ಪ್ರಧಾನ ಮಂತ್ರಿಯವರ ಕಛೇರಿ

ಇಸ್ರೇಲ್ ನೂತನ ಪ್ರಧಾನ ಮಂತ್ರಿ ನಫ್ತಾಲಿ ಬೆನೆಟ್ ಅವರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ


ಇಸ್ರೇಲ್-ಭಾರತ ಕಾರ್ಯತಂತ್ರ ಪಾಲುದಾರಿಕೆ ಬಲವರ್ಧನೆಗೆ ಸಹಕರಿಸಿದ ನಿರ್ಗಮಿತ ಪ್ರಧಾನ ಮಂತ್ರಿ ಬೆಂಜಮಿನ್ ನೆತಾನ್ಯಾಹು ಅವರಿಗೆ ಕೃತಜ್ಞತೆ ಸಲ್ಲಿಸಿದ ನರೇಂದ್ರ ಮೋದಿ

प्रविष्टि तिथि: 14 JUN 2021 10:45AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್ ನೂತನ ಪ್ರಧಾನ ಮಂತ್ರಿ ಆಗುತ್ತಿರುವ ನಫ್ತಾಲಿ ಬೆನೆಟ್ ಅವರನ್ನು ಅಭಿನನಂದಿಸಿದ್ದಾರೆ.

ಕುರಿತು ಟ್ವೀಟ್ ಮಾಡಿರುವ ಅವರು, “ಇಸ್ರೇಲ್ ನೂತನ ಪ್ರಧಾನಿ ನಫ್ತಾಲಿ ಬೆನೆಟ್ ಅವರಿಗೆ ಅಭಿನಂದನೆಗಳು. ಭಾರತ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧ ಬಲವರ್ಧನೆಯಾಗಿ ಮುಂದಿನ ವರ್ಷ 30 ವರ್ಷ ಪೂರ್ಣವಾಗುತ್ತಿರುವ ಸಂಭ್ರಮಾಚರಣೆಯಲ್ಲಿ ನಾವಿರುವಾಗ, ನಿಮ್ಮನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ದೀರ್ಘಗೊಳಿಸಲು ಉತ್ಸುಕನಾಗಿದ್ದೇನೆಎಂದಿದ್ದಾರೆ.

ಭಾರತ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತು ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ವೈಯಕ್ತಿಕ ಗಮನ ನೀಡಿದ, ಸಮರ್ಥ ನಾಯಕತ್ವ ಪ್ರದರ್ಶಿಸಿದ ನಿರ್ಗಮಿತ ಪ್ರಧಾನ ಮಂತ್ರಿ ಬೆಂಜಮಿನ್ ನೆತಾನ್ಯಾಹು ಅವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಇಸ್ರೇಲ್ ಪ್ರಧಾನ ಮಂತ್ರಿಯಾಗಿ ಪೂರ್ಣ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ ನಿಮಗೆ, ನಿಮ್ಮ ದಕ್ಷ ನಾಯಕತ್ವಕ್ಕೆ ನನ್ನ ಆಳವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಭಾರತ-ಇಸ್ರೇಲ್ ಕಾರ್ಯತಂತ್ರ ಪಾಲುದಾರಿಕೆ ಹೆಚ್ಚಲು ನಿಮ್ಮ ಸಮರ್ಥ ನಾಯಕತ್ವವೇ ಕಾರಣಎಂದು ಮೋದಿ ಟ್ವೀಟ್ ಮಾಡಿದ್ದಾರೆ.

***

 


(रिलीज़ आईडी: 1726946) आगंतुक पटल : 335
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam