ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಸರ್ಕಾರದ ಯೋಜನೆಗಳ ಮೂಲಕ ಬುಡಕಟ್ಟು ಸಮುದಾಯಗಳ ಸಮಗ್ರ ಒಳಗೂಡಿಸುವಿಕೆಯನ್ನು ಉತ್ತೇಜಿಸುವುದು


ದೇಶಾದ್ಯಂತ ಬುಡಕಟ್ಟು ಜನಾಂಗದವರ ಜೀವನಾಧಾರವನ್ನು ಹೆಚ್ಚಿಸುವ ಯೋಜನೆಗಳ ಉತ್ತಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಟ್ರೈಫೆಡ್  (TRIFED)  ಸಂಸದರಿಗೆ ವೆಬಿನಾರ್  ನಡೆಸಿತು

Posted On: 10 JUN 2021 3:25PM by PIB Bengaluru

ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ, ದೇಶಾದ್ಯಂತದ ಬುಡಕಟ್ಟು ಜನರಿಗೆ ಆರೋಗ್ಯದ ಸುರಕ್ಷತೆಯೊಂದಿಗೆ ಜೀವನಾಧಾರವನ್ನು ಒದಗಿಸುವುದು ಬುಡಕಟ್ಟು ಕಲ್ಯಾಣ ಮತ್ತು ಜೀವನೋಪಾಯಕ್ಕಾಗಿ ಕೆಲಸ ಮಾಡುವ ನೋಡಲ್ ಏಜೆನ್ಸಿಯಾದ ಟ್ರೈಫೆಡ್ ಗೆ ಮತ್ತಷ್ಟು ಪ್ರಮುಖವಾದ ಕೆಲಸವಾಗಿದೆ ಗುರಿಯನ್ನು ಗಮನದಲ್ಲಿಟ್ಟುಕೊಂಡು, ಬುಡಕಟ್ಟು ಜನಾಂಗದವರ ಸಬಲೀಕರಣಕ್ಕಾಗಿ ಟ್ರೈಫೆಡ್    ಹಲವಾರು ಗಮನಾರ್ಹ ಉಪಕ್ರಮಗಳನ್ನು ಜಾರಿಗೆ ತರುತ್ತಿದೆ. ಜೂನ್ 9, 2021ರಂದು, ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಸಂಸತ್ತಿನ ಸದಸ್ಯರಿಗೆ ಟ್ರೈಫೆಡ್   ವೆಬಿನಾರನ್ನು ಆಯೋಜಿಸಿತು, ಇದರಿಂದಾಗಿ ಅವುಗಳ ಅನುಷ್ಠಾನವನ್ನು ತೀವ್ರಗೊಳಿಸಬಹುದು ಮತ್ತು ದೇಶಾದ್ಯಂತ ಯೋಜನೆಗಳ ಅಡಿಯಲ್ಲಿ ಬುಡಕಟ್ಟು ಸಮುದಾಯಗಳ ಸಮಗ್ರ ಒಳಗೂಡಿಸುವಿಕೆಯನ್ನು ಸಾಧಿಸಬಹುದು. ವೆಬಿನಾರಿನಲ್ಲಿ ಕೇಂದ್ರ ರಾಜ್ಯ ಸಚಿವ, ಉಕ್ಕಿನ ಸಚಿವಾಲಯದ ಶ್ರೀ ಫಗ್ಗನ್ ಸಿಂಗ್ಶ್ರೀ ಜುವಾಲ್ ಓರಂ, ಬುಡಕಟ್ಟು ವ್ಯವಹಾರಗಳ ಮಾಜಿ ಸಚಿವ; ಶ್ರೀ ಬಿಸ್ವೇಶ್ವರತುಡು ಮತ್ತು ಡಾ. ಲೋರ್ಹೋ ಪಿಫೊಜ್ ಸೇರಿದಂತೆ 30 ಕ್ಕೂ ಹೆಚ್ಚು ಬುಡಕಟ್ಟು ಸಂಸದರು ಭಾಗವಹಿಸಿದ್ದರು;   

A collage of peopleDescription automatically generated with low confidence A collage of a personDescription automatically generated with low confidence Graphical user interfaceDescription automatically generated with medium confidence Graphical user interface, websiteDescription automatically generated

A person wearing glassesDescription automatically generated with medium confidence A picture containing text, screenshot, screenDescription automatically generated A person in a white shirtDescription automatically generated with medium confidence

ವೆಬಿನಾರಿನಲ್ಲಿ ಎಂಎಫ್ಪಿ ಗಾಗಿ ಎಂಎಸ್ಪಿ ಮತ್ತು ವನ್ ಧನ್ ವಿಕಾಸ್ ಯೋಜನೆಗಾಗಿ ಬಗ್ಗೆ ವ್ಯಾಪಕವಾದ ಪ್ರಸ್ತುತಿ ಇತ್ತು. ಪ್ರಸ್ತುತಿ ಮತ್ತು ಚರ್ಚೆಯ ಸಮಯದಲ್ಲಿ, ಬುಡಕಟ್ಟು ಆರ್ಥಿಕತೆಯಲ್ಲಿ ಸಣ್ಣ ಅರಣ್ಯ ಉತ್ಪನ್ನಗಳ ಪ್ರಾಮುಖ್ಯ ಹಾಗು ಸರ್ಕಾರವು ಎಮ್ಎಫ್ಪಿ ನೇತೃತ್ವದ ಬುಡಕಟ್ಟು ಅಭಿವೃದ್ಧಿಯ ಸಮಗ್ರ ಮಾದರಿಯನ್ನು ಹೇಗೆ ವಿನ್ಯಾಸಗೊಳಿಸಿದೆ ಮತ್ತು ಇದಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆಕಳೆದ ಕೆಲವು ವರ್ಷಗಳಿಂದ, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮೂಲಕ ಪರಿಷ್ಕರಿಸಿದ 'ಸಣ್ಣ ಅರಣ್ಯ ಉತ್ಪಾದನೆಯ ಮಾರುಕಟ್ಟೆ (ಎಂಎಫ್ಪಿ) ಮತ್ತು ಎಮ್ಎಫ್ಪಿಗಾಗಿ ಮೌಲ್ಯ ಸರಪಳಿಯ ಅಭಿವೃದ್ಧಿ ಹೇಗೆ ಬುಡಕಟ್ಟು ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತು ಮತ್ತು ಸರ್ಕಾರದ ನೆರವಿನ ಬಗ್ಗೆ ವಿವರವಾಗಿ ವಿವರಿಸಿತು.   ಇದು ಬುಡಕಟ್ಟು ಆರ್ಥಿಕತೆಗೆ ಕೋಟ್ಯಂತರ ರೂಪಾಯಿಗಳನ್ನು ತಂದಿದೆವನ್ ಧನ್ ಬುಡಕಟ್ಟು ನವೋದ್ಯಮ (ಸ್ಟಾರ್ಟ್ ಅಪ್ಬುಡಕಟ್ಟು ಸಂಗ್ರಹಕಾರರು ಮತ್ತು ಅರಣ್ಯವಾಸಿಗಳು ಮತ್ತು ಬುಡಕಟ್ಟು ಕುಶಲಕರ್ಮಿಗಳಿಗೆ ಉದ್ಯೋಗ ಸೃಷ್ಟಿಯ ಮೂಲವಾಗಿದೆ.

ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ, ಯೋಜನೆಯು  ಹಿಂದುಳಿದವರಿಗೆ ಪ್ರಮುಖ ವರದಾನವಾಗಿದೆ. ಕಳೆದ 18 ತಿಂಗಳುಗಳಲ್ಲಿ, ವನ್ ಧನ್ ವಿಕಾಸ್ ಯೋಜನೆ (ವಿಡಿವಿಕೆ) ಭಾರತದಾದ್ಯಂತ ರಾಜ್ಯ ನೋಡಲ್ ಮತ್ತು ಅನುಷ್ಠಾನ ಸಂಸ್ಥೆಗಳ ನೆರವಿನೊಂದಿಗೆ ತ್ವರಿತವಾಗಿ ಅಳವಡಿಸಿಕೊಳ್ಳುವುದು ಮತ್ತು ದೃಢವಾಗಿ ಅನುಷ್ಠಾನಗೊಳಿಸುವ ಮೂಲಕ ಮಹತ್ತರವಾದ ನೆಲೆಯನ್ನು ಗಳಿಸಿದೆಸ್ಥಾಪಿತವಾದ 80% ವಿಡಿವಿಕೆಗಳೊಂದಿಗೆ ಈಶಾನ್ಯವು ಮುನ್ನಡೆ ಸಾಧಿಸುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಇತರ ರಾಜ್ಯಗಳಾಗಿದ್ದು, ಯೋಜನೆಯನ್ನು ಅಳವಡಿಸಿಕೊಂಡು ಅಗಾಧ ಫಲಿತಾಂಶಗಳನ್ನ ಹೊಂದಿವೆ

ಇದಲ್ಲದೆ, ಯೋಜನೆಯ ದೊಡ್ಡ ಫಲಿತಾಂಶವೆಂದರೆ ಅದು ಮಾರುಕಟ್ಟೆ ಸಂಪರ್ಕಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ವಿಡಿವಿಕೆಗಳಲ್ಲಿ ದೇಶಾದ್ಯಂತ ಕಾರ್ಯಾಚರಣೆಗಳು ಶ್ರದ್ಧೆಯಿಂದ ಪ್ರಾರಂಭವಾಗಿವೆ. ವಿಡಿವಿಕೆಗಳಿಂದ 500 ಕ್ಕೂ ಹೆಚ್ಚು ಬಗೆಯ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ, ಪ್ಯಾಕೇಜ್ ಮತ್ತು ಮಾರಾಟ ಮಾಡಲಾಗುತ್ತಿದೆಹಣ್ಣಿನ ಕ್ಯಾಂಡಿ (ನೆಲ್ಲಿಕಾಯಿ, ಅನಾನಸ್, ಕಾಡು ಸೇಬು, ಶುಂಠಿ, ಅಂಜೂರ, ಹುಣಸೆಹಣ್ಣು), ಜಾಮ್ (ಅನಾನಸ್, ಆಮ್ಲಾ, ಪ್ಲಮ್), ಜ್ಯೂಸ್ ಮತ್ತು ಸ್ಕ್ವ್ಯಾಷ್ (ಅನಾನಸ್, ನೆಲ್ಲಿಕಾಯಿ, ಕಾಡು ಸೇಬು, ಪ್ಲಮ್, ಬರ್ಮೀಸ್ ದ್ರಾಕ್ಷಿ) ವರೆಗಿನ ವ್ಯಾಪಕ ಉತ್ಪನ್ನಗಳು ಇವುಗಳಲ್ಲಿ ಸೇರಿವೆ ), ಮಸಾಲೆಗಳು (ಡಾಲ್ಚಿನಿ, ಅರಿಶಿನ, ಶುಂಠಿ), ಉಪ್ಪಿನಕಾಯಿ (ಬಿದಿರಿನ ಚಿಗುರು, ಕಿಂಗ್ ಮೆಣಸಿನಕಾಯಿ), ಸಂಸ್ಕರಿಸಿದ ಗಿಲೋಯಾಲ್ ಮಾರುಕಟ್ಟೆಯನ್ನು ತಲುಪಿದೆ. ಇದು ದೇಶದ ಬುಡಕಟ್ಟು ಸಮೂಹಗಳಿಂದ ಉತ್ಪತ್ತಿಯಾಗುವ 25 ಸಾವಿರ ಬಗೆಯ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಜೊತೆಗೆ. ಇವೆಲ್ಲವನ್ನೂ www.TribesIndia.com ಮತ್ತು ದೇಶಾದ್ಯಂತ ಇರುವ 137 ಟ್ರೈಬ್ಸ್ ಇಂಡಿಯಾ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುತ್ತಿದೆ.

ವೆಬನಾರ್ ಸಮಯದಲ್ಲಿ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರವೀರ್ ಕೃಷ್ಣ ಅವರು "ಆತ್ಮನಿರ್ಭರ ಭಾರತ" ವನ್ನು ರಚಿಸಲು "ಬಿ ವೋಕಲ್ ಫಾರ್ ಲೋಕಲ್ ಬಯ್ ಟ್ರೈಬಲ್" ಕುರಿತು ಮಾತನಾಡಿದರು, ಇದು ಈಗ ಟ್ರೈಫೆಡ್  ಗಾಗಿ ಒಂದು ಧ್ಯೇಯವಾಗಿ ಮಾರ್ಪಟ್ಟಿದೆ. ಬುಡಕಟ್ಟು ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟದ ಮೂಲಕ ಉದ್ಯಮವನ್ನು ಉತ್ತೇಜಿಸಲು ದೇಶದಲ್ಲಿ 50,000 ವಿಡಿವಿಕೆಗಳನ್ನು ಸ್ಥಾಪಿಸಲು ಸರ್ಕಾರದ ಮಾರ್ಗದರ್ಶಿ ಸೂತ್ರವಾದ ಸಬ್ಕಾ ಸಾಥ್, ಸಬ್ಕಾ ವಿಕಾಸ್ಮತ್ತು ಪ್ರಧಾನ ಮಂತ್ರಿ ಸಂಕಲ್ಪಕ್ಕೆ ಹೊಂದಿಸಲಾಗಿದೆ. ಧ್ಯೇಯವು ಮೇರಾ ವನ್,   ಮೇರಾ ಧನ್ ಮೇರಾ ಉದ್ಯಂನ ಸಂದೇಶದ ಮೇಲೆ ಕೇಂದ್ರೀಕೃತವಾಗಿರುತ್ತದೆಟ್ರೈಫೈಡ್   ವನ್ ಧನ್ ರೀತಿಯಿಂದ ಟ್ರೈಬಲ್ ಎಂಟರ್ಪ್ರೈಸ್ ರೀತಿಗೆ ಪರಿವರ್ತನೆ ಮಾಡಲು ಕಾರ್ಯ ಮಾಡುತ್ತಿದೆ. ವನ್ ಧನ್   ವಿಕಾಸ್ ಕೇಂದ್ರಗಳನ್ನು ವನ್ ಧನ್  ಕ್ಲಸ್ಟರ್ಗಳು ಮತ್ತು ಉದ್ಯಮಗಳಾಗಿ ವರ್ಗೀಕರಿಸುವ ಮೂಲಕ, ಆರ್ಥಿಕತೆಯ ಪ್ರಮಾಣವನ್ನು ಸಾಧಿಸುವುದು ಮತ್ತು ಹೆಚ್ಚಿನ ಮೌಲ್ಯವರ್ಧನೆ ಉತ್ಪನ್ನಗಳನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

ವನ್ ಧನ್  ವಿಕಾಸ್ ಕೇಂದ್ರ ಕ್ಲಸ್ಟರ್ಗಳನ್ನು ಮತ್ತಷ್ಟು ಸಂಘಟಿಸಲು, ಟ್ರೈಫೈಡ್ ವಿವಿಧ ಸಚಿವಾಲಯಗಳು ಮತ್ತು ಸಂಸ್ಥೆಗಳನ್ನು ಒಟ್ಟುಗೂಡಿಸುತ್ತಿದೆ. ಸಚಿವಾಲಯಗಳ ಒಂದೇ ರೀತಿಯ ಕಾರ್ಯಕ್ರಮಗಳೊಂದಿಗೆ ಯೋಜನೆಯನ್ನು ಜೋಡಿಸಲು ಇದು ಎಂಎಸ್ಎಂಇ, ಮೊಎಫ್ಪಿಐ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದಂತಹ ವಿವಿಧ ಸಚಿವಾಲಯಗಳೊಂದಿಗೆ ಒಪ್ಪಂದಗಳನ್ನು ಹೊಂದಿದೆ, ಇದರ ಪರಿಣಾಮವಾಗಿ ವನ್ ಧನ್ ವಿಕಾಸ್ ಕೇಂದ್ರಗಳು ಮತ್ತು ಅದರ ಕ್ಲಸ್ಟರ್ಗಳು ಎಸ್ಎಫ್ಯುಆರ್ಟಿಐ, ಎಂಎಸ್ಎಂಇಯಿಂದ ಇಎಸ್ಡಿಪಿ, ಗ್ರಾಮೀಣ ಅಭಿವೃದ್ಧಿ ಸಚಿವಾಲಯದಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ಮತ್ತು  ಎನ್ ಆರ್ ಎಲ್ ಎಮ್ ಯೋಜನೆಗಳ ಆಹಾರ ಉದ್ಯಾನವನಗಳು ಒಂದಾಗುತ್ತವೆ

ವಿವರವಾದ ಸಾರಾಂಶ ಮತ್ತು ಮಾಹಿತಿ ಪ್ರಸರಣ ಅಧಿವೇಶನದ ನಂತರ  ಶ್ರೀ ಕೃಷ್ಣ, ಸಂಸತ್ತಿನ ಸದಸ್ಯರಿಗೆ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸಲು ಅವರ ನಾಯಕತ್ವ, ಪ್ರೋತ್ಸಾಹ ಮತ್ತು ಬೆಂಬಲ ನೀಡುವಂತೆ ವಿನಂತಿಸಿದರು. ಇದರ ನಂತರ ಸಂವಾದಾತ್ಮಕ ಅಧಿವೇಶನವು ಸಂಸದರ ಹೇಳಿಕೆಗಳು ಮತ್ತು ಪ್ರಶ್ನೆಗಳನ್ನು ಉತ್ತರಿಸಲಾಯಿತು. ಭವಿಷ್ಯದ ಉಲ್ಲೇಖ ಮತ್ತು ಅನುಷ್ಠಾನಕ್ಕಾಗಿ ಅವರ ಅಮೂಲ್ಯ ಸಲಹೆಗಳನ್ನು ಸಹ ಗುರುತು ಮಾಡಿಕೊಳ್ಳಲಾಯಿತು. ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಟ್ರೈಫೆಡ್ ತಂಡದ ಪ್ರಯತ್ನ ಮತ್ತು ಬುಡಕಟ್ಟು ಜನಾಂಗದವರ ಪ್ರಗತಿಯನ್ನು ಸಂಸದರು ಶ್ಲಾಘಿಸಿದರು

ಟ್ರೈಫೆಡ್ ತಂಡವು ನಿಯಮಿತವಾಗಿ ಸಭೆ ನಡೆಸುತ್ತದೆ ಮತ್ತು ಯೋಜನೆಗಳನ್ನು ಮುಂದೆ ಕೊಂಡೊಯ್ಯಲು ಅವರನ್ನು ತಲುಪುತ್ತದೆ ಎಂದು ಶ್ರೀ ಕೃಷ್ಣ ನೆರೆದವರಿಗೆ ಭರವಸೆ ನೀಡಿದರು.

***


(Release ID: 1726087) Visitor Counter : 264