದಾಯ ತೆರಿಗೆ ಕಾಯ್ದೆ 1961 ರನ್ವಯ ಫಾರಂ 15 ಸಿಎ /15 ಸಿಬಿ ಗಳನ್ನು ವಿದ್ಯುನ್ಮಾನ ಮೂಲಕ ಸಲ್ಲಿಸಬೇಕಾಗಿರುತ್ತದೆ. ಪ್ರಸ್ತುತ ತೆರಿಗೆ ಪಾವತಿದಾರರು ಎಲ್ಲೆಲ್ಲ್ಲಿ ಅನ್ವಯವಾಗುತ್ತದೋ ಅಲ್ಲಿ ಫಾರಂ 15 ಸಿ..ಯನ್ನು ಫಾರಂ 15 ಸಿ.ಬಿ.ಯಲ್ಲಿ ಲೆಕ್ಕ ಪರಿಶೋಧಕರ ಪ್ರಮಾಣ ಪತ್ರದೊಂದಿಗೆ -ಸಲ್ಲಿಕೆ ಪೋರ್ಟಲಿನಲ್ಲಿ ಅಪ್ಲೋಡ್ ಮಾಡಬೇಕಾಗಿರುತ್ತದೆ. ಯಾವುದೇ ವಿದೇಶೀ ವಹಿವಾಟಿಗಾಗಿ ಅಧಿಕೃತ ಡೀಲರಿಗೆ ಪ್ರತಿಯನ್ನು ಸಲ್ಲಿಕೆ ಮಾಡುವುದಕ್ಕೆ ಮೊದಲು ನಿಯಮವನ್ನು ಪಾಲಿಸಬೇಕಾಗಿರುತ್ತದೆ.

ಪೋರ್ಟಲ್ www.incometax.gov.in ರಲ್ಲಿ ಆದಾಯ ತೆರಿಗೆ ಫಾರಂಗಳಾದ 15 ಸಿ../15 ಸಿ.ಬಿ.ಗಳನ್ನು ವಿದ್ಯುನ್ಮಾನ ಸಲ್ಲಿಕೆ ಮಾಡುವಾಗ ತೆರಿಗೆದಾರರು ಸಮಸ್ಯೆಯಾಗುತ್ತಿರುವ ಬಗ್ಗೆ ವರದಿ ಮಾಡಿರುವ  ಹಿನ್ನೆಲೆಯಲ್ಲಿ, ಮೇಲ್ಕಾಣಿಸಿದ ಫಾರಂಗಳನ್ನು ತೆರಿಗೆ ಪಾವತಿದಾರರು 2021 ಜೂನ್ 30 ರವರೆಗೆ ಅಧಿಕೃತ ಡೀಲರುಗಳಿಗೆ ಮ್ಯಾನುವಲ್ ಮಾದರಿಯಲ್ಲಿ ಸಲ್ಲಿಸಬಹುದೆಂದು ನಿರ್ಧರಿಸಲಾಗಿದೆ.ಅಧಿಕೃತ ಡೀಲರುಗಳಿಗೆ ಇಂತಹ ಫಾರಂಗಳನ್ನು ವಿದೇಶೀ ವಹಿವಾಟಿಗಾಗಿ 2021 ಜೂನ್ 30 ರವರೆಗೆ ಅಂಗೀಕರಿಸುವಂತೆ ಸಲಹೆ ಮಾಡಲಾಗಿದೆ.ಹೊಸ -ಫೈಲಿಂಗ್ (ವಿದ್ಯುನ್ಮಾನ ಫೈಲಿಂಗ್) ಪೋರ್ಟಲಿನಲ್ಲಿ ಫಾರಂಗಳನ್ನು ಬಳಿಕದ ದಿನಾಂಕಗಳಲ್ಲಿ ಅಪ್ಲೋಡ್ ಮಾಡಲು ಹೊಸ ಸವಲತ್ತನ್ನು ಒದಗಿಸಲಾಗುವುದು. ದಾಖಲೆ ಗುರುತಿಸುವಿಕೆ ಸಂಖ್ಯೆಯನ್ನು ಪಡೆಯಲು ಇದರಿಂದ ಸಾಧ್ಯವಾಗಲಿದೆ.

***


(Release ID: 1727059) Visitor Counter : 238