ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಎಚ್ಐವಿ / ಏಡ್ಸ್ ನಿಯಂತ್ರಣದ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 75ನೇ ಅಧಿವೇಶನ ಉದ್ದೇಶಿಸಿ ಡಾ. ಹರ್ಷವರ್ಧನ್ ಭಾಷಣ


ಎಚ್ಐವಿ / ಏಡ್ಸ್ ವಿರುದ್ಧದ ಹೋರಾಟದಲ್ಲಿ ನಾವೆಲ್ಲಾ ಒಟ್ಟಾಗಿದ್ದೇವೆ – ಡಾ. ಹರ್ಷವರ್ಧನ್

"ಭಾರತ ಸುಮಾರು 14 ಲಕ್ಷ ಜನರಿಗೆ ರೆಟ್ರೊ-ವೈರಲ್-ಪ್ರತಿಬಂಧಕ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುತ್ತಿದೆ"

"ನಾವು ಮುಂದಿನ 10 ವರ್ಷಗಳಲ್ಲಿ ಏಡ್ಸ್ ಕೊನೆಗೊಳಿಸುವ ಭರವಸೆ ನೀಡಬೇಕಾದರೆ ಹೊಸದಾಗಿ ಎಚ್‌ಐವಿ ಹರಡುವಿಕೆಯನ್ನು ಶೂನ್ಯಕ್ಕೆ ತರುವ ಸಾಧನೆ ಮಾಡಬೇಕಿದೆ"

Posted On: 11 JUN 2021 10:27AM by PIB Bengaluru

ಎಚ್ಐವಿ / ಏಡ್ಸ್ ನಿಯಂತ್ರಣದ ವಿಶ್ವಸಂಸ್ಥೆ ಸಾಮಾನ್ಯ ಸಭೆ(ಯುಎನ್|ಜಿಎ)ಯ 75ನೇ ಅಧಿವೇಶನ ಉದ್ದೇಶಿಸಿ ಕೇಂದ್ರ ಹಣಕಾಸು ಸಚಿವ ಶ್ರೀ ಡಾ. ಹರ್ಷವರ್ಧನ್ ಅವರು ಇಂದು ವೀಡಿಯೊ ಕಾನ್ಫರೆನ್ಸ್ ಭಾಷಣ ಮಾಡಿದರು.

 


 

 ಎಚ್ಐವಿ / ಏಡ್ಸ್ ನಿಯಂತ್ರಣ ಬದ್ಧತೆಯ ಘೋಷಣೆಯ ಅನುಷ್ಠಾನ ಮತ್ತು ಎಚ್ಐವಿ / ಏಡ್ಸ್ ನಿಯಂತ್ರಣದ ರಾಜಕೀಯ ಘೋಷಣೆಯ ಜಾರಿಗೆ ಸಂಬಂಧಿಸಿದ 75/260 ನಿರ್ಣಯ ಕುರಿತು ಅವರು ಮಾತನಾಡಿದರು.

https://static.pib.gov.in/WriteReadData/userfiles/image/image001TCVF.png


 ಅವರ ಭಾಷಣದ ಪ್ರಮುಖಾಂಶಗಳು ಇಂತಿವೆ:
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಪ್ರತಿಷ್ಠಿತ ವೇದಿಕೆ ಉದ್ದೇಶಿಸಿ ಭಾಷಣ ಮಾಡಲು ನನಗೆ ಗೌರವ ಮತ್ತು ಸಂತೋಷ ಭಾವ ತಂದಿದೆ. ನನ್ನ ಸರ್ಕಾರದ ಪರವಾಗಿ, ನಿಮ್ಮೆಲ್ಲರಿಗೂ ನಾನು ತುಂಬು ಹೃದಯದ ಆತ್ಮೀಯ ಶುಭಾಶಯಗಳನ್ನು ಅರ್ಪಿಸುತ್ತೇನೆ ಮತ್ತು ಈ ಸಭೆಯನ್ನು ಆಯೋಜಿಸಲು ಸೇರಿಕೊಂಡಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ.  ಎಚ್ಐವಿ / ಏಡ್ಸ್ ನಿಯಂತ್ರಣದ ಈ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು ಭಾರತದ ಪಾಲಿಗೆ ಸಂತೋಷ ಮತ್ತು ಸದವಕಾಶ ಸಿಕ್ಕಂತಾಗಿದೆ.
 ಎಚ್ಐವಿ / ಏಡ್ಸ್ ಸಾಂಕ್ರಾಮಿಕ ರೋಗವು ನಿಯಂತ್ರಣಕ್ಕೆ ಬಂದಿದೆ ಎಂಬುದು ಸಾಮಾನ್ಯ ಗ್ರಹಿಕೆಯಾಗಿದೆ. ಆದರೆ ಸಾಂಕ್ರಾಮಿಕ ರೋಗಗಳು ಪುನರುತ್ಥಾನಗೊಳ್ಳುವ ಶಕ್ತಿಯನ್ನು ಹೊಂದಿವೆ ಎಂಬುದು ವಾಸ್ತವ. ಆದ್ದರಿಂದ, ಈ ರೋಗ ನಿಯಂತ್ರಣಕ್ಕೆ ನಿರಂತರ ಜಾಗರೂಕತೆ ಮತ್ತು ಸೂಕ್ತ ಸಮಯೋಚಿತ ಪರಿಹಾರ ಕ್ರಮಗಳು ಅಗತ್ಯ.
ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಕಾಲಘಟ್ಟದಲ್ಲಿ ಎಚ್ಐವಿ / ಏಡ್ಸ್ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಮುಂಚೂಣಿ ಕಾರ್ಯಕರ್ತರು, ದೂರದ  ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರು ಮತ್ತು ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು ಮಾಡುತ್ತಿರುವ ನಡೆಸುತ್ತಿರುವ ನಿರಂತರ ಪ್ರಯತ್ನಗಳನ್ನು ಶ್ಲಾಘಿಸುತ್ತಾ ನನ್ನ ಭಾಷಣವನ್ನು ಆರಂಭಿಸುತ್ತೇನೆ. ಔಷಧ, ಚಿಕಿತ್ಸೆ ಇಲ್ಲದೆ ದೇಶದಲ್ಲಿ ಯಾವುದೇ ಎಚ್ಐವಿ ಸೋಂಕಿತ ಇರಬಾರದು ಎಂದು ಅವರು ನಡೆಸುತ್ತಿರುವ ನಿರಂತರ ದೃಢ ಪ್ರಯತ್ನಗಳನ್ನು ನಾನಿಲ್ಲಿ ಪ್ರಶಂಸಿಸುತ್ತೇನೆ. ಜತೆಗೆ, ಇದೇ ಕಾಲಘಟ್ಟದಲ್ಲಿ ನಮ್ಮೆಲ್ಲಾ ಉತ್ತಮ ಪ್ರಯತ್ನಗಳ ನಡುವೆ, ಎಚ್ಐವಿ ಸೋಂಕಿನಿಂದ ಮಡಿದವರಿಗೆ ಸಂತಾಪಗಳನ್ನು ಸಲ್ಲಿಸಲು ಬಯಸುತ್ತೇನೆ.
ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಾಗ ಅವುಗಳಿಗೆ ಸ್ಪಂದಿಸುವ ವಿಧಾನದಲ್ಲಿ ಎದುರಾಗುವ ಅಸಮಾನತೆ ಮತ್ತು ಕಂದಕಗಳನ್ನು ಪರಿಹರಿಸಲು ಬಲವಾದ ರಾಜಕೀಯ ನಾಯಕತ್ವವು ಅತ್ಯಂತ ನಿರ್ಣಾಯಕವಾಗಿದೆ ಎಂಬುದನ್ನು ಭಾರತ ಸಮರ್ಥವಾಗಿ ತೋರಿಸಿದೆ. ಕೋವಿಡ್-19 ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡಾಗಿನಿಂದ ಭಾರತವು ಎಚ್‌ಐವಿ ರೋಗಿಗಳ ಮೇಲೆ ಕೋವಿಡ್ ಪರಿಣಾಮಗಳನ್ನು ತಗ್ಗಿಸಲು ಸಮುದಾಯಗಳು, ಸಿವಿಲ್ ಸೊಸೈಟಿಗಳು ಮತ್ತು ಅಭಿವೃದ್ಧಿ ಪಾಲುದಾರರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ತ್ವರಿತ ಮತ್ತು ಸಮಯೋಚಿತ ಕ್ರಮ ಕೈಗೊಂಡಿತು. ಎಚ್‌ಐವಿ ಮತ್ತು ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ, 2017ರ ಮೂಲಕ ಭಾರತವು ಎಚ್ಐವಿ ಸೋಂಕಿತ ಮತ್ತು ಪೀಡಿತ ಜನರ ಮಾನವ ಹಕ್ಕುಗಳನ್ನು ಸಂರಕ್ಷಿಸಲು ಶಕ್ತ ಕಾನೂನಾತ್ಮಕ ಚೌಕಟ್ಟನ್ನು ಒದಗಿಸುತ್ತಿದೆ.
ಭಾರತದ ವಿಶಿಷ್ಟ ಮತ್ತು ಅನನ್ಯ ಎನ್ನಲಾದ ಎಚ್‌ಐವಿ ತಡೆಗಟ್ಟುವಿಕೆ ಮಾದರಿಯು ‘ಸಾಮಾಜಿಕ ಗುತ್ತಿಗೆ’ ಎಂಬ ಪರಿಕಲ್ಪನೆಯ ಮೇಲೆ ಕೇಂದ್ರೀಕೃತವಾಗಿದೆ, ಇದರ ಮೂಲಕ ನಾಗರಿಕ ಸಮಾಜ(ಸಿವಿಲ್ ಸೊಸೈಟಿ)ದ ಬೆಂಬಲದೊಂದಿಗೆ ‘ಉದ್ದೇಶಿತ ಮಧ್ಯಸ್ಥಿಕೆ (ಪಾಲ್ಗೊಳಅಳುವಿಕೆ) ಕಾರ್ಯಕ್ರಮ’ ಜಾರಿಗೆ ತಂದಿದೆ. ಈ ಕಾರ್ಯಕ್ರಮವು ರೋಗಿಯ ನಡವಳಿಕೆ ಬದಲಾವಣೆ, ಸಂವಹನ, ಪ್ರಭಾವ, ಸೇವಾ ವಿತರಣೆ, ಸಮಾಲೋಚನೆ, ಪರೀಕ್ಷೆ ಮತ್ತು ಎಚ್‌ಐವಿ ಆರೈಕೆಗೆ ಸಂಪರ್ಕ(ಸಂವಹನ) ಖಾತರಿಪಡಿಸುವ ಮಹತ್ವದ ಗುರಿಯನ್ನು ಹೊಂದಿದೆ.
ಭಾರತ ಸುಮಾರು 14 ಲಕ್ಷ ಜನರಿಗೆ ರೆಟ್ರೊ-ವೈರಲ್ ಪ್ರತಿಬಂಧಕ ಚಿಕಿತ್ಸೆಯನ್ನು ಒದಗಿಸುತ್ತಿದೆ. ಆಫ್ರಿಕಾದಲ್ಲಿ ಎಚ್ಐವಿ ಸೋಂಕಿರುವ ಲಕ್ಷಾಂತರ ಜನರಿಗೆ ಭಾರತದ ಔಷಧಗಳು ತಲುಪುತ್ತಿವೆ. ಭಾರತದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮವನ್ನು ಪರಿಷ್ಕರಿಸಲಾಗಿದೆ, ಪುನರುಜ್ಜೀವಗೊಳಿಸಲಾಗಿದೆ ಮತ್ತು ಅಪಾಯದಲ್ಲಿರುವ ಜನರ ಮೇಲೆ ಕೇಂದ್ರೀಕರಿಸಲು ಸಂಪೂರ್ಣ ಮಾರ್ಪಾಟು ಮಾಡಲಾಗಿದೆ. ನಾವು ಹಂತ ಹಂತವಾಗಿ  ಎಚ್‌ಐವಿಯೊಂದಿಗೆ ಬದುತ್ತಿರುವ ಜನರನ್ನು ಸುರಕ್ಷಿತ ಮತ್ತು ಪರಿಣಾಮಕಾರಿ ರೆಟ್ರೊ-ವೈರಲ್-ಪ್ರತಿಬಂಧಕ ಔಷಧ ಕಟ್ಟುಪಾಡು ವ್ಯವಸ್ಥೆಗೆ ಪರಿವರ್ತಿಸುತ್ತಿದ್ದೇವೆ.
ದೇಶದಲ್ಲಿ ಎಚ್ಐವಿ ರೋಗ ಪತ್ತೆ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಎಚ್ಐವಿ ಸಮಾಲೋಚನೆ, ಪರೀಕ್ಷೆ ಮತ್ತು ಪ್ರಾಥಮಿಕ ಹಂತದಲ್ಲೇ ಸಮುದಾಯ ಆಧರಿತ ರೋಗ ಪತ್ತೆ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಇದರ ಮೂಲಕ ತಾಯಿಯಿಂದ ಮಗುವಿಗೆ ರೋಗ ಹರಡುವುದನ್ನು ನಿರ್ಮೂಲನೆ ಮಾಡುವ ಗುರಿ ಸಾಧನೆಗೆ ಒತ್ತು ನೀಡಲಾಗಿದೆ. ‘ಒಟ್ಟಾಗಿ, ಪ್ರತಿಯೊಬ್ಬರ ಬೆಳವಣಿಗೆ, ಎಲ್ಲರ ನಂಬಿಕೆಯೊಂದಿಗೆ’ ಎಂಬ ಭಾರತ ಸರ್ಕಾರದ ಭಾರತ ಸರ್ಕಾರದ ಧ್ಯೇಯವಾಕ್ಯಕ್ಕೆ ಒತ್ತು ನೀಡಲಾಗಿದೆ. ಜತೆಗೆ, ಎಚ್ಐವಿ ರೋಗ ನಿಯಂತ್ರಣ ಮತ್ತು ಚಿಕಿತ್ಸೆ ಹೆಚ್ಚಿಸುವ ಮತ್ತು ಬೆಂಬಲ ಪಡೆಯುವ ಉದ್ದೇಶದಿಂದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮವು ಸಾರ್ವಜನಿಕ ಮತ್ತು ಖಾಸಗಿ ವಲಯದ ಕೈಗಾರಿಕೆಗಳ ಜತೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಈ  ಕಾಯಿಲೆಯಿಂದ ಬಳಲುತ್ತಿರುವ 100% ಜನರನ್ನು ತಲುಪುವ ಉದ್ದೇಶದಿಂದ ಭಾರತವು ಎಚ್‌ಐವಿ ಆರೈಕೆಯನ್ನು ಹೆಚ್ಚಿಸಲು ಬಯಸಿದೆ.
ಎಚ್ಐವಿ ಸಂಪೂರ್ಣ ನಿಯಂತ್ರಣದ ಗುರಿ ಸಾಧಿಸಲು ಕೇವಲ 115 ತಿಂಗಳು ಮಾತ್ರ ಬಾಕಿ ಇರುವುದನ್ನು ನಾವು ಸಂಪೂರ್ಣವಾಗಿ ಅರಿತುಕೊಂಡಿದ್ದೇವೆ. ಮುಂದಿನ 10 ವರ್ಷಗಳಲ್ಲಿ ಏಡ್ಸ್ ಅನ್ನು ಸಂಪೂರ್ಣ ಕೊನೆಗೊಳಿಸುವ ಭರವಸೆಯನ್ನು ನಾವು ಈಡೇರಿಸಬೇಕಾದರೆ, ಹೊಸ ಎಚ್‌ಐವಿ ಹರಡುವಿಕೆಯನ್ನು ಶೂನ್ಯಕ್ಕೆ ತರಬೇಕಿದೆ. ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಬಹುದೂರ ಸಾಗಬೇಕಿದೆ. ನಮ್ಮ ಸವಾಲುಗಳು ಮತ್ತು ಕಂದಕಗಳನ್ನು ನಾವು ಮುಂಗಾಣುವ ಜತೆಗೆ, ಅವುಗಳನ್ನು  ಗುರುತಿಸಬೇಕು, ನಮ್ಮ ಕಾರ್ಯಕ್ರಮಗಳನ್ನು ಪರಿಷ್ಕರಿಸಬೇಕು. ಮಾಡಬೇಕು, ನಮ್ಮಲ್ಲಿರುವ ಜ್ಞಾನವನ್ನು ಇತರೆ ದೇಶಗಳಒಂದಿಗೆ ಹಂಚಿಕೊಳ್ಳಬೇಕು, ಅವರಲ್ಲಿರುವ ಉತ್ತಮ ಅಭ್ಯಾಸಗಳನ್ನು . ಸಾರ್ವಜನಿಕ ಆರೋಗ್ಯಕ್ಕೆ ಬಹುದೊಡ್ಡ ಸವಾಲಾಗಿರುವ, ಬೆದರಿಕೆ ಒಡ್ಡುತ್ತಿರುವ ಏಡ್ಸ್ ಸಾಂಕ್ರಾಮಿಕ ರೋಗವನ್ನು 2030ರ ವೇಳೆಗೆ ಕೊನೆಗೊಳಿಸುವ ಸುಸ್ಥಿರ ಅಭಿವೃದ್ಧಿ ಗುರಿಯನ್ನು ತಲುಪುವತ್ತ ನಾವು ಸಾಗಬೇಕಿದೆ.
ಎಚ್‌ಐವಿ ಭೀಕರ ರೋಗ ವಿರುದ್ಧದ ಈ ಹೋರಾಟದಲ್ಲಿ ನಾವೆಲ್ಲಾ ಒಟ್ಟಾಗಿದ್ದೇವೆ.

 

*****
 


(Release ID: 1726262) Visitor Counter : 2989