ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೆ ಕಾರ್ಯಕ್ರಮದ ತಾಜಾಮಾಹಿತಿ
ಡಾರ್ಕ್ ವೆಬ್ ನಲ್ಲಿ ಹ್ಯಾಕರ್ ಗಳು ದತ್ತಾಂಶ ಸೋರಿಕೆಯಾಗಿದೆಯೆಂದು ಹಕ್ಕು ಮಂಡಿಸುತ್ತರುವುದು ಆಧಾರರಹಿತವೆಂದು ಲಸಿಕೆ ಆಡಳಿತ ಕುರಿತ ಉನ್ನತಾಧಿಕಾರ ಸಮಿತಿ(ಇಜಿವಿಎಸಿ)ಯ ಅಧ್ಯಕ್ಷರು ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಸ್ಪಷ್ಟನೆ
ಕೋವಿನ್ ಪೋರ್ಟಲ್ ನಲ್ಲಿ ಜನರ ದತ್ತಾಂಶ ಸುರಕ್ಷತೆ ಖಾತ್ರಿಗೆ ಕಾಲ ಕಾಲಕ್ಕೆ ನಾವು ಅಗತ್ಯ ಸೂಕ್ತ ಕ್ರಮ ಕೈಗೊಳ್ಳುವುದು ಮುಂದುವರಿಕೆ: ಡಾ.ಆರ್.ಎಸ್. ಶರ್ಮಾ
Posted On:
12 JUN 2021 12:59PM by PIB Bengaluru
ಕೋವಿನ್ ವ್ಯವಸ್ಥೆಯಲ್ಲಿ ದತ್ತಾಂಶ ಸೋರಿಕೆಯಾಗಿದೆ ಎಂಬ ಆರೋಪ ಕುರಿತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಐಇಟಿವೈ)ದ ಕಂಪ್ಯೂಟರ್ ತುರ್ತು ನಿರ್ವಹಣಾ ತಂಡ ಇದೀಗ ತನಿಖೆ ನಡೆಸುತ್ತಿದೆ.
ಲಸಿಕೆ ಆಡಳಿತ ಕುರಿತು ಉನ್ನತಾಧಿಕಾರ ಸಮಿತಿ (ಇಜಿವಿಎಸಿ) ಅಧ್ಯಕ್ಷ ಡಾ.ಆರ್. ಎಸ್. ಶರ್ಮಾ ಅವರು “ಕೋವಿನ್ ವ್ಯವಸ್ಥೆಯಲ್ಲಿ ಹ್ಯಾಕ್ ಆಗಿ ದತ್ತಾಂಶ ಸೋರಿಕೆಯಾಗಿದೆಯೆಂದು ಹ್ಯಾಕರ್ ಗಳು ಡಾರ್ಕ್ ವೆಬ್ ನಲ್ಲಿ ಹೇಳುತ್ತಿರುವುದು ಆಧಾರರಹಿತವಾಗಿದೆ. ಕೋವಿನ್ ನಲ್ಲಿ ನಾವು ಜನರ ದತ್ತಾಂಶವನ್ನು ಸುರಕ್ಷಿತವಾಗಿರುವುದನ್ನು ಖಾತ್ರಿಪಡಿಸಲು ಕಾಲ ಕಾಲಕ್ಕೆ ಅಗತ್ಯ ಸೂಕ್ತ ಕ್ರಮ ಕೈಗೊಳ್ಳುವುದನ್ನು ಮುಂದುವರಿಸುತ್ತೇವೆ’’ ಎಂದು ಸ್ಪಷ್ಟಪಡಿಸಿದ್ದಾರೆ.
***
(Release ID: 1726516)
Visitor Counter : 213