ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ ಕುರಿತ ತಾಜಾ ಮಾಹಿತಿ


ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ

25.60 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಒದಗಿಸಲಾಗಿದೆ

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನರಿಗೆ ನೀಡಲು ಇನ್ನೂ 1.17 ಕೋಟಿ ಡೋಸ್‌ಗಳು ಲಭ್ಯವಿವೆ

Posted On: 11 JUN 2021 11:22AM by PIB Bengaluru

ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ, ಭಾರತ ಸರಕಾರವು ರಾಜ್ಯಗಳು ಮತ್ತ ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ಒದಗಿಸುವ ಮೂಲಕ ಬೆಂಬಲ ನೀಡುತ್ತಿದೆ. ಇದಲ್ಲದೆ, ಭಾರತ ಸರಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಗಳನ್ನು ನೇರವಾಗಿ ಖರೀದಿಸಲು ಅನುಕೂಲ ಮಾಡಿಕೊಡುತ್ತಿದೆ. ಸಾಂಕ್ರಾಮಿಕದ ನಿಯಂತ್ರಣ ಮತ್ತು ನಿರ್ವಹಣೆಗೆ ಭಾರತ ಸರಕಾರ ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ಕೋವಿಡ್‌-ಸೂಕ್ತ ನಡವಳಿಕೆ ಸೂತ್ರಗಳನ್ನು ಒಳಗೊಂಡ ಸಮಗ್ರ ಕಾರ್ಯತಂತ್ರವನ್ನು ಅನುಸರಿಸಲಾಗುತ್ತಿದ್ದು, ಲಸಿಕೆಯೂ ಇದರ ಅವಿಭಾಜ್ಯ ಅಂಗವಾಗಿದೆ.

ಕೋವಿಡ್-19 ಲಸಿಕೆಯ ಉದಾರೀಕರಣ ಹಾಗೂ ವೇಗವರ್ಧಿತ 3ನೇ ಹಂತದ ಕಾರ್ಯತಂತ್ರದ ಅನುಷ್ಠಾನವು 2021 ಮೇ 1 ರಿಂದ ಆರಂಭವಾಗಿದೆ.

ಕಾರ್ಯತಂತ್ರದ ಅಡಿಯಲ್ಲಿ, ಯಾವುದೇ ತಯಾರಕ ಸಂಸ್ಥೆಯು ಪ್ರತಿ ತಿಂಗಳು ಉತ್ಪಾದಿಸುವ ʻಕೇಂದ್ರ ಔಷಧ ಪ್ರಯೋಗಾಲಯʼ (ಸಿಡಿಎಲ್) ಅನುಮೋದನೆ ಪಡೆದ ಒಟ್ಟು ಲಸಿಕೆಗಳ ಡೋಸ್ಗಳಲ್ಲಿ ಶೇ. 50ರಷ್ಟನ್ನು ಭಾರತ ಸರಕಾರವು ಖರೀದಿಸುತ್ತದೆ. ಡೋಸ್ಗಳನ್ನು ಹಿಂದಿನಂತೆಯೇ ರಾಜ್ಯ ಸರಕಾರಗಳಿಗೆ ಉಚಿತವಾಗಿ ಹಂಚುವುದನ್ನು ಮುಂದುವರಿಸಲಾಗುವುದು.

ಇಲ್ಲಿಯವರೆಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 25.60 ಕೋಟಿ  (25,60,08,080)  ಲಸಿಕೆ ಡೋಸ್ಗಳನ್ನು ಭಾರತ ಸರಕಾರದ ಮೂಲಕ (ಉಚಿತವಾಗಿ) ಮತ್ತು ರಾಜ್ಯಗಳಿಂದ ನೇರ ಖರೀದಿ ಮಾರ್ಗದ ಮೂಲಕ ಒದಗಿಸಲಾಗಿದೆ.

ಪೈಕಿ ವ್ಯರ್ಥವಾದ ಡೋಸ್ಗಳು ಸೇರಿದಂತೆ ಬಳಕೆಯಾದ ಒಟ್ಟು ಡೋಸ್ಗಳು 24,44,06,096  (ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಿರುವ ದತ್ತಾಂಶದ ಪ್ರಕಾರ).

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಬಳಿ ಜನರಿಗೆ ನೀಡಲು ಇನ್ನೂ 1.17  ಕೋಟಿ  (1,17,56,911)  ಕೋವಿಡ್ ಲಸಿಕೆಯ ಡೋಸ್ಗಳು ಲಭ್ಯವಿದೆ.

ಇದಲ್ಲದೆ, 38 ಲಕ್ಷಕ್ಕೂ ಹೆಚ್ಚು (38,21,170)  ಲಸಿಕೆ ಡೋಸ್ಗಳು ಮಾರ್ಗ ಮಧ್ಯದಲ್ಲಿದ್ದು ಮುಂದಿನ 3 ದಿನಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಲಿವೆ.

***



(Release ID: 1726187) Visitor Counter : 197