ರೈಲ್ವೇ ಸಚಿವಾಲಯ

ಭಾರತದಲ್ಲಿನ ರೈಲ್ವೆ ಮತ್ತು ವಿಶೇಷವಾಗಿ ಮುಂಬೈ ಮುಂಗಾರು ಮಳೆ ಎದುರಿಸಲು ಸಂಪೂರ್ಣ ಸಜ್ಜಾಗುವ ಅಗತ್ಯವಿದೆ - ಶ್ರೀ ಪಿಯೂಷ್ ಗೋಯಲ್


ಮುಂಗಾರು ಮಳೆಗೆ ರೈಲ್ವೆ ಸಿದ್ಧತೆಗಳ ಕುರಿತು ಪರಾಮರ್ಶೆ ನಡೆಸಿದ ಶ್ರೀ ಪಿಯೂಷ್ ಗೋಯಲ್

ಮುಂಗಾರು ಮಳೆ ನಿಭಾಯಿಸುವಲ್ಲಿ ರೈಲ್ವೆಯ ತಾಂತ್ರಿಕ ಮತ್ತು ಸಿವಿಲ್ ಕಾಮಗಾರಿ ಉಪಕ್ರಮಗಳ ದಕ್ಷತೆ ಅಧ್ಯಯನ ಮಾಡಲು ಐಐಟಿ ಮುಂಬೈನಂತಹ ಸಂಸ್ಥೆಗಳ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ರೈಲ್ವೆಗೆ ಸಚಿವರ ಕರೆ

ರೈಲ್ವೆ ಯಾವುದೇ ಅಡೆತಡೆ ಇಲ್ಲದೆ ಸುರಕ್ಷಿತ ಕಾರ್ಯಾಚರಣೆ ಮುಂದುವರಿಸುವುದನ್ನು ಖಾತ್ರಿಪಡಿಸಲು ನವೀನ ಮತ್ತು ಕಠಿಣ ಶ್ರಮ ಒಗ್ಗೂಡಬೇಕು - ಶ್ರೀ ಪಿಯೂಷ್ ಗೋಯಲ್

ಸಾರ್ವಜನಿಕರು ಮತ್ತು ಪ್ರಯಾಣಿಕರ ಸುರಕ್ಷತೆ ಖಾತ್ರಿ ಅತ್ಯಗತ್ಯ

ಜಲಾವೃತ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಬೇಕು - ಶ್ರೀ ಪಿಯೂಷ್ ಗೋಯಲ್

Posted On: 10 JUN 2021 7:18PM by PIB Bengaluru

ಭಾರತದಲ್ಲಿನ ರೈಲ್ವೆ, ವಿಶೇಷವಾಗಿ ಮುಂಬೈ ಮುಂಗಾರು ಮಳೆ ಎದುರಿಸಲು ಸಂಪೂರ್ಣ ಸಜ್ಜಾಗುವ ಅಗತ್ಯವಿದೆ. ಹೀಗೆಂದು ರೈಲ್ವೆ ಮತ್ತು ವಾಣಿಜ್ಯ ಹಾಗೂ ಕೈಗಾರಿಕೆ ಮತ್ತು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣಾ ಖಾತೆ ಸಚಿವ ಶ್ರೀ ಪಿಯೂಷ್ ಗೋಯಲ್ ಹೇಳಿದ್ದಾರೆ. ಅವರು ಮಳೆಗಾಲದಲ್ಲಿ ಎಲ್ಲ ಬಗೆಯ ಆಕಸ್ಮಿಕಗಳನ್ನು ಎದುರಿಸಲು ಮುಂಬೈ ಉಪನಗರ ರೈಲ್ವೆ  ಸಿದ್ಧತೆಗಳು ಮತ್ತು ನೀಲನಕ್ಷೆಯ ಕುರಿತು   ಪರಾಮರ್ಶಿಸಿದರು.

ಅಲ್ಲದೆ ಸಚಿವರು  ಸೂಕ್ಷ್ಮ ಪ್ರದೇಶಗಳ ಸದ್ಯ ಸ್ಥಿತಿಗತಿಯನ್ನು ಮತ್ತು ರೈಲುಗಳ ಸುಗಮ ಸಂಚಾರಕ್ಕೆ ರೂಪಿಸಿರುವ ಯೋಜನೆಗಳನ್ನು ಪರಿಶೀಲಿಸಿದರು.

ರೈಲ್ವೆ, ಮುಂಗಾರು ಆರಂಭವಾದ ನಂತರ ಮುಂಬೈ ವಾಸಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಖಾತ್ರಿಪಡಿಸಲು ಬದ್ಧವಾಗಿದೆ ಎಂದು ಶ್ರೀ ಗೋಯಲ್ ಹೇಳಿದರು.    

ಉಪನಗರ ರೈಲು ವ್ಯವಸ್ಥೆಯ ಸಿದ್ಧತೆಗಳನ್ನು ಪರಾಮರ್ಶಿಸಿದ ಸಚಿವರು, ಮುಂಗಾರು ಮಳೆ ನಿಭಾಯಿಸುವಲ್ಲಿ ರೈಲ್ವೆಯ ತಾಂತ್ರಿಕ ಮತ್ತು ಸಿವಿಲ್ ಕಾಮಗಾರಿಗಳ ದಕ್ಷತೆಯ ಕುರಿತು  ಅಧ್ಯಯನ ನಡೆಸುವ ಬಗ್ಗೆ ಐಐಟಿ ಮುಂಬೈನಂತಹ ಸಂಸ್ಥೆಗಳ ಜೊತೆ ಪಾಲುದಾರಿಕೆ ಮಾಡಿಕೊಳ್ಳುವಂತೆ ರೈಲ್ವೆಗೆ ಸೂಚಿಸಿದರು.

 ಯಾವುದೇ ಅಡೆತಡೆ ಇಲ್ಲದೆ, ಸುರಕ್ಷಿತವಾಗಿ ರೈಲ್ವೆ ಸೇವೆ ಮುಂದುವರಿಸುವುದನ್ನು ಖಾತ್ರಿಪಡಿಸಲು ಹೊಸ ಆವಿಷ್ಕಾರಗಳು ಮತ್ತು ಕಠಿಣ ಪರಿಶ್ರಮದಿಂದ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

 ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಸಹ  ರೈಲ್ವೆ, ಉಪನಗರ ವಿಭಾಗದಿಂದ 2,10,000 ಕ್ಯುಬಿಕ್ ಮೀಟರ್ ನಷ್ಟು ಚೀಲ/ಕಸ/ಭೂಮಿಯನ್ನು ಸ್ವಚ್ಛಗೊಳಿಸುವ ಪ್ರಮುಖ ಕಾರ್ಯವನ್ನು ಕೈಗೊಂಡಿದೆ. ಮುಂಬೈನಲ್ಲಿ  ವಿಶೇಷವಾಗಿ ಮಾರ್ಪಡಿಸಿದ ಇಎಂಯು ರೇಕ್ ಗಳು ಸೇರಿದಂತೆ ಯಾವುದೇ 03 ಮ್ಯೂಕ್ ವಿಶೇಷವನ್ನು ನಿಯೋಜಿಸಿಲ್ಲ.

 ಹಿಂದಿನ ಮುಂಗಾರು ಮಳೆ ವೇಳೆ ಪ್ರವಾಹ ಉಂಟಾಗಿದ್ದ ಪ್ರತಿಯೊಂದು ಜಾಗ ಉದಾಹರಣೆಗೆ ಬಾಂದ್ರಾ, ಅಂಧೇರಿ, ಮಹಿಮ್, ಗ್ರಾಂಟ್ ರೋಡ್, ಗೋರೆಗಾಂವ್ ಗಳನ್ನು ಗುರುತಿಸಿ ಅವುಗಳಿಗೆ ಸಮಗ್ರ ಪರಿಹಾರವನ್ನು ಕಂಡುಕೊಳ್ಳಲಾಗಿದೆ.  

ಭಾರತೀಯ ಹವಾಮಾನ ಇಲಾಖೆ ಸಹಯೋಗದೊಂದಿಗೆ ನೈಜ ಸಮಯ ಮತ್ತು ಖಚಿತ ಮಳೆಯ ದತ್ತಾಂಶ ಸಂಗ್ರಹಿಸಲು ನಾಲ್ಕು ಕಡೆ ಸ್ವಯಂಚಾಲಿತ ಮಳೆ ಪ್ರಮಾಣ ಅಳೆಯುವ(ಎಆರ್ ಜಿ) ಮಾಪಕಗಳನ್ನು ಅಳವಡಿಸಲಾಗಿದೆ ಮತ್ತು ಹತ್ತು ಸಂಖ್ಯೆಯ ಮಾಪಕಗಳನ್ನು ಡಬ್ಲ್ಯೂಆರ್ ನಿಂದ ಸ್ವತಂತ್ರವಾಗಿ ಅಳವಡಿಸಿದೆ.

ಒಳಚರಂಡಿ ಮತ್ತು ಮುಳುಗುವ ಪಂಪ್ ಗಳನ್ನು ಒಳಗೊಂಡಂತೆ ಡಿಪೋಗಳಿಗೆ ಮತ್ತು ಟ್ರ್ಯಾಕ್ ಗಳಲ್ಲಿ ತ್ಯಾಜ್ಯವನ್ನು ಹೊರಹಾಕಲು ಸಬ್ ಮರ್ಸಿಬಲ್ ಪಂಪ್ ಗಳ ಸಂಖ್ಯೆಯನ್ನು ಶೇ.33ರಷ್ಟು ಹೆಚ್ಚಿಸಲಾಗಿದೆ.

ಬೊರಿವಲಿ ವಿರಾರ್ ಮಾರ್ಗದ ನಾಲೆಗಳ ಶುಚಿಗೊಳಿಸಲು ಮೇಲ್ವಿಚಾರಣೆಗೆ ಮತ್ತು ಸಮೀಕ್ಷೆಗೆ ಡ್ರೋನ್ ಗಳನ್ನು ಬಳಸಲಾಗಿದೆ ಮತ್ತು ಒಳಚರಂಡಿಗಳ ಆಳದಲ್ಲಿ ಸ್ವಚ್ಛತೆ ಖಾತ್ರಿಗೆ ಹೀರುವಿಕೆ/ ಕೆಸರು ತೆಗೆಯುವ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ.

ತಗ್ಗು ಪ್ರದೇಶಗಳು ಜಲಾವೃತವಾಗುವುದನ್ನು ಕನಿಷ್ಠಗೊಳಿಸಲು ಒಳಚರಂಡಿಗಳ ನಿರ್ಮಾಣ ವಿಧಾನದಲ್ಲಿ ಸಣ್ಣ ಸುರಂಗ ಮಾರ್ಗಗಳ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.

ಸಭೆಯಲ್ಲಿ ರೈಲ್ವೆ ಮಂಡಳಿ ಮತ್ತು ಮುಂಬೈನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.  

****


(Release ID: 1726111) Visitor Counter : 208