ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಇಂದಿನ ವರದಿ
ಪ್ರಕಟಣಾ ದಿನಾಂಕ:
12 JUN 2021 9:16AM by PIB Bengaluru
ದೇಶದಲ್ಲಿ ಕೋವಿಡ್-19 2ನೇ ಅಲೆ ಕಾಣಿಸಿಕೊಂಡ 63 ದಿನಗಳ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 11 ಲಕ್ಷ(10,80,690)ದ ಮಟ್ಟಕ್ಕಿಂತ ಕೆಳಕ್ಕೆ ತಗ್ಗಿದೆ.
ಕಳೆದ 24 ತಾಸುಗಳಲ್ಲಿ ಅಂದರೆ ನಿನ್ನೆ ಒಂದೇ ದಿನ ಸಕ್ರಿಯ ಪ್ರಕರಣಗಳ ಸಂಖ್ಯೆ 40,981ರಷ್ಟು ಇಳಿಕೆ ಕಂಡಿದೆ.
ಆದರೆ ನಿನ್ನೆ ಒಂದೇ ದಿನ ದೇಶಾದ್ಯಂತ 84,332 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ; 70 ದಿನಗಳ ನಂತರ ಅತ್ಯಂತ ಕನಿಷ್ಠ ಪ್ರಮಾಣ ಇದಾಗಿದೆ.
ದೇಶಾದ್ಯಂತ ಇಲ್ಲಿಯ ತನಕ 2,79,11,384 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕಳೆದ 24 ತಾಸುಗಳಲ್ಲೇ 1,21,311 ರೋಗಿಗಳು ಚೇತರಿಸಿಕೊಂಡಿದ್ದಾರೆ.
ಸತತ 30ನೇ ದಿನದಲ್ಲೂ ದೈನಂದಿನ ಚೇತರಿಕೆ ಪ್ರಮಾಣ ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಪ್ರಕರಣಗಳ ಸಂಖ್ಯೆಯನ್ನು ಹಿಂದಿಕ್ಕುತ್ತಿದೆ.
ಚೇತರಿಕೆ ದರ ಇದೀಗ 95.07%ಗೆ ಸುಧಾರಣೆ ಕಂಡಿದೆ.
ವಾರದ ಪಾಸಿಟಿವಿಟಿ ದರ (ಸೋಂಕಿತರ ಒಟ್ಟು ಸಂಖ್ಯೆ) 5% ಮಟ್ಟಕ್ಕಿಂತ ಕೆಳಕ್ಕೆ ಇಳಿಕೆ ಕಂಡಿದ್ದು, ಅದೀಗ 4.94% ಇದೆ.
ದೈನಂದಿನ ಪಾಸಿಟಿವಿಟಿ ದರ 4.39% ಇದ್ದು, ಸತತ 19 ದಿನಗಳ ನಂತರವೂ 10% ಮಟ್ಟದಿಂದ ಕೆಳಗಿದೆ.
ಗಂಟಲು ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ಇದುವರೆಗೆ ದೇಶಾದ್ಯಂತ 37.62 ಕೋಟಿ ಜನರಿಗೆ ಪರೀಕ್ಷೆ ನಡೆಸಲಾಗಿದೆ.
ದೇಶವ್ಯಾಪಿ ನಡೆಯುತ್ತಿರುವ ಬೃಹತ್ ಲಸಿಕಾ ಆಂದೋಲನದಲ್ಲಿ ಇದುವರೆಗೆ ಫಲಾನುಭವಿಗಳಿಗೆ 24.96 ಕೋಟಿ ಲಸಿಕಾ ಡೋಸ್ ನೀಡಲಾಗಿದೆ.
****
(ಪ್ರಕಟಣೆ ಐ.ಡಿ.: 1726465)
ವಿಸಿಟರ್ ಕೌಂಟರ್ : 191
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam