ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಛೇರಿ, ಭಾರತ ಸರ್ಕಾರ

ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ವತಿಯಿಂದ ಪ್ರೋತ್ಸಾಹಿಸಲ್ಪಟ್ಟ ಕೋವಿಡ್ -19 ಯೋಜನೆಗಳು: ಆಸ್ಪತ್ರೆಗಳ ವಿಸ್ತರಣೆಗಳು

Posted On: 13 JUN 2021 11:02AM by PIB Bengaluru

ದೇಶದ ವಿವಿಧೆಡೆಗಳಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವಂತೆಯೇ, ಆಸ್ಪತ್ರೆಗಳಲ್ಲಿಯ ಮೂಲಸೌಕರ್ಯದ ಮೇಲೆ ಅಪರಿಮಿತ ಹೊರೆ ಬೀಳತೊಡಗಿತು. ಇದರ ನಡುವೆ ನವೀನ ಮಾಡ್ಯುಲಾರ್ ಆಸ್ಪತ್ರೆಗಳು ಬಲು ದೊಡ್ಡ ಪರಿಹಾರವಾಗಿ ಮೂಡಿ ಬಂದವು. ಈ ಮಾಡ್ಯುಲಾರ್ ಆಸ್ಪತ್ರೆಗಳೆಂದರೆ ಆಸ್ಪತ್ರೆಗಳ ಮೂಲಸೌಕರ್ಯ ವಿಸ್ತರಣೆ ಮತ್ತು ಅವುಗಳನ್ನು ಈಗಿರುವ ಆಸ್ಪತ್ರೆ ಕಟ್ಟಡಗಳ ಸನಿಹದಲ್ಲಿಯೇ ಕಟ್ಟಬಹುದು. ಭಾರತ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ (ಪಿ.ಎಸ್.ಎ. ಕಚೇರಿ, ಭಾರತ ಸರಕಾರ) ಯು ಖಾಸಗಿ ವಲಯದ ಕಂಪೆನಿಗಳು, ದಾನಿ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ರಾಷ್ಟ್ರೀಯ ಮಹತ್ವದ ಈ ವಿವಿಧ ಯೋಜನೆಗಳನ್ನು ಬೆಂಬಲಿಸುವ ಸಲುವಾಗಿ  ಆಹ್ವಾನಿಸಿದೆ. ಆಸ್ಪತ್ರೆಗಳ ಯೋಜನಾ ವಿಸ್ತರಣೆ ಇಂತಹ ಒಂದು ಉಪಕ್ರಮ. ಪಿ.ಎಸ್.ಎ.ಯವರ ಕಚೇರಿಯು ಹೆಚ್ಚು ಕೋವಿಡ್- 19 ಪ್ರಕರಣಗಳು ವರದಿಯಾಗುತ್ತಿರುವ  ರಾಜ್ಯಗಳಲ್ಲಿರುವ ಸುಮಾರು 50  ಆಸ್ಪತ್ರೆಗಳ ಆವಶ್ಯಕತೆಗಳನ್ನು ಗುರುತಿಸಿದೆ.

ಮಾಡ್ಯುಲಸ್ ವಸತಿ, (ಮಾಡ್ಯುಲಸ್ ಹೌಸಿಂಗ್) ಎಂಬ ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ (ಐ.ಐ.ಟಿ.-ಎಂ) ನ ನವೋದ್ಯಮವು ಮೆಡಿಕ್ಯಾಬ್ ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡಿದೆ. ಇದರಿಂದ  3 ವಾರಗಳಲ್ಲಿ 100 ಹಾಸಿಗೆ ಸಾಮರ್ಥ್ಯದ ವಿಸ್ತರಣಾ ಸೌಲಭ್ಯಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಮೆಡಿಕ್ಯಾಬ್ ಆಸ್ಪತ್ರೆಗಳು ತೀವ್ರ ನಿಗಾ ಘಟಕ (ಐ.ಸಿ.ಯು.)ಕಕ್ಕಾಗಿಯೇ ಇರುವ ವಲಯವನ್ನು ಹೊಂದಿರುವಂತೆ ವಿನ್ಯಾಸ ಮಾಡಲಾಗಿರುತ್ತವೆ. ಇದರಲ್ಲಿ ಎಲ್ಲಾ ಜೀವರಕ್ಷಕ ಸಲಕರಣೆಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಅಳವಡಿಸಬಹುದಾಗಿರುತ್ತದೆ. ಈ ರೀತಿಯ ಒತ್ತಡ ನಿವಾರಣಾ ಆಸ್ಪತ್ರೆಗಳನ್ನು  ಬೇರೆಡೆ ನಿರ್ಮಿಸಬಹುದಾಗಿದ್ದು, ಸುಮಾರು 25 ವರ್ಷ ಬಾಳ್ವಿಕೆ ಬರುತ್ತವೆ. ಮತ್ತು ಇವುಗಳನ್ನು ಭವಿಷ್ಯದಲ್ಲಿ ವಿಪತ್ತು ಪ್ರತಿಕ್ರಿಯೆಯಾಗಿ ವಾರದೊಳಗೆ ಬೇರೆಡೆಗೆ ಸ್ಥಳಾಂತರಿಸಬಹುದಾಗಿರುತ್ತದೆ. ಇಂತಹ ಆಸ್ಪತ್ರೆಗಳು ಭಾರತದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಎದುರಾಗುವ ಮೂಲಸೌಕರ್ಯಗಳ ಅಂತರವನ್ನು ನಿವಾರಣೆ ಮಾಡಬಲ್ಲವು ಮತ್ತು ಗ್ರಾಮೀಣ ಹಾಗು ಸಣ್ಣ ಪಟ್ಟಣಗಳಲ್ಲಿ ಮೂಲಸೌಕರ್ಯ ಕೊರತೆಯನ್ನು ತುಂಬಬಲ್ಲವು. ಪಿ.ಎಸ್.ಎ.ಅವರ ಕಚೇರಿಯು ಈ ಯೋಜನೆಗಳನ್ನು ದೇಶದ ವಿವಿಧ ಪ್ರದೇಶಗಳಲ್ಲಿ ಅನುಷ್ಠಾನಕ್ಕೆ ತರಲು ಸಿ.ಎಸ್.ಆರ್. ಬೆಂಬಲವನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಮಾಡ್ಯುಲಸ್ ಹೌಸಿಂಗ್ ಸಂಸ್ಥೆಯು ಮೆಡಿಕ್ಯಾಬ್ ವಿಸ್ತರಣಾ ಆಸ್ಪತ್ರೆಗಳನ್ನು ಅಮೆರಿಕನ್ ಇಂಡಿಯನ್ ಫೌಂಡೇಶನ್ (ಎ.ಐ.ಎಫ್.) , ಮಾಸ್ಟರ್ ಕಾರ್ಡ್, ಟೆಕ್ಸಾಸ್ ಇನಸ್ಟ್ರುಮೆಂಟ್ಸ್, ಝಡ್ಸ್ಕೇಲರ್, ಪಿ.ಎನ್. ಬಿ. ಹೌಸಿಂಗ್, ಗೋಲ್ಡ್ಮನ್ ಸ್ಯಾಕ್ಸ್, ಲೆನೊವೋ ಮತ್ತು ನಾಸ್ಕಾಂ ಪ್ರತಿಷ್ಠಾನಗಳ ನೆರವಿನೊಂದಿಗೆ ಸ್ಥಾಪಿಸಿದೆ. ಈ ಸಂಸ್ಥೆಗಳು ತಮ್ಮ ಸಿ.ಎಸ್.ಆರ್. ಬೆಂಬಲವನ್ನು ಒದಗಿಸಿವೆ. 100 ಹಾಸಿಗೆಗಳ ಮೊದಲ ತಂಡದ ಆಸ್ಪತ್ರೆಗಳನ್ನು ಬಿಲಾಸ್ಪುರ (ಛತ್ತೀಸ್ ಗಢ); ಅಮರಾವತಿ, ಪುಣೆ ಮತ್ತು ಜಲ್ನಾ (ಮಹಾರಾಷ್ಟ್ರ), ಮೊಹಾಲಿ (ಪಂಜಾಬ್)ಗಳಲ್ಲಿ ಮತ್ತು 20 ಹಾಸಿಗೆಗಳ ಆಸ್ಪತ್ರೆಯನ್ನು  ರಾಯ್ಪುರ (ಛತ್ತೀಸ್ ಗಢ)ದಲ್ಲಿ ಸ್ಥಾಪಿಸಿದೆ.  ಬೆಂಗಳೂರಿನಲ್ಲಿ (ಕರ್ನಾಟಕ) 20, 50 ಮತ್ತು 100 ಹಾಸಿಗೆಗಳ ತಲಾ ಒಂದೊಂದು ಆಸ್ಪತ್ರೆಗಳನ್ನು ಮೊದಲ ಹಂತದಲ್ಲಿ ಸ್ಥಾಪಿಸಲಾಗುವುದು.

ಪಿ.ಎಸ್.ಎ.ಅವರ ಕಚೇರಿಯು ಪಂಜಾಬ್ ಮತ್ತು ಛತ್ತೀಸ್ ಗಢದ ವಿವಿಧೆಡೆಗಳಲ್ಲಿ ಮಾಡ್ಯುಲಾರ್ ಆಸ್ಪತ್ರೆಗಳನ್ನು ಸ್ಥಾಪಿಸಲು ಟಾಟಾ ಪ್ರಾಜೆಕ್ಟ್ಸ್ ಲಿ. ಜೊತೆ ಸಹಯೋಗ ಮಾಡಿಕೊಂಡಿದೆ. ಗುರುದಾಸ್ ಪುರ ಮತ್ತು ಫರೀದ್ ಕೋಟ್ (ಪಂಜಾಬ್) ಗಳಲ್ಲಿ 48 ಹಾಸಿಗೆಗಳ ಮಾಡ್ಯುಲಾರ್ ಆಸ್ಪತ್ರೆಗಳನ್ನು ಸ್ಥಾಪಿಸಲು ಕಾಮಗಾರಿಯನ್ನು ಆರಂಭಿಸಿವೆ. ಛತ್ತೀಸ್ ಗಢದ  ಹಲವು ಆಸ್ಪತ್ರೆಗಳಲ್ಲಿ ಐ.ಸಿ.ಯು. ವಿಸ್ತರಣೆ ಸಹಿತ ರಾಯ್ಪುರ, ಜಾಶ್ಪುರ, ಬಿಮೆತಾರಾ, ಕಂಕಾರ್ ಮತ್ತು ಗೌರೆಲ್ಲಾ ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

ಈ ಯೋಜನೆಯ ವಿವರಗಳಿಗೆ ಬರೆಯಿರಿ industry-engagement[at]psa[dot]gov[dot]in

ವಿವಿಧ ಕೋವಿಡ್ -19 ಯೋಜನೆಗಳ ಹೆಚ್ಚಿನ ವಿವರಗಳಿಗಾಗಿ  ಭೇಟಿ ಕೊಡಿ:  https://www.psa.gov.in/innovation-science-bharat

***(Release ID: 1726806) Visitor Counter : 291